• Home
  • »
  • News
  • »
  • lifestyle
  • »
  • Baking: ಬೇಕಿಂಗ್ ಒಂದು ಕಲೆ, ಆದರೆ ಅದನ್ನು ಮಾಡುವಾಗ ಈ ಸಲಹೆಗಳು ನೆನಪಿರಲಿ

Baking: ಬೇಕಿಂಗ್ ಒಂದು ಕಲೆ, ಆದರೆ ಅದನ್ನು ಮಾಡುವಾಗ ಈ ಸಲಹೆಗಳು ನೆನಪಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೇಕಿಂಗ್, ಬ್ರೆಡ್ ಅಥವಾ ಕೇಕ್ ನಂತಹ ಪಾಕವಿಧಾನಗಳು ಒಂದು ರೀತಿ ಇದ್ದರೆ, ಸಾಂಬರ್‌, ಪಾಯಸ, ಮಾಂಸಹಾರಿಯಂತಹ ಅಡುಗೆ ವಿಧಾನಗಳು ಮತ್ತೊಂದು ರೀತಿ ಇರುತ್ತವೆ. ‌

  • Trending Desk
  • 2-MIN READ
  • Last Updated :
  • Share this:

ಇಂಗು-ತೆಂಗು ಇದ್ದರೆ ಮಂಗನೂ (Monkey) ಅಡುಗೆ ಮಾಡುತ್ತದೆ ಎನ್ನುತ್ತಾರೆ. ಆದರೆ ಉಪ್ಪು, ಕಾರ, ಹುಳಿ, ಸಿಹಿ ಎಲ್ಲವನ್ನೂ ಹದವಾಗಿ ಬೆರೆಸಿ, ಊಟ ಮಾಡುವವರಿಗೆ ರುಚಿ ನೀಡುವಂತೆ ಅಡುಗೆ ಮಾಡೋದಿದೆಯಲ್ಲಾ ಅದು ಒಂದು ಕಲೆ. ಅಡುಗೆ ಮಾಡುವುದು ಈಗೊಂದು ಫ್ಯಾಶನ್ (Fashion)‌ ರೀತಿ ಆಗಿದೆ. ಹೊಸದೇನಾದರೂ ಪ್ರಯತ್ನಿಸಲು ಒಗ್ಗರಣೆ ಕೊಡೋಕೆ ಬರದಿಲ್ಲದವರು ಸಹ ಮುಂದಾಗುತ್ತಿದ್ದಾರೆ. ಅದರಲ್ಲೂ ಕೇಕ್‌, ಬ್ರೆಡ್‌ ಅಂತಾ‌ ಬೇಕ್  ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ರೀತಿಯ ಅಡುಗೆ ಕ್ರಮಗಳು ಒಂದೊಂದು ರೀತಿ ಇರುತ್ತವೆ. ಬೇಕಿಂಗ್, ಬ್ರೆಡ್ ಅಥವಾ ಕೇಕ್ ನಂತಹ ಪಾಕವಿಧಾನಗಳು ಒಂದು ರೀತಿ ಇದ್ದರೆ, ಸಾಂಬರ್‌, ಪಾಯಸ, ಮಾಂಸಹಾರಿಯಂತಹ ಅಡುಗೆ ವಿಧಾನಗಳು ಮತ್ತೊಂದು ರೀತಿ ಇರುತ್ತವೆ. ‌ ಅದರಲ್ಲೂ ಈ ಕೇಕ್ (Cake)‌, ಬ್ರೆಡ್‌ ಮಾಡವುದು ನಾವು-ನೀವೆಲ್ಲಾ ಮಾಡುವ ಚಿತ್ರನ್ನದ ರೀತಿ ಇರಲ್ಲ. ಹೀಗಾಗಿ ಎಲ್ಲಾ ರೀತಿಯ ಬೇಕಿಂಗ್‌ನಲ್ಲಿ ಸರಿಯಾದ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.


ಇದರಲ್ಲೇ ಕರಗತ ಆಗಿರುವವರಿಗೆ ಇದು ತುಂಬಾ ಸಣ್ಣ ವಿಚಾರ ಎನಿಸಬಹುದು, ಆದರೆ ಫ್ರೆಶರ್‌ಗಳಿಗೆ ಈ ಸಣ್ಣ ವಿಚಾರಗಳೇ ದೊಡ್ಡ ಗೊಂದಲ ಉಂಟು ಮಾಡುತ್ತವೆ. ಅದರಲ್ಲೂ ಯೂಟ್ಯೂಬ್‌ ನೋಡಿ ಅಡುಗೆ ಮಾಡುವವರಿಗೆ ಇದು ದೊಡ್ಡ ಸವಾಲೇ ಸರಿ.


ಹಾಗಾದರೆ ಬೇಕಿಂಗ್‌ ಕಲಿಯುವವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಮುಖ್ಯ ಚೆಫ್ ಅದಿತಿ ಹಂಡಾ ಕೆಲವು ಟಿಪ್ಸ್‌ ಕೊಟ್ಟಿದ್ದಾರೆ ನೋಡಿ. ‌


ಬೇಕಿಂಗ್‌ನಲ್ಲಿ ಪಾಲಿಸಬೇಕಾದ ಮುಖ್ಯ ವಿಚಾರಗಳಿವು


* ಕಲಿಯುವಾಗ, ಅಡುಗೆ ಪುಸ್ತಕ ಅಥವಾ ಯೂಟ್ಯೂಬ್ ಚಾನಲ್‌‌ ಸಹಾಯ ಮಾಡುತ್ತದೆ. ಇದು ನಿಮಗೆ ಅನುಸರಿಸಲು ಸ್ಥಿರವಾದ ವಿಧಾನವನ್ನು ಮತ್ತು ತಂತ್ರಗಳು ಮತ್ತು ಕೌಶಲ್ಯಗಳನ್ನು ನೀಡುತ್ತದೆ.


ನಿಮಗೆ ನಿಮ್ಮ ತಿನಿಸುಗಳ ಮೇಲೆ ಒಳ್ಳೆಯ ಹಿಡಿತ ಇದೆ, ನೀವು ಒಳ್ಳೆಯ ರುಚಿ ಕೊಡುತ್ತೀರಿ ಎಂದು ನಿಮಗೆ ವಿಶ್ವಾಸ ಬಂದರೆ ಇತರ ಬೇಕರ್‌ಗಳಿಂದ ವಿಭಿನ್ನ ಪಾಕವಿಧಾನಗಳು ಮತ್ತು ತಂತ್ರಗಳನ್ನು ಕಲಿಯಬಹುದು. ಇದರಿಂದಾಗಿ ಹೊಸ ಪ್ರಯೋಗದಲ್ಲಿ ಗೊಂದಲವನ್ನು ತಪ್ಪಿಸಬಹುದು.


* ಒಂದು ಪಾಕವಿಧಾನವನ್ನು ಅನುಸರಿಸುವಾಗ, ಪಾಕವಿಧಾನದಲ್ಲಿ ತಿಳಿಸಿದ ಅದೇ ಪದಾರ್ಥಗಳನ್ನು ಬಳಸುವುದು ಮುಖ್ಯವಾಗಿದೆ. ಕೆಲ ಪದಾರ್ಥಗಳು ಸಿಗುವುದು ಕಷ್ಟ ಎಂದೆನಿಸಿದರೆ ಸುಲಭವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸುವ ವಿಭಿನ್ನ ಪಾಕವಿಧಾನವನ್ನು ಆಯ್ಕೆ ಮಾಡುವುದು ಉತ್ತಮ. ಇದು ನೀವು ಮಾಡುವ ತಿನಿಸಿನ ರುಚಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.


* ನೀವು ಎಲ್ಲಾದರೂ ಒಂದು ರುಚಿಯನ್ನು ಸವಿದಿರುತ್ತೀರಿ ಅಥವಾ ಯೂಟ್ಯೂಬ್‌ನಲ್ಲಿ ನೋಡಿರುತ್ತೀರಿ. ಅದನ್ನು ಮನೆಗೆ ಬಂದು ನೀವೇ ಸ್ವತಃ ಮಾಡಿದಾಗ ಆ ಟೇಸ್ಟ್‌ ಅಥವಾ ಆ ಲುಕ್‌ ಬರದೇ ಇರಬಹುದು.


ಇದನ್ನೂಓದಿ: ಮದುವೆಯ ನಂತರ ಮಹಿಳೆಯರು ಸಿಂಧೂರವನ್ನು ಏಕೆ ಹಚ್ಚಬೇಕು? ವೈಜ್ಞಾನಿಕ ಕಾರಣಗಳು ಹೀಗಿವೆ


ಈ ವೇಳೆ ಪಾಕವಿಧಾನವನ್ನು ಪರಿಪೂರ್ಣಗೊಳಿಸಲು ಹಲವಾರು ಬಾರಿ ಅಭ್ಯಾಸ ಮಾಡುವುದು ಮುಖ್ಯವಾಗುತ್ತದೆ. ನೀವು ಹಲವು ಬಾರಿ ಪ್ರಯತ್ನಿಸಿದಾಗ ಆ ರುಚಿ ಬರಬಹುದು.


ಮೊದಲು ಏನು ಮಾಡಿದ್ದೇ, ಏಕಿದು ತಪ್ಪಾಯ್ತು ಎಂಬ ಹಳೇ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಅಡುಗೆ ಮಾಡಿ. ಹಾಗೆಯೇ ತಾಪಮಾನ, ಉರಿ, ಹವಮಾನವನ್ನು ಸಹ ಅಡುಗೆ ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳಿ.


* ನಿಮ್ಮ ಬೇಕಿಂಗ್ ಬಗ್ಗೆ ಪ್ರತಿಕ್ರಿಯೆಯನ್ನು ಹುಡುಕುವುದು ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಸಹಾಯಕವಾಗಬಹುದು. ಹೌದು ನಾವು ಮಾಡಿರುವ ಅಡುಗೆಯನ್ನು ಯಾರಾದರೂ ಟೇಸ್ಟ್‌ ಮಾಡಿ ಹೇಳಿದಾಗಲೇ ಅದು ಹೇಗಿದೆ ಎಂದು ನಮಗೆ ಗೊತ್ತಾಗೋದು.


ನೀವು ಮಾಡಿದ ಅಡುಗೆಗಳ ರುಚಿ ನೋಡಲು ಮತ್ತು ನಿಮಗೆ ಪ್ರಾಮಾಣಿಕ ಮೌಲ್ಯಮಾಪನವನ್ನು ನೀಡಲು ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರನ್ನು ಕೇಳಿ.


ನೆರೆಹೊರೆಯವರಂತೆ ನಿಮಗೆ ಕಡಿಮೆ ಪರಿಚಿತರಾಗಿರುವ ವ್ಯಕ್ತಿಯಿಂದ ಪ್ರತಿಕ್ರಿಯೆಯನ್ನು ಪಡೆಯುವುದು ಇನ್ನೂ ಒಳ್ಳೆಯದು, ಏಕೆಂದರೆ ಅವರು ಪಕ್ಷಪಾತವಿಲ್ಲದ ಉತ್ತರವನ್ನು ನೀಡುವ ಸಾಧ್ಯತೆಯಿದೆ.
ನಿಮ್ಮ ಅಡುಗೆಯ ರುಚಿ ನೋಡಿದವರ ಕಾಮೆಂಟ್‌ಗಳನ್ನು ತೆಗೆದುಕೊಳ್ಳಿ. ಅವರು ಹೇಳುವ ನೆಗೆಟಿವ್‌ ಪಾಯಿಂಟ್‌ ಮೇಲೆ ಹೆಚ್ಚು ಗಮನ ನೀಡಿ.


* ಒಂದು ಪದಾರ್ಥವನ್ನು ತಯಾರಿಸುವಾಗ ಕೆಲವರು ರುಚಿ ನೋಡದೆಯೇ ಮಾಡುತ್ತಾರೆ. ಈ ಹಂತದಲ್ಲಿ ನೀವಿನ್ನೂ ಅನುಭವಿಗಳಾಗದೇ ಇದ್ದಲ್ಲಿ ರುಚಿಯನ್ನು ಪರಿಶೀಲಿಸಲು ಎಲ್ಲಾ ಹಂತದಲ್ಲೂ ರುಚಿ ನೋಡುತ್ತಾ ಬನ್ನಿ.


ಅಂದರೆ ಬೇಯಿಸಿದ ಮೂರ್ನಾಲ್ಕು ದಿನಗಳ ನಂತರ ನಿಮ್ಮ ತಿನಿಸು ಹೇಗಿದೆ ಎಂಬುದರ ಬಗ್ಗೆಯೂ ನೀವು ರುಚಿ ನೋಡಬೇಕಾಗುತ್ತದೆ. ಈ ಕೆಲವು ತಂತ್ರಗಳು ನಿಮ್ಮ ಅಡುಗೆ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

First published: