Weight Loss: ಒಂದೇ ಸಲ 10 ಕೆಜಿ ತೂಕ ಇಳಿಸೋದು ಓಕೆನಾ? ಇದ್ರಿಂದ ಸೈಡ್ ಎಫೆಕ್ಟ್ ಏನಾದ್ರೂ ಇದ್ಯಾ?

Weight Loss Tips: ನಾವು ತೂಕ ಇಳಿಸುವ ಪ್ರಕ್ರಿಯೆಗೆ ಪ್ರಯತ್ನದ ಜೊತೆಗೆ ಸಮಾನ ಪ್ರಮಾಣದ ಸಮಯ ಕೂಡ ಬೇಕಾಗುತ್ತದೆ ಎಂಬುದು ವಾಸ್ತವ. ಇನ್ನು ಇಷ್ಟ ಬಂದ ರೀತಿ ವ್ಯಾಯಾಮ ಮಾಡುವುದು, ಅಸಾಧ್ಯ ಎನಿಸುವ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಯಾವುದೂ ಸಹ ತೂಕ ಇಳಿಸುವ ಕ್ರಿಯೆಗೆ ಸಹಾಯವಾಗುವುದಿಲ್ಲ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಸಧ್ಯದ ತಾಂತ್ರಿಕ ಜೀವನದ ಪರಿಣಾಮ ಪ್ರತಿಯೊಬ್ಬರ ಆರೋಗ್ಯದ ಮೇಲೂ ಬೀರಿ. ಪ್ರತಿ ವ್ಯಕ್ತಿಯು ಒಂದೆಲ್ಲ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ಹಾಗೆಯೇ ದೇಹದ ತೂಕ ಹೆಚ್ಚಾಗುವುದು ಒಂದು ದೊಡ್ಡ ಸಮಸ್ಯೆಯೇ ಸರಿ. ದೇಹದ ತೂಕ ಹೆಚ್ಚಾಗಲು ಹಲವಾರು ಕಾರಣಗಳಿರುತ್ತವೆ. ನಮ್ಮ ದೇಹಕ್ಕೆ ಸಿಗಬೇಕಾದ ಪೋಷಕಾಂಶಗಳು ಸಿಗದೇ ಇದ್ದಾಗ ಅಥವಾ ಆಹಾರದ ಕ್ರಮದಲ್ಲಿ ವ್ಯತ್ಯಾಸವಾದಾಗ ತೂಕ ಏರುವುದು ಸಾಮಾನ್ಯ. ಇನ್ನು ಈ ಕೊರೊನಾ  ಕಾರಣದಿಂದ ಜಾರಿಯಾಗಿದ್ದ ಲಾಕ್ಡೌನ್  ಕಾರಣದಿಂದ ಹೆಚ್ಚಿನ ಜನರ ತೂಕದಲ್ಲಿ ವ್ಯತ್ಯಾಸ ಕಾಣಿಸಿದೆ. ಜಗತ್ತಿನ ಹಲವಾರು ಜನರ ಚಿಂತೆ ದೇಹದ ತೂಕ ಇಳಿಸುವುದು ಹೇಗೆ. ಅದರಲ್ಲೂ  ಬಹು ಬೇಗನೆ ಇಳಿಸುವುದು ಸಾಧ್ಯವಾ ಎಂಬುದು. ನಮ್ಮಲ್ಲಿ ಹೆಚ್ಚಿನವರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ತೂಕ ಇಳಿಸಿಕೊಳ್ಳಬೇಕು ಎಂಬ ಹಂಬಲ ಇರುತ್ತದೆ. ಅದಕ್ಕಾಗಿಯೇ ವಿವಿಧ ರೀತಿಯ ಆಹಾರ ಕ್ರಮಗಳನ್ನು ಅನುಸರಿಸಲು ಆರಂಭಿಸುತ್ತಾರೆ. ಜೊತೆಗೆ ವ್ಯಾಯಾಮ, ಯೋಗಾಸನ , ಜಿಮ್ ಎಂದು ಹೆಚ್ಚಿನ ಶ್ರಮ ಹಾಕಿ ಪ್ರಯತ್ನ ಮಾಡುತ್ತಾರೆ.

  ಆದರೆ ನಾವು ತೂಕ ಇಳಿಸುವ ಪ್ರಕ್ರಿಯೆಗೆ ಪ್ರಯತ್ನದ ಜೊತೆಗೆ ಸಮಾನ ಪ್ರಮಾಣದ ಸಮಯ ಕೂಡ ಬೇಕಾಗುತ್ತದೆ ಎಂಬುದು ವಾಸ್ತವ. ಇನ್ನು ಇಷ್ಟ ಬಂದ ರೀತಿ ವ್ಯಾಯಾಮ ಮಾಡುವುದು, ಅಸಾಧ್ಯ ಎನಿಸುವ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಯಾವುದೂ ಸಹ ತೂಕ ಇಳಿಸುವ ಕ್ರಿಯೆಗೆ ಸಹಾಯವಾಗುವುದಿಲ್ಲ. ಅವು ನಮ್ಮ ಆರೋಗ್ಯದ ಮೇಲೆ ಇನ್ನು ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ದೇಹದ ತೂಕ ಇಳಿಸುವಿಕೆಯ ಕುರಿತು ಕೆಲ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಇಲ್ಲಿದೆ.

  ಇದನ್ನೂ ಓದಿ: Viral Video: ಈ ಆನೆ ಹಿಂದಿನ ಜನ್ಮದಲ್ಲಿ ರಾಜಕುಮಾರ ಆಗಿತ್ತಂತೆ, ಅದಕ್ಕೇ ಈಗ ಹೀಗೆ ಇದೆಯಂತೆ..ವಿಡಿಯೋ ನೋಡಿ!

  1. ಒಮ್ಮೆಲೆ ನೀವು 10 ಕೆಜಿ ತೂಕ ಇಳಿಸಿಕೊಂಡರೆ ಏನಾಗಬಹುದು?

  10 ಕೆಜಿ ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ನೀವೇನಾದರು ಹೊಟ್ಟೆಯನ್ನು ಖಾಲಿ ಬಿಟ್ಟು ಹಸಿವಿನಿಂದ ಪ್ರಯತ್ನ ಮಾಡಿದ್ದರೆ ನಿಜಕ್ಕೂ ಅದು ಅನಾರೋಗ್ಯಕ್ಕೆ ಆಹ್ವಾನಕೊಟ್ಟಂತೆ.  ತೂಕ ಇಳಿಸಿಕೊಳ್ಳುವುದು ಸರಳ ಮತ್ತು ಆರೋಗ್ಯಕರ ಪ್ರಕ್ರಿಯೆ. ನೀವು ತೂಕವನ್ನು ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಅನಾರೋಗ್ಯಕರ ಅಭ್ಯಾಸಗಳನ್ನು ಮಾಡಬಾರದು.  ತೂಕ ಇಳಿಸುವ ಭರದಲ್ಲಿ ಫ್ಯಾಡ್ ಡಯೆಟ್ ಮಾಡುವುದು ಸರಿಯಲ್ಲ. ಸಧ್ಯ ತೂಕ ಇಳಿಸಿಕೊಳ್ಳುವುದು ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಸಹ ಅದನ್ನು ಕಾಪಾಡಿಕೊಂಡು ಹೋಗುವಂತ ಮತ್ತು ಆರೋಗ್ಯಕರವಾದ ದಾರಿಯನ್ನು ಅನುಸರಿಸಬೇಕು.

  ನಾವು ಮಾಡುವ ಒಂದು ತಪ್ಪು ನಮ್ಮ ದೇಹದ ತೂಕವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಯೋಗಾಸನ , ವ್ಯಾಯಾಮ ಎಲ್ಲವನ್ನು ನಿಯಮಿತವಾಗಿ ಮಾಡುವುದು ಒಳ್ಳೆಯ ಕೆಲಸ. ಅಲ್ಲದೇ, ಎರೋಬಿಕ್ ವ್ಯಾಯಾಮ ನಮ್ಮ ದೇಹದಲ್ಲಿನ ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಕೇವಲ ವ್ಯಾಯಾಮ ಮಾತ್ರವಲ್ಲದೇ ಅದರ ಜೊತೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದು ಅತ್ಯಾವಶ್ಯಕ. 2 ಫ್ಯಾಡ್ ಡಯೆಟ್ ಆರೋಗ್ಯಕ್ಕೆ ಏಕೆ ಮಾರಕ?  ಕಡಿಮೆ ಸಮಯದಲ್ಲಿ ಹೆಚ್ಚಿನ ತೂಕ ಇಳಿಸುವ ಭರವಸೆ ನೀಡುವ ಈ ಡಯೆಟಿಂಗ್ ಕ್ರಮ ನಮ್ಮ ದೇಹಕ್ಕೆ ಸಿಗಬೇಕಾದ ಪೋಷಕಾಂಶಗಳು ಸಿಗದಂತೆ ಮಾಡುತ್ತದೆ.

  ಇದನ್ನೂ ಓದಿ: Explained: e-RUPI ಎಂದರೇನು? ಅದರಿಂದ ಸಾಮಾನ್ಯ ಜನರಿಗೆ ಏನು ಪ್ರಯೋಜನ? ಬಳಕೆ ಹೇಗೆ? ಫುಲ್ ಡೀಟೆಲ್ಸ್

  ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ಮುಂದಿನ ದಿನಗಳಲ್ಲಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇದೆ. ನೀವು ಬೇಗನೆ ತೂಕ ಇಳಿಸಿಕೊಂಡಾಗ, ಅಂದರೆ ಅಂದಾಜು ವಾರಕ್ಕೆ 1 ರಿಂದ 2 ಕೆಜಿ ಕಡಿಮೆಯಾದಾಗ ನಿಮ್ಮ ದೇಹ ಅದೇ ತೂಕಕ್ಕೆ ಒಗ್ಗಿಬಿಡುತ್ತದೆ. ಮೊದಲು ಹಸಿವಾದರೂ ಸಹ, ನಂತರ ಹಸಿವು ಕಡಿಮೆಯಾಗಲು ಆರಂಭಿಸುತ್ತದೆ. ಇದು ದೇಹದ ಜೀವಕೋಶಗಳಿಗೆ ಹಾನಿ ಮಾಡುತ್ತದೆ. 3 ಸರಿಯಾದ ಡಯೆಟ್ ಪ್ಲ್ಯಾನ್ ಆಯ್ಕೆ ಮಾಡುವುದು ಹೇಗೆ?
  ನೀವು ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದರೆ, ಒಳ್ಳೆಯ ಆಹಾರ ಕ್ರಮವನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ.

  ಅದೇ ಆಹಾರ ಕ್ರಮ ಮುಂದಿನ ದಿನಗಳಲ್ಲಿ ನಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊದಲು ಡಯೆಟ್ ನಲ್ಲಿ ಹೆಚ್ಚಿನ ಹೆಚ್ಚಿನ ಸಕ್ಕರೆ ಅಂಶ, ಉಪ್ಪು ಹಾಗೂ ಕೊಬ್ಬಿನ ಅಂಶಗಳು ಇರಬಾರದು. ಇವುಗಳು ಹೃದಯ ಸಂಬಂಧಿ ಸಮಸ್ಯೆ ಮತ್ತು ಮಧುಮೆಹ ಸಮಸ್ಯೆಯನ್ನು ತಂದೊಡ್ಡುತ್ತದೆ. ಮುಖ್ಯವಾಗಿ ನಮ್ಮ ಆಹಾರ ಕ್ರಮದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಸಮೃದ್ಧವಾಗಿ ಹೊಂದಿರಬೇಕು. 4 ತೂಕ ಇಳಿಸಿಕೊಳ್ಳಲು ಮಾಡಬೇಕಾದ ಸೂಕ್ತವಾದ ವ್ಯಾಯಮಗಳೇನು? ಎಷ್ಟು ಮಾಡಬೇಕು? ಹೆಚ್ಚಿನ ದಿನಗಳಲ್ಲಿ ಸಾಮಾನ್ಯವಾದ ವ್ಯಾಯಾಮಗಳು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಸ್ನಾಯು ಸಂಬಂಧಿತ ವ್ಯಾಯಾಮಗಳು ಕೂಡ ಒಳ್ಳೆಯದು.

  (ಸಂಧ್ಯಾ ಎಂ)
  Published by:Soumya KN
  First published: