ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ..!

ಈ ಅಧ್ಯಯನಕ್ಕಾಗಿ ಸಂಶೋಧಕರು ಮಹಿಳೆಯರಿಗೆ 120 ಫೋಟೋಗಳನ್ನು ತೋರಿಸಿದ್ದರು. ಅಲ್ಲದೆ ಈ ಫೋಟೊಗಳನ್ನು ಲೈಂಗಿಕ ದೃಷ್ಟಿಕೋನದಿಂದ ವೀಕ್ಷಿಸುವಂತೆ ತಿಳಿಸಲಾಗಿತ್ತು.

zahir | news18
Updated:June 19, 2019, 3:56 PM IST
ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ..!
ಸಾಂದರ್ಭಿಕ ಚಿತ್ರ
  • News18
  • Last Updated: June 19, 2019, 3:56 PM IST
  • Share this:
ಹುಡುಗರಿಗೆ ಹುಡುಗಿಯರು ಯಾಕೆ ಇಷ್ಟವಾಗುತ್ತಾರೆ ಮತ್ತು ಮಹಿಳೆಯರಲ್ಲಿ ಅವರ ಆಕರ್ಷಣೆಗಳೇನು ಎಂಬುದರ ಕುರಿತು ಅನೇಕ ಸಮೀಕ್ಷೆಗಳು ನಡೆದಿದೆ. ಆದರೆ ಚಂಚಲತೆಯ ಮನಸ್ಸಿನ ಹುಡುಗಿಯರಿಗೆ ಹುಡುಗರ ಯಾವ ಅಂಗ ಹೆಚ್ಚು ಆಕರ್ಷಿಸುತ್ತದೆ ಎಂಬ ಹಲವು ವರ್ಷಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಜಿನಿವಾ ಯುನಿರ್ವಸಿಟಿ ಹಾಸ್ಪಿಟಲ್ ಸಂಶೋಧಕರು ನಡೆಸಿರುವ ಸಂಶೋಧನೆಯ ಪ್ರಕಾರ, ಹುಡುಗಿಯರು ಕೇವಲ ಸಿಕ್ಸ್​ ಪ್ಯಾಕ್, ಹೇರ್​ ಸ್ಟೈಲ್ ಅಥವಾ ಮಿಂಚುವ ಕಣ್ಣುಗಳಿಗೆ ಫಿದಾ ಆಗುವುದಿಲ್ಲವಂತೆ. ಹುಡುಗರನ್ನು ಕಂಡಾಗ ಅವರು ಮೊದಲು ನೋಡುವ ಅಂಗವೇ ಬೇರೆ.

ಹೌದು, ನೀವೆಷ್ಟೇ ಸುರಸುಂದರಾಗಿದ್ದರೂ, ಯಾವುದೇ ಬಟ್ಟೆಗಳನ್ನು ತೊಟ್ಟಿದ್ದರೂ ಹುಡುಗಿಯರನ್ನು ಮೋಡಿ ಮಾಡುವುದಿಲ್ಲ. ಒಬ್ಬ ಹುಡುಗ ಒಂದು ಹುಡುಗಿಯ ಮುಂದೆ ಬಂದರೆ ಅಥವಾ ಎದುರಲ್ಲಿ ಕಂಡರೆ ಅವರು ಗಮನಿಸುವ ಅಂಗ ಹುಡುಗರ ಹೊಟ್ಟೆಯ ಭಾಗ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಸಂಶೋಧಕರು ಮಹಿಳೆಯರಿಗೆ 120 ಫೋಟೋಗಳನ್ನು ತೋರಿಸಿದ್ದರು. ಅಲ್ಲದೆ ಈ ಫೋಟೊಗಳನ್ನು ಲೈಂಗಿಕ ದೃಷ್ಟಿಕೋನದಿಂದ ವೀಕ್ಷಿಸುವಂತೆ ತಿಳಿಸಲಾಗಿತ್ತು. ಅಲ್ಲದೆ ಈ ಫೋಟೊಗಳನ್ನು ನೋಡಿದ ಬಳಿಕ ನೀವು ಗಮನಿಸಿದ ಮೊದಲ ಅಂಗ ಯಾವುದೆಂದು ತಿಳಿಸಬೇಕೆಂದು ಹೇಳಲಾಗಿತ್ತು. ಅದರಂತೆ ಹೆಚ್ಚಿನ ಮಹಿಳೆಯರು ಮತ್ತು ಹುಡುಗಿಯರು ಪುರುಷರ ಹೊಟ್ಟೆಯನ್ನು ನೋಡಿರುವುದಾಗಿ ತಿಳಿಸಿದ್ದರು.

ಕಟುಮಸ್ತಾದ ದೇಹ ಹೊಂದಿರುವ ಪುರುಷರಿಗೆ ಹೊಟ್ಟೆ ಇರುವುದಿಲ್ಲ. ಹೀಗಾಗಿ ಮಹಿಳೆಯರು ಮೊದಲ ನೋಟ ಪುರುಷರ ಹೊಟ್ಟೆಯ ಮೇಲೆ ಬೀಳುತ್ತದೆ. ಹಾಗೆಯೇ ಡೊಳ್ಳು ಹೊಟ್ಟೆ ಹೊಂದಿದವರಿಂದ ಲೈಂಗಿಕ ಅತೃಪ್ತಿ ಇರುತ್ತದೆ ಎಂಬ ಅಭಿಪ್ರಾಯ ಕೂಡ ಮಹಿಳೆಯರಲ್ಲಿದೆ.

ಹೀಗಾಗಿಯೇ ಹುಡುಗಿಯರ ಅಥವಾ ಮಹಿಳೆಯರು ಹುಡುಗರನ್ನು ಕಂಡಾಗ ಮೊದಲು ಹೊಟ್ಟೆಯನ್ನು ನೋಡುತ್ತಾರೆ. ಅಲ್ಲದೆ ಮೊದಲ ನೋಟದಲ್ಲಿ ಮಹಿಳೆಯರನ್ನು ಆಕರ್ಷಿಸುವ ಭಾಗ ಕೂಡ ಹೊಟ್ಟೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಈ ಅಧ್ಯಯನದಿಂದ ಇನ್ಮುಂದೆ ಹುಡುಗಿಯರನ್ನು ಆಕರ್ಷಿಸಲು  ಹೊಟ್ಟೆ ಕರಗಿಸಿಕೊಳ್ಳಬೇಕಿರುವುದಂತು ದಿಟವಾಗಿದೆ.

ಇದನ್ನೂ ಓದಿ: IPL 2019: ಈ ಸಲನೂ...ಆರ್​ಸಿಬಿ ತಂಡವನ್ನು ಟ್ರೋಲ್​ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್..!
First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ