Thyroid: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್‌ ಕಾಯಿಲೆಯ ಸೂಚನೆಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ದೇಹದಲ್ಲಿ ಏನೇಲ್ಲಾ ಸಮಸ್ಯೆಗಳು ಬರುತ್ತೆ ಅಂತ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

  • Trending Desk
  • 4-MIN READ
  • Last Updated :
  • Share this:

ಥೈರಾಯ್ಡ್ (Thyroid) ಗ್ರಂಥಿ  ಚಿಕ್ಕದಾದರೂ ಅವುಗಳ ಕೆಲಸ ಮಾತ್ರ ಊಹೆಗೆ ನಿಲುಕದ್ದು, ಇವು ಜೀವಕೋಶಗಳ ಹೆಚ್ಚಿನ ಕೆಲಸಗಳನ್ನು ತನ್ನ ರಸದೂತಗಳ ಮೂಲಕ ಹತೋಟಿಯಲ್ಲಿಡುತ್ತವೆ. ಹೃದಯ ಬಡಿತ, ಉಸಿರಾಟ, ಜೀರ್ಣಕ್ರಿಯೆ, ದೇಹದ ಉಷ್ಣತೆ ಮತ್ತು ಮೆದುಳಿನ ಬೆಳವಣಿಗೆಯಂತಹ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಣ್ಣ ಗ್ರಂಥಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲ ಥೈರಾಯ್ಡ್ ಗ್ರಂಥಿಯು ತಳದ ಚಯಾಪಚಯ ದರ, ಸ್ನಾಯುವಿನ ಕಾರ್ಯ, ಮೂಳೆ ಆರೋಗ್ಯ, ಚರ್ಮ (Skin) ಮತ್ತು ಕೂದಲಿನ ಕಾರ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಶಾಖ ಮತ್ತು ಶಕ್ತಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗೆಯೇ ಭ್ರೂಣದ ಜೀವನ ಮತ್ತು ಶೈಶವಾವಸ್ಥೆಯಲ್ಲಿ ಮೆದುಳಿನ ಸಾಮಾನ್ಯ ಬೆಳವಣಿಗೆಗೆ ಥೈರಾಯ್ಡ್ ಹಾರ್ಮೋನುಗಳು ನಿರ್ಣಾಯಕವಾಗಿವೆ. ಮಕ್ಕಳಲ್ಲಿ (Children) ಸಾಮಾನ್ಯ ಬೆಳವಣಿಗೆ ಮತ್ತು ಪ್ರೌಢಾವಸ್ಥೆಗೆ ಸಹ ಇದು ಅಗತ್ಯವಾಗಿರುತ್ತದೆ.


ಇಷ್ಟೆಲ್ಲಾ ಪ್ರಯೋಜನ ಹೊಂದಿರುವ ಈ ಗ್ರಂಥಿಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಅನೇಕರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷ ಜನವರಿಯನ್ನು ಥೈರಾಯ್ಡ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ಥೈರಾಯ್ಡ್ ಸಂಬಂಧಿತ ಕಾಯಿಲೆಗಳು ಹಲವು ರೋಗಲಕ್ಷಣಗಳಿಂದ ಕೂಡಿರುತ್ತವೆ, ಅವುಗಳಲ್ಲಿ ಒಂದು ಭಾವನಾತ್ಮಕ ತೊಳಲಾಟ, ಮಾನಸಿಕವಾಗಿ ದುರ್ಬಲಗೊಳ್ಳುತ್ತದೆ. ಹುಷಾರಾಗಿರಬೇಕು.


ಮಾನಸಿಕವಾಗಿ ಬಳಲುತ್ತಿದ್ದರೆ ಅದು ಥೈರಾಯ್ಡ್‌ ಸಂಕೇತ


ನಾನು ಯಾಕೋ ಮಾನಸಿಕವಾಗಿ ಕೆಲ ದಿನಗಳಿಂದ ದುರ್ಬಲನಾಗಿದ್ದೇನೆ ಎಂದು ನಿಮಗೆ ಅನಿಸಿದರೆ ತಕ್ಷಣ ಹೋಗಿ ಥೈರಾಯ್ಡ್‌ ಪರೀಕ್ಷೆಗೆ ಒಳಗಾಗಿ. ಏಕೆಂದರೆ ಮಾನಸಿಕವಾಗಿ ಕುಗ್ಗುವುದು, ಸುಖಾ ಸುಮ್ಮನೆ ದುಃಖ ಆಗುವುದು, ಬೇಗ ಮಂಕಾಗುವುದು ಇವೆಲ್ಲಾ ಥೈರಾಯ್ಡ್‌ ಸಂಬಂಧಿತ ರೋಗಗಳಾಗಿವೆ.


ವೈದ್ಯರು ಹೇಳೋದೇನು?


ದೆಹಲಿಯ BLK-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು "ಮಧುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮತ್ತು ಮಾನಸಿಕ ಆರೋಗ್ಯವನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಮಹತ್ವದ ಪಾತ್ರವನ್ನು ವಹಿಸುತ್ತದೆ.


ಥೈರಾಯ್ಡ್‌ ಅನುಭವಿಸುತ್ತಿದ್ದವರಲ್ಲಿ ಈ ಭಾವನತ್ಮಕ ಕೆಲ ತೊಡಕುಗಳು ತುಂಬಾ ಸಹಜವಾಗಿವೆ. ನಿಮ್ಮ ಮನಸ್ಥಿತಿಯು ಕೆಲವೊಮ್ಮೆ ವೇಗವಾಗಿ ಮತ್ತು ಅನಿರೀಕ್ಷಿತವಾಗಿ ಬದಲಾಗಬಹುದು. ಆತಂಕ, ಖಿನ್ನತೆ ಮತ್ತು ಸೈಕೋಸಿಸ್ ಕೂಡ ಹೈಪೋ ಅಥವಾ ಹೈಪರ್ ಥೈರಾಯ್ಡಿಸಮ್‌ಗೆ ಸಂಬಂಧಿಸಿದೆ" ಎಂದು ಹೇಳುತ್ತಾರೆ.


ಥೈರಾಯ್ಡ್ ಹಾರ್ಮೋನುಗಳು ನಮ್ಮ ಮೆದುಳಿನ ವಿವಿಧ ಪ್ರದೇಶಗಳಲ್ಲಿ ವಿವಿಧ ನರಪ್ರೇಕ್ಷಕಗಳನ್ನು (ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕಗಳು) ಪ್ರಭಾವಿಸುತ್ತವೆ ಮತ್ತು ನೆನಪಿನ ಶಕ್ತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.


ಹಾಗೆಯೇ ಕಲಿಕೆ, ಭಾವನೆಗಳು, ಮನಸ್ಥಿತಿ ಮತ್ತು ಅರಿವು, ಆತಂಕ, ಕಿರಿಕಿರಿ, ಮೂಡ್ ಬದಲಾವಣೆಗಳು, ಗಮನ ಕೊಡುವಲ್ಲಿ ತೊಂದರೆ, ಸ್ನಾಯು ದೌರ್ಬಲ್ಯ ಮತ್ತು ತಲೆನೋವು, ದುರ್ಬಲ ಕಲಿಕೆ, ಖಿನ್ನತೆ, ನೆನಪಿನ ಸಮಸ್ಯೆಗಳು ಮತ್ತು ನಿರಾಸಕ್ತಿಯೂ ಸಹ ಈ ಸಂಬಂಧ ಕಾಯಿಲೆಗಳಿಂದ ಉಂಟಾಗಬಹುದು.


ವೈದ್ಯರ ಭೇಟಿ ಅಗತ್ಯ


ಆದ್ದರಿಂದ ಥೈರಾಯ್ಡ್ ಗ್ರಂಥಿ ಕಾಯಿಲೆಗೆ ಸಂಬಂಧಿಸಿದಂತೆ ಮಾನಸಿಕವಾಗಿ ನೀವು ಕುಗ್ಗಿ ಹೋಗಿದ್ದರೆ ಅಥವಾ ಅದಕ್ಕೆ ಸಂಬಂಧಿಸಿದ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಮೊದಲು ಚಿಕಿತ್ಸೆ ಪಡೆದುಕೊಳ್ಳಲು ವೈದ್ಯರನ್ನು ಸಂಪರ್ಕಿಸಿ.


ಇದನ್ನೂ ಓದಿ: ಸಂಡೇ ಏನ್ ಮಾಡೋದು ಅಂತ ಮಂಡೆ ಬಿಸಿ ಮಾಡಿಕೊಂಡಿದ್ದೀರಾ? ಇಲ್ಲಿದೆ ಓದಿ ಸ್ಪೈಸಿ ಬ್ರೈನ್ ಫ್ರೈ ರೆಸಿಪಿ


ಹಾಗೆಯೇ ನಿಮ್ಮಿಷ್ಟದ ಚಟುವಟಿಕೆಗಳಿಗೆ ಸಮಯ ನೀಡಿ, ಧ್ಯಾನ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ, ಆರೋಗ್ಯಕರ ಆಹಾರದ ಅಭ್ಯಾಸ, ವ್ಯಾಯಾಮ ಹೀಗೆ ಒಳ್ಳೆಯ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ.


ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಲು ಸಲಹೆಗಳು


ಆಹಾರ ಉತ್ತಮವಾಗಿರಲಿ


ಥೈರಾಯ್ಡ್‌ ರೋಗಿಗಳು ಸಮತೋಲಿತ ಆಹಾರವನ್ನು ಸೇವಿಸಬೇಕು. ಹೈಪರ್ ಥೈರಾಯ್ಡಿಸಮ್ ಹೊಂದಿರುವವರು ಸಮುದ್ರಾಹಾರ ಮತ್ತು ಅಯೋಡಿನ್ ಭರಿತ ಆಹಾರಗಳನ್ನು ತಪ್ಪಿಸಬೇಕು.


ಹಾಗೆಯೇ ಥೈರಾಕ್ಸಿನ್ ಪೂರಕಗಳನ್ನು ಹೊಂದಿರುವ ರೋಗಿಗಳು ಸೋಯಾ, ಕಬ್ಬಿಣ ಅಥವಾ ಕ್ಯಾಲ್ಸಿಯಂ ಪೂರಕಗಳು ಮತ್ತು ಆಂಟಾಸಿಡ್‌ಗಳನ್ನು ಸೇವಿಸಬಾರದು.


ಪೂರಕಗಳನ್ನು ತೆಗೆದುಕೊಳ್ಳಿ


ಮಲ್ಟಿವಿಟಮಿನ್ ಮತ್ತು ಖನಿಜಯುಕ್ತ ಪೂರಕಗಳನ್ನು ತೆಗೆದುಕೊಳ್ಳುವ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ ತೆಗೆದುಕೊಳ್ಳಬಹುದು.


ನಿಮ್ಮ ಒತ್ತಡ ಮತ್ತು ತೂಕವನ್ನು ನಿರ್ವಹಿಸಿ


ಒತ್ತಡವು ಥೈರಾಯ್ಡ್ ಹಾರ್ಮೋನ್ ಪ್ರತಿರೋಧವನ್ನು ಉಂಟುಮಾಡಬಹುದು, ಆದರೆ ಹೆಚ್ಚಿನ ದೇಹದ ತೂಕವು ಹೆಚ್ಚು ಥೈರಾಕ್ಸಿನ್ ಅಗತ್ಯವನ್ನು ಸೂಚಿಸುತ್ತದೆ. ಹೀಗಾಗಿ, ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ.
ದಿನವೂ ವ್ಯಾಯಾಮ ಮಾಡಿ


ವಾರದಲ್ಲಿ ಮೂರರಿಂದ ಐದು ಬಾರಿ ವ್ಯಾಯಾಮ ಮಾಡುವುದು ಉತ್ತಮ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ಹೆಚ್ಚಾಗುವುದು ಮತ್ತು ಆಲಸ್ಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ.


ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಿ


ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಥೈರಾಯ್ಡ್ ಕಾಯಿಲೆಗೆ ಸಂಬಂಧಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು