ಗರ್ಭಿಣಿಯರೇ ಎಚ್ಚರ.. Cold Drinks ಸೇವಿಸೋದರಿಂದ ಇಷ್ಟೆಲ್ಲಾ ಅಡ್ಡ ಪರಿಣಾಮಗಳಿವೆ!

Pregnant Women: ಗರ್ಭಿಣಿಯರ ಆರೋಗ್ಯ ಬಹುಮುಖ್ಯ ಆಗಿರುವುದರಿಂದ ಅವರು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹೀಗಾಗಿ ಹಾಲು ಹಣ್ಣಿನ ಜ್ಯೂಸ್ ಮಿಲ್ಕ್ ಶೇಕ್ ಇತ್ಯಾದಿಗಳನ್ನು ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ಸೇವನೆ ಮಾಡಿದರೆ ಒಳ್ಳೆಯದು

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ಆರೋಗ್ಯವಾಗಿರುವುದು (Health) ಎಷ್ಟು ಮುಖ್ಯ ಎಂದು ಇಂದಿನ ಕೊರೊನಾ (Corona) ಕಾಲದಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ. ಹೀಗಾಗಿ ದೇಹದಲ್ಲಿ (Body) ಪ್ರತಿರೋಧಕ ಶಕ್ತಿ ವೃದ್ಧಿಸಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಮಕ್ಕಳು (Children), ವಯೋವೃದ್ಧರು, ಮಹಿಳೆಯರು(Women) ಹೀಗೆ ಎಲ್ಲರು ಒಂದಲ್ಲಾ ಒಂದು ವಿಧದಲ್ಲಿ ತಮ್ಮ ಪ್ರತಿರೋಧಕ ಶಕ್ತಿ ವೃದ್ಧಿ ಮಾಡಲು ಬಯುಸುತ್ತಿದ್ದಾರೆ. ಅದ್ರಲ್ಲೂ ಗರ್ಭಿಣಿ (Pregnant) ಮಹಿಳೆಯರ ಆರೋಗ್ಯ ಈ ಸಮಯದಲ್ಲಿ ಬಹು ಮುಖ್ಯ..ಮಹಿಳೆ ಗರ್ಭವತಿಯಾದಳೆಂದರೆ ಎಲ್ಲರಿಗೂ ಎಲ್ಲಿಲ್ಲದ ಸಡಗರ-ಸಂಭ್ರಮ. ಮನೆಯಲ್ಲಿ ಹಬ್ಬದ ವಾತಾವರಣ ಎಲ್ಲರ ಮನದಲ್ಲೂ ಗರ್ಭಿಣಿಯಾದ ಮಹಿಳೆಯ ಬಯಕೆ ತೀರಿಸುವ ಕಾತುರ. ವಿಶೇಷ ಕಾಳಜಿ, ಉಪಚಾರ ಜೊತೆಗೆ ರುಚಿ ರುಚಿಯಾದ ತಿನಿಸುಗಳು ನೀಡುವುದು ಸರ್ವೇಸಾಮಾನ್ಯ. ಆದರೆ ಬಯಕೆ ತೀರಿಸುವ ನಿಟ್ಟಿನಲ್ಲಿ ಮಗುವಿನ ಆರೋಗ್ಯವನ್ನು ಕಡೆಗಣಿಸಬೇಡಿ. ಏಕೆಂದರೆ ಗರ್ಭವಸ್ತೆಯಲ್ಲಿ ತಾಯಿ ತೆಗೆದುಕೊಳ್ಳುವ ಆಹಾರ ಮಗುವಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಆ ಸಮಯದಲ್ಲಿ ಬಾಯಿ ರುಚಿಗಿಂತ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ.

  ಗರ್ಭಿಣಿಯರಿಗೆ ತಂಪು ಪಾನೀಯ ಅಗತ್ಯವೇ..?

  ಅದ್ರಲ್ಲೂ ಆರೋಗ್ಯಕ್ಕೆ ಹಿತಕಾರಿ ಆಗಿಲ್ಲದೆ ಇರುವಂತಹ ತಂಪು ಪಾನೀಯವನ್ನು ಸೇವನೆ ಮಾಡುವ ಮೊದಲು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದರಲ್ಲೂ ಗರ್ಭಿಣಿಯರು ಮತ್ತೊಂದು ಜೀವಕ್ಕೆ ಜೀವ ನೀಡುತ್ತಿರುವ ಕಾರಣ ತಂಪು ಪಾನೀಯಗಳು ಸುರಕ್ಷಿತವೇ ಎಂದು ತಿಳಿಯಬೇಕು.

  ಇದನ್ನೂ ಓದಿ: ಹೊಟ್ಟೆ ನೋವಿಗೂ ಮದ್ದು, ತೂಕ ಕಳೆದುಕೊಳ್ಳಲು ಸಹಕಾರಿ ಶುಂಠಿ

  1) ತಂಪು ಪಾನೀಯಗಳ ಆಯ್ಕೆ ಮಿತವಾಗಿರಲಿ..

  ಗರ್ಭಿಣಿ ಮಹಿಳೆಯರ ಆರೋಗ್ಯ ಬಹುಮುಖ್ಯ ಆಗಿರುವುದರಿಂದ ಅವರು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹೀಗಾಗಿ ಹಾಲು ಹಣ್ಣಿನ ಜ್ಯೂಸ್ ಮಿಲ್ಕ್ ಶೇಕ್ ಇತ್ಯಾದಿಗಳನ್ನು ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ಸೇವನೆ ಮಾಡಿದರೆ ಒಳ್ಳೆಯದು. ಅದರೆ ತಂಪು ಪಾನೀಯಗಳಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಅಂಶ ಇರುವುದರಿಂದ ಇದರ ಸೇವನೆ ಸೂಕ್ತವಲ್ಲ.

  ಗರ್ಭಿಣಿಯರು ಕೆಫಿನ್ ಸೇವನೆ ಮಾಡುವುದರಿಂದ ಆಗುವ ತೊಂದರೆ..

  ಗರ್ಭಿಣಿಯರ ಆರೋಗ್ಯ ತುಂಬಾ ಸೂಕ್ಷ್ಮ.. ಪ್ರಸ್ತುತ ಕೊರೋನಾ ಕಾಲ ಆಗಿರುವುದರಿಂದ ಮಹಿಳೆಯರು ಸೇವನೆ ಮಾಡುವ ಆಹಾರಗಳ ಮೇಲೆ ಹೆಚ್ಚು ಗಮನ ನೀಡಬೇಕು.. ಹೀಗಾಗಿ ತಂಪು ಪಾನೀಯಗಳಲ್ಲಿ ಕೆಫಿನ್ ಅಂಶ ಇರುವುದರಿಂದ ಇದು ಚಟ ಉಂಟು ಮಾಡುವುದು.ಉಪ್ಪಿನಂಶ ಬೇಗನೇ ರಕ್ತವನ್ನು ಸೇರಿಕೊಂಡು ಮಗುವಿನ ಆರೋಗ್ಯ ಹಾಗೂ ನರವ್ಯವಸ್ಥೆ ಮೇಲೆ ಹಾನಿ ಮಾಡುವುದು. ಭ್ರೂಣದಲ್ಲಿರುವ ದಲ್ಲಿರುವ ಮಗುವಿಗೆ ವಿಷಕಾರಿ ಕೆಫಿನ್ ಅಂಶ ಸೇರಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇರುತ್ತದೆ.

  ಎಷ್ಟು ಪ್ರಮಾಣದ ಕೆಫಿನ್ ಅಂಶ ಸೇವನೆ ಮಾಡಬೇಕು..?

  ಗರ್ಭಿಣಿಯರು ದಿನದಲ್ಲಿ 200 ಮಿ.ಗ್ರಾಂ.ಗಿಂತ ಹೆಚ್ಚಿನ ಪ್ರಮಾಣದ ಕೆಫಿನ್ ಸೇವನೆ ಮಾಡಬಾರದು. 300 ಮಿ.ಗ್ರಾಂ.ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಫಿನ್ ಸೇವನೆ ಮಾಡಿದರೆ ಅದರಿಂದ ಗರ್ಭಪಾತವಾಗುವ ಸಾಧ್ಯತೆಯು ಇದೆ. 500 ಮಿ.ಗ್ರಾಂ.ಗಿಂತ ಹೆಚ್ಚು ಕೆಫಿನ್ ಸೇವನೆ ಮಾಡಿದರೆ ಅದರಿಂದ ಮಗುವಿನ ಎದೆಬಡಿತ, ಉಸಿರಾಟದ ಮಟ್ಟ ಮತ್ತು ಎದೆಯುರಿಯು ಬರಬಹುದು. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೆಫಿನ್ ಇರುವ ಆಹಾರ ಸೇವನೆ ಮಾಡಬೇಡಿ.

  ಇದನ್ನೂ ಓದಿ: ಪುರುಷರೇ ಕೂದಲಿನ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡ್ಲೇಬೇಡಿ

  ತಂಪು ಪಾನೀಯಗಳ ಅಡ್ಡ ಪರಿಣಾಮ..

  ಗರ್ಭಿಣಿಯರ ಹೊಟ್ಟೆಯು ತಾಪಮಾನ ಸೂಕ್ಷ್ಮವಾಗಿರುವುದು. ಐಸ್ ಅಥವಾ ತುಂಬಾ ತಂಪಾಗಿರುವಂತಹ ಪಾನೀಯವನ್ನು ಕುಡಿದರೆ ಅದರಿಂದ ಹೊಟ್ಟೆ ಮತ್ತು ರಕ್ತನಾಳಗಳು ಕುಗ್ಗಿಬಹುದು ಮತ್ತು ಇದು ಮಗುವಿಗೆ ಒಳ್ಳೆಯದಲ್ಲ. ಇದರಿಂದಾಗಿ ಹಸಿವು, ಜೀರ್ಣಕ್ರಿಯೆ ಕಡಿಮೆ ಆಗುವುದು ಮತ್ತು ಗರ್ಭಪಾತವಾಗುವಂತಹ ಸಾಧ್ಯತೆಯು ಇದೆ.
  Published by:ranjumbkgowda1 ranjumbkgowda1
  First published: