Body Pain: ದೇಹದಲ್ಲಿ ಉಂಟಾಗುವ ನೋವಿಗೆ ಕಾರಣಗಳೇನು? ಇದು ಯಾವ ಕಾಯಿಲೆಯ ಸಂಕೇತ?

ವಿನಾಕಾರಣ ದೇಹದಲ್ಲಿ ನೋವು ಕಾಡುತ್ತಿದ್ದರೆ ಅದರ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳವುದು ಅವಶ್ಯಕ. ಇದು ಗಂಭೀರ ಕಾಯಿಲೆಗಳಿಗೆ ಮತ್ತು ಇತರೆ ಸಣ್ಣ ಕಾಯಿಲೆಗಳಿಗೆ ನೀವು ಬಲಿಯಾಗುತ್ತಿದ್ದೀರಿ ಎಂಬ ಎಚ್ಚರಿಕೆ ನೀಡುತ್ತವೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಕಾಯಿಲೆ ಮತ್ತು ಅದಕ್ಕೆ ಕಾರಣ ಮತ್ತು ಲಕ್ಷಣಗಳನ್ನು ಪತ್ತೆ ಹಚ್ಚುವುದು ತುಂಬಾ ಅವಶ್ಯಕ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅನಾರೋಗ್ಯ (Unhealth) ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿದೆ. ದೇಹದಲ್ಲಿ ನೋವು (Body Pain) ಅಥವಾ ದೇಹದಲ್ಲಿ ಬಿಗಿತ, ಕಾಲುಗಳು ಬಿರಿಯುವುದು, ಸಂಧಿವಾತ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು (Health Problems) ವಯಸ್ಸಾದಂತೆ ಸಾಮಾನ್ಯವಾಗಿ ಕಾಡುತ್ತವೆ. ಆದರೆ ಈ ನೋವುಗಳು ದೇಹದ ಇತರೆ ನೋವುಗಳ ಸಂಕೇತವೂ ಆಗಿರುತ್ತದೆ ಎನ್ನುತ್ತಾರೆ ತಜ್ಞರು. ವಿನಾಕಾರಣ ದೇಹದಲ್ಲಿ ನೋವು ಕಾಡುತ್ತಿದ್ದರೆ ಅದರ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳವುದು ಅವಶ್ಯಕ. ಇದು ಗಂಭೀರ ಕಾಯಿಲೆಗಳಿಗೆ ಮತ್ತು ಇತರೆ ಸಣ್ಣ ಕಾಯಿಲೆಗಳಿಗೆ ನೀವು ಬಲಿಯಾಗುತ್ತಿದ್ದೀರಿ ಎಂಬ ಎಚ್ಚರಿಕೆ ನೀಡುತ್ತವೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಕಾಯಿಲೆ ಮತ್ತು ಅದಕ್ಕೆ ಕಾರಣ ಮತ್ತು ಲಕ್ಷಣಗಳನ್ನು ಪತ್ತೆ ಹಚ್ಚುವುದು ತುಂಬಾ ಅವಶ್ಯಕ.

  ಸಕಾಲದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು

  ಸಕಾಲದಲ್ಲಿ ರೋಗವನ್ನು ಕಂಡು ಹಿಡಿದರೆ ಸೂಕ್ತ ಚಿಕಿತ್ಸೆ ನೀಡಬಹುದು. ನೀವು ವೈದ್ಯರ ಸಂಪರ್ಕಿಸದೇ, ಕೇವಲ ನೋವು ನಿವಾರಕಗಳ ಸೇವನೆ ಮಾಡುತ್ತಿದ್ದರೆ, ಈ ಸಮಸ್ಯೆಯು ದೀರ್ಘಾವಧಿಯಲ್ಲಿ ಹೆಚ್ಚು ಮಾರಕ ಆಗುವ ಸಾಧ್ಯತೆಯಿದೆ.

  ಪೌಷ್ಟಿಕತಜ್ಞ ಲವನೀತ್ ಬಾತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ದೇಹದಲ್ಲಿ ನಿರಂತರ ನೋವು ಉಂಟಾಗಲು ಕೆಲವು ಮುಖ್ಯ ಕಾರಣಗಳ ಬಗ್ಗೆ ಹೇಳಿದ್ದಾರೆ. ಈ ವೀಡಿಯೋದಲ್ಲಿ ಅವರ ತಂಡದ ಸದಸ್ಯರಿಗೆ ಅವರು ನೀವು ಯಾಕೆ ದೇಹದಲ್ಲಿ ನೋವನ್ನು ಅನುಭವಿಸುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ನೀವು ತಿಳಿದುಕೊಳ್ಳಬೇಕಾದ ನಿರಂತರ ನೋವಿನ ಕೆಲವು ಸಾಮಾನ್ಯ ಕಾರಣಗಳು ಯಾವವು ಎಂಬುದನ್ನು ಇಲ್ಲಿ ನೋಡೋಣ.

  ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

  ನಿದ್ರೆಯ ಕೊರತೆ ಉಂಟಾಗುವುದು

  ನೀವು ಪ್ರತಿ ರಾತ್ರಿ ಕನಿಷ್ಠ 6 ರಿಂದ 8 ಗಂಟೆಗಳ ಉತ್ತಮ ನಿದ್ದೆ ಮಾಡಬೇಕು. ನಿದ್ದೆ ಮಾಡುವಾಗ ದೇಹವು ತನ್ನ ಶಕ್ತಿಯ ಸಂಪನ್ಮೂಲಗಳನ್ನು ಪುನರ್ ಉತ್ಪಾದಿಸುತ್ತದೆ. ಇದು ನೀವು ಮರುದಿನ ಉಲ್ಲಾಸ ಅನುಭವಿಸಲು ಸಹಕಾರಿ. ನಿದ್ರೆಯ ಕೊರತೆಯು ಅಗತ್ಯವಾದ ಶಕ್ತಿಯ ಪೂರೈಕೆಯಲ್ಲಿ ಅಡಚಣೆ ಉಂಟು ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ನೋವನ್ನು ಉಂಟು ಮಾಡುತ್ತದೆ.

  ದೇಹದಲ್ಲಿ ನೀರಿನ ಕೊರತೆ

  ನೀವು ಸಾಕಷ್ಟು ನೀರು ಕುಡಿಯದೇ ಹೋದರೆ ಅಥವಾ ನೀವು ನೀರು ಕುಡಿಯುವ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಮೂತ್ರ ವಿಸರ್ಜನೆ, ಬೆವರು ಮೂಲಕ ಕಳೆದುಕೊಂಡಾಗ, ನಿಮ್ಮ ದೇಹವು ನಿರ್ಜಲೀಕರಣಗೊಳ್ಳುತ್ತದೆ. ನಿರ್ಜಲೀಕರಣವು ನಿಮಗೆ ದಣಿವು ಮತ್ತು ನೋವು ಉಂಟು ಮಾಡುತ್ತದೆ.

  ಅತಿಯಾದ ಒತ್ತಡವೂ ದೇಹದ ನೋವಿಗೆ ಕಾರಣ

  ನಿರಂತರ ಒತ್ತಡದ ಜೀವನಶೈಲಿ ದೇಹವನ್ನು ಆಯಾಸಕ್ಕೆ ಬಲಿಯಾಗಿಸುತ್ತದೆ. ಹೀಗಾಗಿ ನೀವು ದೌರ್ಬಲ್ಯ ಮತ್ತು ಸೋಂಕಿಗೆ ಬಲಿಯಾಗಿ ದೌರ್ಬಲ್ಯ ಅನುಭವಿಸುತ್ತೀರಿ.

  ರಕ್ತದಲ್ಲಿ ಕಬ್ಬಿಣದ ಪ್ರಮಾಣದ ಕೊರತೆ

  ಕಬ್ಬಿಣದ ಕೊರತೆಯು ದೇಹದ ವಿವಿಧ ಭಾಗಗಳಲ್ಲಿ ಆಮ್ಲಜನಕ ಮತ್ತು ಪೋಷಕಾಂಶಗಳ ಪ್ರಮಾಣ ಕಡಿಮೆ ಮಾಡುತ್ತದೆ. ಹೀಗಾಗಿ ಇದು ನಿಮಗೆ ದಣಿದ ಮತ್ತು ದೇಹದ ನೋವನ್ನು ಉಂಟು ಮಾಡುತ್ತದೆ.

  ವಿಟಮಿನ್ ಡಿ ಕೊರತೆ ಉಂಟಾಗುವುದು

  ಇದು ಕೊಬ್ಬು-ಕರಗಬಲ್ಲ ವಿಟಮಿನ್ ಆಗಿದೆ. ಮೂಳೆಗಳ ರಚನೆಗೆ ಮುಖ್ಯವಾಗಿ ಬೇಕು. ಇದರ ಜೊತೆಗೆ, ವಿಟಮಿನ್ ಡಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕಡಿಮೆ ಮಾಡಲು, ಸೋಂಕನ್ನು ನಿಯಂತ್ರಿಸಲು ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಮಟ್ಟದ ವಿಟಮಿನ್ ಡಿ ದೇಹದಲ್ಲಿ ನಿರಂತರ ಮತ್ತು ದೀರ್ಘಕಾಲದ ನೋವನ್ನು ಉಂಟು ಮಾಡಬಹುದು.

  ಸಂಧಿವಾತವು ದೇಹದಲ್ಲಿ ನೋವಿಗೆ ಕಾರಣ ಆಗಿದೆ

  ಸಂಧಿವಾತದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ದಿನದಿಂದ ದಿನಕ್ಕೆ ಬದಲಾಗುತ್ತದೆ. ಕೆಲವರಲ್ಲಿ ಕೆಲವೇ ಕೀಲುಗಳು ನೋವಿನಿಂದ ಕೂಡಿರುತ್ತವೆ. ಅದೇ ವೇಳೆ ಇತರ ಜನರಲ್ಲಿ ಇಡೀ ದೇಹದ ವ್ಯವಸ್ಥೆಯು ಪರಿಣಾಮ ಬೀರಬಹುದು. ಹಾಗಾಗಿ ಸಂಧಿವಾತ ಅಥವಾ ಕೀಲುಗಳ ಉರಿಯೂತ ನೋವು ಉಂಟು ಮಾಡಬಹುದು.

  ಇದನ್ನೂ ಓದಿ: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ

  ದೀರ್ಘಕಾಲದ ಆಯಾಸ

  ದೀರ್ಘಕಾಲದ ಆಯಾಸ ಸಿಂಡ್ರೋಮ್ ಆಗಿದೆ. ಇದು ದೈಹಿಕ ಅಥವಾ ಮಾನಸಿಕ ಚಟುವಟಿಕೆ ಜೊತೆಗೆ ರೋಗ ಲಕ್ಷಣಗಳು ಹೆಚ್ಚಾಗಿ ಉಲ್ಬಣಗೊಳ್ಳುತ್ತವೆ. ತೀವ್ರ ಆಯಾಸದ ಜೊತೆಗೆ, ರೋಗ ಲಕ್ಷಣಗಳು ಬೆಳಕಿನ ಸೂಕ್ಷ್ಮತೆ, ತಲೆನೋವು, ಸ್ನಾಯು ಮತ್ತು ಕೀಲು ನೋವು, ಏಕಾಗ್ರತೆಯ ತೊಂದರೆ, ಮನಸ್ಥಿತಿ ಬದಲಾವಣೆ ಮತ್ತು ಖಿನ್ನತೆ ಒಳಗೊಂಡಿದೆ.
  Published by:renukadariyannavar
  First published: