Weight Loss: ಸಣ್ಣಗಾಗಬೇಕಾ? ಬಾಯಿಂದ ಉಸಿರಾಡೋದನ್ನ ಮೊದಲು ನಿಲ್ಲಿಸಿ, ಮೂಗಿನಿಂದ ಉಸಿರಾಡಿದ್ರೆ ಕೊಬ್ಬು ಬೇಗ ಕರಗುತ್ತೆ!

Nasal Breathing Helps Weight Loss: ಮೂಗಿನಿಂದ ಸ್ವಾಭಾವಿಕವಾಗಿ ಉಸಿರಾಡುವ ನಾವು ಬಾಯಿಯ ಸಹಾಯ ಬಳಸುವುದು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ. ಮೂಗು ನಮ್ಮ ಶ್ವಾಸಕೋಶವನ್ನು ಸೋಂಕಿನಿಂದ ತಡೆಯುತ್ತದೆ. ಅದೇ ರೀತಿ ಬಾಯಿಯ ಸಹಾಯದಿಂದ ಉಸಿರಾಡುವುದರಿಂದ ನಾವು ಅನಾರೋಗ್ಯಕ್ಕೆ ಶೀಘ್ರವೇ ತುತ್ತಾಗುತ್ತೇವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ತೂಕ ಇಳಿಕೆಗೆ ಉಸಿರಾಟದ ಕ್ರಮ ಮುಖ್ಯ

ತೂಕ ಇಳಿಕೆಗೆ ಉಸಿರಾಟದ ಕ್ರಮ ಮುಖ್ಯ

  • Share this:
Breathing Technique for Weight Loss: ಉಸಿರಾಟ ಕ್ರಿಯೆ ದೇಹದ ತೂಕ ಇಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಹೇಗೆ ಉಸಿರಾಡುತ್ತೇವೆ ಎನ್ನುವುದರ ಮೇಲೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಪೋಷಕಾಂಶ ತಜ್ಞರ (Nutrition Experts) ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ಮೂಗಿನ ಮೂಲಕ ಉಸಿರಾಟ ನಡೆಸುವ ನಾವೆಲ್ಲರೂ ಶೀತ (Cold) ಸಮಯದಲ್ಲಿ ಮೂಗು ಕಟ್ಟಿರುವಾಗ ಮಾತ್ರ ಬಾಯಿಯ ಸಹಾಯದಿಂದ ಉಸಿರಾಟ ಮಾಡುತ್ತೇವೆ. ಇನ್ನು ಕೆಲವರು ನಿದ್ದೆಯ ಸಮಯದಲ್ಲಿ ಬಾಯಿಯ ಮೂಲಕ ಉಸಿರಾಡುವುದೂ ಇದೆ. ಆದರೆ ಅವರು ಈ ಚಟುವಟಿಕೆಯನ್ನು ತಿಳಿಯದೇ ಮಾಡುತ್ತಿದ್ದರೂ ಉಸಿರಾಟ ಸಮಸ್ಯೆ, ಅಸ್ತಮಾ, ಅಲರ್ಜಿ (Asthma, Allergy) ಉಂಟಾಗುವುದು, ದಂತಕ್ಷಯಗಳಿಗೆ ಒಳಗಾಗುವ ಸಂಭವವಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಮೂಗಿನಿಂದ ಸ್ವಾಭಾವಿಕವಾಗಿ ಉಸಿರಾಡುವ ನಾವು ಬಾಯಿಯ ಸಹಾಯ ಬಳಸುವುದು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ. ಮೂಗು ನಮ್ಮ ಶ್ವಾಸಕೋಶವನ್ನು ಸೋಂಕಿನಿಂದ ತಡೆಯುತ್ತದೆ. ಅದೇ ರೀತಿ ಬಾಯಿಯ ಸಹಾಯದಿಂದ ಉಸಿರಾಡುವುದರಿಂದ ನಾವು ಅನಾರೋಗ್ಯಕ್ಕೆ ಶೀಘ್ರವೇ ತುತ್ತಾಗುತ್ತೇವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮೂಗು ಹಾಗೂ ಬಾಯಿಯ ಉಸಿರಾಟಕ್ಕಿರುವ ವ್ಯತ್ಯಾಸಗಳೇನು?

ಪೌಷ್ಟಿಕಾಂಶ ತಜ್ಞರಾಗಿರುವ ಪೂಜಾ ಮಖೀಜಾ ಹೇಳುವಂತೆ ನಮ್ಮ ಸ್ವನಿಯಂತ್ರಿತ ನರಮಂಡಲದ ವ್ಯವಸ್ಥೆ 2 ಮುಖ್ಯ ಶಾಖೆಗಳನ್ನು ಹೊಂದಿದ್ದು ಇದನ್ನು ಸಿಂಪಥೆಟಿಕ್ ಹಾಗೂ ಪ್ಯಾರಾಸಿಂಪಥೆಟಿಕ್ ಎಂದು ವರ್ಗೀಕರಿಸಲಾಗಿದೆ. ಸಿಂಪಥೆಟಿಕ್ ಶಾಖೆಯು ಹೋರಾಡು ಅಥವಾ ಶರಣಾಗು ಸಿದ್ಧಾಂತಕ್ಕೆ ಒಳಪಟ್ಟಿದ್ದರೆ ಪ್ಯಾರಾಸಿಂಪಥೆಟಿಕ್ ಶಾಖೆಯು ವಿಶ್ರಾಂತಿ ಹಾಗೂ ಜೀರ್ಣಕ್ರಿಯೆ, ಒಲವು ಹಾಗೂ ಸ್ನೇಹ ಪ್ರತಿಕ್ರಿಯೆಗೆ ಕಾರಣವಾಗಿದೆ ಎಂದು ತಿಳಿಸುತ್ತಾರೆ.

ಇದನ್ನೂ ಓದಿ: Green Chilli: ಖಾರ ಅಂತ ಅಳ್ಬೇಡಿ, ಹಸಿಮೆಣಸಿನಕಾಯಿ ತಿಂದ್ರೆ ಬೇಗ ಸಣ್ಣಗಾಗ್ತಾರಂತೆ!

ಹಾಗಾದರೆ ಬಾಯಿಯಿಂದ ಉಸಿರಾಟ ನಡೆಸಿದಾಗ ಏನಾಗುತ್ತದೆ?

ಬಾಯಿಯಿಂದ ಮಾಡುವ ಉಸಿರಾಟದಿಂದ ದೇಹವು ಸಿಂಪಥೆಟಿಕ್ ಸ್ಥಿತಿಯನ್ನು ತಲುಪುತ್ತದೆ. ಆದರೆ ಮೂಗಿನ ಉಸಿರಾಟ ಪ್ಯಾರಾಸಿಂಪಥೆಟಿಕ್ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ದೀರ್ಘಕಾಲದ ಒತ್ತಡ ಹಾಗೂ ಉಸಿರಾಟ ಸಮಸ್ಯೆಯಿಂದ ದೇಹವು ಈ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರೆ ನೀವು ಮಾಡುವ ಎಲ್ಲಾ ಎಚ್‌ಐಐಟಿ (HIIT) ವರ್ಕೌಟ್‌ಗಳಿಂದ ಅಂಗಾಂಶವನ್ನು ಪುನರ್ ನಿರ್ಮಾಣ ಮಾಡುವುದಿಲ್ಲ ಎಂದು ಪೂಜಾ ತಿಳಿಸುತ್ತಾರೆ.

ತೂಕ ಇಳಿಕೆಗೆ ಯಾವ ಉಸಿರಾಟ ಕ್ರಮ ಸಹಕಾರಿ?

ನಿದ್ರಿಸುವ ಸಮಯದಲ್ಲಿ ಚೇತರಿಕೆಯ ಹೆಚ್ಚಿನ ಪ್ರಕ್ರಿಯೆ ಸಂಭವಿಸುವುದರಿಂದ ನರಮಂಡಲ ವ್ಯವಸ್ಥೆಯನ್ನು ವಿಶ್ರಾಂತಿ ಹಾಗೂ ಜೀರ್ಣಿಸಿಕೊಳ್ಳುವ ಸ್ಥಿತಿಗೆ ವರ್ಗಾಯಿಸುವಂತೆ ನಾವು ಉಸಿರಾಡಬೇಕಾಗುತ್ತದೆ. ಹಾಗಾಗಿ ಮೂಗಿನ ಮೂಲಕ ಉಸಿರಾಡುವುದರಿಂದ ತೂಕ ನಷ್ಟವುಂಟಾಗುತ್ತದೆ ಎಂದು ಪೂಜಾ ತಿಳಿಸಿದ್ದಾರೆ.

ಮೂಗಿನ ಉಸಿರಾಟಕ್ಕೆ ಸಹಕಾರಿಯಾಗಿರುವ ಆಹಾರಗಳು

ಮೂಗಿನ ಮೂಲಕ ಉಸಿರಾಟ ಸಮಸ್ಯೆಗೆ ತೊಂದರೆಯಾದಾಗ ಮಾತ್ರವೇ ನಾವು ಉಸಿರಾಡಲು ಬಾಯಿಯ ಸಹಾಯ ಪಡೆದುಕೊಳ್ಳುತ್ತೇವೆ. ಹೀಗಾಗಿ ಮೂಗಿನ ಉಸಿರಾಟಕ್ಕೆ ಸಹಕಾರಿಯಾಗಿರುವ ಕೆಲವೊಂದು ಆಹಾರ ಪದಾರ್ಥಗಳನ್ನು ಈ ನಿಟ್ಟಿನಲ್ಲಿ ನಾವು ಸೇವಿಸಬಹುದಾಗಿದೆ.

ಉತ್ತಮ ಗುಣಮಟ್ಟದ ಸಿ ವಿಟಮಿನ್ ಆಹಾರಗಳು, ಸೈನಸ್ ನಿರ್ಬಂಧಗಳನ್ನು ತಡೆಯುವ ಆಹಾರ ಪದಾರ್ಥಗಳು, ಸತು ಸಮೃದ್ಧವಾಗಿರುವ ಆಹಾರಗಳು ಮೂಗಿನ ಉಸಿರಾಟಕ್ಕೆ ಸಹಕಾರಿಯಾಗಿದೆ. ಇದರ ಜೊತೆಗೆ ನಿಮ್ಮ ಪೌಷ್ಟಿಕ ತಜ್ಞರ ಸಲಹೆಗಳನ್ನು ಪಾಲಿಸುವುದೂ ಅತ್ಯುತ್ತಮ ಸಲಹೆಯಾಗಿದೆ ಎಂದು ಪೂಜಾ ಮಖೀಜಾ ಸಲಹೆ ನೀಡುತ್ತಾರೆ.

ನಿಮ್ಮ ಎಲ್ಲಾ ಉಸಿರಾಟ ಸಮಸ್ಯೆಗಳನ್ನು ದೂರವಿರಿಸಲು ಹಾಗೂ ತೂಕ ಇಳಿಕೆಗೆ ಮೂಗಿನ ಮೂಲಕ ಉಸಿರಾಡುವುದೇ ಉತ್ತಮ ಎಂದು ಪೂಜಾ ಸಲಹೆ ನೀಡುತ್ತಾರೆ.

ತೂಕ ಇಳಿಸುವ ಕುರಿತು ಮತ್ತಷ್ಟು ಮಾಹಿರಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ಇಳಿಸಲು ಸಾಕಷ್ಟು ಮಾರ್ಗಗಳಿವೆ: Easy ways for Weight Loss
Published by:Soumya KN
First published: