HOME » NEWS » Lifestyle » WEIGHT LOSS TIPS HOW TO NOT GETTING FAT WHILE DOING WORK FROM HOME DURING CORONAVIRUS PANDEMIC STG SCT

Weight Loss Tips: ನೀವು ವರ್ಕ್ ಫ್ರಂ ಮಾಡ್ತಿದ್ದೀರಾ?; ತೂಕ ಹೆಚ್ಚಾಗದಂತೆ ತಡೆಯಲು ಇಲ್ಲಿವೆ ಟಿಪ್ಸ್

Health Tips: ಲಾಕ್‍ಡೌನ್ ಭೀತಿಗೆ ಹೆದರಿ ಸಾಕಷ್ಟು ಕಂಪೆನಿಗಳು ವರ್ಕ್ ಫ್ರಂ ಹೋಮ್ ನೀಡಿದ್ದಾರೆ. ಸಾಕಷ್ಟು ಜನರು ಮನೆಯಲ್ಲೇ ಇದ್ದಾರೆ. ಈ ಸಮಯದಲ್ಲಾದರೂ ಪ್ರೋಟೀನ್‍ಭರಿತ ಆಹಾರಕ್ಕೆ ಆದ್ಯತೆ ನೀಡಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.

news18-kannada
Updated:April 23, 2021, 11:28 AM IST
Weight Loss Tips: ನೀವು ವರ್ಕ್ ಫ್ರಂ ಮಾಡ್ತಿದ್ದೀರಾ?; ತೂಕ ಹೆಚ್ಚಾಗದಂತೆ ತಡೆಯಲು ಇಲ್ಲಿವೆ ಟಿಪ್ಸ್
ಸಾಂದರ್ಭಿಕ ಚಿತ್ರ
  • Share this:
ಕಳೆದ ವರ್ಷ ಕೋವಿಡ್ ಬಂತು. ನಾಲ್ಕೈದು ತಿಂಗಳು ಜನರು ಮನೆ ಸೇರಿದರು. ಮನೆಯಲ್ಲೇ ಕುಳಿತು ಕೆಲಸ ಮಾಡಿದರು. ವರ್ಕೌಟ್ ಇಲ್ಲ, ಬರೀ ಕೆಲಸ ಕೆಲಸ. ಹೀಗೆ ಬೇಕಾಬಿಟ್ಟಿ ತಿಂದು ಕೆಲವರು ನಾಲ್ಕೈದು ಕೆಜಿ ಜಾಸ್ತಿ ಆದರೆ, ಇನ್ನು ಕೆಲವರದ್ದು 10 ಕೆಜಿ ಏರಿಕೆ. ಲಾಕ್‍ಡೌನ್ ಮುಗಿದ್ಮೇಲೆ ಜಿಮ್‍ಗೆ ಸೇರಿದರೂ ಏನು ಪ್ರಯೋಜನವಾಗ್ತಿಲ್ಲ. ಜನರು ಹೆಚ್ಚಾಗಿ ಪೌಷ್ಠಿಕಭರಿತ ಆಹಾರ ತಿನ್ನೋದು ಬಿಟ್ಟು, ಬೋಂಡಾ, ಪಾನಿಪೂರಿ, ನೂಡಲ್ಸ್ ಹೀಗೆ ಜಂಕ್‍ಫುಡ್ ತಿಂದಿದ್ದೋ ತಿಂದಿದ್ದು. ಆದರೆ ಈ ಬಾರಿಯೂ ಕೊರೋನಾ ಹೆಚ್ಚಾಗಿದ್ದು ಲಾಕ್‍ಡೌನ್ ಭೀತಿಗೆ ಹೆದರಿ ಸಾಕಷ್ಟು ಕಂಪೆನಿಗಳು ವರ್ಕ್ ಫ್ರಂ ಹೋಮ್ ನೀಡಿದ್ದಾರೆ. ಸಾಕಷ್ಟು ಜನರು ಮನೆಯಲ್ಲೇ ಇದ್ದಾರೆ. ಈ ಸಮಯದಲ್ಲಾದರೂ ಪ್ರೋಟೀನ್‍ಭರಿತ ಆಹಾರಕ್ಕೆ ಆದ್ಯತೆ ನೀಡಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ಇಲ್ಲಿವೆ ಯಾವ ರೀತಿ ಆಹಾರ ಒಳ್ಳೆಯದು, ಯಾವ ರೀತಿ ಆಹಾರ ಸೇವಿಸಿದರೆ ಫಿಟ್ ಆಂಡ್ ಫೈನ್ ಆಗಿರಬಹುದು, ನಮ್ಮಲ್ಲಿ ಹೇಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬ ಮಾಹಿತಿ.

ಕ್ಯಾಲೋರಿಗಳ ಮೇಲೆ ಗಮನವಿರಲಿ:

ವರ್ಕ್ ಫ್ರಂ ಹೋಂ ಎಂಬ ಆಯ್ಕೆ ಬಂದ ಮೇಲೆ ಸಾಕಷ್ಟು ಮಂದಿ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾರೆ. ಆಗ ಕ್ಯಾಲೋರಿ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ತಿನ್ನುವ ಆಹಾರದ ಮೇಲೆ ನಿಗಾ ಇರಿಸಬೇಕು. ಈ ವೇಳೆ ಚಾಕಲೇಟ್, ಚಿಪ್ಸ್, ಐಸ್‍ಕ್ರೀಂ ತಿನ್ನುವುದರ ಬದಲು ಹಣ್ಣು, ಡ್ರೈಫ್ರೂಟ್ಸ್, ತಿನ್ನಬಹುದು. ಸಕ್ಕರೆ ಭರಿತ ಆಹಾರ ತ್ಯಜಿಸಿ, ಮೊಳಕೆ ಕಾಳು, ಕಾರ್ನ್ ಚಾಟ್ ಇವುಗಳನ್ನು ತಿಂದರೆ ಒಳ್ಳೆಯದು.

ಪ್ರೋಟೀನ್ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ಇರಲಿ:
ಮನೆಯಲ್ಲೇ ಇರುವುದರಿಂದ ಸ್ವಲ್ಪಮಟ್ಟಿಗಾದರೂ ಡಯೆಟ್ ಮಾಡಲೇಬೇಕಾಗುತ್ತದೆ. ಆಗ ನಿಮ್ಮ ಡಯೆಟ್ ಆಹಾರದಲ್ಲಿ ಪ್ರೋಟೀನ್‍ಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮನ್ನು ಹೆಚ್ಚು ಗಂಟೆಗಳ ಕಾಲ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ನೆರವಾಗುತ್ತದೆ.

ನಾರು ಪದಾರ್ಥಗಳಿರಲಿ:
ನಮ್ಮ ಆಹಾರದಲ್ಲಿ ನಾರು ಪದಾರ್ಥಗಳು ಇರಲೇ ಬೇಕು. ಏಕೆಂದರೆ ಇವು ನಮ್ಮ ಜೀರ್ಣಕ್ರಿಯೆಗೆ ಹೆಚ್ಚಿನ ಅವಶ್ಯಕವಾಗುತ್ತದೆ. ಆದ್ದರಿಂದ ತರಕಾರಿಗಳಾದ ಕ್ಯಾರೇಟ್, ಬೀನ್ಸ್, ಹೂಕೋಸು, ಕಾಳುಗಳು ನಿಮ್ಮ ಡಯೆಟ್ ಪಟ್ಟಿಯಲ್ಲಿರಲಿ.ತರಕಾರಿಗಳು ಮುಖ್ಯ:
ಹಸಿರು ತರಕಾರಿಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ತೂಕ ಇಳಿಸುವವರಿಗೆ ತರಕಾರಿಯೇ ಉತ್ತಮ ಸ್ನೇಹಿತ. ಇದು ನಮ್ಮ ದೇಹವನ್ನು ಸದೃಢವನ್ನಾಗಿ ಮಾಡುತ್ತದೆ.

ಹೆಚ್ಚು ಹೆಚ್ಚು ನೀರು ಕುಡಿಯಿರಿ:
ಯಾವ ವ್ಯಕ್ತಿಗೆ ಹೆಚ್ಚು ನೀರು ಕುಡಿಯುವ ಅಭ್ಯಾಸವಿರುತ್ತದೆಯೋ ಆ ವ್ಯಕ್ತಿ ಹೆಚ್ಚು ಆರೋಗ್ಯಯುತವಾಗಿರುತ್ತಾನೆ. ಪ್ರತಿದಿನ ನಮ್ಮ ದೇಹಕ್ಕೆ 3 ರಿಂದ 4 ಲೀ ನೀರು ಸೇರಲೇಬೇಕು ಎಂಬುದು ವೈದ್ಯರ ಸಲಹೆ. ಕನಿಷ್ಟ 2 ಲೋಟ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೂಕ ಇಳಿಸಿಕೊಳ್ಳಬಹುದು. ಕೋಕಾಕೋಲಾ, ಪೆಪ್ಸಿ ಈ ರೀತಿ ಹೆಚ್ಚು ಕ್ಯಾಲೋರಿ ಇರುವ ತಂಪು ಪಾನೀಯಗಳನ್ನು ಕುಡಿಯುವುದರ ಬದಲು ನೀರು ಕುಡಿಯುವ ಅಭ್ಯಾಸ ಉತ್ತಮ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಈ ಮೇಲೆ ಹೇಳಿದ ಸಲಹೆಗಳು ನೈಸರ್ಗಿಕ ಹಾಗೂ ಹೆಚ್ಚು ಉಪಯೋಗವಾಗುವಂತಹವುಗಳು. ಇವನ್ನು ಮನೆಯಲ್ಲೇ ಇರುವವರು ತಿಂಡಿ, ಊಟ, ರಾತ್ರಿ ಊಟ ವೇಳೆ ಈ ಮೆನು ಫಾಲೋ ಮಾಡಿದರೆ ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದು.
Published by: Sushma Chakre
First published: April 23, 2021, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories