Health Tips: ಮಳೆಗಾಲದಲ್ಲಿ ಈ ಆಹಾರಗಳನ್ನು ಸೇವಿಸಿ, ಆರೋಗ್ಯವಾಗಿರಿ.

Monsoon Foods: ಮಳೆಗಾಲದಲ್ಲಿ ನಮ್ಮ ಆರೋಗ್ಯದ ಮೇಲೆ ಹಲವು ಪರಿಣಾಮಗಳಾಗುತ್ತವೆ. ಅವುಗಳನ್ನು ನಿಭಾಯಿಸಲು ಶಕ್ತಿಯುತ ಆಹಾರದ ಅವಶ್ಯಕತೆ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಳೆಗಾಲ ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ನೆನಪುಗಳನ್ನು ತರುತ್ತದೆ. ಕೆಲವರಿಗೆ ಮಳೆಗಾಲ ಇಷ್ಟವಾದರೆ, ಕೆಲವರಿಗೆ ಕಿರಿಕಿರಿ. ಕೆಲವರಿಗೆ ಮಕ್ಕಳಂತೆ ಮಳೆಯಲ್ಲಿ ಆಟವಾಡುವ ಆಸೆ, ಇತರರಿಗೆ ಕಿಟಕಿಯ ಪಕ್ಕದಲ್ಲಿ ಬಿಸಿಬಿಸಿ ಕಾಫಿ ಅಥವಾ ಚಹಾ  ಕುಡಿಯುತ್ತಾ ಕುಳಿತುಕೊಳ್ಳುವುದು ಇಷ್ಟ.  ಇನ್ನು ಕೆಲವರಿಗೆ  ಆರೋಗ್ಯದ ಚಿಂತೆ. ಮಾನ್ಸೂನ್ ತನ್ನದೇ ಆದ ಮ್ಯಾಜಿಕ್ ಮಾಡುತ್ತದೆ. ಆದರೆ ಇದು ವಿವಿಧ ರೋಗಗಳನ್ನು ತರುವ ಕಾಲ ಎನ್ನುವುದನ್ನ ಮರೆಯಲಾಗುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಬೇಕಾದ  ಆಹಾರ ಪದಾರ್ಥಗಳ ಪಟ್ಟಿಇಲ್ಲಿವೆ:

ಹಸಿರು ಮೆಣಸಿನ ಕಾಳುಗಳು: ಹಸಿರು ಮೆಣಸಿನ ಕಾಳುಗಳಲ್ಲಿ ಪೈಪೆರಿನ್ ಎಂಬ ಆಲ್ಕಲಾಯ್ಡ್ ಇದ್ದು ಅದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಇದರಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಕೆ ಇದೆ.  ಹಸಿರು ಮೆಣಸಿನ ಕಾಳುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಿದ್ದು ಅದು ಸ್ವತಂತ್ರ ರಾಡಿಕಲ್ ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಗಂಭೀರ ರೋಗಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಹಸಿ ಮೆಣಸಿನಕಾಳುಗಳು ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುವ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪಾದನೆಯನ್ನು  ಹೆಚ್ಚು ಮಾಡುವ ಮೂಲಕ ದೇಹದಲ್ಲಿರುವ ಹೆಚ್ಚಿನ ಗ್ಯಾಸ್  ಕಡಿಮೆ ಮಾಡಬಹುದು. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಅಂದರೆ ಆಹಾರದಿಂದ ಬರುವ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಆಹಾರದಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಮ್ಮ ಆರೋಗ್ಯದ ಮೇಲೆ ಖರ್ಜೂರ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

ಹಣ್ಣುಗಳು : ಪೀಚ್, ಪ್ಲಮ್, ಚೆರ್ರಿ, ನೇರಳೆ, ದಾಳಿಂಬೆಯಂತಹ ಮಳೆಗಾಲದಲ್ಲಿ ಸಿಗುವ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ತುಂಬಿರುತ್ತವೆ. ಆದರೆ ಮಳೆಗಾಲದಲ್ಲಿ ರಸ್ತೆ ಬದಿಯ ಮಾರಾಟಗಾರರು ಮೊದಲೇ ಕತ್ತರಿಸಿ ಇರಿಸಿದ ಹಣ್ಣುಗಳು ಮತ್ತು ತಿನ್ನುವುದನ್ನು ಬಿಡಿ.  ಮನೆಯಲ್ಲಿ  ಹಣ್ಣುಗಳನ್ನು ತಂದು ತಿನ್ನಿ. ಹಾಗೂ ಜ್ಯೂಸ್ಗಳನ್ನು ಸಹ ಮನೆಯಲ್ಲಿಯೇ ಮಾಡಿ ಸೇವಿಸಿ.

ಬೆಚ್ಚಗಿನ ದ್ರವ ಆಹಾರಗಳು : ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬೆಚ್ಚಗಿರುವ ಆಹಾರವನ್ನು ಸೇವಿಸುವುದು ಉತ್ತಮ. ಅದರಲ್ಲೂ ದ್ರವ ಆಹಾರಗಳು ಹಗುರವಾಗಿರುವುದರಿಂದ ಆರಾಮದಾಯಕ ಎನಿಸುತ್ತದೆ.  ಹಾಗಾಗಿ ಸೂಪ್, ಮಸಾಲಾ ಟೀ, ಗ್ರೀನ್ ಟೀ, ಸಾರು, ದಾಲ್, ಮುಂತಾದ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸಿ. ಏಕೆಂದರೆ ಅವುಗಳು ಹೈಡ್ರೇಶನ್ ಮತ್ತು ರೋಗನಿರೋಧಕ ವ್ಯವಸ್ಥೆಗೆ ಉತ್ತಮಗೊಳಿಸುತ್ತದೆ.

ತರಕಾರಿಗಳು: ಮಳೆಗಾಲ ಎಂದಲ್ಲ ಎಲ್ಲಾ ಸಮಯದಲ್ಲಿ ತರಕಾರಿ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜಕಾರಿ. ಮಳೆಗಾಲದಲ್ಲಿ ಯಾವ ತರಕಾರಿಗಳು ಲಭ್ಯವಿರುತ್ತದೆಯೋ ಆ ತರಕಾರಿಗಳನ್ನು ಸೇವಿಸುವುದು ಉತ್ತಮ.  ಮಳೆಗಾಲ ಸೋರೆಕಾಯಿಗಳ ಸೀಸನ್. ಈ ಸಮಯದಲ್ಲಿ  ಸ್ನೇಕ್ ಸೋರೆಕಾಯಿ, ಬಾಟಲ್ ಸೋರ್ಡ್, ಇಂಡಿಯನ್ ಸ್ಕ್ವ್ಯಾಷ್, ರಿಡ್ಜ್ ಸೋರ್ಡ್, ಇತ್ಯಾದಿ ಬಗೆಯ ಸೋರೆಕಾಯಿಗಳು ಸಿಗುತ್ತವೆ. ಅದನ್ನು ಬಳಸಿ ಆಹಾರ ಪದಾರ್ಥ ಮಾಡಿ ಸೇವಿಸುವುದು ಮಳೆಗಾಲದ ಎಷ್ಟು ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ,  ಸಲಾಡ್, ಪರಾಠ, ಸೂಪ್,  ಮುಂತಾದ ವಿವಿಧ ಅಡುಗೆಗಳಲ್ಲಿ ಸೋರೆಕಾಯಿ ತರಕಾರಿಗಳನ್ನು ಸೇರಿಸಿ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಪ್ರೋಬಯಾಟಿಕ್‌ : ನಿಮ್ಮ ಕರುಳಿನ ಬಳ್ಳಿಗಳನ್ನು ಆರೋಗ್ಯಕರವಾಗಿಡಲು ಮೊಸರು, ಮಜ್ಜಿಗೆ, ಕೆಫೀರ್, ಉಪ್ಪಿನಕಾಯಿ ತರಕಾರಿಗಳಂತಹ ಪ್ರೋಬಯಾಟಿಕ್‌ಗಳನ್ನು ಸೇವಿಸಿ. ಈ ಪ್ರೋಬಯಾಟಿಕ್‌ಗಳು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡಿ, ಅದು ಕೆಟ್ಟ ಬ್ಯಾಕ್ಟೀರಿಯಾ ಅಥವಾ ಕರುಳಿನಿಂದ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Published by:Sandhya M
First published: