Dandruff Problem: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

ತಲೆಹೊಟ್ಟು ಸಮಸ್ಯೆಗೆ ಮುಖ್ಯ ಕಾರಣ ಶುಷ್ಕತೆ. ಇದು ಬಹಳ ಕಡಿಮೆ ಜೀವಿತಾವಧಿ ಹೊಂದಿರುವ ಚರ್ಮದ ಕೋಶಗಳಿಂದಾಗಿ ಅವು ವೇಗವಾಗಿ ಬೆಳೆಯುತ್ತವೆ. ಮತ್ತು ಸಾಯುತ್ತವೆ. ಮಲಾಸೆಜಿಯಾ ಎಂಬ ಶಿಲೀಂಧ್ರವು ತಲೆಹೊಟ್ಟಿಗೆ ಕಾರಣವಾಗಿದೆ. ಇದು ಚಳಿಗಾಲದಲ್ಲಿ ಹೆಚ್ಚು ಬೆಳೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೂದಲು (Hair) ಹಾಗೂ ನೆತ್ತಿಯ ಆರೋಗ್ಯ (Scalp Health) ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕಾಗಿ ಜನರು (People) ಏನೆಲ್ಲಾ ಮಾಡುತ್ತಾರೆ. ಅದರಲ್ಲೂ ತಲೆಹೊಟ್ಟು (Dandruff) ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ (Problem) ಆಗಿದೆ. ನೆತ್ತಿ ತುಂಬಾ ಒಣಗಿದರೆ ಅಂದರೆ ಒಣಗಿರುವವರೆಗೆ ತಲೆಹೊಟ್ಟು ಸಮಸ್ಯೆ ಹೆಚ್ಚು. ನಿಸ್ಸಂಶಯವಾಗಿ ಈ ಸಮಸ್ಯೆಯಿಂದ ನೀವು ಹಲವು ಬಾರಿ ಮುಜುಗರ ಎದುರಿಸಬೇಕಾಗುತ್ತದೆ. ಕೆಟ್ಟ ಭಾಗ ಅಂದರೆ ತಲೆಹೊಟ್ಟು ನಿಮ್ಮ ನೆತ್ತಿಯ ಮೇಲೆ ಪರಿಣಾಮ ಬೀರಲ್ಲ. ಆದರೆ ಇದು ಕೂದಲು ಉದುರುವಿಕೆ, ತೆಳುವಾಗುವಿಕೆ, ಕೂದಲು ತುದಿ ಒಡೆಯುವಿಕೆ ಮತ್ತು ಅಂತಿಮವಾಗಿ ಬೋಳು ತಲೆಗೆ ಕಾರಣ ಆಗುತ್ತದೆ.

    ತಲೆಹೊಟ್ಟು ಸಮಸ್ಯೆಗೆ ಕಾರಣಗಳು ಯಾವುವು?

    ತಲೆಹೊಟ್ಟು ಸಮಸ್ಯೆಗೆ ಮುಖ್ಯ ಕಾರಣ ಶುಷ್ಕತೆ. ಇದು ಬಹಳ ಕಡಿಮೆ ಜೀವಿತಾವಧಿ ಹೊಂದಿರುವ ಚರ್ಮದ ಕೋಶಗಳಿಂದಾಗಿ ಅವು ವೇಗವಾಗಿ ಬೆಳೆಯುತ್ತವೆ. ಮತ್ತು ಸಾಯುತ್ತವೆ. ಮಲಾಸೆಜಿಯಾ ಎಂಬ ಶಿಲೀಂಧ್ರವು ತಲೆಹೊಟ್ಟಿಗೆ ಕಾರಣವಾಗಿದೆ. ಇದು ಚಳಿಗಾಲದಲ್ಲಿ ಹೆಚ್ಚು ಬೆಳೆಯುತ್ತದೆ.

    ತಲೆಹೊಟ್ಟು ಸಮಸ್ಯೆಗೆ ಚಿಕಿತ್ಸೆ ಏನು?

    ತಲೆಹೊಟ್ಟು ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ ನೀವು ಎಷ್ಟೇ ಪ್ರಯತ್ನಿಸಿದರೂ ಅದು ಮತ್ತೆ ಬೆಳೆಯಬಹುದು. ತಲೆಹೊಟ್ಟು ತೊಡೆದು ಹಾಕಲು ಪರಿಣಾಮಕಾರಿ ಮಾರ್ಗ ಅಂದರೆ ಪ್ರತಿದಿನ ಶಾಂಪೂ ಮಾಡುವುದು. ಇದು ಕಡಿಮೆ ವಯಸ್ಸನ್ನು ಹೊಂದಿರುವ ಜೀವಕೋಶಗಳ ಬೆಳವಣಿಗೆ ನಿಲ್ಲಿಸುತ್ತದೆ. ಮತ್ತು ತಲೆಹೊಟ್ಟು ತಡೆಯಬಹುದು. ಇದಕ್ಕಾಗಿ ನೀವು ಬೇವನ್ನು ಬಳಸಬಹುದು.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಬೇವಿನ ಎಲೆಗಳನ್ನು ಅಗಿಯುವುದು

    NCBI ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ತಲೆಹೊಟ್ಟು ತೊಡೆದು ಹಾಕಲು ಸುಲಭ ಮಾರ್ಗವೆಂದರೆ ಪ್ರತಿದಿನ ಬೆಳಿಗ್ಗೆ ಬೇವಿನ ಎಲೆಗಳನ್ನು ಅಗಿಯುವುದು. ಇದರ ರುಚಿ ಕಡಿಮೆಯಾಗಿ ಕಹಿಯಾಗಲು ಬೇವಿನ ಎಲೆ ಕುದಿಸಿ ಕಷಾಯ ಜೇನುತುಪ್ಪದೊಂದಿಗೆ ಬೆರೆಸಿ ಸೋಸಿದ ನೀರನ್ನು ಕುಡಿಯಬಹುದು.

    ಬೇವಿನ ಎಣ್ಣೆ

    ತೆಂಗಿನ ಎಣ್ಣೆಯಲ್ಲಿ ಕೆಲವು ಬೇವಿನ ಎಲೆಗಳನ್ನು ಕುದಿಸಿ ಮತ್ತು ಅಂತಿಮವಾಗಿ ಕೆಲವು ಹನಿ ನಿಂಬೆಹಣ್ಣನ್ನು ಸೇರಿಸಿ, ಬೇವಿನ ಎಣ್ಣೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ನಿಂಬೆಯನ್ನು ಮಿತವಾಗಿ ಬಳಸಿ ಮತ್ತು ಈ ಎಣ್ಣೆಯನ್ನು ಬಳಸಿದ ನಂತರ ಬಿಸಿಲಿನಲ್ಲಿ ಹೋಗಬೇಡಿ.

    ಬಿಸಿಲಿನಲ್ಲಿ ನಿಮ್ಮ ಕೂದಲಿನಲ್ಲಿ ನಿಂಬೆ ಇರಿಸಿದರೆ ಅಡ್ಡ ಪರಿಣಾಮ ಉಂಟಾಗಬಹುದು. ಈ ಎಣ್ಣೆಯನ್ನು ನಿಮ್ಮ ನೆತ್ತಿಯ ಮೇಲೆ ಲಘುವಾಗಿ ಉಜ್ಜುವುದು ಉತ್ತಮ ಮಾರ್ಗವಾಗಿದೆ. ರಾತ್ರಿಯಿಡೀ ಅದನ್ನು ಬಿಟ್ಟು ಬೆಳಿಗ್ಗೆ ಅದನ್ನು ತೊಳೆಯಿರಿ.

    ಬೇವು ಮತ್ತು ಮೊಸರು

    ಬೇವು ಮತ್ತು ಮೊಸರಿನ ಸಂಯೋಜನೆ ತಲೆಹೊಟ್ಟು ತಡೆಗಟ್ಟಲು ಸೂಕ್ತ ಮಾರ್ಗ. ತಲೆಹೊಟ್ಟುಗೆ ಚಿಕಿತ್ಸೆಯಾಗಿ ಪರಿಗಣಿಸುವುದರ ಜೊತೆಗೆ ಮೊಸರು ನಿಮ್ಮ ಕೂದಲಿನ ಹೊರ ಪೊರೆ ಮೃದು ಮತ್ತು ಬಲವಾಗಿ ಮಾಡುವ ಹೆಚ್ಚುವರಿ ಪ್ರಯೋಜನ ಹೊಂದಿದೆ.

    ಬೇವಿನ ಎಲೆಗಳ ಪೇಸ್ಟ್ ಮಾಡಿ, ಮೊಸರಿನ ಬಟ್ಟಲಿನಲ್ಲಿ ಮಿಶ್ರಣ ಮಾಡಿ ಮತ್ತು ನಿಮ್ಮ ನೆತ್ತಿಯ ಮೇಲೆ ಹಚ್ಚಿ. ಇದನ್ನು 15 ರಿಂದ 20 ನಿಮಿಷ ಬಿಟ್ಟು ತೊಳೆಯಿರಿ. ಬೇವಿನ ಆಂಟಿಫಂಗಲ್ ಗುಣಲಕ್ಷಣಗಳು ಮತ್ತು ಮೊಸರಿನ ಹಿತವಾದ ಮತ್ತು ತಂಪಾಗಿಸುವ ಪರಿಣಾಮವು ತಲೆಹೊಟ್ಟು ವಿರುದ್ಧ ಹೋರಾಡುವಲ್ಲಿ ಪ್ರಯೋಜನ ನೀಡುತ್ತದೆ.

    ಬೇವಿನ ಹೇರ್ ಮಾಸ್ಕ್

    ಬೇವಿನ ಹೇರ್ ಮಾಸ್ಕ್ ತಲೆಹೊಟ್ಟು ಸಮಸ್ಯೆಗೆ ಸುಲಭ ಪರಿಹಾರ ಆಗಿದೆ. ಸ್ವಲ್ಪ ಬೇವಿನ ಎಲೆ ಮಿಕ್ಸಿಯಲ್ಲಿ ಪುಡಿ ಮಾಡಿ. ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ದಪ್ಪ ಪೇಸ್ಟ್ ಅನ್ನು ನೆತ್ತಿಯ ಮೇಲೆ ಹೇರ್ ಮಾಸ್ಕ್ ಆಗಿ ಹಚ್ಚಿ. 20 ನಿಮಿಷ ಬಿಡಿ. ಒಣಗಿದ ನಂತರ ತೊಳೆಯಿರಿ.

    ಹೇರ್ ಕಂಡೀಷನರ್ ಆಗಿ ಬೇವಿನ ಬಳಕೆ

    ಬೇವಿನ ಕಂಡೀಷನಿಂಗ್  ಮಾಡಲು ಬೇವಿನ ಎಲೆ ಕುದಿಸಿ, ಅವುಗಳನ್ನು ತಣ್ಣಗಾಗಲು ಬಿಡಿ. ಕೂದಲಿಗೆ ಶಾಂಪೂ ಹಾಕಿದ ನಂತರ ಈ ಬೇವಿನ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಬೇವಿನ ಶಾಂಪೂ

    ತಲೆಹೊಟ್ಟಿನ ಎಲ್ಲಾ ಸಮಸ್ಯೆಗೆ ಸುಲಭ ಪರಿಹಾರ. ಬೇವಿನ ಶಾಂಪೂವನ್ನು ವಾರಕ್ಕೆ 2 ರಿಂದ 3 ಬಾರಿ ಅನ್ವಯಿಸಿ ಮತ್ತು ತೊಳೆಯಿರಿ. ತಲೆಹೊಟ್ಟು ಹೋಗಲಾಡಿಸಲು ಬೇಕಾದ ಎಲ್ಲಾ ಗುಣಪಡಿಸುವ ಗುಣ ಇದು ಹೊಂದಿದೆ.
    Published by:renukadariyannavar
    First published: