Health Tips: ಉತ್ತಮ ನಿದ್ರೆಗೆ, ಕೂದಲಿನ ಆರೋಗ್ಯಕ್ಕೆ, ರಕ್ತ ಹೆಚ್ಚಳಕ್ಕೆ ಸಹಕಾರಿ ಬೀಟ್​ರೂಟ್​​ ಸೇವನೆ

Beetroot: ಬೀಟಾ ಸೈಯಾನಿನ್ ಎಂಬ ಪೋಷಕಾಂಶ ಪ್ರಮುಖ ಆಂಟಿ ಆಕ್ಸಿಡೆಂಟ್ ಆಗಿದೆ ಹಾಗೂ ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ. ಈ ಮೂಲಕ ಕೆಲವಾರು ಬಗೆಯ ಕ್ಯಾನ್ಸರ್ ಗಳಿಗೆ ಬೀಟ್ರೂಟ್ ರಕ್ಷಣೆ ನೀಡುತ್ತದೆ.

ಬೀಟ್ರೂಟ್

ಬೀಟ್ರೂಟ್

 • Share this:
  ಸಾಮಾನ್ಯವಾಗಿ ತರಕಾರಿ(Vegetables) ತಿನ್ನುವವರಿಗೆ ಆರೋಗ್ಯ ಸಮಸ್ಯೆ(Health Problem) ಕಡಿಮೆ ಎನ್ನುವ ಮಾತನ್ನು ಕೇಳಿದ್ದೇವೆ ಕೆಲವೊಂದು ಪ್ರಕಾರದಲ್ಲಿ ನೋಡುವುದಾದರೆ ಇದು ನಿಜವೆನಿಸುತ್ತದೆ ಏಕೆಂದರೆ ತರಕಾರಿಗಳಲ್ಲಿ ನೈಸರ್ಗಿಕ ಉತ್ಪನ್ನಗಳ ಗುಂಪಿಗೆ ಸೇರಿರುವುದರಿಂದ ಇವುಗಳಲ್ಲಿ ಅಡ್ಡಪರಿಣಾಮಗಳು ಕಡಿಮೆ ಇರುತ್ತವೆ ಜೊತೆಗೆ ಆರೋಗ್ಯದ ಲಾಭಗಳನ್ನು(Health Benefits) ಕೊಡುವಂತಹ ಗುಣಗಳು ಇವುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅದ್ರಲ್ಲೂ ರಕ್ತದ(Blood) ಬಣ್ಣವನ್ನೇ ಹೊಂದಿರುವಂತಹ ಬೀಟ್ರೂಟ್ ದೇಹಕ್ಕೆ ನೀಡುವ ಪೋಷಕಾಂಶಗಳು ಹಲವು. ರಕ್ತ ಹೀನತೆ ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್ (Cancer)ವರೆಗೂ  ಬೀಟ್ರೂಟ್ ಸಹಾಯಮಾಡುತ್ತದೆ. ಬೀಟ್ರೂಟ್ ನಲ್ಲಿ ಎಲ್ಲಾ ತರಕಾರಿಗಳಲ್ಲಿ ಹೆಚ್ಚಾದ ಸಕ್ಕರೆಯ ಅಂಶವಿದೆ. ಹಾಗೂ ಅಧಿಕ ಕಾರ್ಬೋಹೈಡ್ರೇಟ್ ಹೊಂದಿರುವ ಬೀಟ್ ರೂಟ್ ದೇಹದಲ್ಲಿ ರಕ್ತವನ್ನು ವೃದ್ಧಿ ಮಾಡಲು ಸಹಾಯ ಮಾಡುತ್ತದೆ. ರಕ್ತಹೀನತೆಯಿಂದ ಬಳಲುವ ವರು ಬೀಟ್ರೋಟ್ ಅನ್ನು ಯಥೇಚ್ಛವಾಗಿ ಬಳಸಿದಲ್ಲಿ ಕೆಲವೇ ದಿನಗಳಲ್ಲಿ ರಕ್ತ ವೃದ್ಧಿ ಆಗುವುದನ್ನು ಕಾಣಬಹುದು.

  ಬೀಟ್​ ರೂಟ್​ನಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ ಮತ್ತು ಪೋಟಾಶಿಯಂ ಅಂಶಗಳು ಸಮೃದ್ಧವಾಗಿದೆ. ಈ ತರಕಾರಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನು ಪಡೆಯಬಹುದು.

  ಇದನ್ನೂ ಓದಿ: ಉಗುರು ಪದೇ ಪದೇ ಕಟ್ ಆಗ್ತಿದ್ರೆ ಮೊದಲು ಈ ಟಿಪ್ಸ್ ಫಾಲೋ ಮಾಡಿ

  1) ಶಕ್ತಿ ಸಾಮರ್ಥ್ಯ ಹೆಚ್ಚಳ: ದೈಹಿಕ ಶ್ರಮದ ಕೆಲಸ ಕಾರ್ಯ ಮಾಡುವವರಿಗೂ ಬೀಟ್‌ರೂಟ್‌ ತುಂಬ ಪ್ರಯೋಜನಕಾರಿ. ಇದನ್ನು ಸೇವಿಸಿದಾಗ ರಕ್ತದಲ್ಲಿ ನೈಟ್ರೇಟ್‌ನ ಅಂಶ ದುಪ್ಪಟ್ಟಾಗುತ್ತದೆ. ಈ ನೈಟ್ರೇಟ್‌ಗಳು, ಮೂಳೆಗಳು ತಮ್ಮ ಶಕ್ತಿಯ ಮೂಲವನ್ನು ವ್ಯಯ ಮಾಡುವುದನ್ನು ತಡೆಗಟ್ಟುತ್ತವೆ. ಶ್ರಮದ ಕೆಲಸದ ವೇಳೆ ಸ್ನಾಯುಗಳಿಗೆ ಹೆಚ್ಚಿನ ಆಮ್ಲಜನಕ ಬೇಕು. ಆದರೆ ಆಮ್ಲಜನಕದ ಹೆಚ್ಚಿನ ಅಗತ್ಯವಿಲ್ಲದಂತೆ ಬೀಟ್‌ರೂಟ್‌ ಮಾಡುತ್ತದೆ. ಅಂದರೆ ಆಕ್ಸಿಜನ್‌ ತೆಗೆದುಕೊಳ್ಳುವಿಕೆ ಕೂಡ ಕಡಿಮೆ ಸಾಕು. ಓಟದ ವೇಳೆ ಏದುಸಿರು ಬರುವುದಿಲ್ಲ

  2)ಉತ್ತಮ ನಿದ್ರೆ: ಬೀಟ್‌ರೂಟ್‌ನಲ್ಲಿರುವ ಇನ್ನೊಂದು ಮಹತ್ವದ ಪೋಷಕಾಂಶ ಕೋಲೈನ್‌. ಇದು ಮೆದುಳಿನ ಜೀವಕೋಶಗಳಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮಲಗಿದ ಕೂಡಲೇ ನಿದ್ರೆ ಬರುವಂತೆ ಮಾಡುತ್ತದೆ. ನಿದ್ರೆಯಲ್ಲಿ ಮೆದುಳಿನ ಜೀವಕೋಶಗಳು ಆರಾಮಾಗಿ ಬೆಳೆಯುತ್ತವೆ. ಹಲವು ದಿನಗಳಿಂದ ಕಾಡುವ ಸಣ್ಣ ಸಣ್ಣ ನೋವುಗಳು ಮಾಯವಾಗುತ್ತವೆ.

  3)ಚರ್ಮದ ರಕ್ಷಣೆ: ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

  4)ಕೂದಲಿನ ಆರೋಗ್ಯ: ಬೀಟ್ ರೂಟ್ ಜ್ಯೂಸ್ ಕೂದಲಿನ ಕಾಂತಿ ಮತ್ತು ಹೊಳಪವನ್ನು ಕಾಪಾಡಿಕೊಂಡು ಸಂಪೂರ್ಣ ಆರೋಗ್ಯ ಕಾಪಾಡುವುದು. ನೈಸರ್ಗಿಕವಾಗಿ ಸೌಂದರ್ಯ ಪಡೆಯಲು ನೀವು ಕೂದಲಿಗೆ ಕೂಡ ಬೀಟ್ ರೂಟ್ ಬಳಸಬಹುದು. ಬೀಟ್ ರೂಟ್ ಕೂದಲಿನ ಗುಣಮಟ್ಟವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುವುದು

  5)ಹೃದಯದ ಆರೋಗ್ಯ: ಬೀಟ್ರೂಟ್ ರಸದ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೈಟ್ರೇಟುಗಳು ದೊರಕುತ್ತವೆ. ಈ ನೈಟ್ರೇಟುಗಳು ರಕ್ತನಾಳಗಳನ್ನು ಸಡಿಲಿಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತವೆ. ಇದರಿಂದ ಹೃದಯದ ಮೇಲಿನ ಭಾರ ಇಳಿದು ಆರೋಗ್ಯ ಉತ್ತಮಗೊಳ್ಳುತ್ತದೆ.

  ಇದನ್ನೂ ಓದಿ: ತಲೆಹೊಟ್ಟು ನಿವಾರಣೆಗೆ ಬೆಂಡೆಕಾಯಿ ಮದ್ದು, ತೂಕ ಇಳಿಕೆಗೂ ಸೈ ಈ ತರಕಾರಿ

  6)ಕ್ಯಾನ್ಸರ್ ವಿರುದ್ಧ ಹೋರಾಟ: ಇದರಲ್ಲಿರುವ ಬೀಟಾ ಸೈಯಾನಿನ್ ಎಂಬ ಪೋಷಕಾಂಶ ಪ್ರಮುಖ ಆಂಟಿ ಆಕ್ಸಿಡೆಂಟ್ ಆಗಿದೆ ಹಾಗೂ ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ. ಈ ಮೂಲಕ ಕೆಲವಾರು ಬಗೆಯ ಕ್ಯಾನ್ಸರ್ ಗಳಿಗೆ ಬೀಟ್ರೂಟ್ ರಕ್ಷಣೆ ನೀಡುತ್ತದೆ. ಅಲ್ಲದೇ ಬೀಟ್ರೂಟ್ ರಸದಲ್ಲಿರುವ ಉರಿಯೂತ ನಿವಾರಕ ಗುಣ ರಕ್ತ ಮತ್ತು ಅಸ್ಥಿಮಜ್ಜೆಯ ಕ್ಯಾನ್ಸರ್ ಅನ್ನು ಗುಣಪಡಿಸಲು ನೆರವಾಗುತ್ತದೆ.

  7)ಗರ್ಭಿಣಿಯರ ಆರೋಗ್ಯ ರಕ್ಷಣೆ: ಗರ್ಭಿಣಿಯರ ಆರೋಗ್ಯಕ್ಕೆ ಬೇಕಾದ ಫೋಲಿಕ್ ಆಮ್ಲವನ್ನು ಬೀಟ್​ ರೂಟ್​ ಜ್ಯೂಸ್​ ಕುಡಿಯುವುದರಿಂದ ಪಡೆಯಬಹುದು.
  Published by:ranjumbkgowda1 ranjumbkgowda1
  First published: