• Home
  • »
  • News
  • »
  • lifestyle
  • »
  • Thyroid problem: ಥೈರಾಯ್ಡ್ ಸಮಸ್ಯೆ ಇರುವವರು ತೂಕ ಇಳಿಸಲು ಇವುಗಳನ್ನು ಅನುಸರಿಸಬೇಕು..

Thyroid problem: ಥೈರಾಯ್ಡ್ ಸಮಸ್ಯೆ ಇರುವವರು ತೂಕ ಇಳಿಸಲು ಇವುಗಳನ್ನು ಅನುಸರಿಸಬೇಕು..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಲ್ಲಿರುವ ಹಾರ್ಮೋನುಗಳ ಮಟ್ಟದಲ್ಲಿನ ಈ ತೊಂದರೆಯು ಇತರ ಅಂಗಗಳ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಇದರ ಪರಿಣಾಮವಾಗಿ ನಮ್ಮಲ್ಲಿ ಆಯಾಸ, ಶೀತ, ಮಲಬದ್ಧತೆ, ಒಣ ಚರ್ಮ, ತೂಕ ಹೆಚ್ಚಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

  • Share this:

    ಈಗಂತೂ  ಥೈರಾಯ್ಡ್ (Thyroid) ಮತ್ತು ಹೈಪೋಥೈರಾಯ್ಡಿಸಮ್ ನಿಂದ (Hypothyroidism) ಬಳಲುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಇತ್ತೀಚೆಗೆ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ( National Center for Biotechnology) ಒದಗಿಸಿದ ಮಾಹಿತಿಯ ಪ್ರಕಾರ ಹೈಪೋಥೈರಾಯ್ಡಿಸಮ್ ಸಾಮಾನ್ಯ ಜನಸಂಖ್ಯೆಯ ಶೇಕಡಾ 5 ಪ್ರತಿಶತದಷ್ಟು ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ. ಶೇಕಡಾ 5 ಪ್ರತಿಶತದಷ್ಟು ಜನರಲ್ಲಿ ಈ ಹೈಪೋಥೈರಾಯ್ಡಿಸಮ್ ರೋಗವಿದೆ ಎಂಬುದನ್ನು ಪತ್ತೆ ಹಚ್ಚುವುದು ತುಂಬಾ ಕಠಿಣ ಸಹ ಆಗಿದೆ ಎಂದು ಅಂದಾಜಿಸಲಾಗಿದೆ. ಥೈರಾಯ್ಡ್ ಗ್ರಂಥಿಯು ( Thyroid Gland) ವ್ಯಕ್ತಿಯ ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸದ ಸ್ಥಿತಿಯನ್ನು ಹೈಪೋಥೈರಾಯ್ಡಿಸಮ್ ಅಸ್ವಸ್ಥತೆ ಎಂದು ಹೇಳಲಾಗುತ್ತದೆ.


    ತೂಕ ಹೆಚ್ಚಳವು ಸಾಮಾನ್ಯ


    ದೇಹದಲ್ಲಿರುವ ಹಾರ್ಮೋನುಗಳ ಮಟ್ಟದಲ್ಲಿನ ಈ ತೊಂದರೆಯು ಇತರ ಅಂಗಗಳ ಕಾರ್ಯ ನಿರ್ವಹಣೆಗೆ ಅಡ್ಡಿ ಪಡಿಸುತ್ತದೆ. ಇದರ ಪರಿಣಾಮವಾಗಿ ನಮಗೆ ಆಯಾಸ, ಶೀತ, ಮಲಬದ್ಧತೆ, ಒಣ ಚರ್ಮ, ತೂಕ ಹೆಚ್ಚಳ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತವೆ. ಕಡಿಮೆ ಥೈರಾಯ್ಡ್ ಕಾರ್ಯದ ಈ ಕಾಯಿಲೆಯೊಂದಿಗೆ ತೂಕ ಹೆಚ್ಚಳವು ಸಾಮಾನ್ಯವಾಗಿದೆ. ಒಂದು ಕೆಲಸವನ್ನು ಬೇರೆ ಫಲಿತಾಂಶ ಬರುವುದು ಎಂದು ಮತ್ತೆ ಮತ್ತೆ ಮಾಡುವುದನ್ನು ನೀವು ಕೇಳಿರಬಹುದು. ಈ ಉಲ್ಲೇಖವನ್ನು ಐನ್‌ಸ್ಟೈನ್ ಅವರ ಜೀವನಕ್ಕೆ ತುಂಬಾ ಹತ್ತಿರವಾದ ಮಾತು ಎಂದು ಹೇಳಲಾಗುತ್ತದೆ. ನೀವು ಹೈಪೋಥೈರಾಯ್ಡಿಸಮ್ ಹೊಂದಿರುವಾಗ ಸಹ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪದೇ ಪದೇ ಪ್ರಯತ್ನಿಸುತ್ತೀರಿ, ಆದರೆ ಅದ್ಯಾವುದು ಉತ್ತಮವಾದ ಫಲಿತಾಂಶ ನೀಡುವುದಿಲ್ಲ.


    ಇದನ್ನೂ ಓದಿ: Weight Loss: ಡಯೆಟ್, ವರ್ಕೌಟ್ ಮಾಡಿ ಸಾಕಾಯ್ತಾ, ಈ ಪಾನೀಯಗಳನ್ನು ಒಮ್ಮೆ ಟ್ರೈ ಮಾಡಿ, ಸುಲಭವಾಗಿ ತೂಕ ಇಳಿಸಿ


    ನೀವು ಹೀಗೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ನೀವೊಬ್ಬರೆ ಇರುವುದಿಲ್ಲ, ಬಹಳಷ್ಟು ಜನರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವವರು ಇದನ್ನೇ ಪ್ರಯತ್ನಿಸುತ್ತಾರೆ. ಅಂತರ್ಜಾಲದಲ್ಲಿರುವ ಎಲ್ಲಾ ಮಾರ್ಗಗಳು ನಿಮಗೆ ಸಹಾಯಕವಾಗುವುದಿಲ್ಲ. ಆದ್ದರಿಂದ ನೀವು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿದ್ದರೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನುಸರಿಸುವ ಕೆಲವು ಸಲಹೆಗಳು ಇಲ್ಲಿ ಕೆಲಸ ಮಾಡುವುದಿಲ್ಲ.


    1. ಕಾರ್ಬ್ಸ್ ಸೇವಿಸುವುದನ್ನು ತೀರಾ ಕಡಿಮೆ ಮಾಡಬೇಡಿ


    ಕಡಿಮೆ ಕಾರ್ಬ್ಸ್ ಇರುವ ಆಹಾರವು ಆ ಹೆಚ್ಚುವರಿ ಕಿಲೋಗಳನ್ನು ಇಳಿಸಲು ಅತ್ಯಂತ ಸಹಾಯಕವಾಗಿದೆ ಮತ್ತು ಅನೇಕ ಜನರು ತೂಕವನ್ನು ಕಳೆದುಕೊಳ್ಳಲು ಇದನ್ನು ಆಯ್ಕೆ ಮಾಡುತ್ತಾರೆ. ಕಾರ್ಬ್ಸ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸುವುದರಿಂದ ಹೈಪೋಥೈರಾಯ್ಡಿಸಮ್ ಹೊಂದಿರುವ ಜನರಿಗೆ ಅದು ಯಾವುದೇ ರೀತಿಯ ಸಹಾಯವಾಗುವುದಿಲ್ಲ. ಕಾರ್ಬ್ಸ್ ದೇಹದಲ್ಲಿ ಥೈರಾಯ್ಡ್ ಮಟ್ಟವನ್ನು ಸಮತೋಲನಗೊಳಿಸಲು ಅಗತ್ಯವಿರುವ ಅತ್ಯಗತ್ಯ ಮ್ಯಾಕ್ರೊನ್ಯೂಟ್ರಿಯೆಂಟ್ ಆಗಿರುವುದರಿಂದ ನಿಮ್ಮ ಆಹಾರಕ್ಕೆ ಹೆಚ್ಚು ಸಂಕೀರ್ಣವಾದ ಕಾರ್ಬ್ಸ್ ಮತ್ತು ನಾರಿನಂಶವನ್ನು ಸೇರಿಸಿಕೊಳ್ಳಿರಿ.


    2. ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸಬೇಡಿ


    ಯಾವ ವ್ಯಕ್ತಿಯು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿರುತ್ತಾರೋ ಅವರ ಜೀರ್ಣಕಾರಿ ಕಾರ್ಯ ನಿರ್ವಹಣೆಯ ವೇಗವು ನಿಧಾನವಾಗುತ್ತದೆ. ಆದ್ದರಿಂದ, ತಜ್ಞರು ತುಂಬಾ ಜಾಸ್ತಿ ಆಹಾರವನ್ನು ಒಂದೇ ಬಾರಿಗೆ ಸೇವಿಸುವ ಬದಲಿಗೆ ಸ್ವಲ್ಪ ಸ್ವಲ್ಪ ಆಹಾರವನ್ನು ಸ್ವಲ್ಪ ಸ್ವಲ್ಪ ಸಮಯದ ಅಂತರವನ್ನು ಕಾಯ್ದುಕೊಂಡು ಸೇವಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅದು ಸಮತೋಲಿತ ಮ್ಯಾಕ್ರೊ ನ್ಯೂಟ್ರಿಯೆಂಟ್ ಗಳನ್ನು ಹೊಂದಿರಬೇಕು ಮತ್ತು ಎಲ್ಲವೂ ಒಂದೇ ಬಾರಿಗೆ ಸೇವಿಸುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.


    ಇದನ್ನೂ ಓದಿ: ರಕ್ತದೊತ್ತಡ ನಿಯಂತ್ರಿಸುವುದರಿಂದ ಹಿಡಿದು ತೂಕ ಇಳಿಸುವುದರವರೆಗೆ Walnuts ಪ್ರಯೋಜನಗಳಿವು


    3. ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದನ್ನು ಬಿಡಬೇಕು


    ಯಾವುದೇ ತೂಕ ಇಳಿಸುವ ಆಹಾರ ಯೋಜನೆಯು ಕ್ಯಾಲೋರಿಗಳನ್ನು ಕಡಿತ ಗೊಳಿಸಲು ಒತ್ತಾಯಿಸುತ್ತದೆ, ಆದರೆ ನಿಧಾನಗತಿಯ ಚಯಾಪಚಯ ಕ್ರಿಯೆಯಿಂದ ಅಂತಹ ರೋಗಿಗಳಿಗೆ ಈಗಾಗಲೇ ಕಡಿಮೆ ಕ್ಯಾಲೋರಿಗಳು ಬೇಕಾಗುತ್ತವೆ, ಆದ್ದರಿಂದ ಕ್ಯಾಲೋರಿಗಳನ್ನು ಮತ್ತಷ್ಟು ಕಡಿತ ಗೊಳಿಸುವುದು ಸೂಕ್ತವಲ್ಲ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು