Weight Loss Tips: ಕಾರ್ಬ್ ತಿನ್ನದೇ ಬರೀ ಹರ್ಬಲ್ ಟೀ ಕುಡಿದರೆ ಸಣ್ಣಗಾಗ್ತಾರಾ? ತಜ್ಞರು ಹೀಗೆನ್ನುತ್ತಾರೆ...

ಪೌಷ್ಟಿಕಾಂಶ ತಜ್ಞೆ ಪೂಜಾ ಬಂಗಾ, ತೂಕ ಇಳಿಸುವುದಕ್ಕೆ ಸಂಬಂಧಿಸಿದ 4 ಜನಪ್ರಿಯ ವಿಧಾನಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಅವರ ಪ್ರಕಾರ, ಈ ವಿಧಾನಗಳು ಜನಪ್ರಿಯವಾಗಿದ್ದರೂ ಸರಿಯಾದ ವಿಧಾನಗಳಲ್ಲ.

ಹರ್ಬಲ್ ಟೀ

ಹರ್ಬಲ್ ಟೀ

  • Share this:
ಯಾರಿಗೂ ಬೊಜ್ಜುಳ್ಳ(Fat) ದೇಹ(Body) ಇಷ್ಟವಿರುವುದಿಲ್ಲ. ಪ್ರತಿಯೊಬ್ಬರಿಗೂ ತೂಕ ಇಳಿಸಿಕೊಳ್ಳುವ ಆಸೆ, ಇನ್ನೂ ಕೆಲವರಿಗೆ ಅವಸರ. ಹಾಗಾಗಿ ಯಾವುದೇ ಕಷ್ಟ ಪಡದೆ ಸುಲಭ ಉಪಾಯಗಳ ಮೂಲಕ ತೂಕ ಇಳಿಸ ಬಯಸುವವರು ಕೆಲವರಾದರೆ, ಇನ್ನು ಕೆಲವರು ಕಠಿಣ ವ್ಯಾಯಾಮ(Strict Work out) ಮತ್ತು ಆಹಾರ ಕ್ರಮದ ಮೂಲಕ ತೂಕ ಇಳಿಸಿಕೊಳ್ಳಲು ಇಚ್ಚಿಸುತ್ತಾರೆ. ಎಷ್ಟೋ ಮಂದಿ ಅದಕ್ಕಾಗಿ, ತಪ್ಪು ವಿಧಾನಗಳನ್ನು ಅನುಸರಿಸುವುದುಂಟು. ತೂಕ ಇಳಿಸುವುದು(Lose Weight) ಸುಲಭದ ವಿಷಯವಲ್ಲ. ಅದಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಶಿಸ್ತು ಮತ್ತು ದೃಢ ನಿರ್ಧಾರ, ಜೊತೆಗೆ ಜೀವನ ಶೈಲಿ(Life Style)ಯಲ್ಲಿ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ತೂಕ ಇಳಿಸುವ ಗುರಿ ತಲುಪಲು ಸಾಧ್ಯವಾಗುತ್ತದೆ. ಅಂತರ್ಜಾಲ(Internet)ದಲ್ಲಿ, ತೂಕ ಇಳಿಸುವ ಕುರಿತು ಅನೇಕ ಸಲಹೆ(Suggestions)ಗಳು ಮತ್ತು ಉಪಾಯಗಳಿವೆ, ಹಾಗೆಯೇ ಅನೇಕ ತಪ್ಪು ಕಲ್ಪನೆಗಳಿಗೂ ಅವು ಕಾರಣವಾಗಿವೆ. ಪೌಷ್ಟಿಕಾಂಶ ತಜ್ಞೆ ಪೂಜಾ ಬಂಗಾ, ತೂಕ ಇಳಿಸುವುದಕ್ಕೆ ಸಂಬಂಧಿಸಿದ 4 ಜನಪ್ರಿಯ ವಿಧಾನಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಅವರ ಪ್ರಕಾರ, ಈ ವಿಧಾನಗಳು ಜನಪ್ರಿಯವಾಗಿದ್ದರೂ ಸರಿಯಾದ ವಿಧಾನಗಳಲ್ಲ.

“ಜನರು ತೂಕ ಇಳಿಸಲು, ಹಲವಾರು ವಿಧಾನಗಳನ್ನು, ಅವುಗಳ ಹಿಂದಿರುವ ಲಾಜಿಕನ್ನು ತಿಳಿದುಕೊಳ್ಳದೆ ಅನುಸರಿಸುತ್ತಿರುವುದನ್ನು ನಾನು ನೋಡಿದ್ದೇನೆ. ಈ ವಿಡಿಯೋದಲ್ಲಿ ನಾನು ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ” ಎಂದು ಇನ್‍ಸ್ಟಾಗ್ರಾಂನಲ್ಲಿ ಪೂಜಾ ಬಂಗಾ ಬರೆದುಕೊಂಡಿದ್ದಾರೆ.

ಹರ್ಬಲ್ ಚಹಾ ಸೇವನೆ

“ಇಲ್ಲ, ಅವು ಕೆಲಸ ಮಾಡುವುದಿಲ್ಲ ಮತ್ತು ಬೊಜ್ಜು ಕರಗಿಸುವ ಆಹಾರವೆಂದು ಪ್ರತಿಪಾದಿಸುವ ಯಾವುದೇ ಇತರ ಆಹಾರಗಳು ಕೂಡ ಮಾಡುವುದಿಲ್ಲ. ಒಂದು ವಿಷಯ ಅರ್ಥ ಮಾಡಿಕೊಳ್ಳಿ – ಯಾವುದೇ ಒಂದು ಆಹಾರವು ನಿಮ್ಮ ತೂಕ ಇಳಿಸುವುದಿಲ್ಲ ಅಥವಾ ಹೆಚ್ಚಿಸುವುದಿಲ್ಲ. ನಿಮ್ಮ ತೂಕ ಇಳಿಸುವ ಯಾವುದೇ ಮ್ಯಾಜಿಕಲ್ ಆಹಾರ ಅಥವಾ ಪಾನೀಯ ಇಲ್ಲ” ಎಂದು ಆಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Signs of Money Coming: ಇವತ್ತು ನಿಮಗೆ ದುಡ್ಡು ಸಿಗುತ್ತೆ ಅಂತ ಮುಂಚೆಯೇ ಗೊತ್ತಾಗಬಹುದು! ಹೇಗೆ ಅಂತೀರಾ..ಇದನ್ನೊಮ್ಮೆ ಓದಿ

ಕಾರ್ಬ್‍ಗಳನ್ನು ನಿರ್ಲಕ್ಷಿಸುವುದು

ಕಾರ್ಬೊಹೈಡ್ರೇಟ್‌, ಪ್ರೊಟೀನ್, ಕೊಬ್ಬು, ವಿಟಮಿನ್‍ ಮತ್ತು ಮಿನರಲ್‍ಗಳನ್ನು , ಫೈಬರ್ ಹಾಗೂ ನೀರನ್ನು ಒಳಗೊಂಡಿರುವ ಸಮತೋಲಿತ ಆಹಾರ ಸೇವಿಸುವುದು ಬಹಳ ಅಗತ್ಯ. ಕಾರ್ಬೋಹೈಡ್ರೆಟ್‍ಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ನಿಮಗೆ ಸುಸ್ತಾಗುತ್ತದೆ, ಊಟದಲ್ಲಿ ಶೇಕಡಾ 40ರಷ್ಟು ಕಾರ್ಬೊಹೈಡ್ರೇಟ್‌ಗಳು ಇರಲೇಬೇಕು. ಎಲ್ಲವನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ತೂಕ ಇಳಿಕೆ ಸಾಧ್ಯ.

ಕೇವಲ ಹಣ್ಣನ್ನು ತಿನ್ನುವುದು

ಹಣ್ಣುಗಳು ಅತ್ಯಂತ ಆರೋಗ್ಯಕರ ಆಹಾರವಾಗಿದ್ದರೂ, ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುವುದಿಲ್ಲ. ಅವುಗಳಲ್ಲಿ, ದೇಹಕ್ಕೆ ಅಗತ್ಯ ಇರುವ, ಪ್ರೋಟೀನ್‌ ಮತ್ತು ಕೊಬ್ಬುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಕೇವಲ ಹಣ್ಣುಗಳನ್ನು ತಿನ್ನುವುದರಿಂದಷ್ಟೇ ತೂಕ ಇಳಿಸುವುದು ಸಾಧ್ಯವಾಗದು.

ಇದನ್ನೂ ಓದಿ: Coffee: ಕಾಫಿ ಸೇವಿಸಿದರೆ ಸಂಧಿವಾತ ಗುಣಮುಖವಾಗುತ್ತಾ? ಈ ವಿಚಾರ ನಿಮಗೂ ಗೊತ್ತಿರ್ಲಿ

ಗಂಟೆಗಟ್ಟಲೆ ಕಾರ್ಡಿಯೋ ಮಾಡುವುದು

“ನಾವು ಗಂಟೆಗಟ್ಟಲೆ ಕಾರ್ಡಿಯೋ ಮಾಡಿದರೆ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬಹುದು ಮತ್ತು ಹೆಚ್ಚು ತೂಕ ಇಳಿಸಬಹುದು ಎಂದು ಭಾವಿಸುತ್ತೇವೆ; ಆದರೆ ಅದು ಈ ರೀತಿಯಲ್ಲಿ ಸಾಧ್ಯವಿಲ್ಲ. ಹೆಚ್ಚುವರಿ ಕಾರ್ಡಿಯೋ ಮಾಡುವುದರಿಂದ ದೇಹ ಒತ್ತಡದ ಪ್ರತಿಕ್ರಿಯೆ ನೀಡುತ್ತದೆ, ಅದಕ್ಕೆ ನಮ್ಮ ದೇಹ ಚಯಾಪಚಯ ಕಡಿಮೆ ಮಾಡುವ ಮೂಲಕ ಪ್ರತಿಕ್ರಿಯೆ ನೀಡುತ್ತದೆ” ಎನ್ನುತ್ತಾರೆ ಅವರು.
Published by:Latha CG
First published: