Puppy: ಸಾಕಲು ನಾಯಿಮರಿ ಖರೀದಿ ಮಾಡ್ತಿದ್ದೀರಾ? ಹಾಗಾದ್ರೆ ಅವುಗಳ ವಯಸ್ಸಿನ ಬಗ್ಗೆ ಇರಲಿ ಗಮನ

ಈ ನಾಯಿಮರಿಗಳು ಹುಟ್ಟಿ ಕೇವಲ 30 ದಿನಗಳು ಮಾತ್ರ ಆಗಿರುತ್ತವೆ, ಅಂತಹ ನಾಯಿಮರಿಗಳನ್ನು ಬೇರೆಡೆಗೆ ಮಾರುವುದು, ಈ ನಾಯಿ ಮರಿಗಳನ್ನು ಮಾರುವವರಿಗೆ (Seller) ಒಳ್ಳೆಯ ಆದಾಯದ (Income) ವಿಷಯವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ನಮಗೆ ಒಂದು ನಾಯಿಮರಿ (Puppy) ಇಷ್ಟವಾದರೆ ಅದನ್ನು ಹಣ (Money) ನೀಡಿ ಮನೆಗೆ ತೆಗೆದುಕೊಂಡು ಬರುತ್ತೇವೆ. ಆದರೆ ಅದನ್ನು ಮನೆಗೆ ತರುವ ವಿಷಯಕ್ಕೆ ಬಂದಾಗ, ಹೆಚ್ಚಿನ ಜನರು ಸ್ವಲ್ಪ ದೊಡ್ಡ ನಾಯಿಗಿಂತ, ನಾಯಿಮರಿಯನ್ನು ಬಯಸುತ್ತಾರೆ. ಈ ನಾಯಿಮರಿಗೆ ಎಷ್ಟು ವಯಸ್ಸಾಗಿ(Puppy Age)ರುತ್ತದೆ ಎನ್ನುವುದು ನಾವು ಯೋಚನೆ ಸಹ ಮಾಡುವುದಿಲ್ಲ. ಸೂಕ್ತ ವಯಸ್ಸಿನಲ್ಲಿ ನಾಯಿಮರಿಯನ್ನು ಮನೆಗೆ ತರುವುದು ಎಷ್ಟು ನಿರ್ಣಾಯಕ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಕೆಲವೊಬ್ಬರು ನಾಯಿಮರಿಗೆ ಹುಟ್ಟಿ 35 ದಿನಗಳಷ್ಟೆ ಆಗಿರುತ್ತದೆ, ಅಂತಹ ಚಿಕ್ಕ ನಾಯಿಮರಿಯನ್ನು ಹೊಸ ಮನೆಗೆ ಪರಿಚಯಿಸಲಾಗುತ್ತದೆ. ತನ್ನ ತಾಯಿಯಿಂದ (Mother) ದೂರವಾಗಿ ಬೇರೆ ಮನೆಗೆ ಬರುವುದು ಅದು ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಎಂದರೆ ಆ ನಾಯಿಮರಿಗೆ ತುಂಬಾನೇ ಭಯಾನಕ ಪರಿಸ್ಥಿತಿ ಆಗಿರುತ್ತದೆ.

ಈ ನಾಯಿಮರಿಗಳು ಹುಟ್ಟಿ ಕೇವಲ 30 ದಿನಗಳು ಮಾತ್ರ ಆಗಿರುತ್ತವೆ, ಅಂತಹ ನಾಯಿಮರಿಗಳನ್ನು ಬೇರೆಡೆಗೆ ಮಾರುವುದು, ಈ ನಾಯಿ ಮರಿಗಳನ್ನು ಮಾರುವವರಿಗೆ (Seller) ಒಳ್ಳೆಯ ಆದಾಯದ (Income) ವಿಷಯವಾಗಿರುತ್ತದೆ. ಇಲ್ಲಿ ನಾಯಿಮರಿಗಳನ್ನು ನಿಯಮಿತವಾಗಿ ಉತ್ಪಾದಿಸಲು ಹೆಣ್ಣು ನಾಯಿಗಳನ್ನು ಬಳಸಲಾಗುತ್ತದೆ.

30 ದಿನದ ನಾಯಿಮರಿಗಳ ಮಾರಾಟ ಹೆಚ್ಚಳ

ನಾಯಿಮರಿಗಳನ್ನು ಹೀಗೆ 30 ದಿನಗಳ ವಯಸ್ಸಿನಲ್ಲಿಯೇ ಅವುಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ, ಇದು ಹೆಣ್ಣು ನಾಯಿ ಹಾಲು ಉತ್ಪಾದನೆಯನ್ನು ನಿಲ್ಲಿಸಲು ಕಾರಣವಾಗುತ್ತದೆ ಮತ್ತು ತಾಯಿ ಮತ್ತು ನಾಯಿಮರಿಗಳೆರಡಕ್ಕೂ ಅಗತ್ಯವಿರುವ ಆರೈಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ನಾಯಿಮರಿಗಳ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.

ಇದನ್ನೂ ಓದಿ:  Weight Loss: ಈ ಮಸಾಲೆ ಸೇವಿಸಿ ತೂಕ ಇಳಿಸಿಕೊಳ್ಳಿ: ಇಲ್ಲಿದೆ ಪಟ್ಟಿ

60 ದಿನ ತಾಯಿಯ ಜೊತೆ ಇರಲೇಬೇಕು

ನಾಯಿಮರಿಗಳು ಕನಿಷ್ಠ 60 ದಿನಗಳವರೆಗೆ ತಮ್ಮ ತಾಯಂದಿರೊಂದಿಗೆ ಇರಬೇಕು. ಮಾನವರಂತೆ, ತಾಯಿಯ ಹಾಲಿನಲ್ಲಿ ಕಂಡುಬರುವ ಪ್ರತಿಕಾಯಗಳು ಯುವ ನಾಯಿಮರಿಗಳನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ ಮತ್ತು ಅವುಗಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ, ನಾಯಿಮರಿಗಳು ಎರಡು ತಿಂಗಳ ಗಡಿಯನ್ನು ದಾಟಿದ ನಂತರವೇ ಘನ ಆಹಾರವನ್ನು ಸೇವಿಸಬಹುದು.

ಘನ ಆಹಾರ ಸೇವನೆ ಕಷ್ಟವಾಗಬಹುದು!

35 ದಿನಗಳ ನಾಯಿಮರಿಗೆ ಆಹಾರವನ್ನು ನೀಡುವುದು ತುಂಬಾನೇ ಕಷ್ಟ, ಏಕೆಂದರೆ ಅದು ಇನ್ನೂ ಘನ ಆಹಾರವನ್ನು ಸಂಪೂರ್ಣವಾಗಿ ಅಗಿಯಲು ಅಥವಾ ನುಂಗಲು ಸಾಧ್ಯವಾಗುವುದಿಲ್ಲ. ಬಹಳಷ್ಟು ಹೊಸ ಸಾಕು ಪ್ರಾಣಿ ಪೋಷಕರು ನಾಯಿಮರಿಗಳಿಗೆ ಆಹಾರ ನೀಡಲು ಘನ ಆಹಾರವನ್ನು ತಯಾರಿಸುತ್ತಾರೆ. ಇದು ನಾಯಿಮರಿಗಳಲ್ಲಿ ಅಜೀರ್ಣಕ್ಕೆ ಕಾರಣವಾಗುತ್ತವೆ ಮತ್ತು ಆರೋಗ್ಯವನ್ನು ಮತ್ತಷ್ಟು ಅಪಾಯಕ್ಕೆ ತಳ್ಳುತ್ತವೆ.
ನಾಯಿಮರಿ ಉತ್ಪಾದಿಸುವ ಕೇಂದ್ರದಲ್ಲಿ ನಾಯಿಮರಿಗಳನ್ನು ಒಂದು ಸ್ಥಳದಲ್ಲಿ ತುಂಬಾ ಹತ್ತಿರ ಹತ್ತಿರವಾಗಿ ಇರಿಸಲಾಗುತ್ತದೆ, ಇದು ಸೋಂಕನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ.

ನಾಯಿಮರಿಗಳಿಗೆ ತಗಲುವ ಎರಡು ಸಾಮಾನ್ಯ ಸೋಂಕುಗಳೆಂದರೆ ಪಾರ್ವೊವೈರಲ್ ಸೋಂಕು ಮತ್ತು ಕೆನೈನ್ ಡಿಸ್ಟೆಂಪರ್ ವೈರಸ್ ಸೋಂಕು.

ಏನಿದು ಪಾರ್ವೊವೈರಲ್ ಗ್ಯಾಸ್ಟ್ರೋಎಂಟರೈಟಿಸ್?

ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸೋಂಕು. ಕೆಲವೇ ತಿಂಗಳುಗಳ ಹಿಂದೆ, ಭಾರತದ ಕೆಲವು ರಾಜ್ಯಗಳಲ್ಲಿ ಸಾಕು ನಾಯಿಗಳಲ್ಲಿ ಸೋಂಕಿನ ಪ್ರಮಾಣವು ಹೆಚ್ಚಾಗಿತ್ತು. ಈ ಸೋಂಕು ಕಲುಷಿತ ಆಹಾರ ಅಥವಾ ನೀರಿನ ಮೂಲಗಳ ಮೂಲಕ ಹರಡುತ್ತದೆ ಮತ್ತು ಲಸಿಕೆ ಪಡೆಯದ ನಾಯಿಮರಿಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಸೋಂಕು ತಗುಲಿದರೆ ನಾಯಿಮರಿಗಳು ವಾಂತಿ ಮಾಡಿಕೊಳ್ಳುತ್ತವೆ, ಹಸಿವನ್ನು ಕಳೆದು ಕೊಳ್ಳುತ್ತವೆ ಮತ್ತು ರಕ್ತಸಿಕ್ತ ಮಲಗಳು ಮತ್ತು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತದೆ. ನಂತರ ತಕ್ಷಣವೇ ನಿರ್ಜಲೀಕರಣದಿಂದ ಬಳಲಿ ಈ ರೋಗವು ಹೃದಯ ಸ್ತಂಭನ ಮತ್ತು ಸಾವಿಗೆ ಕಾರಣವಾಗುವ ಸಾಧ್ಯತೆಗಳು ಇರುತ್ತವೆ.

ಕೆನೈನ್ ಡಿಸ್ಟೆಂಪರ್, ಇತರ ವೈರಲ್ ಸೋಂಕಿನ ನಾಯಿಮರಿಗಳು, ಪಾರ್ವೊವೈರಸ್ ಗಿಂತ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿದೆ. ಡಿಸ್ಟೆಂಪರ್ ವೈರಸ್ ಮರಿಗಳಲ್ಲಿನ ಜಠರ ಗರುಳಿನ ಮತ್ತು ನರವ್ಯೂಹಗಳ ಮೇಲೆ ಪರಿಣಾಮ ಬೀರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

ಇದನ್ನೂ ಓದಿ:  Weight Loss: ಸಕ್ಕರೆ, ಅನ್ನ ಬಿಟ್ಟು 53 ಕೆಜಿ ಇಳಿಸ್ಕೊಂಡ ಸಾಫ್ಟ್​ವೇರ್ ಎಂಜಿನಿಯರ್..! ಹೀಗಿದೆ ಈಕೆಯ ಸ್ಟೋರಿ

ಡಿಸ್ಟೆಂಪರ್ ಲಕ್ಷಣಗಳು

ಗಾಳಿಯಲ್ಲಿ ಹರಡುವ ಸೋಂಕು ಇದಾಗಿದ್ದು, ಲಸಿಕೆ ಹಾಕಿಸದೆ ಇದ್ದರೆ ಈ ಸೋಂಕು ಇನ್ನಿತರೆ ನಾಯಿಗಳಿಗೆ ಹರಡುವ ಸಾಧ್ಯತೆಯಿದೆ. ಈ ಸೋಂಕು ತಗುಲಿದರೆ ನಾಯಿಗಳು ಕೆಮ್ಮು, ಸೀನುವಿಕೆ, ವಾಂತಿ, ಹಸಿವಿಲ್ಲದಿರುವುದು ಮತ್ತು ಮೂಗು ಅಥವಾ ಕಣ್ಣುಗಳಿಂದ ನೀರು ಸುರಿಯುವುದು ಡಿಸ್ಟೆಂಪರ್ ನ ಲಕ್ಷಣಗಳಾಗಿವೆ. ನಿಮ್ಮ ನಾಯಿಮರಿ ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ನೀವು ತಕ್ಷಣ ನಿಮ್ಮ ಪಶುವೈದ್ಯರನ್ನು ಸಂಪರ್ಕಿಸಬೇಕು.
Published by:Mahmadrafik K
First published: