ಸತ್ತ ನಂತರ ಮಾನವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಪಂಚದಾದ್ಯಂತ ಮರಣಾನಂತರದ ಜೀವನದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಹಾಗಾದರೆ ಸತ್ತ ನಂತರ ಮಾನವನ ದೇಹದಲ್ಲಿ ಯಾವ ಬದಲಾವಣೆಯಾಗುತ್ತದೆ

ಪ್ರಪಂಚದಾದ್ಯಂತ ಮರಣಾನಂತರದ ಜೀವನದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಹಾಗಾದರೆ ಸತ್ತ ನಂತರ ಮಾನವನ ದೇಹದಲ್ಲಿ ಯಾವ ಬದಲಾವಣೆಯಾಗುತ್ತದೆ

ಪ್ರಪಂಚದಾದ್ಯಂತ ಮರಣಾನಂತರದ ಜೀವನದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಹಾಗಾದರೆ ಸತ್ತ ನಂತರ ಮಾನವನ ದೇಹದಲ್ಲಿ ಯಾವ ಬದಲಾವಣೆಯಾಗುತ್ತದೆ

  • Share this:

ಹುಟ್ಟಿದ ಮನುಷ್ಯ ಸಾಯಲೇಬೇಕು, ಸಾಯುತ್ತಾನೆ ಕೂಡ. ಜೀವಂತವಾಗಿ ಇರುವಾಗ ಮಾನವನ ದೇಹದಲ್ಲಾಗುವ ಬದಲಾವಣೆ ಬಗ್ಗೆ ಅರಿಯಲು ಪ್ರಯತ್ನಿಸುವ ನಾವು, ಸತ್ತ ನಂತರ ಮಾನವನ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಅರಿತುಕೊಳ್ಳುವುದು ಸಮಂಜಸ ಅಲ್ಲವೇ? ಒಬ್ಬ ವ್ಯಕ್ತಿಯು ಸತ್ತಾಗ ದೇಹದಲ್ಲಿ ಯಾವ ಬದಲಾವಣೆಗಳು ಸಂಭವಿಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಪಂಚದಾದ್ಯಂತ ಮರಣಾನಂತರದ ಜೀವನದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಹಾಗಾದರೆ ಸತ್ತ ನಂತರ ಮಾನವನ ದೇಹದಲ್ಲಿ ಯಾವ ಬದಲಾವಣೆಯಾಗುತ್ತದೆ ಎಂದು ತಿಳಿಯೋಣ.


1. ಹೃದಯ
ಒಬ್ಬ ವ್ಯಕ್ತಿಯು ಇನ್ನೂ ಜೀವಂತವಾಗಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಮೊದಲು ಹೃದಯದ ಬಡಿತಗಳನ್ನು ಪರೀಕ್ಷಿಸುತ್ತೇವೆ. ಹೃದಯವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಸ್ವಾಭಾವಿಕವಾಗಿ, ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ರಕ್ತವು ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ.


2. ದೇಹದ ಬಣ್ಣ
ಹೃದಯವು ದೇಹಾದ್ಯಂತ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ, ದೇಹವು ಮುದುರಿದಂತೆ ಕಾಣವುದಲ್ಲದೇ ದೇಹದ ಬಣ್ಣವು ಮಸುಕಾಗುತ್ತದೆ. ಯಾವಾಗ ದೇಹದ ಯಾವ ಭಾಗದ ಬಣ್ಣ ಮಸುಕಾಗುತ್ತದೋ ಆಗ ಆ ಭಾಗಗಳಲ್ಲಿ ರಕ್ತದ ಪೂರೈಕೆ ನಿಂತಿದೆ ಎಂದರ್ಥ.


3. ಅಲ್ಗೊರ್ ಮೊರ್ಟಿಸ್
ಸಾವಿನ ನಂತರ ಮಾನವನ ದೇಹವು ತಾಪಮಾನವನ್ನು ಕಳೆದುಕೊಳ್ಳುತ್ತದೆ. ಈ ತಾಪಮಾನ ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಅಲ್ಗೊರ್ ಮೊರ್ಟಿಸ್ ಎಂದು ಕರೆಯಲಾಗುತ್ತದೆ. ಮಾನವ ದೇಹವು ಪ್ರತಿ ಗಂಟೆಗೆ ಸುಮಾರು ಒಂದು ಡಿಗ್ರಿ (0.8) ತಾಪಮಾನ ಕಳೆದುಕೊಳ್ಳುತ್ತದೆ.


4. ರಿಗರ್ ಮೊರ್ಟಿಸ್
ಸತ್ತ ನಂತರ ದೇಹ ಗಟ್ಟಿಯಾಗುವುದು ಕೂಡ ಒಂದು ಪ್ರಮುಖ ಹಂತ. ದೇಹ ಗಟ್ಟಿಯಾಗುವ ಹಂತವನ್ನು ರಿಗರ್ ಮೊರ್ಟಿಸ್ ಎನ್ನಲಾಗುತ್ತದೆ. ಅಡೆನೊಸಿನ್ ಟ್ರೈಫಾಸ್ಫೇಟ್ (ಎಡಿಟಿ) ಮಟ್ಟ ಕಡಿಮೆಯಾಗುವುದರಿಂದ ಅದು ಸಂಭವಿಸುತ್ತದೆ. ಕಣ್ಣುರೆಪ್ಪೆಗಳು ಮತ್ತು ಕತ್ತಿನ ಸ್ನಾಯುಗಳು ಮೊದಲು ಗಟ್ಟಿಯಾಗುತ್ತವೆ.


5. ಸೆಳೆತ
ಸೆಳೆತವು ಒಂದು ವಿಚಿತ್ರ ವಿದ್ಯಮಾನವಾಗಿದೆ ಮತ್ತು ನೀವು ಮೃತ ದೇಹವನ್ನು ನೋಡುತ್ತಿದ್ದರೆ ನಿಜವಾಗಿಯೂ ಹೆದರಿಕೆಯಾಗುತ್ತದೆ. ಸ್ನಾಯುಗಳಲ್ಲಿನ ಸಂಕೋಚನಕ್ಕೆ ಒಳಗಾಗುವಾಗ ಸಾವಿನ ನಂತರವೂ ದೇಹವು ಕೆಲವು ಚಲನೆಗಳನ್ನು ಮಾಡುತ್ತದೆ. ಕೆಲವು ಸ್ನಾಯುಗಳು ಒಂದೇ ಸಮಯದಲ್ಲಿ ಸಂಕುಚಿತಗೊಂಡಾಗ ಸೆಳೆತ ಉಂಟಾಗುತ್ತದೆ.


ಇದನ್ನು ಓದಿ: ಕಾಫಿ ಜಾಸ್ತಿ ಕುಡಿದ್ರೆ ಮೆದುಳಿಗೆ ಹಾನಿಯಂತೆ ಅಧ್ಯಯನದಿಂದ ಬಯಲು

6. ಮುಖ ಚಪ್ಪಟೆಯಾಗುವುದು
ಒಬ್ಬ ವ್ಯಕ್ತಿಯು ಸತ್ತಾಗ, ಮುಖದಲ್ಲಿನ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದು ಇಡೀ ಮುಖವನ್ನು ಚಪ್ಪಟೆಯಾಗಿ ಕಾಣುವಂತೆ ಮಾಡುತ್ತದೆ.


7. ಕೆಟ್ಟ ವಾಸನೆ
ಮೃತ ದೇಹಗಳು ಕೆಟ್ಟ ವಾಸನೆಯನ್ನು ಹರಡುತ್ತದೆ. ಏಕೆಂದರೆ ಈ ವೇಳೆ ದೇಹದಲ್ಲಿನ ಸತ್ತ ಜೀವಕೋಶಗಳು ಕಿಣ್ವಗಳನ್ನು ಬಿಡುಗಡೆ ಮಾಡುತ್ತವೆ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಸಾಯುತ್ತವೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ದೇಹದ ಜೀವಕೋಶಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಇದು ಕೊಳೆಯುವ ಅಧಿಕೃತ ಪ್ರಕ್ರಿಯೆ.


8. ಚರ್ಮ ಸಡಿಲಗೊಳ್ಳುವುದು
ಸಾವಿನ ನಂತರ, ಚರ್ಮವು ಮೂಳೆಗಳು ಮತ್ತು ಸ್ನಾಯುಗಳಿಂದ ಬೇರ್ಪಡಲು ಪ್ರಾರಂಭಿಸುತ್ತದೆ. ಇದು ಇಡೀ ದೇಹದಲ್ಲಿನ ಚರ್ಮವನ್ನು ಸಡಿಲಗೊಳಿಸುತ್ತದೆ.


9. ಮೂಳೆಗಳು ಕೊಳೆಯುತ್ತವೆ
ಒಬ್ಬ ವ್ಯಕ್ತಿಯು ಸತ್ತಾಗ ಮೂಳೆಗಳು ಕೊಳೆಯುವುದು ಸಾವಿನ ಕೊನೆಯ ಹಂತ. ಸಾವು ಸಂಭವಿಸಿದ ದಶಕಗಳ ನಂತರ ಮೂಳೆಗಳು ಒಡೆಯುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: