ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ (Kitchen Room) ಸಿಗುತ್ತೆ ದಾಲ್ಚಿನ್ನಿ (Cinnamon). ಇದು ಮಸಾಲೆ ಪದಾರ್ಥವಾಗಿದೆ. ಇದನ್ನು ಹಲವು ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಆರೋಗ್ಯ ಪ್ರಯೋಜನಕ್ಕಾಗಿ (Health Benefits) ಹಾಗೂ ಕಾಲೋಚಿತ ಕಾಯಿಲೆಗಳ ನಿವಾರಣೆಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಕೇಕ್, ಸಲಾಡ್, ಟೀ, ಅಡುಗೆ ಹಾಗೂ ಹಲವು ರೆಸಿಪಿಗಳ ತಯಾರಿಕೆಗೆ ಬಳಕೆ ಮಾಡ್ತಾರೆ. ದಾಲ್ಚಿನ್ನಿ ರುಚಿ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ತೂಕ ಇಳಿಕೆಗೆ (Weight Loss) ದಾಲ್ಚಿನ್ನಿಯನ್ನು ಹಲವು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಇಂದು ನಾವು ದಾಲ್ಚಿನ್ನಿಯನ್ನು ತೂಕ ಇಳಿಕೆಗೆ ಯಾವೆಲ್ಲಾ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದನ್ನು ತಿಳಿಯೋಣ.
ತೂಕ ಇಳಿಕೆಗೆ ದಾಲ್ಚಿನ್ನಿಯನ್ನು ಯಾವೆಲ್ಲಾ ರೀತಿಯಲ್ಲಿ ಬಳಕೆ ಮಾಡಬಹುದು?
ತೂಕ ಇಳಿಕೆಗೆ ದಾಲ್ಚಿನ್ನಿ ಸಹಾಯ ಮಾಡುತ್ತದೆ. ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸಿದ್ರೆ ದೇಹದ ಚಯಾಪಚಯ ಹೆಚ್ಚಿಸುತ್ತದೆ. ಇದು ತೂಕ ನಷ್ಟದ ಪ್ರಕ್ರಿಯೆ ವೇಗವಾಗಿಸುತ್ತದೆ. ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ.
ದಾಲ್ಚಿನ್ನಿ ಆಂಟಿ ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಸತು, ವಿಟಮಿನ್, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್, ಪ್ರೋಟೀನ್, ಕಬ್ಬಿಣ ಮತ್ತು ರಂಜಕ ಸೇರಿ ಹಲವು ಪೋಷಕಾಂಶ ಹೊಂದಿದೆ. ಆಯುರ್ವೇದ ಔಷಧ ತಯಾರಿಕೆಯಲ್ಲಿ ದಾಲ್ಚಿನ್ನಿ ಬಳಸುತ್ತಾರೆ.
ತೂಕ ನಷ್ಟಕ್ಕೆ ದಾಲ್ಚಿನ್ನಿ ಚಹಾ
ತೂಕ ನಷ್ಟಕ್ಕೆ ದಾಲ್ಚಿನ್ನಿ ಚಹಾ ಸೇವಿಸಿ. ಇದು ದೇಹದ ನರಗಳಿಗೆ ರಿಲೀಫ್ ನೀಡುತ್ತದೆ. ನೀರಿಗೆ ದಾಲ್ಚಿನ್ನಿ ತುಂಡು ಅಥವಾ ಪುಡಿ ಹಾಕಿ ಚೆನ್ನಾಗಿ ಕುದಿಸಿ, ನಂತರ ಅದಕ್ಕೆ ಚಹಾ ಎಲೆ ಹಾಕಿ ಒಂದು ಕುದಿಯ ನಂತರ ಗ್ಲಾಸ್ ಗೆ ಫಿಲ್ಟರ್ ಮಾಡಿ. ಇದಕ್ಕೆ ರುಚಿಗೆ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಕುಡಿಯಿರಿ. ನಿಯಮಿತವಾಗಿ ದಾಲ್ಚಿನ್ನಿ ಚಹಾ ಸೇವಿಸಿದರೆ ದೇಹದ ಕೊಬ್ಬನ್ನು ಕರಗಿಸಲು ಸಹಕಾರಿ.
ತೂಕ ನಷ್ಟಕ್ಕೆ ದಾಲ್ಚಿನ್ನಿ ಮತ್ತು ನೀರು
ತೂಕ ನಷ್ಟಕ್ಕಾಗಿ ನೀವು ಒಂದು ಲೋಟ ನೀರಿಗೆ ದಾಲ್ಚಿನ್ನಿ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಈ ಪಾನೀಯವನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಬೇಗ ತೂಕ ಇಳಿಕೆಯಾಗುತ್ತದೆ. ಇದು ತುಂಬಾ ಸುಲಭ ಮತ್ತು ಸರಳ ಮತ್ತು ಪರಿಣಾಮಕಾರಿ ವಿಧಾನವಾಗಿದೆ.
ತೂಕ ಇಳಿಕೆಗೆ ನಿಂಬೆ, ಜೇನುತುಪ್ಪ ಮತ್ತು ದಾಲ್ಚಿನ್ನಿ ಚಹಾ
ತೂಕ ನಷ್ಟಕ್ಕೆ ನೀವು ನಿಂಬೆ ಹಣ್ಣು, ಜೇನುತುಪ್ಪ ಮತ್ತು ದಾಲ್ಚಿನ್ನಿಯಿಂದ ಚಹಾ ಮಾಡಿ ಕುಡಿಯಬಹುದು. ನೀರಿನಲ್ಲಿ ದಾಲ್ಚಿನ್ನಿ ತುಂಡನ್ನು ಕುದಿಸಿರಿ.
ಇದಕ್ಕೆ ನಿಂಬೆ ರಸ ಸೇರಿಸಿ. ದಾಲ್ಚಿನ್ನಿ ಕುದಿಸಿದ ನೀರು ಉಗುರು ಬೆಚ್ಚಗಾದ ನಂತರ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ಚಳಿಗಾಲದಲ್ಲಿ ಬೆಸ್ಟ್ ಪಾನೀಯವಾಗಿದೆ. ತೂಕ ನಷ್ಟದ ಜೊತೆಗೆ ವಿವಿಧ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ.
ತೂಕ ಇಳಿಕೆಗೆ ದಾಲ್ಚಿನ್ನಿ ಕಾಫಿ ಸೇವಿಸಿ
ಕಾಫಿಗೆ ದಾಲ್ಚಿನ್ನಿ ಪುಡಿ ಸೇರಿಸಿ ಕುಡಿದರೆ ಇದು ಆರೋಗ್ಯಕರ ಮತ್ತು ತೂಕ ನಷ್ಟಕ್ಕೂ ಸಹಕಾರಿ.
ಹಣ್ಣಿನ ರಸದಲ್ಲಿ ದಾಲ್ಚಿನ್ನಿ ಪುಡಿ ಸೇರಿಸಿ ಸೇವಿಸಿ
ತೂಕ ನಷ್ಟಕ್ಕೆ ದಾಲ್ಚಿನ್ನಿ ಪುಡಿಯನ್ನು ಹಣ್ಣು ಮತ್ತು ತರಕಾರಿ ಜ್ಯೂಸ್ ಗಳಿಗೆ ಸೇರಿಸಿ, ನಂತರ ಸೇವಿಸಿ. ಇದು ಜ್ಯೂಸ್ ಪರಿಮಳ ಮತ್ತು ರುಚಿ ಎರಡನ್ನೂ ಹೆಚ್ಚಿಸುತ್ತದೆ. ಹಾಗೂ ತೂಕವನ್ನು ಕಡಿಮೆ ಮಾಡುತ್ತದೆ.
ಸಲಾಡ್ ಗೆ ದಾಲ್ಚಿನ್ನಿ ಪುಡಿ ಸೇರಿಸಿ ಸೇವಿಸಿ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮೊಳಕೆ ಕಾಳು ಸಲಾಡ್ ನಲ್ಲಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಬಹುದು.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಇಲ್ಲಿದೆ ಕಷಾಯ ಪುಡಿ
ಕೊಲೆಸ್ಟ್ರಾಲ್ ಮತ್ತು ಬಿಪಿ ನಿಯಂತ್ರಣದಲ್ಲಿಡುತ್ತದೆ
ಸ್ಥೂಲಕಾಯ, ಬೊಜ್ಜು ಸಮಸ್ಯೆಯು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮೊಣಕಾಲು ನೋವು, ಉಸಿರಾಟದ ತೊಂದರೆ ಮತ್ತು ಆಯಾಸ ಉಂಟು ಮಾಡದಂತೆ. ವ್ಯಾಯಾಮ, ಯೋಗ ಹಾಗೂ ಆಹಾರ ಬದಲಾವಣೆ ಮಾಡಿ ತೂಕ ಇಳಿಸಿ. ಜೊತೆಗೆ ದಾಲ್ಚಿನ್ನಿ ಉತ್ತಮ ಪರಿಹಾರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ