Monkey Pox Disease: ಮಂಕಿ ಪಾಕ್ಸ್ ಕಾಯಿಲೆಯ ಹೊಸ ರೋಗ ಲಕ್ಷಣಗಳು, ತಡೆಯುವ ಮಾರ್ಗೋಪಾಯ ಯಾವುದು?

ಮಂಕಿಪಾಕ್ಸ್ ವೈರಸ್ ಹೇಗೆ ಹರಡುತ್ತದೆ ಮತ್ತು ಅದು ಲೈಂಗಿಕವಾಗಿ ಹರಡುವ ರೋಗವೇ ಎಂಬ ಬಗ್ಗೆ ವೈದ್ಯರು ಮತ್ತು ವಿಜ್ಞಾನಿಗಳು ಉತ್ತರ ಹುಡುಕುತ್ತಿದ್ದಾರೆ. ಈ ಮಧ್ಯೆ ಸಂಶೋಧಕರ ಗುಂಪು ಮಂಕಿಪಾಕ್ಸ್‌ನ ಇತರ ಎರಡು ರೋಗ ಲಕ್ಷಣಗಳನ್ನು ಕಂಡು ಹಿಡಿದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೋನಾ ವೈರಸ್ (Corona Virus) ಸಾಂಕ್ರಾಮಿಕ ಜನರನ್ನು (People) ಬಾಧಿಸುತ್ತಿರುವ ಮಧ್ಯೆ ಇದೀಗ ದೇಶದಲ್ಲಿ (Country) ಹಲವು ಕಾಯಿಲೆಗಳು (Disease) ಉದ್ಭವವಾಗಿದ್ದು, ಜನರನ್ನು ತಲ್ಲಣಗೊಳಿಸಿವೆ. ಮಂಗನ ಕಾಯಿಲೆಯು (Monkey Pox) ದೇಶದಲ್ಲಿ ಏಕಾಏಕಿ ವೇಗವಾಗಿ ಹೆಚ್ಚುತ್ತಿದೆ. ಇಲ್ಲಿಯವರೆಗೆ ಈ ಅಪಾಯಕಾರಿ ರೋಗವು 80 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಪ್ರಪಂಚದಾದ್ಯಂತ ಪ್ರಸ್ತುತ 17,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿ ಆಗಿವೆ. ಇತ್ತೀಚೆಗೆ ಹೆಚ್ಚುತ್ತಿರುವ ರೋಗದ ಅಪಾಯವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಣೆ ಮಾಡಿದೆ. ಮಂಗನ ಕಾಯಿಲೆಗೆ ಸದ್ಯಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ.

    ಮಂಕಿಪಾಕ್ಸ್ ವೈರಸ್ ಹೇಗೆ ಹರಡುತ್ತದೆ ಮತ್ತು ಅದು ಲೈಂಗಿಕವಾಗಿ ಹರಡುವ ರೋಗವೇ ಎಂಬ ಬಗ್ಗೆ ವೈದ್ಯರು ಮತ್ತು ವಿಜ್ಞಾನಿಗಳು ಉತ್ತರ ಹುಡುಕುತ್ತಿದ್ದಾರೆ. ಈ ಮಧ್ಯೆ ಸಂಶೋಧಕರ ಗುಂಪು ಮಂಕಿಪಾಕ್ಸ್‌ನ ಇತರ ಎರಡು ರೋಗ ಲಕ್ಷಣಗಳನ್ನು ಕಂಡು ಹಿಡಿದಿದೆ. ಅದು ಈ ಹಿಂದೆ ರೋಗದ ವಿಶಿಷ್ಟ ಲಕ್ಷಣ ಎಂದು ತಿಳಿದು ಬಂದಿಲ್ಲ.

    ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ಯುಕೆ ಮೂಲದ 197 ಮಂಕಿಪಾಕ್ಸ್ ರೋಗಿಗಳ ಡೇಟಾ ಪರೀಕ್ಷೆ ಮಾಡಿದ್ದಾರೆ. ಮಂಕಿಪಾಕ್ಸ್ ಕಾಯಿಲೆ ಬದಲಾಗುತ್ತಿದೆ. ಜೊತೆಗೆ ಅದರ ರೋಗ ಲಕ್ಷಣಗಳು ಸಹ ಬದಲಾಗುತ್ತಿವೆ ಎಂದು ಸಂಶೋಧಕರ ತಂಡ ಹೇಳಿದೆ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ಮಂಕಿಪಾಕ್ಸ್‌ ಕಾಯಿಲೆಯ ಹೊಸ ರೋಗ ಲಕ್ಷಣಗಳು ಯಾವವು?

    ಮಂಕಿಪಾಕ್ಸ್‌ ಕಾಯಿಲೆಯ ಹೊಸ ರೋಗ ಲಕ್ಷಣಗಳನ್ನು ಅಧ್ಯಯನದಲ್ಲಿ ಕಂಡು ಹಿಡಿಯಲಾಗಿದೆ. 71 ರೋಗಿಗಳು ಗುದನಾಳದ ನೋವು ಅನುಭವಿಸಿದ್ದಾರೆ. 33 ಮಂದಿ ನೋಯುತ್ತಿರುವ ಗಂಟಲು, 31 ಮಂದಿ ಶಿಶ್ನ ಎಡಿಮಾದಿಂದ ಬಳಲುತ್ತಿದ್ದಾರೆ. ಮತ್ತು 27 ರೋಗಿಗಳು ಬಾಯಿ ಹುಣ್ಣು, 22 ರೋಗಿಗಳು ಒಂಟಿ ಗಾಯ ಅನುಭವಿಸಿದ್ದಾರೆ.

    ಮತ್ತು 9 ಟಾನ್ಸಿಲ್‌ ವಿಸ್ತರಿಸಿದೆ ಎಂದು ಅಧ್ಯಯನ ತಿಳಿಸಿದೆ. ಅದೇನೇ ಇರಲಿ ಮಂಕಿಪಾಕ್ಸ್ ಪ್ರಾಥಮಿಕವಾಗಿ ಇತರ ಪುರುಷರೊಂದಿಗೆ ಸಂಭೋಗಿಸುವ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರ ಮೂಲಕ ಹರಡುತ್ತದೆ ಎಂದು ಅಧ್ಯಯನ ತಿಳಿಸಿದೆ.

    ಒಂಟಿ ಗಾಯ

    ಅಧ್ಯಯನದಲ್ಲಿ ಪತ್ತೆಯಾದ ಹೊಸ ರೋಗ ಲಕ್ಷಣಗಳಲ್ಲಿ ಲೆಸಿಯಾನ್ ಕೂಡ ಒಂದು ಎಂದು ತಿಳಿಸಿದೆ. ಇದು ನಿರುಪದ್ರವ (ವಾರ್ಟ್) ನಿಂದ ಮೆಲನೋಮಾದಂತಹ ಮಾರಣಾಂತಿಕ ಗಾಯದವರೆಗೆ ಚಿಕ್ಕದಾದ, ಚರ್ಮದ ಗಾಯವಾಗಿದೆ. ಮಂಕಿಪಾಕ್ಸ್ನ ಈ ರೋಗ ಲಕ್ಷಣವು ಸಿಫಿಲಿಸ್ ಮತ್ತು ಇತರ STI ರೋಗಗಳಲ್ಲಿ ಕಂಡು ಬರುತ್ತದೆ.

    ಊದಿಕೊಂಡ ಟಾನ್ಸಿಲ್ಗಳು

    ಅಧ್ಯಯನದಲ್ಲಿ ರೋಗಿಗಳು ಊದಿಕೊಂಡ ಟಾನ್ಸಿಲ್ಗ ಹೊಂದಿದ್ದಾರೆ ಎಂದು ವರದಿ ಹೇಳಿದೆ. ಈ ರೋಗ ಲಕ್ಷಣವು ಮಂಕಿಪಾಕ್ಸ್ ಸೋಂಕಿನ ವಿಶಿಷ್ಟ ಲಕ್ಷಣವೆಂದು ಹಿಂದೆ ತಿಳಿದಿರಲಿಲ್ಲ. ಈ ರೋಗ ಲಕ್ಷಣವು ಅನೇಕ ರೋಗಗಳ ಸಾಮಾನ್ಯ ಲಕ್ಷಣವಾಗಿದೆ.

    ಮಂಕಿಪಾಕ್ಸ್ ಹೇಗೆ ಹರಡುತ್ತದೆ?

    ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ಯಾರ ಜೊತೆಗಾದ್ರೂ ನಿಕಟ, ವೈಯಕ್ತಿಕ, ಚರ್ಮದಿಂದ ಚರ್ಮಕ್ಕೆ ಸಂಪರ್ಕ ಮೂಲಕ ಹರಡಬಹುದು. ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯಿಂದ ಮಂಕಿಪಾಕ್ಸ್ ರಾಶ್, ಸ್ಕ್ಯಾಬ್ಸ್ ಅಥವಾ ದೇಹದ ದ್ರವದ ನೇರ ಸಂಪರ್ಕಕ್ಕೆ ಬರುವುದು ರೋಗ ಹರಡುತ್ತದೆ.

    ಮಂಕಿಪಾಕ್ಸ್ ರೋಗಿಗಗಳ ವಸ್ತುಗಳು, ಬಟ್ಟೆ (ಬಟ್ಟೆ, ಹಾಸಿಗೆ ಅಥವಾ ಟವೆಲ್) ಮತ್ತು ಮೇಲ್ಮೈಗಳ ಸ್ಪರ್ಶದಿಂದ ಹರಡುತ್ತದೆ. ಉಸಿರಾಟದ ಸ್ರವಿಸುವಿಕೆಯ ಸಂಪರ್ಕಕ್ಕೆ ಬರುವುದು. ತಬ್ಬಿಕೊಳ್ಳುವುದು, ಚುಂಬಿಸುವುದು ಮತ್ತು ಸಂಭೋಗ ಇದು ಮಂಕಿಪಾಕ್ಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

    ಮಂಕಿಪಾಕ್ಸ್ ಕಾಯಿಲೆಯ ಮುಖ್ಯ ಲಕ್ಷಣಗಳು

    ಜ್ವರ

    ತಲೆನೋವು

    ಸ್ನಾಯು ಮತ್ತು ಕೀಲು ನೋವು

    ಬೆನ್ನು ನೋವು

    ಊದಿಕೊಂಡ ದುಗ್ಧರಸ ಗ್ರಂಥಿ

    ದದ್ದು

    ಆಯಾಸ

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ಮಂಕಿಪಾಕ್ಸ್ ಕಾಯಿಲೆ ತಪ್ಪಿಸುವುದು ಹೇಗೆ?

    ಮಂಕಿಪಾಕ್ಸ್ ಹರಡುವಿಕೆ ತಡೆಗೆ ರೋಗಿಗಳೊಂದಿಗೆ ನಿಕಟ ಮತ್ತು ನೇರ ಸಂಪರ್ಕ ಬಾರದಿರುವುದು. ಅಲ್ಲದೆ ರೋಗಿಗಳಿಂದ ದೂರವಿರುವುದು. ಅಸುರಕ್ಷಿತ ಲೈಂಗಿಕತೆ ತಪ್ಪಿಸಿ. ವೈರಸ್ ಸೋಂಕಿತ ರೋಗಿಗಳು ಬಳಸುವ ಬಟ್ಟೆ, ಹಾಸಿಗೆ ಮತ್ತು ಇತರ ವಸ್ತು ಶೇರ್ ಮಾಡಬೇಡಿ.
    Published by:renukadariyannavar
    First published: