Failed IVF: ಪದೇ ಪದೇ IVF ಫೇಲ್​ ಆಗೋಕೆ ಇದೇ ಕಾರಣವಂತೆ? ಮುಂದೇನು? ಈ ಸ್ಟೋರಿ ಓದಿ

Health Care: IVF ಫೇಲ್ ಆದಾಗ ನಿಭಾಯಿಸುವುದು ಸುಲಭವಲ್ಲ. ಇದು ನಿಮ್ಮ ಮಾನಸಿಕ ಯೋಗಕ್ಷೇಮ ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಗರ್ಭಿಣಿಯಾಗಲು (Pregnancy) ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ ನಂತರ ದಂಪತಿಗಳು ಇನ್-ವಿಟ್ರೊ ಫರ್ಟಿಲೈಸೇಷನ್​ (In vitro fertilization) ಆರಿಸಿಕೊಳ್ಳುತ್ತಾರೆ. IVF ಪ್ರಕ್ರಿಯೆಯು ಯಶಸ್ವಿಯಾಗದಿರುವ ಹಲವಾರು ಸಂದರ್ಭಗಳಿವೆ. ಇದು ನಿರಾಸೆಗೆ ಕಾರಣವಾಗುತ್ತದೆ. ಇದು ನಿಮ್ಮ ಮೊದಲ ಅಥವಾ ನಾಲ್ಕನೇ ವಿಫಲ ಫಲವತ್ತತೆ ಚಿಕಿತ್ಸೆಯಾಗಿರಲಿ,  ರೋಲರ್ ಕೋಸ್ಟರ್ ರೈಡ್ ಅನುಭವ ಆಗುತ್ತದೆ. ಆದರೆ ಯಶಸ್ಸು ಮತ್ತು ವೈಫಲ್ಯಗಳು ಜೀವನದ ಒಂದು ಭಾಗವಾಗಿದೆ ಎಂಬುದು ನೆನಪಿರಲಿ. ಕೆಲವು ದಂಪತಿಗಳು (Couple) ಮೊದಲ ಅವಕಾಶದಲ್ಲಿ ಗರ್ಭಿಣಿಯಾಗಲು ಸಾಕಷ್ಟು ಅದೃಷ್ಟವಂತರಿರುತ್ತಾರೆ, ಆದರೆ ವಿಫಲವಾದ IVF ಸಾಮಾನ್ಯ. ಇದು ಕೋಪ, ಹತಾಶೆಗೆ ಕಾರಣವಾಗುತ್ತದೆ. ವಿಫಲವಾದ IVF ಪ್ರಪಂಚದ ಅಂತ್ಯವಲ್ಲ. ಸರಿಯಾದ ಮಾರ್ಗದರ್ಶನ ಮತ್ತು ಚಿಕಿತ್ಸೆಯೊಂದಿಗೆ ಮತ್ತೆ ಗರ್ಭಿಣಿಯಾಗಲು ಹಲವಾರು ಆಯ್ಕೆಗಳಿವೆ. ಹಾಗಾದ್ರೆ IVF ವಿಫಲವಾಗಲು ಏನು ಕಾರಣ ಎಂಬುದು ಹಲವರಲ್ಲಿ ಗೊಂದಲವಿದೆ. ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಪ್ರಸೂತಿ ತಜ್ಞೆ ಡಾ.ವಿದ್ಯಾ ಭಟ್ , ವಿಫಲವಾಗಲು ಕಾರಣ ಹಾಗೂ ಮುಂದೇನು ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ.

ವಿಫಲವಾದ ಚಿಕಿತ್ಸೆಗೆ ಏನು ಕಾರಣವಾಗುತ್ತದೆ?
ವಿಫಲವಾದ ಚಿಕಿತ್ಸೆಯ ನಂತರ ಗರ್ಭಿಣಿಯಾಗಲು ಇತರ ಆಯ್ಕೆಗಳನ್ನು ಹುಡುಕುವ ಮೊದಲು, IVF ಫೇಲ್ ಆಗಲು ಏನು ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಆರೋಗ್ಯ ಸಮಸ್ಯೆಗಳು ಮತ್ತು ಗರ್ಭಧಾರಣೆಯ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ‘ಘೀ ಚಿಕನ್ ಕರಿ’ ಹೇಗೆ ಮಾಡುವುದು ಗೊತ್ತಾ? ಈ ಟೇಸ್ಟಿ ರೆಸಿಪಿ ನಿಮಗಾಗಿ

ಭ್ರೂಣ ವರ್ಗಾವಣೆಯ ಸಂದರ್ಭದಲ್ಲಿ, ಭ್ರೂಣದ ಅಳವಡಿಕೆಯ ವೈಫಲ್ಯದಿಂದಾಗಿ IVF ಫೇಲ್ ಆಗುತ್ತದೆ . ಇದು ಭ್ರೂಣದ ಸಮಸ್ಯೆಯಿಂದ ಅಥವಾ ಗರ್ಭಾಶಯದ ಸಮಸ್ಯೆಯಿಂದ ಎಂದು ಕಂಡುಹಿಡಿಯುವುದು ಕಷ್ಟ. ಹೆಚ್ಚಿನ ತಜ್ಞರು ಇದು ಭ್ರೂಣದ ಕಾರಣ ಎಂದು ಹೇಳುತ್ತಾರೆ. ಇತರ ಆಯ್ಕೆಗಳನ್ನು ಹುಡುಕುವ ಮೊದಲು ನಿಮ್ಮ ಈ ವಿಚಾರಗಳ ಬಗ್ಗೆ ಚರ್ಚಿಸಿ.

ನಿಮ್ಮ ಚಿಕಿತ್ಸೆಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ಗುರುತಿಸುವುದು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮುಂದಿನ ಪ್ರಯತ್ನದಲ್ಲಿ ಯಶಸ್ಸಿನ ಸಾಧ್ಯತೆಗಳು ಯಾವುವು: ಕೆಲವೊಮ್ಮೆ ಎರಡನೆಯ ಪ್ರಯತ್ನದಲ್ಲಿ ಗರ್ಭಿಣಿಯಾಗುವ ಸಾಧ್ಯತೆಯು ಮೊದಲನೆಯದಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಮೂರನೇ ಹಾಗೂ ನಾಲ್ಕನೇ ಬಾರಿ ಅದು ಕಡಿಮೆಯಾಗಬಹುದು. ಆದ್ದರಿಂದ, ಹಣವನ್ನು ಖರ್ಚು ಮಾಡುವ ಮೊದಲು ಯಶಸ್ಸಿನ ಪ್ರಮಾಣವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಸಮಸ್ಯೆಗಳು ಕಂಡು ಬಂದಲ್ಲಿ ಏನು ಮಾಡಬೇಕು?
ವೈದ್ಯರು ಕೆಲವು ಪರೀಕ್ಷೆಗಳನ್ನು ಸೂಚಿಸಬಹುದು ಮತ್ತು ಯಶಸ್ವಿ ಗರ್ಭಧಾರಣೆಗಾಗಿ ಕೆಲವು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಸೂಚಿಸಬಹುದು.

ಇದನ್ನೂ ಓದಿ: Tonsillitis ನೋವಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದಿನಿಂದ ಹೋಗಲಾಡಿಸಬಹುದು ನೋಡಿ

ಇತರ ಆಯ್ಕೆಗಳು ಯಾವುವು?
IVF ಫೇಲ್ ಆದಾಗ ನಿಭಾಯಿಸುವುದು ಸುಲಭವಲ್ಲ. ಇದು ನಿಮ್ಮ ಮಾನಸಿಕ ಯೋಗಕ್ಷೇಮ ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಿಫಲವಾದ IVF ಚಿಕಿತ್ಸೆಯ ನಂತರ ಹತಾಶೆಯನ್ನು ಅನುಭವಿಸುವುದು ಸಹಜ.
ಆದರೆ ಪೋಷಕರಾಗಲು ಹಲವು ಮಾರ್ಗಗಳಿವೆ. ನಿಮ್ಮ ಆರೋಗ್ಯ ಸ್ಥಿತಿಯನ್ನು ಆಧರಿಸಿ, ನಿಮ್ಮ ವೈದ್ಯರು ಯಾವುದಾದರೂ ಒಂದು ಆಯ್ಕೆಯನ್ನು ಸೂಚಿಸುತ್ತಾರೆ.
Published by:Sandhya M
First published: