Dreaming: ನೀವು ಕನಸಿನಲ್ಲಿ ಮಾತನಾಡದ ವ್ಯಕ್ತಿಯ ಬಗ್ಗೆ ಕನಸು ಕಂಡರೆ ಅದರ ಅರ್ಥವೇನು? ಕನಸಿನ ತಜ್ಞರು ಹೇಳುವುದೇನು?

ಕನಸಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಯ ಮುಖ ಕಾಣಿಸಿಕೊಂಡರೆ ಬೆಳಿಗ್ಗೆ ಎದ್ದ ತಕ್ಷಣದಿಂದ ತುಂಬಾ ತಲೆಕೆಡಿಸಿಕೊಳ್ಳುತ್ತೇವೆ. ಅವರನ್ನು ಹಿಂದೆಂದೂ ನಾವು ನೋಡಿಯೇ ಇರುವುದಿಲ್ಲ. ಅಂತಹವರ ಮುಖ ಹಠಾತ್‌ ನಮ್ಮ ಕನಸಿನಲ್ಲಿ ಬಂದರೆ ಆಶ್ಚರ್ಯವಾಗುವುದು ಸಹಜವಾಗಿದೆ. ಈ ಅಪರಿಚಿತ ವ್ಯಕ್ತಿಯ ಮುಖ ಕನಸಿನಲ್ಲಿ ಬಂದರೆ ಏನು ಅರ್ಥ? ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕನಸುಗಳು (Dreams) ವ್ಯಕ್ತಿಯ ಆಳವಾದ ಮನಸ್ಸಿನ ಇಷ್ಟ ಕಷ್ಟಗಳು ಆಗಿರುತ್ತವೆ. ಹೀಗೆ ಸಾಮಾನ್ಯವಾಗಿ ದಿನನಿತ್ಯ ನೋಡುವವರ ಮುಖ ಕನಸಿನಲ್ಲಿ ಬಂದಾಗ ಅಷ್ಟೊಂದು ಆಶ್ಚರ್ಯ ಪಡದ ನಾವು, ಅದೇ ನಮ್ಮ ಕನಸಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಯ (Unknown Person) ಮುಖ ಕಾಣಿಸಿಕೊಂಡರೆ ಬೆಳಿಗ್ಗೆ ಎದ್ದ ತಕ್ಷಣದಿಂದ ತುಂಬಾ ತಲೆಕೆಡಿಸಿಕೊಳ್ಳುತ್ತೇವೆ. ಅವರನ್ನು ಹಿಂದೆಂದೂ ನಾವು ನೋಡಿಯೇ ಇರುವುದಿಲ್ಲ. ಅಂತಹವರ ಮುಖ ಹಠಾತ್‌ ನಮ್ಮ ಕನಸಿನಲ್ಲಿ ಬಂದರೆ ಆಶ್ಚರ್ಯವಾಗುವುದು ಸಹಜವಾಗಿದೆ. ಈಗ ನಿಮ್ಮ ಜೀವನದಲ್ಲಿ (Life) ಇರುವವರ ಬಗ್ಗೆ ಕನಸು ಕಾಣುವುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಆದರೆ ಅಪರಿಚಿತ ವ್ಯಕ್ತಿಯ ಮುಖ (Face) ಕನಸಿನಲ್ಲಿ ಬಂದರೆ ಏನು ಅರ್ಥ? ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಮುಂದೆ ನಿಮಗೆ ಪರಿಚಯವಾಗುವ ಹೊಸ ಸ್ನೇಹಿತರ ಮುಖ
ದಿ ಡ್ರೀಮ್ ಡಿಕ್ಷನರಿ ಫ್ರಮ್ ಎ ಟು ಝಡ್‌ನ ಲೇಖಕಿ ಥೆರೆಸಾ ಚೆಯುಂಗ್ ಅವರು ಇದರ ಕುರಿತು “ನಿಮ್ಮ‌ ಜೀವನದಲ್ಲಿ ಸ್ನೇಹಿತರು ಸಾಮಾನ್ಯವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಆದ್ದರಿಂದ ಕನಸಿನಲ್ಲಿ ಕಂಡ ಅಪರಿಚಿತ ಮುಖ ಮುಂದೆ ನಿಮಗೆ ಪರಿಚಯವಾಗುವ ಹೊಸ ಸ್ನೇಹಿತರ ಮುಖ ಆಗಿರುತ್ತದೆ. ಅವರು ನಿಮ್ಮನ್ನು ಭವಿಷ್ಯದಲ್ಲಿ ಭೇಟಿಯಾಗಲಿದ್ದಾರೆ ಮತ್ತು ನೀವು ಅವರನ್ನು ಮತ್ತೆ ಮತ್ತೆ ಭೇಟಿಯಾಗಲಿದ್ದೀರಿ ಎಂಬುದೇ ಅಪರಿಚಿತ ವ್ಯಕ್ತಿಯೊಬ್ಬರು ನಿಮ್ಮ ಕನಸಿನಲ್ಲಿ ಬರುವುದಕ್ಕೆ ಮುಖ್ಯ ಕಾರಣ. ಒಬ್ಬ ವ್ಯಕ್ತಿಯು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ಧಾರೆಂದರೆ ಅದಕ್ಕೆ ಅರ್ಥ ಅವರ ಬಗ್ಗೆ ನಿಮ್ಮ ಒಳ ಮನಸ್ಸು ಹೆಚ್ಚು ಯೋಚನೆ ಮಾಡುತ್ತಿದೆ ಎಂದು ಅರ್ಥ ಬರುತ್ತದೆ” ಎಂದು ಹೇಳುತ್ತಾರೆ.

ಈ ಬಗ್ಗೆ ವೃತ್ತಿಪರ ಕನಸಿನ ವಿಶ್ಲೇಷಕರು ಏನು ಹೇಳುತ್ತಾರೆ 
ಜುಂಗಿಯನ್ ಕನಸಿನ ವ್ಯಾಖ್ಯಾನದ ಪ್ರಕಾರ, “ಕನಸಿನಲ್ಲಿ ಕಾಣಿಸಿಕೊಳ್ಳುವ ಜನರು ನಿಮ್ಮ ಆಂತರಿಕ ಜೀವನವನ್ನು ಮತ್ತು ನಿಮ್ಮ ಸ್ವಂತ ವ್ಯಕ್ತಿತ್ವದ ಅಂಶಗಳನ್ನು ಪ್ರತಿಬಿಂಬಿಸುತ್ತಾರೆ” ಎಂದು ವ್ಯಾಖ್ಯಾನಿಸಲಾಗಿದೆ. "ಕನಸುಗಳ ಬಗ್ಗೆ ನೆನಪಿಡುವ ವಿಷಯವೆಂದರೆ ನಿಮ್ಮ ಕನಸಿನಲ್ಲಿ ಎಲ್ಲವೂ ಮತ್ತು ಪ್ರತಿಯೊಬ್ಬರೂ ನಿಮ್ಮ ದೇಹದ ಕೆಲವು ಭಾಗವನ್ನು ಪ್ರತಿನಿಧಿಸುತ್ತಾರೆ ಅಥವಾ ನೇರವಾಗಿ ನಿಮ್ಮ ಮೇಲೆ ಪರಿಣಾಮ ಬೀರುವ ಯಾವುದೋ ವಿಷಯವನ್ನು ಪ್ರತಿನಿಧಿಸುತ್ತಾರೆ" ಎಂದು ವೃತ್ತಿಪರ ಕನಸಿನ ವಿಶ್ಲೇಷಕ ಲಾರಿ ಲೋವೆನ್ಬರ್ಗ್ ಹೇಳುತ್ತಾರೆ.

ಇದನ್ನೂ ಓದಿ:  Viral Resume: ಲಿಂಕ್ಡ್‌ಇನ್‌ನಲ್ಲಿ ಮೋಜಿನ ರೆಸ್ಯೂಮೆ ಹಂಚಿಕೊಂಡ ಮಾರ್ಕೆಟಿಂಗ್ ಅಧಿಕಾರಿ; ರೆಸ್ಯೂಮೆ ಅಂದ್ರೆ ಇದಪ್ಪಾ ಅಂದ್ರು ನೆಟ್ಟಿಗರು

"ಹಾಗೆ ಹೇಳುವುದಾದರೆ, ನೀವು ಯಾವತ್ತು ನೋಡಿರದ ವ್ಯಕ್ತಿ ಅಥವಾ ದಿನನಿತ್ಯ ವ್ಯವಹರಿಸದ ವ್ಯಕ್ತಿ ಅಥವಾ ನಿಜವಾಗಿ ಅಸ್ತಿತ್ವದಲ್ಲಿಲ್ಲದ ವ್ಯಕ್ತಿಯ ಬಗ್ಗೆ ನೀವು ಕನಸು ಕಂಡಾಗ, ಅವರು ನಿಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಪ್ರತಿನಿಧಿಸುತ್ತಾರೆ” ಎಂದು ಹೇಳಿದರು.

ಇತರ ಜನರ ಬಗ್ಗೆ ಕನಸು ಕಾಣುವುದು ನಿಮ್ಮ ಮತ್ತು ನಿಮ್ಮ ನಡವಳಿಕೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಒಂದು ಮಾರ್ಗವಾಗಿದೆ. ಇನ್ನು ಮುಂದೆ ಸ್ನೇಹಿತರಲ್ಲದಿದ್ದರೂ ಸಹ ನಿಮ್ಮ ಕನಸಿನಲ್ಲಿ ಆ ಮುಖ ಕಾಣಿಸಿಕೊಳ್ಳುತ್ತಿದೆ ಎಂದರೆ ಆ ಮುಖ ನಿಮ್ಮ ಹಿಂದಿನ ಅಥವಾ ಪ್ರಸ್ತುತ ವ್ಯಕ್ತಿಯ ರೂಪವೂ ಕೂಡ ಆಗಿರಬಹುದು. ಕನಸುಗಳಿಗೆ ಯಾವುದೇ ನಿರ್ದಿಷ್ಟ ಮಾನದಂಡ ಎಂಬುದು ಇಲ್ಲ. ಇದರ ಬಗ್ಗೆ ಕನಸಿನ ತಜ್ಞರು ಏನು ಹೇಳ್ತಾರೆ ನೋಡೋಣ.

ನೀವು ಇನ್ನು ಮುಂದೆ ಮಾತನಾಡದ ವ್ಯಕ್ತಿಯ ಬಗ್ಗೆ ನೀವು ಕನಸು ಕಂಡರೆ ಅದರ ಅರ್ಥವೇನು?
ಅನೇಕ ಜನರು ಪ್ರಾಥಮಿಕ ಶಾಲೆಯಲ್ಲಿ ಹಳೆಯ ಸ್ನೇಹಿತರು ಮತ್ತು ಸಹಪಾಠಿಗಳ ಬಗ್ಗೆ ಕನಸು ಕಾಣುತ್ತಾರೆ. ಇದು ಸ್ವಲ್ಪ ವಿಚಿತ್ರವೆನಿಸುತ್ತದೆ ಅಲ್ಲವೇ? ಅವರ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರುತ್ತದೆ, ಆದರೆ ಬಹಳ ವರ್ಷಗಳ ಕಾಲದಿಂದ ಅವರ ಸಂಪರ್ಕವನ್ನು ನೀವು ಕಳೆದುಕೊಂಡಿರುತ್ತೀರಿ. ಆದರೆ ಅವರ ನೆನಪನ್ನು ಮತ್ತೆ ಮರುಕಳಿಸಲು ಈ ರೀತಿಯ ಕನಸುಗಳು ಬೀಳುತ್ತವೆ.

ಇದನ್ನೂ ಓದಿ:  Sleeping Position: ನೀವು ಮಲಗುವ ಭಂಗಿ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ; ಹೇಗೆ ಮಲಗಿದ್ರೆ ಒಳ್ಳೆಯದು

ಕನಸಿನ ತಜ್ಞರಾರ ಚೆಯುಂಗ್‌ ಅವರ ಪ್ರಕಾರ “ನಿಮ್ಮ ಕನಸಿನ ದೃಶ್ಯದಲ್ಲಿ ಅವರ ಮುಖ ಕಾಣಿಸಿಕೊಂಡಿದೆ ಎಂದರೆ ನೀವು ಅವರನ್ನು ನಿರ್ಲಕ್ಷ್ಯ ಅಥವಾ ಮರೆತಿದ್ದಿರಿ ಎಂಬ ಅರ್ಥ ಬರುತ್ತದೆ. ಅಂತಹ ವ್ಯಕ್ತಿಗಳು ಕನಸಿನಲ್ಲಿ ಏನನ್ನೂ ಮಾತನಾಡುವುದಿಲ್ಲ. ಇದರರ್ಥ ನೀವು ಅವರನ್ನು ಮರುಸಂಪರ್ಕಿಸಲು ಬಯಸುತ್ತಿರೀ ಅಥವಾ ಮರು ಭೇಟಿಯಾಗುವುದರಿಂದ ಯಾವುದೋ ಪ್ರಯೋಜನ ಪಡೆಯಬಹುದು” ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
Published by:Ashwini Prabhu
First published: