Sunlight Benefits: ಸೂರ್ಯನ ಬಿಸಿಲಿನಲ್ಲಿದೆ ನೈಸರ್ಗಿಕ ವಿಟಮಿನ್ ಡಿ- ಇದರಲ್ಲಿ ಎಷ್ಟು ಆರೋಗ್ಯ ಪ್ರಯೋಜನವಿದೆ ನೋಡಿ

What are the Health Benefits of Sunlight : ರೋಗ ನಿರೋಧಕ ವ್ಯವಸ್ಥೆಗೂ ವಿಟಮಿನ್ ಡಿ ಅತ್ಯಂತ ಮುಖ್ಯ ಮತ್ತು ನಿತ್ಯವೂ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಅದನ್ನು ವೃದ್ಧಿಸಬಹುದು. ಪ್ರಬಲ ರೋಗ ನಿರೋಧಕ ವ್ಯಸಸ್ಥೆಯು ರೋಗಗಳು, ಸೋಂಕುಗಳು, ಕೆಲವು ವಿಷಮತೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ತೊಂದರೆಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಜೀವನದಲ್ಲಿ ಸೂರ್ಯನ(Sun) ಬಿಸಿಲಿನ ಪ್ರಯೋಜನ ಮತ್ತು ಅದರ ಅಗತ್ಯದ ಬಗ್ಗೆ ಎರಡು ಮಾತಿಲ್ಲ. ಕೃಷಿಯಿಂದ(Farmers) ಹಿಡಿದು ಮನುಷ್ಯರನ್ನು ಆರೋಗ್ಯವಾಗಿ ಇಡುವವರೆಗೆ ಬಿಸಿಲಿನ ಮೌಲ್ಯ ಅನನ್ಯ. ಬಹಳಷ್ಟು ಮಂದಿಗೆ ಸೂರ್ಯನ ಬಿಸಿಲೆಂದರೆ ಅಚ್ಚುಮೆಚ್ಚು. ದೇಶ ವಿದೇಶಗಳಲ್ಲಿ ಸನ್‍ಬಾತ್(Sun Bath), ಅಂದರೆ ಹಾಯಾಗಿ ಬಿಸಿಲಿಗೆ ಮೈಯೊಡ್ಡಿಕೊಳ್ಳುವುದು ಒಂದು ಟ್ರೆಂಡ್ ಕೂಡ. ಸೂರ್ಯನ ಬಿಸಿಲಿನಿಂದ ಆರೋಗ್ಯಕ್ಕೆ ಹಲವಾರು(Health Benefits) ರೀತಿಯ ಲಾಭಗಳಿವೆ ಎಂಬುವುದು ಸಾಬೀತಾಗಿದೆ.

ಅದೇನೇ ಇದ್ದರೂ , ಸೂರ್ಯನ ಕಿರಣ, ಒಂದು ಮಿಶ್ರ ವರದಾನ ಇದ್ದಂತೆ ಎಂದು ಹೇಳಬಹುದು. ಜನರು ಈ ದಿನಗಳಲ್ಲಿ ಸೂರ್ಯನ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯದಂತೆ ಎಚ್ಚರಿಕೆ ವಹಿಸುತ್ತಾರೆ. ಏಕೆಂದರೆ ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮದ ಕ್ಯಾನ್ಸರ್ ಬರುತ್ತದೆ ಎಂಬುವುದು ಅವರಿಗೆ ತಿಳಿದಿದೆ. ಆದರೂ, ಅತಿಯಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಡ್ಡಿಕೊಳ್ಳುವುದರಿಂದ ಜನರು ಹೇಗೆ ತಮ್ಮನ್ನು ರಕ್ಷಿಸಿಕೊಳ್ಳುವುದು ಅಗತ್ಯವೋ, ಹಾಗೆಯೇ ಸೂರ್ಯನಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಸೂಕ್ತವಾದ ರೀತಿಯಲ್ಲಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಂಡು , ಜೊತೆಗೆ ಅಗತ್ಯ ವಿಟಮಿನ್ ಡಿ ಪಡೆಯಲು ಸಾಧ್ಯವಿದೆ.
ಸೂರ್ಯನ ಬಿಸಿಲಿನಿಂದ ಆಗುವ ಕೆಲವು ಲಾಭಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಉಗುರಿನ ಬಣ್ಣದಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು-ಹೇಗೆ ಅಂತೀರಾ?ಇದನ್ನ ಓದಿ

ವಿಟಮಿನ್ ಡಿ ಮಟ್ಟದ ಹೆಚ್ಚಳ 

ವಿಟಮಿನ್ ಡಿ ನಮ್ಮ ದೇಹದಲ್ಲಿ ಹಲವಾರು ರೀತಿಯ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಅದು ಉರಿಯೂತ ಕಡಿಮೆ ಮಾಡುತ್ತದೆ ಮತ್ತು ಜೀವಕೋಶದ ಪ್ರಸರಣವನ್ನು ನಿಯಂತ್ರಿಸುತ್ತದೆ.  ಕೇವಲ ಆಹಾರದ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯಲು ಸಾಧ್ಯವಿಲ್ಲ, ಹಾಗಾಗಿ ಸೂರ್ಯನನ್ನು ಅವಲಂಬಿಸಲೇಬೇಕು.

ಏಕೆಂದರೆ ಸೂರ್ಯನ ಬಿಸಿಲಿನಿಂದ ನೈಸರ್ಗಿಕವಾಗಿ ವಿಟಮಿನ್ ಡಿ ಪಡೆಯಬಹುದು. ವಾರಕ್ಕೆ 5 - 15 ನಿಮಿಷ  ಕೆಲವು ಸಲ ಬಿಸಿಲನ್ನು ಪಡೆದುಕೊಂಡರೆ ಸಾಕು. 15 ನಿಮಿಷಕ್ಕಿಂತ ಹೆಚ್ಚು ಕಾಲ ಹೊರಗೆ ಇರುವುದಾದರೆ ಸನ್‍ಸ್ಕ್ರೀನ್ ಹಚ್ಚಿಕೊಳ್ಳುವುದನ್ನು ಮರೆಯದಿರಿ.

ರೋಗ ನಿರೋಧಕ ವ್ಯವಸ್ಥೆ ವೃದ್ಧಿಸುತ್ತದೆ

ರೋಗ ನಿರೋಧಕ ವ್ಯವಸ್ಥೆಗೂ ವಿಟಮಿನ್ ಡಿ ಅತ್ಯಂತ ಮುಖ್ಯ ಮತ್ತು ನಿತ್ಯವೂ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಅದನ್ನು ವೃದ್ಧಿಸಬಹುದು. ಪ್ರಬಲ ರೋಗ ನಿರೋಧಕ ವ್ಯಸಸ್ಥೆಯು ರೋಗಗಳು, ಸೋಂಕುಗಳು, ಕೆಲವು ವಿಷಮತೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ತೊಂದರೆಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂಳೆಯ ಸಾಮರ್ಥ್ಯ ಕಾಪಾಡುತ್ತದೆ

ಹೊರಾಂಗಣದಲ್ಲಿ ಇರುವುದು ವಿಟಮಿನ್ ಡಿ ಪಡೆಯುವ ಅತ್ಯಂತ ಉತ್ತಮ ಮತ್ತು ಸರಳ ವಿಧಾನಗಳಲ್ಲಿ ಒಂದಾಗಿದೆ. ಬಿಸಿಲಿಗೆ ತೆರೆದುಕೊಂಡಾಗ ನಮ್ಮ ದೇಹ ವಿಟಮಿನ್ ಡಿಯನ್ನು ಉತ್ಪಾದಿಸುತ್ತದೆ - ನೀವು ಗೌರವರ್ಣದ ಚರ್ಮವನ್ನು ಹೊಂದಿದ್ದರೆ, ನಿತ್ಯವೂ 15 ನಿಮಿಷ ಬಿಸಿಲಿಗೆ ತೆರೆದುಕೊಂಡರೆ ಸಾಕಾಗುತ್ತದೆ. ವಿಟಮಿನ್ ಡಿ ದೇಹದಲ್ಲಿನ ಕ್ಯಾಲ್ಸಿಯಂ ಕಾಪಾಡಿಕೊಳ್ಳಲು ಮತ್ತು ಮೂಳೆಗಳು ತೆಳುವಾಗುವುದನ್ನು, ವಿರೂಪಗೊಳ್ಳುವುದನ್ನು ತಡೆಯುತ್ತದೆ.

ಖಿನ್ನತೆಯನ್ನು ತಡೆಯುತ್ತದೆ

ಹೊರಗಿನ ಬೆಳಕಿನಲ್ಲಿ ಇರುವುದು ನಿಮ್ಮಲ್ಲಿ ಉತ್ತಮ ಭಾವನೆ ಮೂಡಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ವಿವರಣೆಗಳವೆ. ಬಿಸಿಲು ನಿಮ್ಮ ದೇಹದಲ್ಲಿ ಸೆರೋಟಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಅದು ನಿಮ್ಮ ಮನಸ್ಥಿತಿ ಹೆಚ್ಚಿಸುವ ಹಾರ್ಮೋನ್ ಆಗಿದ್ದು, ನೀವು ಆರಾಮಾಗಿ ಮತ್ತು ಸಂಯೋಜಿತವಾಗಿ ಇರಲು ಸಹಾಯ ಮಾಡುತ್ತದೆ.

ತೂಕ ಇಳಿಸಲು ಸಹಕಾರಿ

2014ರ ಅಧ್ಯಯನವೊಂದರ ಪ್ರಕಾರ, ತೂಕ ಇಳಿಕೆಯು ಬೆಳಗ್ಗೆ 8 ರಿಂದ ಮಧ್ಯಾಹ್ನದ ನಡುವೆ 30 ನಿಮಿಷ ಬಿಸಿಲಿಗೆ ಹೋಗುವುದಕ್ಕೆ ಸಂಬಂಧಿಸಿದೆ. ಇಲ್ಲಿ ಬೇರೆ ಅಂಶಗಳು ಕೆಲಸ ಮಾಡಬಹುದು, ಆದರೆ ಮುಂಜಾನೆಯ ಬೆಳಕು ಮತ್ತು ತೂಕದ ನಡುವೆ ಸಂಬಂಧ ಇದೆ ಎಂಬುವುದನ್ನು ತಿಳಿಯಬಹುದು.

ದೀರ್ಘ ಕಾಲ ಬದುಕಲು ಸಹಾಯ ಮಾಡಬಲ್ಲದು

ಇದನ್ನೂ ಓದಿ: ಕೂದಲು ಉದುರುತ್ತಿದೆ ಎನ್ನುವ ಚಿಂತೆ ಬೇಡ- ಈ ಹೇರ್​ ಮಾಸ್ಕ್​ಗಳನ್ನು ಟ್ರೈ ಮಾಡಿ ಮ್ಯಾಜಿಕ್ ನೋಡಿ

ಜರ್ನಲ್ ಆಫ್ ಇಂಟರ್ ಮೆಡಿಸಿನ್‍ನಲ್ಲಿ ಪ್ರಕಟವಾದ , 30,000 ಸ್ವೀಡಿಷ್ ಮಹಿಳೆಯರ ಮೇಲೆ ನಡೆಸಲಾದ ಅಧ್ಯಯನವು ಸೂರ್ಯನ ಬಿಸಿಗೆ ಹೆಚ್ಚು ಕಾಲ ತೆರೆದುಕೊಂಡವುರು, ಕಡಿಮೆ ಕಾಲ ಸೂರ್ಯನ ಬಿಸಿಲು ಪಡೆದವರಿಂದ ,6 ತಿಂಗಳಿನಿಂದ 2 ವರ್ಷಗಳವರೆಗೆ ಹೆಚ್ಚು ಜೀವಿಸಿದ್ದನ್ನು ಕಂಡು ಹಿಡಿದಿದೆ.
Published by:Sandhya M
First published: