• Home
  • »
  • News
  • »
  • lifestyle
  • »
  • Storytelling: ಮಕ್ಕಳಿಗೆ ಕಥೆ ಹೇಳಿ, ಯಾಕಂದ್ರೆ ಅದರಿಂದ ಈ ಅದ್ಭುತ ಪ್ರಯೋಜನಗಳು ಸಿಗುತ್ತವೆ

Storytelling: ಮಕ್ಕಳಿಗೆ ಕಥೆ ಹೇಳಿ, ಯಾಕಂದ್ರೆ ಅದರಿಂದ ಈ ಅದ್ಭುತ ಪ್ರಯೋಜನಗಳು ಸಿಗುತ್ತವೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಜ್ಜ ಅಜ್ಜಿ ಹೇಳುವ ಕಾಗಕ್ಕ ಗುಬ್ಬಕ್ಕನ ಕಥೆ ಊಹೆಯದ್ದಾದರೂ ಅವರ ಕಥೆ ಹೇಳುವ ಶೈಲಿ, ವಿಧಾನ ನಮ್ಮನ್ನು ನಿದ್ರಾ ಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತಿತ್ತು. ದಿನವೂ ಒಂದೇ ರೀತಿಯ ಕಥೆ ಹೇಳಿದರೂ ನಮಗದು ಎಂದಿಗೂ ಬೇಜಾರು ಬರಿಸುತ್ತಿರಲಿಲ್ಲ. ಕಾಲ ಬದಲಾಗಿದೆ ಇಂದು ಕಥೆ ಹೇಳುವ ಸಮಯ ಕೂಡ ಯಾರಿಗೂ ಇಲ್ಲ ಕಥೆ ಕೇಳಲು ಯಾರಿಗೂ ಮನಸ್ಸು ಇಲ್ಲ.

ಮುಂದೆ ಓದಿ ...
  • Share this:

ನಾವು ಎಳೆಯರಾಗಿದ್ದಾಗ ನಮ್ಮ ಅಜ್ಜ ಅಜ್ಜಿ ಕಥೆ (Story) ಹೇಳದೇ ನಾವು ಮಲಗುವ ಪ್ರಸಂಗವೇ ಇರಲಿಲ್ಲ. ಅವರು ಹೇಳುವ ಕಾಗಕ್ಕ ಗುಬ್ಬಕ್ಕನ ಕಥೆ ಊಹೆಯದ್ದಾದರೂ ಅವರ ಕಥೆ ಹೇಳುವ ಶೈಲಿ, ವಿಧಾನ ನಮ್ಮನ್ನು ನಿದ್ರಾ (Sleep) ಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತಿತ್ತು. ದಿನವೂ ಒಂದೇ ರೀತಿಯ ಕಥೆ ಹೇಳಿದರೂ ನಮಗದು ಎಂದಿಗೂ ಬೇಜಾರು ಬರಿಸುತ್ತಿರಲಿಲ್ಲ. ಕಾಲ ಬದಲಾಗಿದೆ ಇಂದು ಕಥೆ ಹೇಳುವ ಸಮಯ ಕೂಡ ಯಾರಿಗೂ ಇಲ್ಲ ಕಥೆ ಕೇಳಲು ಯಾರಿಗೂ ಮನಸ್ಸು ಇಲ್ಲ. ಆ ಸ್ಥಾನವನ್ನು ತಂತ್ರಜ್ಞಾನ (Technology) ತುಂಬಿರುವುದರಿಂದ ಡಿಜಿಟಲ್ ಲೋಕವೇ ಇಂದು ಕಥೆ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಮಕ್ಕಳು ಕೂಡ ಕಾರ್ಟೋನ್ ಹಾಗೂ ವಿಡಿಯೋಗಳನ್ನು ನೋಡಿಯೇ ಹಾಗೆಯೇ ನಿದ್ರಿಸುತ್ತಾರೆ. ಇಂದಿನ ಲೇಖನದಲ್ಲಿ ಮಕ್ಕಳಿಗೆ ಕಥೆ ಹೇಳುವುದರಿಂದ ದೊರೆಯುವ ಪ್ರಯೋಜನಗಳೇನು ಎಂಬುದನ್ನು ಅರಿತುಕೊಳ್ಳೋಣ


ಮಗುವಿಗೆ ಸದ್ಗುಣಗಳನ್ನು ತಿಳಿಸಿಕೊಡುತ್ತದೆ
ಚಿಕ್ಕಮಕ್ಕಳಿಗೆ ಕಥೆ ಕೇಳುವುದೆಂದರೆ ತುಂಬಾ ಇಷ್ಟದ ಹವ್ಯಾಸವಾಗಿರುತ್ತದೆ. ಮಕ್ಕಳು ಕಥೆ ಕೇಳಿ ಬೆಳೆದಂತೆಲ್ಲಾ ಅವರಲ್ಲಿ ಸದ್ಗುಣಗಳು ತುಂಬಿಕೊಳ್ಳುತ್ತವೆ. ಕಥೆಯಲ್ಲಿರುವ ಅರ್ಥರ್ಪೂರ್ಣ ಸಂದೇಶಗಳು ಅವರ ಮನಸ್ಸಿಗೆ ನಾಟುತ್ತದೆ.


ಅರಿವಿನ ಕೌಶಲ್ಯದ ವರ್ಧನೆ
ಮಕ್ಕಳ ಗಮನವನ್ನು ದೀರ್ಘಕಾಲದವರೆಗೆ ಹಿಡಿದಿಡುವುದು ತುಂಬಾ ಕಷ್ಟ. ಕೆಲವು ಮಕ್ಕಳಿಗೆ ಒಂದೇ ವಿಷಯದ ಮೇಲೆ ತುಂಬಾ ಹೊತ್ತು ಗಮನ ಹರಿಸುವುದು ಕಷ್ಟವಾಗಿರುತ್ತದೆ. ಆದರೆ ಕಥೆ ಹೇಳುವುದರಿಂದ ಅವರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದು. ಇದು ಅವರ ಗಮನವನ್ನು ತುಂಬಾ ಸಮಯ ಹಿಡಿದಿಡುತ್ತದೆ.


ಇದನ್ನೂ ಓದಿ: Pregnant Woman: ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡಬೇಕು ಎನ್ನುವ ಗರ್ಭಿಣಿಯರಿಗೆ ಇಲ್ಲಿದೆ ಸಲಹೆ

ಕಲ್ಪನೆಯನ್ನು ಉತ್ತೇಜಿಸುತ್ತದೆ
ಮಕ್ಕಳು ಕಥೆಯನ್ನು ಆಲಿಸಿದಾಗ ಕಥೆಯ ಕಥಾವಸ್ತು, ಪಾತ್ರಗಳು ಮೊದಲಾದವನ್ನು ಊಹಿಸಿಕೊಳ್ಳುತ್ತಾರೆ. ಕಥೆ ಆಲಿಸುತ್ತಿರುವಂತೆ ಮಕ್ಕಳ ಊಹಾಶಕ್ತಿ ಎಚ್ಚರಗೊಳ್ಳುತ್ತದೆ ಹಾಗೂ ತಮ್ಮದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಾರೆ.


ಸಾಂಸ್ಕೃತಿಕ ಅರಿವನ್ನು ಹೆಚ್ಚಿಸುತ್ತದೆ
ಕಥೆ ಹೇಳುವುದು ಚಿಕ್ಕ ಮಕ್ಕಳಲ್ಲಿ ಕುತೂಹಲವನ್ನು ಹೆಚ್ಚಿಸುತ್ತದೆ. ಸಂಸ್ಕೃತಿ, ಸಂಪ್ರದಾಯದ ಅರಿವನ್ನು ಒಡಮೂಡಿಸುತ್ತದೆ. ಮಕ್ಕಳಲ್ಲಿ ಸಾಂಸ್ಕೃತಿಕ ಜ್ಞಾನವನ್ನು ವೃದ್ಧಿಸುತ್ತದೆ


ಸಂವಹನ ಕೌಶಲ್ಯಗಳನ್ನು ವರ್ಧಿಸುತ್ತದೆ
ಮಕ್ಕಳಿಗೆ ಕಥೆಗಳನ್ನು ಓದುವುದು ಮತ್ತು ಹೇಳುವುದು ಅವರ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಅವರ ಆಲೋಚನೆಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ಸಂವಹನ ಮಾಡಲು ಪ್ರೋತ್ಸಾಹಿಸುತ್ತದೆ. ಮಕ್ಕಳು ಪ್ರಶ್ನೆ ಕೇಳುವಾಗ ಅವರನ್ನು ಪ್ರೋತ್ಸಾಹಿಸಿ ಅವರೊಂದಿಗೆ ಆರೋಗ್ಯಕರ ಚರ್ಚೆಯನ್ನು ನಡೆಸಿ. ಹೊಸ ಹೊಸ ಪದಗಳನ್ನು ಕೂಡ ಮಕ್ಕಳು ಕಲಿತುಕೊಳ್ಳುತ್ತಾರೆ.


ಸ್ಮರಣೆಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ
ಮಗುವಿನ ಸ್ಮರಣೆಯನ್ನು ಚುರುಕಾಗಿಸಲು ಕಥೆ ಹೇಳುವ ಕ್ರಿಯೆ ಸಹಕಾರಿಯಾದುದು. ಅವರಿಗೆ ನೀವು ಕಥೆ ಹೇಳುವಾಗ ಅವರು ವಿಮರ್ಶೆ ಮಾಡಬಹುದು ಇಲ್ಲದಿದ್ದರೆ ವಿವರಗಳನ್ನು ನಿಮ್ಮಿಂದ ಪಡೆಯಬಹುದು. ಪ್ರಶ್ನೆಗಳನ್ನು ಕೇಳುವ ಮೂಲಕ ಅವರಿಗೆ ಕಥೆ ಎಷ್ಟು ನೆನಪಿದೆ ಎಂಬುದನ್ನು ಕಂಡುಕೊಳ್ಳಿ


ಓದುವುದನ್ನು ಸುಲಭವಾಗಿಸುತ್ತದೆ
ನಿಮ್ಮ ಎಳೆಯರಿಗೆ ಕಥೆ ಹೇಳುವುದು ಅವರನ್ನು ಶಾಲಾ ಚಟುವಟಿಕೆಗಳಲ್ಲಿ ಚೂಟಿಯಾಗಿರುವಂತೆ ಮಾಡುತ್ತದೆ. ಇದರಿಂದ ಕಲಿಕೆ ಸರಳವಾಗಿರುತ್ತದೆ. ಕಥೆ ಮಕ್ಕಳ ಅರಿವನ್ನು ಹೆಚ್ಚಿಸುತ್ತದೆ ಹಾಗೂ ಏಕಾಗ್ರತೆಯನ್ನು ಸುಧಾರಿಸುತ್ತದೆ.


ಸಾಮಾಜಿಕ ಕೌಶಲ್ಯ ವೃದ್ಧಿ
ಕಥೆ ಹೇಳುವ ಮೂಲಕ ಮಕ್ಕಳು ಮಾತಿನ ಧಾಟಿಯನ್ನು ಅರಿತುಕೊಳ್ಳುತ್ತಾರೆ ಹಾಗೂ ಆಲಿಸುವ ಪರಿಪಾಠ ಅವರಲ್ಲಿ ಬೆಳೆಯುತ್ತದೆ. ಇತರರು ಮಾತನಾಡುವಾಗ ಶಾಂತರಾಗಿ ಆಲಿಸುತ್ತಾರೆ.


ಇದನ್ನೂ ಓದಿ: Beauty Tips: ಮಿಸ್​ ವರ್ಲ್ಡ್​ ಸೌಂದರ್ಯದ ಗುಟ್ಟು ಇದಂತೆ, ನೀವೂ ಟ್ರೈ ಮಾಡಿ

ಕಥೆ ಹೇಳುವಿಕೆಯು ಚಿಕ್ಕ ಮಕ್ಕಳಿಗೆ ಜಗತ್ತು ಮತ್ತು ಜೀವನದ ಬಗ್ಗೆ ಅನೇಕ ವಿಷಯಗಳನ್ನು ತಿಳಿಸುತ್ತದೆ. ಅವರು ಹಿಂದೆಂದೂ ಅರಿತಿರದ ಅದ್ಭುತ ವಿಚಾರಗಳು ಮತ್ತು ವಿಷಯಗಳನ್ನು ಕಲಿಯಲು ಇದು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಒಟ್ಟಿನಲ್ಲಿ ಎಳೆಯರಿಗೆ ಕಥೆ ಹೇಳುವುದು ಅವರ ಜ್ಞಾನಮಟ್ಟವನ್ನು ಸುಧಾರಿಸುವ ಅದ್ಭುತ ವಿಧಾನವಾಗಿದೆ. ಪೋಷಕರೊಂದಿಗೆ ಮಕ್ಕಳ ಉತ್ತಮ ಬಾಂಧವ್ಯವನ್ನು ಉತ್ತೇಜಿಸಲು ಕೂಡ ಕಥೆ ಸಹಕಾರಿಯಾದುದು.

Published by:Ashwini Prabhu
First published: