Breast Feeding: ಮೊದಲ ಬಾರಿ ಹಾಲುಣಿಸುವ ತಾಯಂದಿರು ಎದುರಿಸುವ ಆ 6 ಸಮಸ್ಯೆಗಳೇ ಇವು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹಾಲುಣಿಸುವ ತಾಯಂದಿರು ಸಾಮಾನ್ಯವಾಗಿ ಕೆಲವು ಸಮಸ್ಯೆಗಳನ್ನು ಸಹ ಎದುರಿಸುತ್ತಾರೆ. ಹೊಸ ತಾಯಂದಿರಿಗೆ ಈ ಪರಿಸ್ಥಿತಿ ಎದುರಿಸುವುದು ಕಷ್ಟವಾಗಬಹುದು ಮತ್ತು ಕೆಲವು ಪರಿಹಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಬಹುದು.

  • Share this:

ಸ್ತನ್ಯಪಾನ (Breast Feeding), ತಾಯಿಗೆ ಮತ್ತು ಮಗುವಿಗೆ ನಿಸರ್ಗದತ್ತವಾಗಿ ಬಂದ ವರ ಎನ್ನಬಹುದು. ಮಕ್ಕಳಿಗೆ ತಾಯಿ ಎದೆಹಾಲಿನಷ್ಟು ಶ್ರೇಷ್ಠವಾದದ್ದು ಯಾವುದು ಇಲ್ಲ. ಶಿಶುಗಳ ಮೊದಲ ಆಹಾರವೇ ತಾಯಿಯ (Mother) ಎದೆಹಾಲು. ತಾಯಿ ಹಾಲು ಮಕ್ಕಳಿಗೆ (Baby) ವಿಶೇಷವಾದ, ಶಕ್ತಿಯುತವಾದ ಆಹಾರವಾಗಿದ್ದು, ಮಕ್ಕಳಿಗೆ ಆರು ತಿಂಗಳವರೆಗೂ ಹಾಲು ಬಿಟ್ಟರೆ ಬೇರೆ ಏನನ್ನೂ ನೀಡದಿರಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಮಕ್ಕಳಿಗೆ ಎದೆ ಹಾಲುಣಿಸುವುದು ತಾಯಿಗೂ ವಿಶೇಷವಾಗಿದ್ದು, ಅನೇಕ ಪ್ರಯೋಜನಗಳು ಲಭಿಸುತ್ತವೆ. ಆದರೆ ಇದೇ ಸಮಯದಲ್ಲಿ ಸ್ತನ್ಯಪಾನ ಮಾಡುವ ವೇಳೆ ತಾಯಂದಿರು ಅನೇಕ ಸಮಸ್ಯೆಗಳನ್ನು (Problems) ಎದುರಿಸುತ್ತಾರೆ. “ಮಗುವಿಗೆ ಎದೆ ಹಾಲಿನೊಂದಿಗೆ ಪೋಷಣೆ ನೀಡುವುದು ತಾಯಿ ತನ್ನ ಜೀವನದಲ್ಲಿ ನೀಡಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ.


ಆದಾಗ್ಯೂ, ಅರ್ಧದಷ್ಟು ತಾಯಂದಿರು 6 ತಿಂಗಳ ನಂತರ ಸ್ತನ್ಯಪಾನವನ್ನು ತ್ಯಜಿಸುತ್ತಾರೆ ಮತ್ತು ಕೇವಲ 1/3 ಭಾಗದಷ್ಟು ತಾಯಂದಿರು ಒಂದು ವರ್ಷದವರೆಗೆ ತಮ್ಮ ಶಿಶುಗಳಿಗೆ ಆಹಾರವನ್ನು ನೀಡುವುದನ್ನು ಮುಂದುವರಿಸುತ್ತಾರೆ" ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ ಅರುಣಾ ಮುರಳೀಧರ್ ತಿಳಿಸುತ್ತಾರೆ. ಇದೇ ವೇಳೆ ಹಾಲುಣಿಸುವ ತಾಯಂದಿರು ಸಾಮಾನ್ಯವಾಗಿ ಕೆಲವು ಸಮಸ್ಯೆಗಳನ್ನು ಸಹ ಎದುರಿಸುತ್ತಾರೆ. ಹೊಸ ತಾಯಂದಿರಿಗೆ ಈ ಪರಿಸ್ಥಿತಿ ಎದುರಿಸುವುದು ಕಷ್ಟವಾಗಬಹುದು ಮತ್ತು ಕೆಲವು ಪರಿಹಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಬಹುದು.


ಹಾಲುಣಿಸುವ ತಾಯಂದಿರು ಎದುರಿಸುವ ಸಮಸ್ಯೆಗಳು
1) ಹಾಲಿನ ಕೊರತೆ
ಅನೇಕ ಮಹಿಳೆಯರು ತಮ್ಮ ಹಾಲು ಸ್ರವಿಸುವಿಕೆಯು ಸಾಕಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಸಮಸ್ಯೆ ಹೆಚ್ಚಾಗಿ ತಾಯಿಂದಿರ ಮೇಲೆ ಅವಲಂಬನೆಯಾಗಿರುತ್ತದೆ. ಹೆಚ್ಚೆಚ್ಚು ಬಾರಿ ಸ್ತನ್ಯಪಾನ ಮಾಡದಿರುವುದು ಹಾಲಿನ ಕೊರತೆಗೆ ಕಾರಣವಾಗುತ್ತದೆ. ಪದೇ ಪದೇ ಹಾಲುಣಿಸುವುದು ಅಥವಾ ಪಂಪ್ ಮಾಡುವುದರಿಂದ ಸ್ತನಗಳು ಹಾರ್ಮೋನ್, ಪ್ರೊಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್ ಅನ್ನು ಬದಲಾಯಿಸುವ ಮೂಲಕ ಹೆಚ್ಚು ಹಾಲು ಉತ್ಪಾದನೆಗೆ ಕಾರಣವಾಗುತ್ತದೆ.


ಹಾಲಿನ ಕೊರತೆ ಸಮಸ್ಯೆಯಾದರೂ, ಹೆಚ್ಚು ಹಾಲುಣಿಸುವ ಮೂಲಕ ಇದನ್ನು ಪರಿಹರಿಸಬಹುದು. ಕೆಲವೊಮ್ಮೆ, ಸಾಕಷ್ಟು ಹಾಲು ಇದ್ದರೂ ಮಗುವಿಗೆ ಹಾಲನ್ನು ಹೊರತೆಗೆಯಲು ಕಷ್ಟವಾಗುತ್ತದೆ. ಇದು ಕಳಪೆ ಲಾಚಿಂಗ್ ಕಾರಣದಿಂದಾಗಿರಬಹುದು. ಇದು ಅಕಾಲಿಕ ಶಿಶುಗಳು ಅಥವಾ ಬಾಯಿಯೊಂದಿಗೆ ರಚನಾತ್ಮಕ ಸಮಸ್ಯೆಯಿರುವ ಶಿಶುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ,


2) ನೋಯುತ್ತಿರುವ ಮೊಲೆತೊಟ್ಟುಗಳು
ಹಾಲುಣಿಸುವ ತಾಯಂದಿರ ಸಾಮಾನ್ಯ ದೂರು ಇದು. ಹಾಲುಣಿಸುವ ಸಂದರ್ಭದಲ್ಲಿ ತಾಯಂದಿರು ತಮ್ಮ ಮೊಲೆತೊಟ್ಟುಗಳಲ್ಲಿ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದು ಮಿತಿಮೀರಿ ಗಾಯಗಳು ಸಹ ಆಗುತ್ತವೆ.


ಮಾಸ್ಟಿಟಿಸ್, ಇದು ಸ್ತನದ ಸುತ್ತಲಿನ ಅಂಗಾಂಶಗಳ ಉರಿಯೂತವಾಗಿದ್ದು ಅದು ಸಾಮಾನ್ಯವಾಗಿ ಸ್ತನ ನೋವು, ಊತ, ಉಷ್ಣತೆಯನ್ನು ಉಂಟುಮಾಡುತ್ತದೆ. ಮಾಸ್ಟಿಟಿಸ್ ಸೋಂಕಿನ ಪ್ರಮುಖ ಲಕ್ಷಣ ಎಂದರೆ ಉರಿಯೂತ. ಇದು ಹಲವು ಸೋಂಕುಗಳನ್ನು ಒಳಗೊಂಡಿರುತ್ತದೆ ಮತ್ತು ನೋವಿಗೆ ಕಾರಣವಾಗುತ್ತದೆ.


ಇದನ್ನೂ ಓದಿ: HPV Virus: ಮಹಿಳೆಯರಿಗೆ ಮಾತ್ರ ಅಲ್ಲ ಪುರುಷರಿಗೂ ಅಪಾಯ ತಂದೊಡ್ಡುತ್ತದೆ ಹೆಚ್​​ಪಿವಿ! ಹೇಗೆ ಅಂತ ತಿಳ್ಕೊಳ್ಳಿ


ಹೀಗಾಗಿ ಈ ಸಂದರ್ಭದಲ್ಲಿ ಮೊಲೆತೊಟ್ಟುಗಳ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅವುಗಳನ್ನು ತೇವವಾಗಿ ಇಟ್ಟುಕೊಳ್ಳಬೇಕು ಮತ್ತು ಬಿಗಿಯಾದ ಉಡುಪನ್ನು ಧರಿಸದಂತೆ ನೋಡಿಕೊಳ್ಳಬೇಕು.


3) ತಲೆಕೆಳಗಾದ ಅಥವಾ ಚಪ್ಪಟೆ ಮೊಲೆತೊಟ್ಟುಗಳು
ಗರ್ಭಾವಸ್ಥೆಯಲ್ಲಿ ಉಂಟಾದ ಚಪ್ಪಟೆಯಾದ ಅಥವಾ ತಲೆಕೆಳಗಾದ ಮೊಲೆತೊಟ್ಟುಗಳನ್ನು ಹೆರಿಗೆಯ ಮುನ್ನ ಸರಿಪಡಿಸಿಕೊಳ್ಳುವುದು ಉತ್ತಮ. "ಮೊಲೆತೊಟ್ಟುಗಳನ್ನು ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಹೊರಳಿಸುವ ಮೂಲಕ ಸರಿಪಡಿಸಿಕೊಳ್ಳಬೇಕೆಂದು ‘ವಿ’ ಅಥವಾ ‘ಸಿ’ ಆಕಾರದಲ್ಲಿ ಬೆರಳುಗಳಿಂದ ಸ್ತನವನ್ನು ಸಂಕುಚಿತಗೊಳಿಸುವ ಮೂಲಕ ತಲೆಕೆಳಗಾದ ಅಥವಾ ಚಪ್ಪಟೆ ಮೊಲೆತೊಟ್ಟುಗಳನ್ನು ಸರಿಪಡಿಸಬಹುದು ಎಂದು ಡಾ. ಅರುಣಾ ಸಲಹೆ ನೀಡುತ್ತಾರೆ.


4) ಮಗುವಿನ ಬಾಯಿ ತುಂಬಾ ಚಿಕ್ಕದಾಗಿರುವುದು
ಅವಧಿಪೂರ್ವ ಹುಟ್ಟಿದ ಮಕ್ಕಳು ಸಣ್ಣ ಬಾಯಿಗಳನ್ನು ಹೊಂದಿರುತ್ತವೆ. ಈ ವೇಳೆ ತಾಯಂದಿರಿಗೆ ಹಾಲುಣಿಸುವುದು ಕಷ್ಟವಾಗಬಹುದು. ಆದ್ದರಿಂದ ಈ ಸಮಸ್ಯೆಗೆ ಪರಿಹಾರವಾಗಿ ಮೊಲೆತೊಟ್ಟುಗಳ ಶೀಲ್ಡ್ ಗಳನ್ನು ಬಳಸುವುದು ಉತ್ತಮ.


5) ಸ್ತನ ಜೋತುಬೀಳುವಿಕೆ
ಸ್ತನ್ಯಪಾನವು ಸ್ತನಗಳನ್ನು ಜೋತುಬೀಳುವಂತೆ ಮಾಡಬಹುದು. ಸರಿಯಾದ ಕ್ರಮದಲ್ಲಿ ಹಾಲು ಕುಡಿಸದಿರುವುದು ಸಹ ಇದಕ್ಕೆ ಕಾರಣವಾಗಬಹುದು. ಹೀಗಾಗಿ ಸ್ತನಗಳ ಜೋತುಬೀಳುವಿಕೆಯನ್ನು ತಪ್ಪಿಸಿ ಉತ್ತಮ ಆಕಾರ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಕೆಲವು ವಿಧಾನಗಳು ಸಹಾಯ ಮಾಡುತ್ತವೆ. ಸರಿಯಾದ ಒಳ ಉಡುಪು ಧರಿಸಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ತೇವಾಂಶ ಕಾಪಾಡಿಕೊಳ್ಳುವುದು ಇದಕ್ಕೆ ಸಹಕಾರಿ ಎನ್ನುತ್ತಾರೆ ವೈದ್ಯರು.


6) ಹೆಚ್ಚಿನ ಎದೆ ಹಾಲು
ಹಾಲಿನ ಕೊರತೆ ಜೊತೆಗೆ ಹೆಚ್ಚುವರಿ ಹಾಲು ಕೂಡ ಸಮಸ್ಯೆಯಾಗಬಹುದು. ಹೆಚ್ಚಿನ ಹಾಲು ಚಿಮ್ಮುವುದರಿಂದ ಮಗುವಿಗೆ ಉಸಿರುಗಟ್ಟುವಿಕೆ ಅಥವಾ ಕೆಮ್ಮು ಉಂಟಾಗುತ್ತದೆ. ಹಾಲು ಸೋರುವಿಕೆ ಹಲವು ತಾಯಂದಿರಿಗೆ ಕಿರಿಕಿರಿಯನ್ನುಂಟು ಮಾಡುವ ಪ್ರಕ್ರಿಯೆ ಕೂಡ ಹೌದು.


ಇದನ್ನೂ ಓದಿ:  Child Care: ಮಕ್ಕಳ ಹಲ್ಲುಗಳಿಗೆ ಹಾನಿಕಾರಕ ಈ 5 ಆಹಾರಗಳು, ಅಪ್ಪಿ ತಪ್ಪಿಯೂ ತಿನ್ನಲು ಬಿಡಬೇಡಿ


ಸ್ತನ್ಯಪಾನ ಮಾಡಿಸುವ ತಾಯಂದಿರು ಇಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳ ಜೊತೆಗೆ ಇತರ ಸವಾಲುಗಳನ್ನು ಎದುರಿಸಬಹುದು. ಕೈ ಮೀರಿದ ಕೆಲವು ಸಮಸ್ಯೆಗಳನ್ನು ಪ್ರಸೂತಿ ತಜ್ಞರು, ಹಾಲುಣಿಸುವ ಸಲಹೆಗಾರರ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು.

top videos
    First published: