Tomato Flu Symptoms: ಐದು ವರ್ಷದೊಳಗಿನ ಮಕ್ಕಳಲ್ಲಿ ಟೊಮೆಟೊ ಜ್ವರದ ಸೋಂಕಿನ ಲಕ್ಷಣಗಳೇನು?

ಟೊಮೆಟೊ ಜ್ವರ ಸೋಂಕಿಗೆ ಒಳಗಾದ ಮಕ್ಕಳ ದೇಹದ ಮೇಲೆ ಟೊಮೆಟೊ ತರಹದ ಕೆಂಪು ಬಣ್ಣದ ದದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮಕ್ಕಳ ಚರ್ಮದ ಮೇಲೆ ಸುಡುವಿಕೆ ಮತ್ತು ತುರಿಕೆ ಉಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಟೊಮೆಟೊ ಜ್ವರವು (Tomato Flu) ವೈರಲ್ ಸೋಂಕು (Viral Infection) ಆಗಿದೆ. ಇದು ಹೆಚ್ಚಾಗಿ ಐದು ವರ್ಷದೊಳಗಿನ ಮಕ್ಕಳ (Children’s) ಮೇಲೆ ಕೆಟ್ಟ ಪರಿಣಾಮ (Bad Effects) ಬೀರುತ್ತದೆ. ಟೊಮೆಟೊ ವೈರಲ್ ಸೋಂಕಿಗೆ ಟೊಮೆಟೊ ಜ್ವರ ಎಂದು ಹೆಸರಿಡಲಾಗಿದೆ. ಏಕೆಂದರೆ ಟೊಮೆಟೊ ಜ್ವರ ಸೋಂಕಿಗೆ ಒಳಗಾದ ಮಕ್ಕಳ ದೇಹದ (Body) ಮೇಲೆ ಟೊಮೆಟೊ ತರಹದ ಕೆಂಪು ಬಣ್ಣದ ದದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮಕ್ಕಳ ಚರ್ಮದ ಮೇಲೆ ಸುಡುವಿಕೆ ಮತ್ತು ತುರಿಕೆ ಉಂಟಾಗುತ್ತದೆ. ಈ ರೋಗಕ್ಕೆ ತುತ್ತಾದ ಮಕ್ಕಳಲ್ಲಿ ತೀವ್ರ ತರಹದ ಜ್ವರ ಬರುತ್ತದೆ. ಟೊಮೆಟೊ ಜ್ವರ ಸೋಂಕಿಗೆ ಒಳಗಾದ ಮಕ್ಕಳಿಗೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ.

    ಟೊಮೆಟೊ ಜ್ವರವು ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ

    ದೇಶಾದ್ಯಂತ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಒಂದ್ಕಡೆ ಆತಂಕ ಹೆಚ್ಚಿಸಿದ್ರೆ, ಈಗ ಕೇರಳದಲ್ಲಿ ಉಂಟಾಗಿರುವ ಹೊಸ ಟೊಮೆಟೊ ಜ್ವರವು ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ. ಕೇರಳದ ಕೆಲವು ಭಾಗಗಳಲ್ಲಿ ಟೊಮೇಟೊ ಜ್ವರ ಮಕ್ಕಳ ಪ್ರಾಣ ಹಿಂಡುತ್ತಿದೆ. 5 ವರ್ಷದೊಳಗಿನ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ.

    ಟೊಮೆಟೊ ಜ್ವರ ಅಪರೂಪದ ಕಾಯಿಲೆ ಆಗಿದೆ. ಸೋಂಕು ತಗುಲಿದ ಮಕ್ಕಳ ದೇಹದ ಮೇಲೆ ಟೊಮೆಟೊದಂತಹ ದುಂಡಗಿನ ಆಕಾರದ ದದ್ದುಗಳು ಕಾಣಿಸಿಕೊಳ್ಳುತ್ತಿವೆ. ಟೊಮೆಟೊ ಜ್ವರ ಸೋಂಕಿತ ಮಕ್ಕಳನ್ನು ತೀವ್ರವಾಗಿ ಬಳಲುವಂತೆ ಮಾಡಿದೆ.

    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ

    ಆದರೆ ಕೇರಳ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಟೊಮೆಟೊ ಜ್ವರದ ಪ್ರಕರಣಗಳು ದೃಢಪಟ್ಟಿಲ್ಲ. ಇಲ್ಲಿ ಟೊಮೆಟೊ ಜ್ವರದ ಲಕ್ಷಣಗಳು ಮತ್ತು ಅದರಿಂದ ಮಕ್ಕಳನ್ನು ಕಾಪಾಡುವುದು ಹೇಗೆ ಎಂಬುದನ್ನು ನೋಡೋಣ.

    ಟೊಮೆಟೊ ಜ್ವರ ಎಂದರೇನು?

    ಕೇರಳದಲ್ಲಿ 80ಕ್ಕೂ ಹೆಚ್ಚು ಮಕ್ಕಳಲ್ಲಿ ಟೊಮೇಟೊ ಜ್ವರ ದೃಢಪಟ್ಟಿದೆ. ಇದು ವೈರಲ್ ಜ್ವರ. ದೇಹದ ಮೇಲೆ ದದ್ದು ಉಂಟಾಗುವುದರಿಂದ ಉರಿಯುವುದು ಮತ್ತು ತುರಿಕೆ ಸಮಸ್ಯೆ ಬರುತ್ತದೆ. ಸೋಂಕಿತ ಮಕ್ಕಳಿಗೆ ತೀವ್ರ ಜ್ವರ, ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಈ ರೋಗದಲ್ಲಿ ಮಕ್ಕಳ ದೇಹ ಮತ್ತು ಕೀಲುಗಳಲ್ಲಿ ನೋವು ಉಂಟಾಗುತ್ತದೆ.

    ಕೇರಳದ ಆರೋಗ್ಯ ಇಲಾಖೆಯ ಪ್ರಕಾರ, ಈ ಜ್ವರವು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹರಡುತ್ತಿದೆ.

    ಟೊಮೆಟೊ ಜ್ವರ ಸೋಂಕಿನ ಲಕ್ಷಣಗಳು

    - ಟೊಮೆಟೊ ತರಹದ ಕೆಂಪು ಬಣ್ಣದ ದದ್ದುಗಳು ಮತ್ತು ದೇಹದ ಮೇಲೆ ಗುರುತು

    - ತೀವ್ರತರದ ಜ್ವರ

    - ದೇಹ ಮತ್ತು ಕೀಲು ನೋವು

    - ಕಿಬ್ಬೊಟ್ಟೆಯ ನೋವು ಮತ್ತು ಸೆಳೆತ

    - ವಾಂತಿ ಮತ್ತು ಅತಿಸಾರ

    - ಕೆಮ್ಮು ಮತ್ತು ಶೀತ

    - ಊದಿಕೊಂಡ ಕೀಲುಗಳು

    - ಕೈ ಬಣ್ಣ ಬದಲಾಗುವುದು

    - ಒಣ ಬಾಯಿ ಮತ್ತು ನಿರ್ಜಲೀಕರಣ

    - ದೌರ್ಬಲ್ಯ ಮತ್ತು ಆಯಾಸ

    - ಚರ್ಮ ಕೆರಳುವುದು

    ಟೊಮೆಟೊ ಜ್ವರದಿಂದ ಮಕ್ಕಳನ್ನು ಕಾಪಾಡುವುದು ಹೇಗೆ?

    - ಮಕ್ಕಳಲ್ಲಿ ಟೊಮೆಟೊ ಜ್ವರದ ಸೋಕಿನ ರೋಗ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ

    - ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ

    - ಸರಿಯಾದ ಆಹಾರ ಸೇವನೆ ಮತ್ತು ರೋಗ ನಿರೋಧಕ ಶಕ್ತಿ ಬಲಪಡಿಸಿ

    - ಸೋಂಕಿತ ಜನರಿಂದ ದೂರವಿರಿ

    ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ

    ಈ ವೈರಲ್ ಸೋಕಿನ ಬಗ್ಗೆ ಅಧ್ಯಯನ ನಡೆಯುತ್ತಿದೆ. ಹೆಚ್ಚಾಗಿ ಐದು ವರ್ಷದೊಳಗಿನ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ರೋಗ ಇತರ ಮಕ್ಕಳಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಜ್ವರವು ನೀರು, ಲೋಳೆಯ, ಮಲ ಮತ್ತು ಗುಳ್ಳೆಯ ದ್ರವಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ.
    Published by:renukadariyannavar
    First published: