Arthritis: ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ವಿಷಯದ ಮೇಲೆ ಇರಲಿ ಹೆಚ್ಚಿನ ಗಮನ

ಸಂಧಿವಾತ ಸಮಸ್ಯೆ ಇರುವವರು ಔಷಧಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆಯೂ ಗಮನ ಹರಿಸಬೇಕು. ಕೆಲವೊಂದು ಆಹಾರಗಳನ್ನು ಸೇವಿಸಬೇಕು, ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು. ನಾವಿಲ್ಲಿ ಸಂಧಿವಾತ ಸಮಸ್ಯೆ ಇರುವವರಿಗೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಒಳ್ಳೆಯದಲ್ಲ ಎಂಬುದರ ಬಗ್ಗೆ ಹೇಳಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಂಧಿವಾತ (Arthritis) ಎಂಬುವುದು 40 ವರ್ಷ ಮೇಲ್ಪಟ್ಟ ಬಹುತೇಕ ಜನರನ್ನು (People) ಕಾಡುತ್ತಿರುವ ಸಮಸ್ಯೆಯಾಗಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಸಂಧಿವಾತ ಬಂದರೆ ನಡೆಯಲೂ ಆಗದೆ, ಕೂರಲೂ ಆಗದೆ ಕಷ್ಟ ಪಡುತ್ತಾರೆ. ಮಂಡಿಗಳು, ಕೈಗಳು, ಹಿಂಬದಿ, ಬೆನ್ನು ಮೂಳೆ ಇವುಗಳಲ್ಲಿ ನೋವು (Pain) ಕಂಡು ಬರುವುದು. ಸಂಧಿವಾತ ಸಮಸ್ಯೆ ಇರುವವರು ಔಷಧಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆಯೂ ಗಮನ ಹರಿಸಬೇಕು. ಕೆಲವೊಂದು ಆಹಾರಗಳನ್ನು (Food) ಸೇವಿಸಬೇಕು, ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು. ನಾವಿಲ್ಲಿ ಸಂಧಿವಾತ ಸಮಸ್ಯೆ ಇರುವವರಿಗೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಒಳ್ಳೆಯದಲ್ಲ ಎಂಬುದರ ಬಗ್ಗೆ ಹೇಳಿದ್ದೇವೆ.

ಸಂಧಿವಾತ ನೋವಿನ ಲಕ್ಷಣಗಳು 
ನಿಮ್ಮ ಕೀಲುಗಳಲ್ಲಿ ನೋವು ಮತ್ತು ಸೆಳೆತದ ಅನುಭವವನ್ನು ಅನುಭವಿಸುತ್ತಿದ್ದರೆ ಅದರ ಅರ್ಥ ಸಂಧಿವಾತ ನೋವು ನಿಮ್ಮನ್ನು ಆಕ್ರಮಿಸಿದೆ. ಯುನೈಟೆಡ್ ಸ್ಟೇಟ್‌ಗಳಲ್ಲಿ 58.5 ಮಿಲಿಯನ್ ಜನರು ಸಂಧಿವಾತದಿಂದ ಬಳಲುತ್ತಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಸಂಧಿವಾತ ನಿವಾರಿಸಲು ಕೆಲವೊಂದು ಮಾರ್ಗಗಳು
ಸಂಧಿವಾತವು ವಯಸ್ಸಾದಂತೆ ಹೆಚ್ಚಾಗತೊಡಗುತ್ತದೆ ಮತ್ತು ಅದಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಆದರೆ ಸಂಧಿವಾತದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವ ಕೆಲವು ಮಾರ್ಗಗಳಿವೆ. ಈ ಮಾರ್ಗಗಳು ನಿಮ್ಮ ಜೀವನಶೈಲಿಯ ಬದಲಾವಣೆಯನ್ನು ಬಯಸುತ್ತವೆ. ಅದೇನೆಂದರೆ ನೀವು ಸೇವಿಸುವ ಆಹಾರದ ಬಗ್ಗೆ ಮೊದಲು ಜಾಗೃತೆ ವಹಿಸುವುದರ ಮೂಲಕ ಸಂಧಿವಾತವನ್ನು ಗುಣಪಡಿಸುವಲ್ಲಿ ಮೊದಲ ಹೆಜ್ಜೆಯನ್ನು ಇಡಬಹುದು.

ಆಹಾರಪದ್ಧತಿ ಹೀಗಿರಲಿ 
ಕೆಲವು ಆಹಾರಗಳು ಸಂಧಿವಾತಕ್ಕೆ ಸಂಬಂಧಿಸಿದ ಕೆಲವು ಅಸ್ವಸ್ಥತೆ ಮತ್ತು ನೋವನ್ನು ನಿವಾರಿಸಬಲ್ಲ ಗುಣವನ್ನು ಹೊಂದಿರುತ್ತವೆ. ಕೆಲವು ಆಹಾರಗಳು ಒದಗಿಸುವ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿಂದ ಸಂಧಿವಾತವು ಗುಣವಾಗುವ ಸಾಧ್ಯತೆ ಹೆಚ್ಚು. ನಿಮ್ಮ ದೈನಂದಿನ ದಿನಚರಿಯಲ್ಲಿ ಹೆಚ್ಚು ಆರೋಗ್ಯಕರ ಆಹಾರಗಳನ್ನು ಸೇರಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ.

ಇದನ್ನೂ ಓದಿ:  Weight Loss Tips: ಓಟ್ ಮೀಲ್​ ಅನ್ನು ಹೀಗೆ ತಿಂದ್ರೆ ಒಂದು ತಿಂಗಳು ಸಾಕು ತೂಕ ಇಳಿಸೋಕೆ

ಸಿಡ್ನಿ ಗ್ರೀನ್, ಎಂಎಸ್, ಆರ್‌ಡಿಎನ್ ಪ್ರಕಾರ ಸಂಧಿವಾತವನ್ನು ಗುಣಪಡಿಸಬೇಕೆಂದರೆ ಹೆಚ್ಚು ಸೇವಿಸಬೇಕಾದ ಆಹಾರಗಳೆಂದರೆ ಸಾಕಷ್ಟು ಹಸಿರು ತರಕಾರಿಗಳು ಆಗಿವೆ. ನೀವು ಸಂಧಿವಾತದ ವಿರುದ್ಧ ಹೋರಾಡಬೇಕೆಂದರೆ ಮತ್ತು ಕೀಲುಗಳನ್ನು ಬಲಪಡಿಸಬೇಕೆಂದರೆ ನೀವು ಈ ತರಕಾರಿಗಳನ್ನು ತಿನ್ನುವುದು ಮುಖ್ಯವಾಗಿದೆ.  ಹಸಿರು ಸೊಪ್ಪುಗಳು, ಬ್ರೊಕೋಲಿ, ಮೊಳಕೆ ಕಾಳುಗಳು ಇವೆಲ್ಲವುಗಳು ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್‌ಗಳಿಂದ ಸಮೃದ್ಧವಾಗಿವೆ. ಇವು ಜೀವಕೋಶಗಳನ್ನು ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ” ಎಂದು ಹೇಳುತ್ತದೆ.

ಸಂಧಿವಾತ ಫೌಂಡೆಷನ್‌ ಸಂಸ್ಥೆಯು ಕೂಡ “ಹಸಿರು ಸೊಪ್ಪು, ಪಾಲಕ್, ಇತರ ಎಲೆಗಳ ತರಕಾರಿಗಳು ಸ್ವತಂತ್ರ ರಾಡಿಕಲ್ ಹಾನಿಯಿಂದ ಮಾನವ ದೇಹದ ಜೀವಕೋಶಗಳನ್ನು ರಕ್ಷಿಸಬಹುದು. ಏಕೆಂದರೆ ತರಕಾರಿಗಳಲ್ಲಿನ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ಮತ್ತು ವಿಟಮಿನ್ ಎ, ಸಿ ಮತ್ತು ಕೆ ಗಳು ಸಮೃದ್ಧವಾಗಿರುವುದರಿಂದ ಹಸಿರು ತರಕಾರಿಗಳು ಹೆಚ್ಚು ಉಪಯುಕ್ತವಾಗಿವೆ” ಎಂದು ಹೇಳಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಆವಿಷ್ಕಾರಗಳು “ಆಂಟಿಆಕ್ಸಿಡೆಂಟ್‌ಗಳು ರೋಗದ ಚಟುವಟಿಕೆಯನ್ನು ಗಮನಾರ್ಹವಾಗಿ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ರುಮಟಾಯ್ಡ್ ಸಂಧಿವಾತದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ನಿರ್ವಹಿಸಲು ಉತ್ಕರ್ಷಣ ನಿರೋಧಕಗಳು ಉಪಯುಕ್ತವಾಗಬಹುದು” ಎಂದು ಅಧ್ಯಯನವು ನಿರ್ಧರಿಸಿದೆ.

ಹಸಿರು ಸೊಪ್ಪು ಮತ್ತು ತರಕಾರಿಗಳ ಪ್ರಾಮುಖ್ಯತೆ 
ಇದರ ಜೊತೆಗೆ, ಅಮೇರಿಕನ್ ಜರ್ನಲ್ ಆಫ್ ಲೈಫ್ ಸ್ಟೈಲ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದಲ್ಲಿ, “ಹಚ್ಚ ಹಸಿರು ಎಲೆಗಳ ತರಕಾರಿಗಳಲ್ಲಿ ಸಮೃದ್ಧವಾಗಿರುವ ಆಹಾರವು ಬೀಟಾ-ಕ್ಯಾರೋಟಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಎ ಆಗಿ ಪರಿವರ್ತಿಸುವ ವರ್ಣದ್ರವ್ಯ ಆಗಿದೆ. ಇದು ಸಂಧಿವಾತವನ್ನು ಒಳಗೊಂಡಿರುವ ದೀರ್ಘಕಾಲದ ಕಾಯಿಲೆಗಳ ಅಪಾಯ ಅಥವಾ ತೀವ್ರತೆಯ ಸಂಭಾವ್ಯತೆಯನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ:  Food Tips: ನಿಮ್ಮ ಆಹಾರ ಪದ್ದತಿ ಹೀಗಿದ್ರೆ ಆರೋಗ್ಯ ಸಮಸ್ಯೆಗಳು ಕಾಡಲ್ವಂತೆ ನೆನಪಿರಲಿ

ಇಂತಹ ಆಹಾರಗಳನ್ನೆ ಸಂಧಿವಾತ ಕಡಿಮೆ ಮಾಡುವ ಆಹಾರಗಳೆಂದು ಕರೆಯುತ್ತಾರೆ. ಆದ್ದರಿಂದ, ನೀವು ಸಂಧಿವಾತದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಹೆಚ್ಚು ಎಲೆಗಳು ಇರುವ ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಲು ಪ್ರಯತ್ನಿಸಿ. ಈ ಆಹಾರಗಳು ಸಂಧಿವಾತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗೆಯೇ ನಿಮ್ಮ ದೈಹಿಕ ಆರೋಗ್ಯವನ್ನು ಸಹ ಸುಧಾರಿಸುತ್ತವೆ.
Published by:Ashwini Prabhu
First published: