Weight Loss ಆಗಲಿ ಅಂತ ಡಯೆಟ್‌  ಮಾಡುತ್ತಿದ್ದೀರಾ? ಹಾಗಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ!

ವೇಟ್​ ಲಾಸ್

ವೇಟ್​ ಲಾಸ್

ಆರೋಗ್ಯಕರ ಆಹಾರವನ್ನು ತಿನ್ನುವ ಜನರು ಕಡಿಮೆ ಕ್ಯಾಲೊರಿಗಳನ್ನು ತಿನ್ನುತ್ತಾರೆ. ಕಡಿಮೆ ಕ್ಯಾಲೊರಿಗಳನ್ನು ತಿನ್ನುವುದರ ಜೊತೆಗೆ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್‌ ಮಾಡುವುದರಿಂದ ತೂಕ ನಷ್ಟ ಆಗುತ್ತದೆ.

  • Share this:

ನಮ್ಮಲ್ಲಿ ಬಹಳಷ್ಟು ಜನರು ತೂಕ ನಷ್ಟಕ್ಕೆ (Weight Loss) ಪ್ರಯತ್ನಿಸುತ್ತಿರುತ್ತಾರೆ. ತೂಕ ನಷ್ಟಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆರೋಗ್ಯಕರ ಆಹಾರ. ಹೌದು, ಆರೋಗ್ಯಕರ ಡಯೆಟ್‌ (Diet) ಅನ್ನೋದು ತೂಕ ನಷ್ಟಕ್ಕೆ ಅತ್ಯಂತ ಅಗತ್ಯವಾಗಿದೆ. ಏಕೆಂದರೆ ಆರೋಗ್ಯಕರ ಆಹಾರವು ಹಲವಾರು ರೀತಿಯಲ್ಲಿ ತೂಕ ನಷ್ಟ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಡಯೆಟ್‌ ಕಡಿಮೆ ಕ್ಯಾಲೋರಿಗಳ (Calori) ಜೊತೆಗೆ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಪೌಷ್ಠಿಕಾಂಶವುಳ್ಳ ಡಯೆಟ್‌ ಆಗಿರುತ್ತದೆ. ಇದರರ್ಥ ಆರೋಗ್ಯಕರ ಆಹಾರವನ್ನು ತಿನ್ನುವ ಜನರು ಕಡಿಮೆ ಕ್ಯಾಲೊರಿಗಳನ್ನು ತಿನ್ನುತ್ತಾರೆ. ಕಡಿಮೆ ಕ್ಯಾಲೊರಿಗಳನ್ನು ತಿನ್ನುವುದರ ಜೊತೆಗೆ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್‌ (Burn) ಮಾಡುವುದರಿಂದ ತೂಕ ನಷ್ಟ ಆಗುತ್ತದೆ.


ಕಡಿಮೆ ಕ್ಯಾಲೋರಿ ಸೇವನೆಯ ಜೊತೆಗೆ ಹೆಲ್ತಿ ಡಯೆಟ್‌ ಅನ್ನೋದು ಹೆಚ್ಚುವರಿ ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಕೊಬ್ಬು ಹಾಗೂ ಸಕ್ಕರೆಯ ಸೇವನೆಯಿಂದ ತೂಕ ಹೆಚ್ಚಾಗುವುದರ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿ ಕೊಬ್ಬುಗಳು ಕೊಬ್ಬಿನ ಕೋಶಗಳಲ್ಲಿ ಸಂಗ್ರಹವಾಗುವುದರಿಂದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.


ಅನಾರೋಗ್ಯಕರ ಕೊಬ್ಬಿನ ಸೇವನೆಯು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗ, ಪಾರ್ಶ್ವವಾಯು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.


ಆರೋಗ್ಯಕರ ಆಹಾರ ಸೇವನೆಯು ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡಲು ಉತ್ತೇಜಿಸುತ್ತದೆ. ಹಾಗಾಗಿಯೇ ಇದು ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ತೂಕ ನಷ್ಟಕ್ಕೆ ಹೆಲ್ತಿ ಡಯೆಟ್‌ ಅನುಸರಿಸಲು ಪ್ರಯತ್ನಿಸುತ್ತಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ


1. ವೈವಿಧ್ಯಮಯ ಆಹಾರವನ್ನು ಸೇವಿಸಿ: ನಿಮ್ಮ ಡಯೆಟ್‌ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬು ಸೇರಿದಂತೆ ಎಲ್ಲ ಬಗೆಯ ಆಹಾರಗಳನ್ನು ಒಳಗೊಂಡಿರಬೇಕು.


2. ತಿನ್ನುವ  ಪ್ರಮಾಣ  ತಿಳಿದಿರಲಿ : ತೂಕ ನಷ್ಟವನ್ನು ಉತ್ತೇಜಿಸುವಲ್ಲಿ ಸೇವನೆಯ ಪ್ರಮಾಣ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಊಟ ಮತ್ತು ತಿಂಡಿಗಳಿಗೆ ಸೂಕ್ತವಾದ ಸೇವೆಯ ಪ್ರಮಾಣವನ್ನು ತಿಳಿದುಕೊಳ್ಳುವುದರಿಂದ ನೀವು ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು.


3. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ: ಸಕ್ಕರೆಯು ಕ್ಯಾಲೋರಿ ಸೇವನೆಯನ್ನು ಹೆಚ್ಚಿಸಬಹುದು. ಆದ್ದರಿಂದ ಸಿಹಿ ಪಾನೀಯಗಳು, ಸಿಹಿತಿಂಡಿಗಳು ಮತ್ತು ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಆಹಾರದಲ್ಲಿ ಸಕ್ಕರೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ.


4. ಸಾಕಷ್ಟು ನೀರು ಕುಡಿಯಿರಿ : ಸಾಕಷ್ಟು ನೀರು ಕುಡಿಯುವುದರಿಂದ ನೀವು ತೃಪ್ತರಾಗಿರುತ್ತೀರಿ. ಇದು ಅತಿಯಾಗಿ ಊಟ ಮಾಡುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಕ್ಕರೆ ಪಾನೀಯಗಳನ್ನು ತಪ್ಪಿಸಿ ಮತ್ತು ಬದಲಿಗೆ ಸರಳ ನೀರು, ಗಿಡಮೂಲಿಕೆ ಚಹಾಗಳನ್ನು ಸೇವಿಸಿ.


ಇದನ್ನೂ ಓದಿ: ಸ್ವೀಟ್​ಗಳನ್ನು ಫ್ರಿಜ್​ನಲ್ಲಿ ಹೀಗೆ ಇಟ್ಟರೆ ಸದಾ ಫ್ರೆಶ್​ ಆಗಿಯೇ ಇರುತ್ತೆ!


5. ಸಂಸ್ಕರಿಸಿದ ಆಹಾರ ಬಿಟ್ಟುಬಿಡಿ: ಸಂಸ್ಕರಿಸಿದ ಆಹಾರಗಳು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಸಾಧ್ಯವಾದಷ್ಟು ತಾಜಾ ಊಟವನ್ನು ತಯಾರಿಸಿ ಸೇವಿಸಲು ಪ್ರಯತ್ನಿಸಿ.


6. ಸಾಕಷ್ಟು ಫೈಬರ್ ಪದಾರ್ಥಗಳನ್ನು ಸೇವಿಸಿ: ಫೈಬರ್ ಸೇವನೆಯಿಂದ ಅತಿಯಾಗಿ ತಿನ್ನುವ ಅಭ್ಯಾಸವನ್ನು ತಡೆಯಬಹುದು. ಹಾಗಾಗಿಯೇ ಫೈಬರ್‌ ತೂಕ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ಫೈಬರ್-ಭರಿತ ಆಹಾರಗಳನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.


7. ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಿ: ಸ್ಯಾಚುರೇಟೆಡ್ ಕೊಬ್ಬುಗಳು ತೂಕದ ಜೊತೆಗೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಬೆಣ್ಣೆ, ಕೊಬ್ಬಿನ ಮಾಂಸ ಮತ್ತು ಕರಿದ ಪದಾರ್ಥಗಳಂತಹ ಕೊಬ್ಬಿನಂಶವಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.


ಇದನ್ನೂ ಓದಿ: ಬೇಸಿಗೆಯಲ್ಲಿ ಚಿಲ್ಡ್‌ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚು; ಈ ಬಗ್ಗೆ ವೈದ್ಯರು ಹೇಳ್ತಿರೋದೇನು?


8. ಆರೋಗ್ಯಕರ ಅಭ್ಯಾಸಗಳು: ದೀರ್ಘಾವಧಿಯ ಆರೋಗ್ಯಕ್ಕಾಗಿ ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸಬೇಕು. ಪೌಷ್ಟಿಕಾಂಶವುಳ್ಳ, ಸಂಪೂರ್ಣ ಆಹಾರಗಳಿಗೆ ಆದ್ಯತೆ ನೀಡುವುದು ಮುಖ್ಯ. ನಿಮ್ಮ ದೇಹದ ಹಸಿವಿನ ಸೂಚನೆಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಆರೋಗ್ಯಕರ ಆಹಾರ ತಿನ್ನಿ.


top videos



    ಒಟ್ಟಾರೆಯಾಗಿ ಆರೋಗ್ಯಕರ ಡಯೆಟ್‌ ಮತ್ತು ತೂಕ ನಷ್ಟವು ನಿಕಟ ಸಂಬಂಧ ಹೊಂದಿದೆ. ಏಕೆಂದರೆ ಆರೋಗ್ಯಕರ ಆಹಾರಗಳು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ನೀವೂ ಕೂಡ ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿದ್ದರೆ ಮೇಲೆ ನೀಡಿದಂತಹ ಸಲಹೆಗಳನ್ನು ಪಾಲಿಸಿ ಆರೋಗ್ಯವಾಗಿರಿ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು