Late Night Eating: ತಡರಾತ್ರಿ ತಿನ್ನುವ ಅಭ್ಯಾಸಕ್ಕೆ ಕಾರಣವೇನು? ರಾತ್ರಿ ತಿನ್ನುವ ಸಿಂಡ್ರೋಮ್‌ನ ಲಕ್ಷಣಗಳು ಯಾವವು?

ತಡರಾತ್ರಿ ಹಸಿವಾಗುವುದು ಸಣ್ಣ ಸ್ಥಿತಿಯಲ್ಲ, ಬದಲಿಗೆ ಇದನ್ನು ರಾತ್ರಿ ತಿನ್ನುವ ಸಿಂಡ್ರೋಮ್ ಎಂದು ಕರೆಯುತ್ತಾರೆ. NCBI 1 ನಲ್ಲಿ ಪ್ರಕಟವಾದ ವರದಿ ಪ್ರಕಾರ, ರಾತ್ರಿ ತಿನ್ನುವ ಸಿಂಡ್ರೋಮ್ ಒಂದು ರೀತಿಯ ಅಸ್ವಸ್ಥತೆಯಾಗಿದೆ. ರಾತ್ರಿ ಜನರು ಆಹಾರ ಸೇವಿಸಲು ಬಯಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನೇಕ ಬಾರಿ ರಾತ್ರಿ (Night) ಚೆನ್ನಾಗಿ ಊಟ (Food) ಮಾಡಿದಾಗಲೂ ತಡರಾತ್ರಿ (Late Night) ಹಸಿವಾಗುತ್ತದೆ (Hungry). ಕೆಲವರಿಗೆ ಸರಿಯಾಗಿ ರಾತ್ರಿ ಊಟ ಮಾಡದೇ ಹೋದರೆ ಹೀಗೆ ತಡರಾತ್ರಿ ಹಸಿವಾಗುತ್ತದೆ. ತಡರಾತ್ರಿ ಹಸಿವು ತಣಿಸಲು ಮ್ಯಾಗಿ, ಚಿಪ್ಸ್, ಬ್ರೆಡ್ ಹೀಗೆ ಕೆಲ ಫುಡ್ ತಿನ್ನುತ್ತೇವೆ. ಆದರೆ ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನಾರೋಗ್ಯಕರ ಪದಾರ್ಥ ಸೇವನೆ ಮಲಗಲು ತೊಂದರೆ ಮಾಡುತ್ತದೆ. ನೀವು ತಡರಾತ್ರಿಯವರೆಗೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ , ನಿಸ್ಸಂಶಯವಾಗಿ ನೀವು ತಡರಾತ್ರಿ ಹಸಿವು ಅನುಭವಿಸುತ್ತಿದ್ದೀರಾ ಎಂದರ್ಥ. ತಡ ರಾತ್ರಿ ಎಚ್ಚರವಾಗುವುದು ಮತ್ತು ತಿನ್ನುವುದು ಕಾಯಿಲೆಯ ಸಂಕೇತವೂ ಹೌದು.

    ರಾತ್ರಿ ತಿನ್ನುವ ಸಿಂಡ್ರೋಮ್

    ತಡರಾತ್ರಿ ಹಸಿವಾಗುವುದು ಸಣ್ಣ ಸ್ಥಿತಿಯಲ್ಲ, ಬದಲಿಗೆ ಇದನ್ನು ರಾತ್ರಿ ತಿನ್ನುವ ಸಿಂಡ್ರೋಮ್ ಎಂದು ಕರೆಯುತ್ತಾರೆ. NCBI (1) ನಲ್ಲಿ ಪ್ರಕಟವಾದ ವರದಿ ಪ್ರಕಾರ, ರಾತ್ರಿ ತಿನ್ನುವ ಸಿಂಡ್ರೋಮ್ ಒಂದು ರೀತಿಯ ಅಸ್ವಸ್ಥತೆಯಾಗಿದೆ. ರಾತ್ರಿ ಜನರು ಆಹಾರ ಸೇವಿಸಲು ಬಯಸುತ್ತಾರೆ.

    ವಾಸ್ತವದಲ್ಲಿ ಅನೇಕ ಜನರು ಹಸಿವಿನಿಂದಾಗಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಆಗ ತಡರಾತ್ರಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರ ಸೇವಿಸುತ್ತಾರೆ. ಇದರಿಂದಾಗಿ ಅವರ ತೂಕ ಹೆಚ್ಚಾಗುತ್ತದೆ ಮತ್ತು ಬೊಜ್ಜು, ಮಧುಮೇಹ ಮತ್ತು ಹೃದ್ರೋಗ ಹೆಚ್ಚುತ್ತದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

    ರಾತ್ರಿ ತಿನ್ನುವ ಸಿಂಡ್ರೋಮ್‌ನ ಲಕ್ಷಣಗಳು ಯಾವವು?

    ಆಗಾಗ್ಗೆ ತಡರಾತ್ರಿ ತಿನ್ನುವುದು. ರಾತ್ರಿ ಏಳುವುದು ಮತ್ತು ತಿನ್ನುವ ಬಯಕೆ ಹೊಂದುವುದು.

    ರಾತ್ರಿ ಶೇ. 25 ಕ್ಕಿಂತ ಹೆಚ್ಚು ಆಹಾರ ಸೇವಿಸುವುದು

    ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಯುಕ್ತ ಪದಾರ್ಥ ಸೇವನೆ

    ಬೆಳಿಗ್ಗೆ ಅಥವಾ ಮಧ್ಯಾಹ್ನ ಹಸಿವಿನ ನಷ್ಟ.

    ರಾತ್ರಿ ತಿನ್ನುವ ಸಿಂಡ್ರೋಮ್ ಗೆ ಕಾರಣಗಳು ಯಾವವು?

    ದೇಹದ ನೈಸರ್ಗಿಕ ಗಡಿಯಾರವು ತೊಂದರೆಯಾಗುತ್ತದೆ. ತಡರಾತ್ರಿ ಕೆಲಸ, ಅಧ್ಯಯನದ ಕಾರಣದಿಂದಾಗಿ, ಜನರು ತಡರಾತ್ರಿಯ ಆಹಾರ ಪದ್ಧತಿ ಅಳವಡಿಸಿಕೊಳ್ಳುತ್ತಾರೆ. ಇದು ಬಹಳ ಸಮಯದ ನಂತರ ಬದಲಾಯಿಸಲು ಕಷ್ಟವಾಗುತ್ತದೆ.

    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (2) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಿರ್ಕಾಡಿಯಂ ರಿದಮ್‌ಗಳು ದೇಹವು ಹಗಲಿನ ಬದಲು ರಾತ್ರಿಯಲ್ಲಿ ಹಸಿವಿನ ಹಾರ್ಮೋನು ಬಿಡುಗಡೆ ಮಾಡುತ್ತವೆ. ಸಿರ್ಕಾಡಿಯಂ ರಿದಮ್ ದೇಹದ ನೈಸರ್ಗಿಕ ಗಡಿಯಾರ. ಇದು ಹಸಿವು ಮತ್ತು ನಿದ್ರೆಯನ್ನು ನಿಯಂತ್ರಿಸುತ್ತದೆ.

    ಒತ್ತಡ ಮತ್ತು ಖಿನ್ನತೆ

    ಒತ್ತಡ ಮತ್ತು ಖಿನ್ನತೆಗೆ ನೈಟ್ ಈಟಿಂಗ್ ಸಿಂಡ್ರೋಮ್ ಕಾರಣ. ಜನರಿಗೆ ನಿದ್ರೆ ಬರುವುದಿಲ್ಲ ಮತ್ತು ಮಧ್ಯರಾತ್ರಿಯಲ್ಲಿ ತಿನ್ನುವ ಬಯಕೆ ಸ್ವತಃ ಎಚ್ಚರಗೊಳ್ಳುತ್ತದೆ.

    ಹಗಲು ಭಾರವಾದ ಆಹಾರ ತಿನ್ನುವುದು

    ಹಗಲಿನಲ್ಲಿ ಉತ್ತಮ ಮತ್ತು ಭಾರವಾದ ಆಹಾರ ಸೇವಿಸುವ ಜನರು ರಾತ್ರಿಯಲ್ಲಿ ಹೆಚ್ಚು ಹಸಿವು ಉಂಟಾಗುತ್ತದೆ. ತಡರಾತ್ರಿ ಆಹಾರ ಸೇವನೆ ನಿದ್ದೆಗೆ ಹಾನಿ ಮಾಡುತ್ತದೆ.

    ಕೆಲವೊಮ್ಮೆ ಜೀನ್‌ಗಳು ರಾತ್ರಿ ತಿನ್ನುವ ಸಿಂಡ್ರೋಮ್‌ಗೆ ಕಾರಣ. NES ನ ಕುಟುಂಬದ ಇತಿಹಾಸ ಹೊಂದಿರುವವರು NES ನ ಅಪಾಯ ಹೆಚ್ಚಿಸುತ್ತವೆ.

    ರಾತ್ರಿ ತಿನ್ನುವ ಸಿಂಡ್ರೋಮ್ ಗೆ ಚಿಕಿತ್ಸೆ

    ಅರಿವಿನ ವರ್ತನೆಯ ಚಿಕಿತ್ಸೆ, ಔಷಧಿ ಮತ್ತು ಖಿನ್ನತೆ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಯನ್ನು ಕಾಪಾಡಿಕೊಳ್ಳಲು ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ಗಳನ್ನು ಸೇರಿಸುವುದು.

    ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

    ರಾತ್ರಿ ತಿನ್ನುವ ಸಿಂಡ್ರೋಮ್ ನ್ನು ತೊಡೆದು ಹಾಕುವುದು ಹೇಗೆ

    ವೈದ್ಯರು ನಿಮ್ಮ ನಿದ್ರೆ ಮತ್ತು ಆಹಾರ ಪದ್ಧತಿಯ ಬಗ್ಗೆ ಪ್ರಶ್ನೆ ಕೇಳಬಹುದು. ರೋಗಿಯ ಮನಸ್ಥಿತಿ, ಭಾವನೆಗಳು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ.
    Published by:renukadariyannavar
    First published: