• Home
  • »
  • News
  • »
  • lifestyle
  • »
  • Food: ನೀವು ಚಪಾತಿಯ ಮೇಲೆ ತುಪ್ಪವನ್ನು ಹಚ್ಚುತ್ತೀರಾ? ಇದು ಆರೋಗ್ಯಕ್ಕೆ ಒಳ್ಳೆಯದಾ?

Food: ನೀವು ಚಪಾತಿಯ ಮೇಲೆ ತುಪ್ಪವನ್ನು ಹಚ್ಚುತ್ತೀರಾ? ಇದು ಆರೋಗ್ಯಕ್ಕೆ ಒಳ್ಳೆಯದಾ?

ಚಪಾತಿ ಜೊತೆ ತುಪ್ಪ

ಚಪಾತಿ ಜೊತೆ ತುಪ್ಪ

ತಿಂಡಿ ಸೇವನೆಯನ್ನು ನಾನಾ ರೀತಿಯ ಜನರು, ನಾನಾ ರೀತಿಯಾಗಿ ಸೇವಿಸುತ್ತಾರೆ. ಅದರಅಲ್ಲಿ ಚಪಾತಿಯನ್ನು ಬೇರೆ ಬೇರೆ ಆಹಾರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ತಿನ್ನುವವರು ಇರುತ್ತಾರೆ.

  • Share this:

ನಮ್ಮಲ್ಲಿ ಅನೇಕರು ಚಿಕ್ಕವರಾಗಿದ್ದಾಗ ಚಪಾತಿಯ ಮೇಲೆ ತುಪ್ಪವನ್ನು ಹಚ್ಚಿಕೊಂಡು ತಿಂದಿರುತ್ತೇವೆ ಮತ್ತು ದೊಡ್ಡವರಾದ ಮೇಲೂ ಸಹ ತುಪ್ಪ ಅಥವಾ ಬೆಣ್ಣೆಯನ್ನು ಚಪಾತಿಯ ಮೇಲೆ ಹಾಕಿಕೊಂಡು ಸೇವಿಸಲು ಇಷ್ಟಪಡುತ್ತೇವೆ ಅಂತ ಹೇಳಬಹುದು. ಆದರೆ ಅನೇಕರು ಚಪಾತಿ ಮಾಡುವಾಗ ಅದರ ಮೇಲೆ ತುಪ್ಪ ಮತ್ತು ಬೆಣ್ಣೆಯನ್ನು ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಚಪಾತಿಗಳು ಇನ್ನಷ್ಟು ಮೃದುಗೊಳ್ಳುತ್ತವೆ, ಮಾತ್ರವಲ್ಲದೆ ಅವು ಒಣಗದಂತೆ ಮತ್ತು ಚಪ್ಪಟೆಯಾಗದಂತೆ ತಡೆಯುತ್ತದೆ. ಆದರೆ ಹೀಗೆ ಚಪಾತಿಯ ಮೇಲೆ ತುಪ್ಪವನ್ನು ಹಚ್ಚುವುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಹೀಗೆ ಹಚ್ಚುವುದು ಒಳ್ಳೆಯದು ಅಂತಾದಲ್ಲಿ ಎಷ್ಟು ತುಪ್ಪವನ್ನು ಹಚ್ಚಬೇಕು? ಈ ಪ್ರಶ್ನೆಗಳಿಗೆ ಪ್ರಮಾಣೀಕೃತ ಪೌಷ್ಟಿಕ ತಜ್ಞೆಯಾದ ಆಂಚಲ್ ಸೊಗಾನಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಉತ್ತರ ನೀಡಿದ್ದಾರೆ.


ಚಪಾತಿಗೆ ತುಪ್ಪ ಹಚ್ಚುವ ಬಗ್ಗೆ ಪೌಷ್ಟಿಕ ತಜ್ಞೆ ಏನ್ ಹೇಳ್ತಾರೆ?


"ಹಲವಾರು ಭಾರತೀಯ ಕುಟುಂಬಗಳು, ವಿಶೇಷವಾಗಿ ಉತ್ತರ ಭಾರತದಲ್ಲಿ ಚಪಾತಿಗೆ ಈ ರೀತಿಯಾಗಿ ತುಪ್ಪವನ್ನು ಹಚ್ಚುವುದು ಜಾಸ್ತಿ ಅಂತಾನೆ ಹೇಳಬಹುದು. ತುಪ್ಪವು ಆರೋಗ್ಯಕೆ ಒಳ್ಳೆಯದು, ಆದರೆ ಅದನ್ನು ಮಿತವಾಗಿ ತಿಂದರೆ ಒಳ್ಳೆಯದು. ಆಗಾಗ್ಗೆ, ನಾವು ತೂಕ ಇಳಿಸುವ ಉತ್ಸಾಹದಲ್ಲಿದ್ದಾಗ ನಾವು ನಮ್ಮ ಆಹಾರದಿಂದ ತುಪ್ಪವನ್ನು ಸಂಪೂರ್ಣವಾಗಿ ಹೊರಗಿಡಲು ಯೋಚಿಸುತ್ತೇವೆ. ಆದರೆ ಅದು ಹಾಗಾಗಬಾರದು" ಎಂದು ಅವರು ಹೇಳಿದರು.


ತುಪ್ಪವು ದೇಹದ ತೂಕವನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ?


ಚಪಾತಿಯ ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡಲು ತುಪ್ಪವು ಸಹಾಯ ಮಾಡುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುವ ಆಹಾರಗಳಿಗೆ ರೇಟಿಂಗ್ ವ್ಯವಸ್ಥೆಯಾಗಿದೆ. ಪ್ರತಿ ಆಹಾರವು ಸೇವಿಸಿದಾಗ ನಿಮ್ಮ ರಕ್ತದ ಸಕ್ಕರೆ (ಗ್ಲುಕೋಸ್) ಮಟ್ಟದ ಮೇಲೆ ಎಷ್ಟು ವೇಗವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಇದು ತೋರಿಸುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಗರ್ಭಿಣಿಯರ ಆರೋಗ್ಯಕ್ಕೆ ಈ ಆಹಾರಗಳು ಬೇಕೇ ಬೇಕು


ತುಪ್ಪವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ನಂತರದ ದಿನಗಳಲ್ಲಿ ನೀವು ಇತರ ಕೊಬ್ಬುಯುಕ್ತ ಆಹಾರಗಳನ್ನು ಅತಿಯಾಗಿ ತಿನ್ನುವ ಅಗತ್ಯವಿರುವುದಿಲ್ಲ.


ತುಪ್ಪವು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಒಳಗೊಂಡಿದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನಗೊಳಿಸುವಲ್ಲಿ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವಲ್ಲಿ ತುಪ್ಪವು ಪ್ರಮುಖ ಪಾತ್ರ ವಹಿಸುತ್ತದೆ.


ತುಪ್ಪವು ಹೆಚ್ಚಿನ ಶಾಖ ಬಿಂದುವನ್ನು ಸಹ ಹೊಂದಿದೆ, ಇದು ಜೀವಕೋಶದ ಕಾರ್ಯವನ್ನು ಹಾನಿಗೊಳಿಸುವ ಫ್ರೀ ರಾಡಿಕಲ್ ಗಳನ್ನು ಉತ್ಪಾದಿಸುವುದನ್ನು ತಡೆಯುತ್ತದೆ.


ಚಪಾತಿಯ ಮೇಲೆ ಎಷ್ಟು ತುಪ್ಪ ಹಚ್ಚಿದರೆ ಒಳ್ಳೆಯದು?


"ನಿಮ್ಮ ಚಪಾತಿಯ ಮೇಲೆ ತುಪ್ಪವನ್ನು ಹಚ್ಚಿಕೊಳ್ಳಿರಿ, ಆದರೆ ತುಂಬಾ ತುಪ್ಪವನ್ನು ಹಚ್ಚಿಕೊಳ್ಳಬಾರದು. ಒಂದು ಚಪಾತಿಗೆ ಒಂದು ಸಣ್ಣ ಟೀ ಚಮಚದಷ್ಟು ತುಪ್ಪವನ್ನು ಹಚ್ಚುವುದು ಸೂಕ್ತವಾಗಿದೆ. ಅತಿಯಾಗಿ ತುಪ್ಪವನ್ನು ಹಚ್ಚಿಕೊಂಡರೆ ದೇಹಕ್ಕೆ ಹಾನಿಕಾರಕವಾಗಬಹುದು" ಎಂದು ಅವರು ಹೇಳಿದರು.




ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಹೇಳುವುದೇನು?


ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ "ತುಪ್ಪದಲ್ಲಿ ಅಡುಗೆ ಮಾಡುವುದು ಮತ್ತು ಬೇಳೆ, ಅನ್ನ, ಭಾಕ್ರಿ ಮತ್ತು ಚಪಾತಿಗಳಿಗೆ ಸೇರಿಸುವುದು ಅತ್ಯಗತ್ಯ. ಇದು ಅಗತ್ಯ ಕೊಬ್ಬಿನಾಮ್ಲಗಳನ್ನು ಹೊಂದಿದೆ ಮತ್ತು ವಿಟಮಿನ್ ಡಿ, ಎ ಮತ್ತು ಇ ಅನ್ನು ಹೀರಿಕೊಳ್ಳಲು ಸುಲಭಗೊಳಿಸುತ್ತದೆ. ಇದು ರುಚಿ ವರ್ಧಕವೂ ಹೌದು” ಅಂತ ಬರೆದುಕೊಂಡಿದ್ದಾರೆ.


ತುಪ್ಪವನ್ನು ಬೆಳಿಗ್ಗೆ ಸೇವಿಸಬಹುದು ಅಥವಾ ರೊಟ್ಟಿ ಅಥವಾ ಅನ್ನಕ್ಕೆ ಸೇರಿಸಿಕೊಂಡು ತಿನ್ನಬಹುದು ಎಂದು ಪೌಷ್ಟಿಕ ತಜ್ಞೆ ಅನುಪಮಾ ಮೆನನ್ ಹೇಳುತ್ತಾರೆ.


"ತುಪ್ಪವು ಬೇಳೆಗೆ ಮತ್ತು ಸಿಹಿ ತಿಂಡಿಗಳಿಗೆ ವಿಶಿಷ್ಟ ಪರಿಮಳವನ್ನು ನೀಡುವುದರಿಂದ ಇದನ್ನು ಎಲ್ಲಾ ಅಡುಗೆಯಲ್ಲಿ ಬಳಸಬಹುದು. ಇದು ಹೆಚ್ಚಾಗಿ ಕೈಗೆಟುಕುವ ದರದಲ್ಲಿದ್ದು, ಇದು ನೀಡುವ ರುಚಿ ಮಾತ್ರ ತುಂಬಾನೇ ಇರುತ್ತದೆ. ಆದರೆ ನಾವು ಆಗಾಗ್ಗೆ ತುಪ್ಪದಲ್ಲಿ ಕ್ಯಾಲೋರಿ ಜಾಸ್ತಿ ಇದೆ ಅಂತ ಅದರಿಂದ ದೂರವಿರಲು ನೋಡುತ್ತೇವೆ. ದೈನಂದಿನ ದಿನಚರಿಯಲ್ಲಿ ಬಳಸುವ ಕೊಬ್ಬುಗಳಿಗೆ ಇದು ಉತ್ತಮ ಸೇರ್ಪಡೆಯಾಗಿದ್ದರೂ, ಅದನ್ನು ಮಿತಗೊಳಿಸಬೇಕಾಗಿದೆ ಮತ್ತು ಸರಿಯಾಗಿ ಬಳಸಬೇಕು" ಎಂದು ಮೆನನ್ ಹೇಳಿದರು.

First published: