Sodium And Health: ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಈ ಸಮಸ್ಯೆ ಗ್ಯಾರಂಟಿ

ಕಡಿಮೆ ಸೋಡಿಯಂ ಸೇವನೆ ಮಾಡುವುದು ದೇಹಕ್ಕೆ ಅಪಾಯಕಾರಿ ಆಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪೋನಾಟ್ರೀಮಿಯಾ ಎಂದು ಕರೆಯುತ್ತಾರೆ. ಸೋಡಿಯಂ ಸಾಮಾನ್ಯ ರಕ್ತದೊತ್ತಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ದ್ರವ ಸಮತೋಲನ ನಿಯಂತ್ರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೆಚ್ಚು ಉಪ್ಪು (Salt) ಸೇವನೆ ಮಾಡುವುದರಿಂದ ಸಾಕಷ್ಟು ಅನಾನುಕೂಲತೆಗಳು ಉಂಟಾಗುತ್ತವೆ ಎಂದು ತಜ್ಞರು (Experts) ಹೇಳುತ್ತಾರೆ. ಆದರೆ ದೇಹದಲ್ಲಿ (Body) ಸೋಡಿಯಂ (Sodium) ಕೊರತೆ ನಿಮ್ಮನ್ನು ಅನೇಕ ರೋಗಗಳು (Disease) ಉಂಟಾಗುವಂತೆ ಮಾಡುತ್ತವೆ. ಸೋಡಿಯಂನ ಮುಖ್ಯ ಮೂಲವೆಂದರೆ ಉಪ್ಪು. ಆಹಾರದ ಜೊತೆ ಬೆರೆಸಿ ನೀವು ಪ್ರತಿದಿನ ಇದನ್ನು ತಿನ್ನಬಹುದು. ಆದರೆ ಹೆಚ್ಚು ಉಪ್ಪನ್ನು ಸೇವನೆ ಮಾಡುವುದು ಅನೇಕ ದುಷ್ಪರಿಣಾಮ ಉಂಟು ಮಾಡುತ್ತದೆ. ಈ ಬಗ್ಗೆ ನೀವು ತಿಳಿದ ಮೇಲೆ ಉಪ್ಪಿನ ಸೇವನೆಯಿಂದ ದೂರವಿರುವ ಸಾಧ್ಯತೆ ಇದೆ. ಮತ್ತು ನಿಮ್ಮ ದೇಹಕ್ಕೆ ಪ್ರತಿದಿನ ಬೇಕಾಗುವಷ್ಟು ಉಪ್ಪನ್ನು ನೀವು ಸೇವನೆ ಮಾಡಬೇಕು. ದೇಹದಲ್ಲಿ ಸೋಡಿಯಂ ಕೊರತೆ ಇದ್ದರೂ ಸಹ ಇದು ಕಿಡ್ನಿ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ.

    ಕಡಿಮೆ ಸೋಡಿಯಂ ಸೇವನೆ

    135 mEq/L ಗಿಂತ ಕಡಿಮೆ ಸೋಡಿಯಂ ಸೇವನೆ ಮಾಡುವುದು ದೇಹಕ್ಕೆ ಅಪಾಯಕಾರಿ ಆಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪೋನಾಟ್ರೀಮಿಯಾ ಎಂದು ಕರೆಯುತ್ತಾರೆ. ಸೋಡಿಯಂ ಸಾಮಾನ್ಯ ರಕ್ತದೊತ್ತಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ದ್ರವ ಸಮತೋಲನ ನಿಯಂತ್ರಿಸುತ್ತದೆ.

    ಮತ್ತು ಸ್ನಾಯುಗಳು ಮತ್ತು ನರಗಳ ಕಾರ್ಯ ನಿರ್ವಹಣೆ ಬೆಂಬಲಿಸುತ್ತದೆ. ನಿಯಮಿತ ಸೋಡಿಯಂ ಮಟ್ಟಗಳು 135 ಮತ್ತು 145 mEq/L ನಡುವೆ ಇರುತ್ತದೆ. ದೇಹದಲ್ಲಿ ಸೋಡಿಯಂ ಕೊರತೆ ಜೀವಕೋಶಗಳಲ್ಲಿ ಉರಿಯೂತ ಉಂಟಾಗುವ ಅಪಾಯ ಇದೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಹೋಮಿಯೋಪತಿ ವೈದ್ಯೆ ಸ್ಮಿತಾ ಭೋರ್ ಪಾಟೀಲ್ ಅವರು ಹೇಳುವ ಪ್ರಕಾರ, ಸೋಡಿಯಂ ಪ್ರಮುಖ ಎಲೆಕ್ಟ್ರೋಲೈಟ್ ಮತ್ತು ಟೇಬಲ್ ಉಪ್ಪಿನ ಮುಖ್ಯ ಅಂಶ. ಹೆಚ್ಚು ಸೋಡಿಯಂ ಸಮಸ್ಯೆ ಉಂಟು ಮಾಡುತ್ತದೆ ಆದರೂ ತುಂಬಾ ಕಡಿಮೆ ತಿನ್ನುವುದು ಅಷ್ಟೇ ಅಪಾಯಕಾರಿ.

    ಇತ್ತೀಚೆಗೆ ತಜ್ಞರು Instagram ನಲ್ಲಿ ಸೋಡಿಯಂ ಕೊರತೆ ಅಪಾಯಗಳನ್ನು ಶೇರ್ ಮಾಡಿದ್ದಾರೆ. ಅದರ ಬಗ್ಗೆ ನೀವು ಇಲ್ಲಿ ತಿಳಿಯಬಹುದು.

    ದೇಹದಲ್ಲಿ ಸೋಡಿಯಂ ಎಷ್ಟು ಪ್ರಯೋಜನಕಾರಿ?

    NCBI ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ಉಪ್ಪು ಸೇವನೆಯು ದಿನಕ್ಕೆ ಸುಮಾರು 11 ಗ್ರಾಂ ಆಗಿದೆ. ಇದು WHO ಶಿಫಾರಸು ಮಾಡಿದ ದಿನಕ್ಕೆ 5 ಗ್ರಾಂಗಳ ಗರಿಷ್ಠ ಉಪ್ಪು ಸೇವನೆಗಿಂತ ಹೆಚ್ಚು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ ಒಂದು ದಿನದಲ್ಲಿ 2,300 ಮಿಲಿಗ್ರಾಂ (mg) ಗಿಂತ ಹೆಚ್ಚು ಸೋಡಿಯಂ ಸೇವನೆ ಮಾಡುವ ಅಗತ್ಯವಿಲ್ಲ.

    ಹೈಪರ್ನಾಟ್ರೀಮಿಯಾದ ಲಕ್ಷಣಗಳು ಯಾವವು?

    ವಾಕರಿಕೆ, ವಾಂತಿ, ಮೆದುಳಿನ ಊತ, ಸ್ನಾಯು ದೌರ್ಬಲ್ಯ, ತಲೆನೋವು, ಗೊಂದಲ, ಶಕ್ತಿ ನಷ್ಟ, ಮೂರ್ಛೆ ಹೋಗುವುದು, ಸೆಳೆತ, ಚಡಪಡಿಕೆ, ಸಿಡುಕುತನ, ಸೀಸರ್ ಲಕ್ಷಣಗಳು ಉಂಟಾಗುತ್ತವೆ.

    ಇನ್ಸುಲಿನ್ ಪ್ರತಿರೋಧ ಹೆಚ್ಚಳ

    ಕೆಲವು ಅಧ್ಯಯನಗಳು ಕಡಿಮೆ ಸೋಡಿಯಂ ಆಹಾರ ಇನ್ಸುಲಿನ್ ಪ್ರತಿರೋಧ ಹೆಚ್ಚಳಕ್ಕೆ ಸಂಬಂಧಿಸಿವೆ ಎಂದು ತಜ್ಞರು ಹೇಳುತ್ತಾರೆ. ಇದು ಅಧಿಕ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟ ಉಂಟು ಮಾಡುವ ಸ್ಥಿತಿ ಆಗಿದೆ. ಇದು ಟೈಪ್ 2 ಮಧುಮೇಹ ಮತ್ತು ಇತರ ಗಂಭೀರ ಕಾಯಿಲೆ ಅಭಿವೃದ್ಧಿಪಡಿಸುವ ಅಪಾಯ ಹೆಚ್ಚಿಸುತ್ತದೆ.

    ಹೃದ್ರೋಗ ಅಪಾಯ ಹೆಚ್ಚಿಸುತ್ತದೆ

    ಕೆಲವು ವೀಕ್ಷಣಾ ಅಧ್ಯಯನಗಳು ಕಡಿಮೆ-ಉಪ್ಪು ಆಹಾರ ಹೃದಯಾಘಾತ ಅಥವಾ ಸ್ಟ್ರೋಕ್‌ನಿಂದ ಸಾವಿನ ಅಪಾಯ ಹೆಚ್ಚಿಸುತ್ತವೆ. ದಿನಕ್ಕೆ 3,000 ಮಿಲಿಗ್ರಾಂಗಿಂತ ಕಡಿಮೆ ಸೋಡಿಯಂ ಹೃದ್ರೋಗದ ಅಪಾಯ ಹೆಚ್ಚಿಸಬಹುದು ಎಂದು ತಜ್ಞರು ಹೇಳಿದ್ದಾರೆ.

    LDL ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಹೆಚ್ಚಿಳ

    ಹೆಚ್ಚಿನ LDL (ಕೆಟ್ಟ) ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಹೊಂದಿದಂತೆ ಹಲವು ಅಂಶಗಳು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ಕೆಲವು ಅಧ್ಯಯನಗಳು ಕಡಿಮೆ ಸೋಡಿಯಂ ಆಹಾರಗಳು LDL (ಕೆಟ್ಟ) ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟ ಹೆಚ್ಚಿಸಬಹುದು ಎಂದು ಹೇಳಿದೆ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಮಧುಮೇಹ ಹೊಂದಿರುವ ಜನರಿಗೆ ಅಪಾಯ

    ಮಧುಮೇಹಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವ ಅಪಾಯ ಹೆಚ್ಚು. ಹಾಗಾಗಿ ಮಧುಮೇಹ ಹೊಂದಿರುವ ಜನರಿಗೆ ಅನೇಕ ಮಾರ್ಗಸೂಚಿಗಳು ಉಪ್ಪು ಸೇವನೆ ಸೀಮಿತಗೊಳಿಸಲು ಶಿಫಾರಸು ಮಾಡುತ್ತವೆ.
    Published by:renukadariyannavar
    First published: