Fish and Curd: ಮೀನಿನ ಜೊತೆ ಮೊಸರು ತಿನ್ನುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ನೀವು ಓದಲೇಬೇಕಾದ ವಿಷಯ

ಕೆಲವೊಮ್ಮೆ ಪೋಷಕಾಂಶಗಳಿಂದ ಕೂಡಿದ ಎರಡು ಆಹಾರ ಪದಾರ್ಥಗಳು ಒಟ್ಟಿಗೆ ದೇಹದಲ್ಲಿ ಹೋದರೆ ಆಗ ನಮಗೆ ಕಿರಿಕಿರಿ ಅನ್ನಿಸುವುದು ಅಥವಾ ನಾವು ಅಸ್ವಸ್ಥತೆಯಿಂದ ಬಳಲಬೇಕಾದ ಪರಿಸ್ಥಿತಿ ಎದುರಾಗಬಹುದು. ಹಾಗಾದರೆ ಬನ್ನಿ ಯಾವ ಆಹಾರದೊಂದಿಗೆ ಯಾವ ಆಹಾರ ಪದಾರ್ಥವನ್ನು ತಿನ್ನಬಾರದು ಎಂದು ತಿಳಿದುಕೊಳ್ಳೋಣ.

ಮೊಸರು

ಮೊಸರು

  • Share this:
ಕೆಲವೊಮ್ಮೆ ನೀವು ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುವುದಕ್ಕಿಂತಲೂ ಹೆಚ್ಚಾಗಿ ನಿಮ್ಮ ಊಟದಲ್ಲಿ (Lunch) ಏನೆಲ್ಲಾ ಇರುತ್ತದೆ ಎನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಹೌದು. ದೇಹಕ್ಕೆ ಈ ಖನಿಜಗಳು, ಜೀವಸತ್ವಗಳು, ಪೋಷಕಾಂಶಗಳು ಮತ್ತು ಕಿಣ್ವಗಳು ಯಾವಾಗಲೂ ಪರಸ್ಪರ ಜೊತೆಯಾಗಿ ಕೆಲಸ (Work) ಮಾಡಿ ನಮ್ಮ ದೇಹಕ್ಕೆ ಸಮಗ್ರ ಪೌಷ್ಟಿಕಾಂಶದ (Nutrition) ಪೂರೈಕೆಯನ್ನು ನೀಡುತ್ತಿರುತ್ತವೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಕೆಲವೊಮ್ಮೆ ಪೋಷಕಾಂಶಗಳಿಂದ ಕೂಡಿದ ಎರಡು ಆಹಾರ ಪದಾರ್ಥಗಳು ಒಟ್ಟಿಗೆ ದೇಹದಲ್ಲಿ ಹೋದರೆ ಆಗ ನಮಗೆ ಕಿರಿಕಿರಿ ಅನ್ನಿಸುವುದು ಅಥವಾ ನಾವು ಅಸ್ವಸ್ಥತೆಯಿಂದ ಬಳಲಬೇಕಾದ ಪರಿಸ್ಥಿತಿ ಎದುರಾಗಬಹುದು.

ಹಾಗಾದರೆ ಬನ್ನಿ ಯಾವ ಆಹಾರದೊಂದಿಗೆ ಯಾವ ಆಹಾರ ಪದಾರ್ಥವನ್ನು ತಿನ್ನಬಾರದು ಎಂದು ತಿಳಿದುಕೊಳ್ಳೋಣ. ಮೊಸರಿನೊಂದಿಗೆ ಮೀನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ಅನೇಕ ಜನರ ನಂಬಿಕೆಯ ಹಿಂದಿನ ಸತ್ಯವನ್ನು ತಿಳಿಯೋಣ.

ಕೆಲವು ಆಹಾರ ಸಂಯೋಜನೆಗಳು ಅನಾರೋಗ್ಯಕ್ಕೆ ಕಾರಣವಾಗಬಹುದು
ಆಯುರ್ವೇದ ತಜ್ಞ ವಸಂತ್ ಲಾಡ್ ಅವರ ಪ್ರಕಾರ, ಕೆಲವು ಆಹಾರ ಸಂಯೋಜನೆಗಳು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. "ಅಸಮರ್ಪಕವಾಗಿ ಆಹಾರಗಳನ್ನು ಸಂಯೋಜಿಸುವುದರಿಂದ ಅಜೀರ್ಣ ಮತ್ತು ಅದಕ್ಕೆ ಸಂಬಂಧಿಸಿದ ಹಲವಾರು ಆರೋಗ್ಯ ಕಾಯಿಲೆಗಳನ್ನು ಪ್ರಚೋದಿಸಬಹುದು" ಎಂದು ಅವರು ತಮ್ಮ ಪುಸ್ತಕ ‘ದಿ ಕಂಪ್ಲೀಟ್ ಬುಕ್ ಆಫ್ ಆಯುರ್ವೇದಿಕ್ ರೆಮಿಡೀಸ್’ ನಲ್ಲಿ ಬರೆದಿದ್ದಾರೆ.

ಮೊಸರನ್ನು ಈ ಆಹಾರ ಪದಾರ್ಥಗಳೊಂದಿಗೆ ಸೇರಿಸಬಾರದು
ಆಯುರ್ವೇದದ ಪ್ರಕಾರ, ಮೊಸರನ್ನು ಹಾಲು ಮತ್ತು ಹುಳಿ ಹಣ್ಣುಗಳು, ಕಲ್ಲಂಗಡಿಗಳು, ಚಹಾ ಮತ್ತು ಕಾಫಿಯಂತಹ ಬಿಸಿ ಪಾನೀಯಗಳು, ಮೀನು, ಮಾವು, ಚೀಸ್, ಬಾಳೆಹಣ್ಣುಗಳು ಮತ್ತು ಪಿಷ್ಟವಿರುವ ಯಾವುದೇ ಆಹಾರ ಪದಾರ್ಥಗಳೊಂದಿಗೆ ಸೇರಿಸಬಾರದು. "ಮೊಸರಿನಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇರಿಸಿದಾಗ ಇದು ಜೀರ್ಣಕಾರಿ ಸಮಸ್ಯೆಗಳು ಮತ್ತು ಅನಾರೋಗ್ಯವನ್ನು ಮತ್ತಷ್ಟು ಪ್ರಚೋದಿಸುತ್ತದೆ" ಎಂದು ಆಯುರ್ವೇದ ತಜ್ಞರಾದ ಡಾ. ಅಶುತೋಷ್ ಗೌತಮ್ ಹೇಳುತ್ತಾರೆ.

ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನ ಅತ್ಯುತ್ತಮ ಮೂಲ
"ಮೊಸರನ್ನು ಆಲೂಗಡ್ಡೆಯೊಂದಿಗೆ ಜೊತೆ ಗೂಡಿಸಿ ತಿಂದಾಗ ತೂಕ ಜಾಸ್ತಿಯಾಗುತ್ತದೆ. ದೀರ್ಘಕಾಲದ ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಆಮ್ಲೀಯತೆ ಹೊಂದಿರುವ ಜನರು ಮೊಸರನ್ನು ಸೇವಿಸಬಾರದು, ಏಕೆಂದರೆ ಅದು ಆಮ್ಲೀಯ ಸ್ವಭಾವವನ್ನು ಹೊಂದಿರುತ್ತದೆ ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಆದರೆ, ಮೊಸರು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನ ಅತ್ಯುತ್ತಮ ಮೂಲವಾಗಿದೆ, ಆದ್ದರಿಂದ ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಘಟಕಾಂಶವಾಗಿದೆ" ಎಂದು ದೆಹಲಿ ಮೂಲದ ಪೌಷ್ಟಿಕ ತಜ್ಞರಾದ ಅನ್ಶುಲ್ ಜೈಭರತ್ ಹೇಳುತ್ತಾರೆ.

ಈ ಸಮಸ್ಯೆ ಇರುವವರು ಮೊಸರು ದೂರವಿಡಿ
"ಮೊಸರಿನಲ್ಲಿ ಪ್ರೋಟೀನ್ ಹೆಚ್ಚಿರುವುದರಿಂದ ಜನರು ರಾತ್ರಿ ಹೊತ್ತು ಮೊಸರನ್ನು ಸೇವಿಸುವುದಿಲ್ಲ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಇದರಿಂದ ಕಫ ಜಾಸ್ತಿಯಾಗಬಹುದು ಮತ್ತು ಅದರಲ್ಲೂ ಈ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ಜನರು ಮೊಸರನ್ನು ಆದಷ್ಟು ದೂರವಿಡಬೇಕು.

ಮೊಸರನ್ನು ಕ್ಯಾಲ್ಸಿಯಂ ಭರಿತ ಮತ್ತು ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಆಹಾರಗಳೊಂದಿಗೆ ಜೋಡಿಸಿಕೊಂಡು ತಿನ್ನಬಾರದು. ಕೆಂಪು ಚನ್ನಾ, ಪಾಲಕ್ ಅಥವಾ ಬೀಟ್ರೂಟ್ ನಂತಹ ಕಬ್ಬಿಣಾಂಶ ಭರಿತ ಪದಾರ್ಥಗಳೊಂದಿಗೆ ಮೊಸರನ್ನು ಸೇರಿಸಿದರೆ ದೇಹಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕಲ್ಲ, ಇದು ಎರಡೂ ಪೋಷಕಾಂಶಗಳ ಅಸಮರ್ಪಕ ಹೀರುವಿಕೆಗೆ ಕಾರಣವಾಗುತ್ತದೆ. ನೀವು ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಒಟ್ಟಿಗೆ ಸೇವಿಸಿದಾಗ ನಿಮ್ಮ ದೇಹವು ಯಾವುದೇ ಪೋಷಕಾಂಶಗಳನ್ನು ಹೀರಿಕೊಳ್ಳುವುದಿಲ್ಲ" ಎಂದು ಬೆಂಗಳೂರಿನ ಡಾ. ಅಂಜು ಸೂದ್ ವಿವರಿಸುತ್ತಾರೆ.

ಮಾಂಸಾಹಾರ ಅಡುಗೆಗಳೊಂದಿಗೆ ಮೊಸರನ್ನು ಸೇರಿಸಲೇಬಾರದು
"ಮೊಸರನ್ನು ರಕ್ತಪರಿಚಲನಾ ವಾಹಿನಿಯನ್ನು ನಿರ್ಬಂಧಿಸುವ ಏಜೆಂಟ್ ಎಂದು ಸಹ ಕರೆಯಲಾಗುತ್ತದೆ, ಆದ್ದರಿಂದ ಬೊಜ್ಜು, ಕೀಲು ನೋವು ಅಥವಾ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿರುವವರು ಇದನ್ನು ಸೇವಿಸದೆ ಇರುವುದು ಒಳ್ಳೆಯದು. ಮಾಂಸಾಹಾರ ಅಡುಗೆಗಳೊಂದಿಗೆ ಮೊಸರನ್ನು ಸೇರಿಸಲೇಬಾರದು, ಏಕೆಂದರೆ ಈ ಸಂಯೋಜನೆಯು ಜೀರ್ಣಕ್ರಿಯೆಗೆ ಸಮಸ್ಯೆ ಮಾಡಬಹುದು.

ಇದನ್ನೂ ಓದಿ:  Cancer Causing Foods: ಪ್ಯಾಕ್ ಮಾಡಿದ ಕೆಲವು ಆಹಾರಗಳನ್ನು ತಿಂದ್ರೆ ಬರುತ್ತೆ ಕ್ಯಾನ್ಸರ್!

ಮೊಸರನ್ನು ಎಂದಿಗೂ ಹಾಲಿನೊಂದಿಗೆ ಜೋಡಿಸಬಾರದು. ಅನ್ನದಲ್ಲಿ ಮೊಸರನ್ನು ಸೇರಿಸಿಕೊಂಡು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಮೊಸರನ್ನು ಒಂದು ಟೀ ಸ್ಪೂನ್ ನೆಲ್ಲಿಕಾಯಿ ಪುಡಿಯೊಂದಿಗೆ ಬೆರೆಸಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ" ಎಂದು ಆಯುರ್ವೇದ ತಜ್ಞ ಡಾ. ಧನ್ವಂತ್ರಿ ತ್ಯಾಗಿ ಹೇಳುತ್ತಾರೆ.

ಮೀನು ಮತ್ತು ಮೊಸರು ಒಟ್ಟಿಗೆ ಸೇವಿಸುವುದು ಎಷ್ಟು ಒಳ್ಳೆಯದು?
ಮೀನನ್ನು ಮೊಸರಿನೊಂದಿಗೆ ಸೇರಿಸಿಕೊಂಡು ತಿನ್ನುವುದರ ಕುರಿತು ತಜ್ಞರು ಸಾಮಾನ್ಯವಾಗಿ ಎರಡು ಪ್ರೋಟೀನ್ ಭರಿತ ಆಹಾರ ಪದಾರ್ಥಗಳನ್ನು ಒಟ್ಟಿಗೆ ಜೋಡಿಸದಂತೆ ಸೂಚಿಸುತ್ತಾರೆ. ನೀವು ಪ್ರೋಟೀನ್ ನ ಸಸ್ಯಾಹಾರಿ ಮೂಲವನ್ನು ಪ್ರಾಣಿಜನ್ಯ ಪ್ರೋಟೀನ್ ಮೂಲದೊಂದಿಗೆ ಜೋಡಿಸಬಹುದು ಆದರೆ ಎಂದಿಗೂ ಮತ್ತೊಂದು ಸಸ್ಯಾಹಾರಿ ಮೂಲದೊಂದಿಗೆ ಅಲ್ಲ. ಮತ್ತು ಅದೇ ತರ್ಕವು ಮಾಂಸಾಹಾರಿ ಪ್ರೋಟೀನ್ ಮೂಲಗಳಿಗೂ ಸಹ ಅನ್ವಯಿಸುತ್ತದೆ.

ಇದನ್ನೂ ಓದಿ: Health Tips: ಸಿಗಡಿ ಅಡುಗೆ ಬಾಯಿಗಷ್ಟೇ ರುಚಿಯಲ್ಲ, ಕ್ಯಾನ್ಸರ್ ಸೇರಿ ಹಲವು ಸಮಸ್ಯೆಗೆ ರಾಮಬಾಣ! 

ಡೈರಿಯನ್ನು ಪ್ರಾಣಿಗಳ ಹಾಲಿನಿಂದ ಪಡೆಯುವುದರಿಂದ, ಇದನ್ನು ಸಾಮಾನ್ಯವಾಗಿ ಮಾಂಸಗಳು ಮತ್ತು ಮೀನುಗಳು ಸೇರಿದಂತೆ ಮಾಂಸಾಹಾರಿ ಆಹಾರ ಪದಾರ್ಥಗಳೊಂದಿಗೆ ಜೋಡಿಸಿಕೊಂಡು ತಿನ್ನಬೇಡಿ ಎಂದು ತಜ್ಞರು ಹೇಳುತ್ತಾರೆ.
Published by:Ashwini Prabhu
First published: