Delivery: ಸಿಸೇರಿಯನ್ ಮತ್ತು ನಾರ್ಮಲ್ ಡೆಲಿವರಿ ನಡುವೆ ಇರುವ ಸಾಧಕ-ಬಾಧಕಗಳೇನು? ಇಲ್ಲಿದೆ ಓದಿ

ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ. ನೇಹಾ ಗುಪ್ತಾ ಅವರನ್ನು ಪ್ರಶ್ನಿಸಿದಾಗ "ಮಗುವಿಗೆ ಜನ್ಮ ನೀಡಲು ಪ್ರಕೃತಿಯ ಆಯ್ಕೆಯಾದ ಯೋನಿ ಹೆರಿಗೆಯು ಉತ್ತಮ ಮಾರ್ಗವಾಗಿದೆ" ಎಂದು ಅವರು ಹೇಳಿದರು. ಮತ್ತು ಸಿಸೇರಿಯನ್ ನಿಷಿದ್ಧ ಎಂದು ಪರಿಗಣಿಸಲಾಗಿದೆ ಎಂದರು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಜಗತ್ತಿನಲ್ಲಿ ಅತ್ಯಂತ ತೀವ್ರವಾದ ನೋವು ಎಂದರೆ ಹೆರಿಗೆಯ ನೋವು (Pain) ಎಂದು ನಿಸ್ಸಂಶಯವಾಗಿ ಹೇಳಬಹುದು. ಕೆಲವು ತಜ್ಞರು ಹೇಳುವ ಪ್ರಕಾರ ಈ ನೋವು ಮನುಷ್ಯನ (Man) ಎಲ್ಲಾ ಮೂಳೆಗಳನ್ನು ಒಟ್ಟಿಗೆ ಮುರಿದಾಗ ಆಗುವ ನೋವಿಗೆ ಸಮನಾಗಿರುತ್ತದೆ ಎನ್ನಲಾಗುತ್ತದೆ. ಹೆರಿಗೆ ಸಮಯದಲ್ಲಿ ಮಗುವಿನ (Baby) ಜನನ ವಿಷಯಕ್ಕೆ ಬಂದಾಗ ಯೋನಿ ಮೂಲಕ ಜನನ ಮತ್ತು ಸಿಸೇರಿಯನ್ ಎರಡಕ್ಕೂ ಪ್ರಾಶಸ್ತ್ಯ ನೀಡಲಾಗುತ್ತದೆ. ಇವೆರೆಡರಲ್ಲಿ ಯಾವುದು ಉತ್ತಮ ಎಂಬ ಚರ್ಚೆಗಳು ಯಾವಾಗಲೂ ಮುನ್ನಲೆಯಲ್ಲಿ ಇರುವಂತದ್ದು.

ಇತ್ತೀಚೆಗೆ 'ನಾರ್ಮಲ್ ಡೆಲಿವರಿ ' (Normal Delivery) ಎನ್ನುವುದು ತುಂಬಾ ಅಪರೂಪದ ವಿಚಾರವಾಗಿದೆ, ಕೆಲವು ತಾಯಂದಿರು ಯೋನಿ ಜನನದ ನೋವನ್ನು ಸಹಿಸಿಕೊಳ್ಳಲು ಬಯಸದೇ ಮತ್ತು ಅದನ್ನು ತಡೆದುಕೊಳ್ಳುವ ಶಕ್ತಿಯಿಲ್ಲದೆ ಸಿಸೇರಿಯನ್ ಗೆ (Cesarean) ಒಳಗಾಗುತ್ತಾರೆ.

ಟ್ವಿಟ್ಟರ್ ನಲ್ಲಿ ವೈರಲ್ ಆಗ್ತಿದೆ ಪರ -ವಿರೋಧ ಚರ್ಚೆಗಳು 

ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾದ ಒಂದು ಟ್ವೀಟ್ ಬಹಳ ವೈರಲ್ ಆಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಿವೆ.

@Neurochauhan ಎಂಬ ಡಾಕ್ಟರ್ ಥಾಲಮಸ್ ಅವರ ಟ್ವಿಟ್ಟರ್ ಖಾತೆಯಲ್ಲಿ "ಪ್ರಸ್ತುತ ಹೆರಿಗೆ ನೋವಿನಿಂದ ಪಾರಾಗಲು ಸಿ- ಸೆಕ್ಷನ್ ಒಂದು ಮಾರ್ಗವಾಗಿದೆ, ಸಿ-ಸೆಕ್ಷನ್ ಮೂಲಕ ಜನಿಸಿದ ಮಕ್ಕಳು ಟೈಪ್ -1 ಮಧುಮೇಹ, ಸ್ಥೂಲಕಾಯತೆ, ಆಸ್ತಮಾ ಮತ್ತು ಕಡಿಮೆಯಾದ ಅರಿವಿನ ಸಾಧ್ಯತೆಗೆ ಒಳಗಾಗುತ್ತಾರೆ ಎಂಬುವುದು ಸಹ ಮಹಿಳೆಯರಿಗೆ ಅರ್ಥವಾಗುವುದಿಲ್ಲ,

ಭ್ರೂಣ ಅಥವಾ ತಾಯಿ ಅಪಾಯದಲ್ಲಿರುವುದು ಕಂಡುಬಂದಾಗ ಮಾತ್ರ ಅದು ಸಿ-ಸೆಕ್ಷನ್ ಮಾಡುವ ಸೂಚಕವಾಗಿರುತ್ತದೆ " ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಲವಾರು ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ.ಈ ಟ್ವೀಟ್ ಅನ್ನು ವಿರೋಧಿಸಿ ಡಾ. ಸೋಮ್ಯಾ ಗುಪ್ತಾ ಅವರು ಹೆರಿಗೆಯ ನೋವನ್ನು ಸಿಂಹೀಕರಿಸುವ ಅಗತ್ಯವಿಲ್ಲ ಮತ್ತು ಮಹಿಳೆಯರು ಆರಾಮದಾಯಕ ಮತ್ತು ಕಡಿಮೆ ನೋವಿನ ಅನುಭವಕ್ಕೆ ಅರ್ಹರು ಎಂದು ಬರೆದಿದ್ದಾರೆ.

"ಸಿಸೇರಿಯನ್ ಅನ್ನು ಕೇವಲ ಜೀವಗಳನ್ನು ಉಳಿಸಲು ಮಾಡಲಾಗುವುದಿಲ್ಲ. ಅನೇಕ ಯೋನಿ ಹೆರಿಗೆಗಳು ಸಹ ಭಯಾನಕ ಪರಿಣಾಮಗಳನ್ನು ಉಂಟುಮಾಡಿವೆ, ಸಿಸೇರಿಯನ್ ಅನ್ನು ತಾಯಿಯ ಒಪ್ಪಿಗೆಯ ಮತ್ತು ಕೋರಿಕೆಯ ಮೇರೆಗೆ ಮಾಡಬಹುದು" ಎಂದು ಟ್ವೀಟ್ ಮಾಡಿ ಡಾಕ್ಟರ್ ಥಾಲಮಸ್ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.ಈ ಬಗ್ಗೆ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ. ನೇಹಾ ಗುಪ್ತಾ ಅವರನ್ನು ಪ್ರಶ್ನಿಸಿದಾಗ "ಮಗುವಿಗೆ ಜನ್ಮ ನೀಡಲು ಪ್ರಕೃತಿಯ ಆಯ್ಕೆಯಾದ ಯೋನಿ ಹೆರಿಗೆಯು ಉತ್ತಮ ಮಾರ್ಗವಾಗಿದೆ" ಎಂದು ಅವರು ಹೇಳಿದರು. ಮತ್ತು ಸಿಸೇರಿಯನ್ ನಿಷಿದ್ಧ ಎಂದು ಪರಿಗಣಿಸಲಾಗಿದೆ ಎಂದರು. ಸಿ-ಸೆಕ್ಷನ್‌ನ ಸಾಧಕ-ಬಾಧಕಗಳ ಕುರಿತು ಸಹ ಡಾ. ನೇಹಾ ಗುಪ್ತಾ ಈ ಕೆಳಕಂಡಂತೆ ವಿವರಿಸಿದ್ದಾರೆ.

ಸಿಸೇರಿಯನ್ ಹೆರಿಗೆಯ ಸಾಧಕ

1) ತಾಯಿಯು ಸಣ್ಣ ಪೆಲ್ವಿಸ್ ಎಲುಬು, ದೊಡ್ಡ (ಮ್ಯಾಕ್ರೋಸೋಮಿಕ್) ಮಗು, ಯೋನಿಯ ದ್ವಾರದಲ್ಲಿ ಅಡಚಣೆ ಹೊಂದಿದ್ದಾಗ ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಲು ಸಿಸೇರಿಯನ್ ಏಕೈಕ ಸುರಕ್ಷಿತ ಮಾರ್ಗವಾಗಿದೆ.
2) ಪ್ಲಾಸೆಂಟಾ ಪ್ರೀವಿಯಾ, ಭ್ರೂಣದ ತೊಂದರೆ, ಇತ್ಯಾದಿಗಳಂತಹ ಕೆಲವು ಸೂಚನೆಗಳಲ್ಲಿ ಇದು ಉತ್ತಮ.

ಸಿಸೇರಿಯನ್ ಹೆರಿಗೆಯ ಬಾಧಕ

1) ಇದು ಒಂದು ಪ್ರಮುಖ ಶಸ್ತ್ರಚಿಕಿತ್ಸೆಯಾಗಿದೆ, ಇದರಲ್ಲಿ ಗರ್ಭಾಶಯದ (ಗರ್ಭ) ಮೇಲೆ ಗಾಯದ ಜೊತೆಗೆ ಹೊಟ್ಟೆಯ ಎಲ್ಲಾ ಪದರಗಳನ್ನು ಕತ್ತರಿಸಿ ಮತ್ತೆ ಹೊಲಿಯಬೇಕಾಗುತ್ತದೆ, ಆದ್ದರಿಂದ ತಾಯಿಗೆ ಹೆಚ್ಚಿನ ತೊಡಕುಗಳಿವೆ.
2) ತಾಯಿಯಲ್ಲಿ ರಕ್ತ ನಷ್ಟ ಹೆಚ್ಚಾಗಿರುತ್ತದೆ
3) ಮುಂದಿನ ಮಗುವನ್ನು ಸಿ-ಸೆಕ್ಷನ್ ಮೂಲಕವೇ ಕಡ್ಡಾಯವಾಗಿ ಹೆರಿಗೆ ಮಾಡಿಸಬೇಕು.

ಇದನ್ನೂ ಓದಿ: Weight Loss: ತೂಕ ಹೆಚ್ಚಲು ನಿಮ್ಮ ಈ ಆಹಾರ ಪದ್ಥತಿಯೇ ಕಾರಣ; ಈ ಟಿಪ್ಸ್ ಫಾಲೋ ಮಾಡಿ ಬೊಜ್ಜು ಕರಗಿಸಿ

ಯೋನಿ ಜನನದ ಸಾಧಕ-ಬಾಧಕಗಳು
ಸಾಧಕ

1) ಸಿಸೇರಿಯನ್ ಮಾಡುವ ಅಗತ್ಯತೆ ಇಲ್ಲದಿದ್ದರೆ ಮಗುವಿನ ಹೆರಿಗೆಗೆ ಇದು ಅತ್ಯುತ್ತಮ ಮಾರ್ಗವಾಗಿದೆ.
2) ತಾಯಿಗೆ ಕಡಿಮೆ ಅನಾರೋಗ್ಯ, ಕಡಿಮೆ ರಕ್ತದ ನಷ್ಟ ಮತ್ತು ಆರಂಭಿಕ ಚೇತರಿಕೆ
3) ನೋವುರಹಿತ ರೀತಿಯಲ್ಲಿ ಸಹ ಮಾಡಬಹುದು, ಅನೇಕ ಕೇಂದ್ರಗಳಲ್ಲಿ ಲೇಬರ್ ನೋವು ನಿವಾರಕ ಲಭ್ಯವಿದೆ.

ಬಾಧಕ

1) ಅನಗತ್ಯ ದೀರ್ಘಕಾಲದ ಹೆರಿಗೆ ನೋವು ಅಥವಾ ಬಲವಂತದ ಯೋನಿ ಹೆರಿಗೆಯನ್ನು ನಡೆಸಿದರೆ, ತಾಯಿಯ ಯೋನಿ ದ್ವಾರಕ್ಕೆ ಗಾಯವಾಗುವ ಸಾಧ್ಯತೆಗಳಿವೆ.
2) ಹೆರಿಗೆಯ ನೋವು ಜಗತ್ತಿನ ಅತ್ಯಂತ ನೋವುಗಳಲ್ಲಿಯೇ ಮೊದಲು

CTG ಯಂತಹ ಉತ್ತಮ ಮೇಲ್ವಿಚಾರಣಾ ಸೌಲಭ್ಯಗಳು ಮತ್ತು ನೋವು ನಿರ್ವಹಣೆಯನ್ನು ಉತ್ತಮಗೊಳಿಸುವುದರ ಮೂಲಕ ಮಹಿಳೆಯು ಯೋನಿ ಹೆರಿಗೆಯನ್ನು ಆರಿಸಿಕೊಂಡರೆ ನೋವು ಅನುಭವಿಸಬೇಕಾಗಿಲ್ಲ ಎಂದು ಡಾ. ನೇಹಾ ಗುಪ್ತಾ ಅವರು ಹೇಳಿದರು.

"ಟ್ರಾನ್ಸ್ಕ್ಯುಟೇನಿಯಸ್ ಎಲೆಕ್ಟ್ರಿಕಲ್ ನರ್ವ್ ಸ್ಟಿಮ್ಯುಲೇಶನ್ (TENS), ಹೆರಿಗೆಯಲ್ಲಿ ಮಸಾಜ್, ವಾಟರ್ ಬರ್ತ್, ಇಂಟ್ರಾಡರ್ಮಲ್ ಸ್ಟೆರೈಲ್ ವಾಟರ್ ಇಂಜೆಕ್ಷನ್‌ಗಳು, ಅಕ್ಯುಪಂಕ್ಚರ್ ಮತ್ತು ಹಿಪ್ನಾಸಿಸ್‌ನಂತಹ ಹಲವು ಆಯ್ಕೆಗಳಿದ್ದು, ಇದು ಹೆರಿಗೆ ನೋವಿನ ನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Monsoon And Health: ಮಳೆಗಾಲದಲ್ಲಿ ರೋಗಗಳ ಅಪಾಯ ಕಡಿಮೆ ಮಾಡಲು ಆರೋಗ್ಯಕರ ಸುಲಭ ಸಲಹೆ!

ಸಿಸೇರಿಯನ್ ಎಂದರೆ ಕೆಲವರು ಅಪರಾಧ ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಭಾವಿಸುತ್ತಿದ್ದಾರೆ. ಆದರೆ ಇದು ಖಂಡಿತ ತಪ್ಪು. ಮಗುವಿನ ಜನನ ಸಂದರ್ಭದಲ್ಲಿ ತಾಯಿಯಾದವಳ ಇಚ್ಛೆ ಮೇರೆಗೆ ಯೋನಿ ಅಥವಾ ಸಿಸೇರಿಯನ್ ಹೆರಿಗೆ, ಯಾವುದನ್ನಾದರೂ ಆರಿಸಿಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗೆ ಇರುತ್ತದೆ.
Published by:Ashwini Prabhu
First published: