Bad Dreams: ದುಃಸ್ವಪ್ನಕ್ಕೆ ಕಾರಣವೇನು ಗೊತ್ತಾ? ಅದನ್ನು ನಿಯಂತ್ರಿಸುವ ಮಾರ್ಗಗಳು ಇಲ್ಲಿವೆ

ಕನಸುಗಳು ವಿವಿಧ ರೀತಿಯದ್ದಾಗಿವೆ. ಒಳ್ಳೆಯ ಕನಸುಗಳು ನಿಮಗೆ ಬೆಳಿಗ್ಗೆ ವಿಭಿನ್ನ ರೀತಿಯ ತಾಜಾತನ ಮತ್ತು ಶಾಂತತೆ ನೀಡುತ್ತವೆ. ಕೆಟ್ಟ ಕನಸುಗಳು ನಿಮಗೆ ಚಡಪಡಿಕೆ ಉಂಟು ಮಾಡುತ್ತವೆ, ಒತ್ತಡ ಉಂಟು ಮಾಡುತ್ತವೆ, ಮಧ್ಯರಾತ್ರಿ ಎಚ್ಚರಗೊಳ್ಳುವಂತೆ ಮಾಡುತ್ತವೆ. ಹಾಗಾದರೆ ಕೆಟ್ಟ ಕನಸನ್ನು ನಿಯಂತ್ರಿಸೋದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕನಸು (Dream) ಕಾಣದವರು ಯಾರಿದ್ದಾರೆ? ಕನಸಿನಲ್ಲಿ ಕೆಲವು ಉತ್ತಮ ಮತ್ತು ಇನ್ನು ಕೆಲವು ಕೆಟ್ಟ ಕನಸುಗಳು (Bad Dreams) ಬೀಳುತ್ತವೆ. ಕೆಟ್ಟ ಕನಸುಗಳು ದಿನವನ್ನು (Day) ತುಂಬಾ ಖರಾಬ್ ಮಾಡಿ ಬಿಡುತ್ತವೆ. ನನಗೆ ಈ ರೀತಿ ಕನಸು ಬಿತ್ತು ಯಾಕೆ ಎಂಬ ಅಳುಕು ಕಾಡುತ್ತದೆ. ಕೆಟ್ಟ ಕನಸುಗಳು ರಾತ್ರಿ (Night) ನಿದ್ದೆ (Sleep) ಹಾಳು ಮಾಡಿ, ವ್ಯಕ್ತಿಯು ಬೆಚ್ಚಿ ಬೀಳುವಂತೆ ಮಾಡುತ್ತವೆ. ಕೆಲವೊಮ್ಮೆ ಕನಸು ಮುಂದೆ ಜೀವನದಲ್ಲಿ ಘಟಿಸುವ ಕೆಲ ಘಟನೆಗೆ ಸಂಬಂಧ ಪಟ್ಟಿರುತ್ತವೆ ಎಂದು ಭವಿಷ್ಯಶಾಸ್ತ್ರ ಹೇಳುತ್ತದೆ. ಕನಸುಗಳು ಕೆಲವೊಮ್ಮೆ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡುತ್ತವೆ.

  ದುಃಸ್ವಪ್ನ ಬರಲು ಕಾರಣವೇನು?

  ಕನಸುಗಳು ವಿವಿಧ ರೀತಿಯದ್ದಾಗಿವೆ. ಒಳ್ಳೆಯ ಕನಸುಗಳು ನಿಮಗೆ ಬೆಳಿಗ್ಗೆ ವಿಭಿನ್ನ ರೀತಿಯ ತಾಜಾತನ ಮತ್ತು ಶಾಂತತೆ ನೀಡುತ್ತವೆ. ಕೆಟ್ಟ ಕನಸುಗಳು ನಿಮಗೆ ಚಡಪಡಿಕೆ ಉಂಟು ಮಾಡುತ್ತವೆ. ಒತ್ತಡ ಉಂಟು ಮಾಡುತ್ತವೆ. ಮಧ್ಯರಾತ್ರಿ ಎಚ್ಚರಗೊಳ್ಳುವಂತೆ ಮಾಡುತ್ತವೆ. ದುಃಸ್ವಪ್ನಗಳಿಗೆ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ.

  ಜಾನಪದ ಕಥೆಗಳ ಪ್ರಕಾರ, ಇದು ನಿಮ್ಮ ಉಪಪ್ರಜ್ಞೆ ಮನಸ್ಸನ್ನು ಮತ್ತೊಂದು ಜಗತ್ತಿಗೆ ಸಂಪರ್ಕಿಸುವ ಸೇತುವೆ. ಇವು ನಿಮ್ಮ ಮನಸ್ಸಿನ ಚೌಕಟ್ಟಿನ ಲಕ್ಷಣಗಳೂ ಆಗಿವೆ. ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ, ಕೆಲವು ವಿಷಯಗಳಿಂದ ನಿಯಂತ್ರಿಸಬಹುದು.

  ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

  ನಿದ್ರೆಗೆ ಅಡ್ಡಿಪಡಿಸುವ ಕೆಟ್ಟ ಕನಸುಗಳನ್ನು ನಿಯಂತ್ರಿಸುವ ಮಾರ್ಗಗಳು

  ಮಾನಸಿಕ ಆರೋಗ್ಯ ತಪಾಸಣೆ

  ಕೆಟ್ಟ ಕನಸುಗಳಿಗೆ ಆತಂಕ ಮತ್ತು ಒತ್ತಡ ಮುಖ್ಯ ಅಂಶ. ಮನಸ್ಸು ಸರಿಯಿಲ್ಲದಿದ್ದರೆ ದುಃಸ್ವಪ್ನ ಉಂಟಾಗುತ್ತದೆ. ಖಿನ್ನತೆ, ಬೈಪೋಲಾರ್ ಡಿಸಾರ್ಡರ್ ಮಾನಸಿಕ ಆರೋಗ್ಯ ಸಮಸ್ಯೆ, ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಈ ಬಗ್ಗೆ ತಿಳಿದರೆ ಆತಂಕ ಮತ್ತು ಒತ್ತಡ ನಿಯಂತ್ರಿಸಿ.

  ನೋವಿನ ಅನುಭವ ಮರೆಯಲು ಪ್ರಯತ್ನಿಸಿ

  ಆಘಾತಕಾರಿ ಘಟನೆ ಅಥವಾ ಒತ್ತಡದ ಅಸ್ವಸ್ಥತೆ, ಅಪಘಾತ ಘಟನೆ ಮರೆಯಲು ಯತ್ನಿಸಿ. ಇದು ದುಃಸ್ವಪ್ನ ತಡೆಯುತ್ತದೆ. ಹಿಂಸಾಚಾರ, ನೈಸರ್ಗಿಕ ವಿಪತ್ತು, ಪ್ರೀತಿಪಾತ್ರರ ಸಾವು, ಸಂಬಂಧದ ವಿಘಟನೆ ದುಃಸ್ವಪ್ನಕ್ಕೆ ಕಾರಣ. ಇವುಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಇದು ದುಃಸ್ವಪ್ನ ತಡೆಯುತ್ತದೆ.

  ಏನನ್ನು ವೀಕ್ಷಿಸುತ್ತೀರಿ

  ಮಲಗುವ ಮುನ್ನ ನೀವು ಏನು ನೋಡುತ್ತೀರಿ ಎಂಬುದು ದು:ಸ್ವಪ್ನಕ್ಕೆ ಕಾರಣವಾಗುತ್ತದೆ. ಭಯಾನಕ ಚಲನಚಿತ್ರ ನೋಡುವುದು, ಭಯಾನಕ ಪುಸ್ತಕ ಓದುವುದು ದುಃಸ್ವಪ್ನ ಉಂಟು ಮಾಡುತ್ತದೆ.

  ಮನಸ್ಸಿನಲ್ಲಿ ಬರುವ ಯೋಚನೆಗಳು

  ನಿಜ ಜೀವನದ ಚಿಂತೆ, ಯೋಚನೆಗಳು ದುಃಸ್ವಪ್ನಕ್ಕೆ ಕಾರಣವಾಗುತ್ತವೆ. ಆತಂಕ ಮತ್ತು ಒತ್ತಡ ಕಡಿಮೆಯಾಗಲ್ಲ. ಹಾಗಾಗಿ ಒಳ್ಳೆಯ ಹವ್ಯಾಸ ಮತ್ತು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಮಲಗುವ ಸಮಯಕ್ಕೆ 90 ನಿಮಿಷಗಳ ಮೊದಲು ಬೆಚ್ಚಗಿನ, ವಿಶ್ರಾಂತಿ ಸ್ನಾನ ಮಾಡಿ. ಇದು ನೈಸರ್ಗಿಕ ಪರಿಹಾರವಾಗಿದೆ.

  ಔಷಧಿಗಳನ್ನು ಪರಿಶೀಲಿಸಿ

  ಕೆಲವು ಔಷಧಿಗಳು ದುಃಸ್ವಪ್ನ ಉಂಟು ಮಾಡುತ್ತವೆ. ಅವುಗಳು ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಖಿನ್ನತೆ, ಶಮನಕಾರಿ ಮತ್ತು ಬಾರ್ಬಿಟ್ಯುರೇಟ್ಗಳು ಸೇರಿವೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರೊಂದಿಗೆ ಮಾತನಾಡಿ.

  ಆಲ್ಕೋಹಾಲ್ ಮತ್ತು ಭಾರೀ ಆಹಾರ

  ತಿನ್ನುವ ಅಥವಾ ಲಘು ಆಹಾರ ಚಯಾಪಚಯ ವೇಗಗೊಳಿಸುತ್ತದೆ. ಕ್ರಿಯಾಶೀಲ ಮನಸ್ಸು ದುಃಸ್ವಪ್ನ ಉಂಟು ಮಾಡಬಹುದು. ಆದ್ದರಿಂದ ಮಲಗುವ ಮುನ್ನ ನಿಮ್ಮ ಆಹಾರದ ಬಗ್ಗೆ ಗಮನ ಕೊಡಿ.

  ನಿದ್ರೆ ದಿನಚರಿ

  ಆರೋಗ್ಯಕರ ನಿದ್ರೆಯ ದಿನಚರಿ ರಚಿಸಿ. ಮಲಗುವ ಸಮಯ ಮತ್ತು ಎಚ್ಚರಗೊಳ್ಳುವ ಸಮಯ ನಿರ್ಧರಿಸಿ. ಕೊಠಡಿಯು ಶಾಂತ, ಕತ್ತಲೆ ಮತ್ತು ತಂಪಾಗಿರುವುದು ನಿದ್ದೆ ಮಾಡಲು ಅನುವು ಮಾಡಿ ಕೊಡುತ್ತದೆ.

  ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

  ಸ್ಮಾರ್ಟ್‌ಫೋನ್ ಚಟ

  ಸ್ಮಾರ್ಟ್‌ಫೋನ್ ಚಟ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 24 ಗಂಟೆ ಮೊಬೈಲ್ ಸುದ್ದಿ, ವಿಡೀಯೋ ವೀಕ್ಷಣೆ ಮಾಡುವುದನ್ನು ತಪ್ಪಿಸಿ. ಇದು ದುಃಸ್ವಪ್ನ ಬೀಳದಂತೆ ತಡೆಯುತ್ತದೆ.
  Published by:renukadariyannavar
  First published: