Weight Loss: ತೂಕ ಇಳಿಸುವ ಭರದಲ್ಲಿ ಈ ತಪ್ಪು ಮಾಡಬೇಡಿ ಎನ್ನುತ್ತಾರೆ ಪೌಷ್ಟಿಕ ತಜ್ಞರು

ಕೆಲವರು ಸಾಕಷ್ಟು ಕಠಿಣ ಕ್ರಮ, ಕೆಲಸ ಮಾಡಿದರೂ ತೂಕ ಇಳಿಕೆ ರಿಸಲ್ಟ್ ಹೆಚ್ಚು ಕಂಡು ಬರುವುದಿಲ್ಲ. ಎಲ್ಲರಿಗೂ ವರ್ಕೌಟ್ ಆಗುವ ವಿಧಾನಗಳು ಕಡಿಮೆ. ಅದಾಗ್ಯೂ ಉತ್ತಮ ಆಹಾರ ಮತ್ತು ವ್ಯಾಯಾಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಆದರೆ ಇದು ಕೆಲವರಿಗೆ ಸಾಕಷ್ಟು ಕಠಿಣ ಮಾರ್ಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತೂಕ ಹೆಚ್ಚುವುದು (Weight Gain) ಸಾಕಷ್ಟು ಸರಳ. ಆದರೆ ಹೆಚ್ಚಿದ ಅಥವಾ ಹೆಚ್ಚುತ್ತಿರುವ ತೂಕ (Weight Loss) ಇಳಿಸುವುದು ಸಾಕಷ್ಟು ಕಠಿಣ. ಯಾಕೆಂದರೆ ಕೆಜಿ ತೂಕ ಇಳಿಸಲು ತಿಂಗಳು (Month) ಸಮಯ ಬೇಕಾಗುತ್ತದೆ. ಅದಾಗ್ಯೂ ತೂಕ ಇಳಿಸಲು ಕೇವಲ ವ್ಯಾಯಾಮ (Exercise), ಆಹಾರ ಕ್ರಮ (Food Chart) ಮಾತ್ರ ಮುಖ್ಯವಲ್ಲ. ವ್ಯಾಯಾಮ ಮತ್ತು ಡಯಟ್ (Diet) ಜೊತೆಗೆ ಸಕಾರಾತ್ಮಕ ಮನೋಭಾವದಿಂದ ತೂಕ ಇಳಿಕೆ ಜರ್ನಿಯಲ್ಲಿ ತೊಡಗಿಸಿಕೊಳ್ಳುವುದು ಕೂಡ ಸಾಕಷ್ಟು ಅಗತ್ಯ ಆಗಿದೆ. ತೂಕ ನಷ್ಟದ ವಿಷಯದ ಬಗ್ಗೆ ಮಾತನಾಡಿದರೆ, ಒಬ್ಬೊಬ್ಬರ ದೇಹ ಒಂದೊಂದು ರೀತಿಯಲ್ಲಿದೆ. ಇದು ಕೆಲವರು ತೂಕ ಇಳಿಕೆಯನ್ನು ಆರಾಮವಾಗಿ ಮಾಡುತ್ತಾರೆ.

  ತೂಕ ಇಳಿಸುವ ಪ್ರಕ್ರಿಯೆ

  ಇನ್ನು ಕೆಲವರು ಸಾಕಷ್ಟು ಕಠಿಣ ಕ್ರಮ, ಕೆಲಸ ಮಾಡಿದರೂ ತೂಕ ಇಳಿಕೆ ರಿಸಲ್ಟ್ ಹೆಚ್ಚು ಕಂಡು ಬರುವುದಿಲ್ಲ. ಎಲ್ಲರಿಗೂ ವರ್ಕೌಟ್ ಆಗುವ ವಿಧಾನಗಳು ಕಡಿಮೆ. ಅದಾಗ್ಯೂ ಉತ್ತಮ ಆಹಾರ ಮತ್ತು ವ್ಯಾಯಾಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಆದರೆ ಇದು ಕೆಲವರಿಗೆ ಸಾಕಷ್ಟು ಕಠಿಣ ಮಾರ್ಗವಾಗಿದೆ. ಆನ್‌ಲೈನ್‌ನಲ್ಲಿ ಸಾಕಷ್ಟು ಸಲಹೆ ಮತ್ತು ಟಿಪ್ಸ್ ನ್ನು ಜನರು ಫಾಲೋ ಮಾಡ್ತಾರೆ.

  ತೂಕ ನಷ್ಟದ ತಪ್ಪುಗಳು

  ಅದು ತ್ವರಿತವಾಗಿ ತೂಕ ಇಳಿಸಲು ಸಹಕಾರಿ ಜೊತೆಗೆ ಅಪಾಯವನ್ನು ತಂದೊಡ್ಡುತ್ತದೆ. ನಿಮಗೆ ತೂಕ ಇಳಿಸಲು ಸೆಲೆಬ್ರಿಟಿ ಪೌಷ್ಟಿಕತಜ್ಞ ರುಜುತಾ ದಿವೇಕರ್, ಇತ್ತೀಚೆಗೆ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಕೆಲವು ಸಾಮಾನ್ಯ ತೂಕ ನಷ್ಟದ ತಪ್ಪುಗಳ ಬಗ್ಗೆ ವಿವರಣೆ ಶೇರ್ ಮಾಡಿದ್ದಾರೆ.

  ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!

  ಇದರಲ್ಲಿ ಅವರು ಅಧಿಕ ತೂಕದಿಂದ ಬಳಲುತ್ತಿರುವ ಜನರಿಗೆ ಆಹಾರ ಮತ್ತು ವ್ಯಾಯಾಮದ ಹೊರತಾಗಿ ತಾವು ತೂಕ ಇಳಿಸುವಾಗ ಮಾಡುವ ತಪ್ಪುಗಳ ಬಗ್ಗೆ ಜನರು ಗಮನ ಹರಿಸುವುದಿಲ್ಲ. ಆದರೆ ಈ ಸಣ್ಣ ವಿಷಯಗಳ ನಿರ್ಲಕ್ಷ್ಯವೇ ದೀರ್ಘಾವಧಿಯಲ್ಲಿ ಖಿನ್ನತೆ, ಆತಂಕ ಮಾನಸಿಕ ಕಾಯಿಲೆಗೆ ಗುರಿಯಾಗಿಸುತ್ತದೆ ಎಂದು ಹೇಳಿದ್ದಾರೆ.

  ಕೇವಲ ಸ್ಲಿಮ್ ಆಗುವುದು ಮಾತ್ರವಲ್ಲ

  ಸೆಲೆಬ್ರಿಟಿ ಪೌಷ್ಟಿಕತಜ್ಞ ರುಜುತಾ ದಿವೇಕರ್ ಅವರು, ತೂಕವು ಕೇವಲ ಫಿಟ್ ಆಗಿರಲು, ತೆಳ್ಳಗೆ ಆಗಲು ಮಾತ್ರವಲ್ಲ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಶಕ್ತಿ, ತ್ರಾಣ, ನಮ್ಯತೆ ಮತ್ತು ಸೊಂಟದಿಂದ ಹಿಪ್ ಅನುಪಾತ ಕಡಿಮೆ ಮಾಡುವ ಅಂಶಗಳನ್ನು ಒಳಗೊಂಡಿದೆ. ತೂಕ ನಷ್ಟಕ್ಕೆ, ನಿಮ್ಮನ್ನು ಹಿಂಸಿಸುವ ವಿಧಾನ ಆಯ್ಕೆ ಮಾಡದೇ, ಸಿಂಪಲ್ ಮತ್ತು ದೇಹಕ್ಕೆ ಆರೋಗ್ಯಕರ ವಿಧಾನ ಫಾಲೋ ಮಾಡಿ.

  ಹಿಂದಿನ ಅನುಭವಗಳನ್ನು ಹೋಲಿಕೆ ಮಾಡಬೇಡಿ

  ಈ ಹಿಂದೆ ನೀವು ವೇಟ್ ಲಾಸ್ ಮಾಡಿ, ಮತ್ತೆ ಈಗ ವೇಟ್ ಗೇನ್ ಆಗಿರಬಹುದು. ಅದನ್ನು ಬಿಡಿ. ತೂಕ ಇಳಿಸುವ ನಿಮ್ಮ ಅನುಭವಗಳನ್ನು ಒಂದಕ್ಕೊಂಡು ಹೋಲಿಕೆ ಮಾಡಬೇಡಿ. ಯಾಕೆಂದರೆ ವೇಟ್ ಲಾಸ್ ಅನುಭವಗಳು ಒಂದೇ ಆಗಿರುವುದಿಲ್ಲ.

  ಆಹಾರ ಕ್ರಮವು ಹಿಂದೆ ನಿಮ್ಮ ವೇಟ್ ಲಾಸ್ ಜರ್ನಿಗೆ ಸಹಕಾರಿಯಾಗಿತ್ತೆಂದು ಅನ್ನಿಸಿದರೆ, ಅದು ನಿಮ್ಮ ಪ್ರಸ್ತುತ ಅಗತ್ಯಗಳಿಗೆ ಸೂಕ್ತವಲ್ಲ. ಉತ್ತಮ ಆಹಾರವು ನಿಮ್ಮ ಒತ್ತಡದ ಮಟ್ಟ ಮತ್ತು ಹಸಿವಿನ ಬದಲಾವಣೆಯ ಅನಿಶ್ಚಿತತೆ ಮತ್ತು ಅಂಶಗಳನ್ನು ಹೊಂದಿದೆ.

  ಪರಿಣಾಮ ಸಿಗದಿದ್ದರೆ ನಿಮ್ಮನ್ನು ನೀವೇ ದೂಷಿಸಬೇಡಿ

  ರುಜುತಾ ದಿವೇಕರ್ ಪ್ರಕಾರ, ಫಲಿತಾಂಶ ಆಧಾರಿತ ವಿಧಾನ ಅಳವಡಿಕೆ ಎಂದಿಗೂ ಒಳ್ಳೆಯದಲ್ಲ. ಯಾವಾಗಲೂ ಪ್ರತಿ ಹೆಜ್ಜೆಯತ್ತ ಗಮನಹರಿಸಿ ಮತ್ತು ಪ್ರಯಾಣ ಆನಂದಿಸಿ. ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಲು ಕನಿಷ್ಠ ಮೂರು ತಿಂಗಳು ಸಮಯ ಬೇಕಾಗುತ್ತದೆ.

  ತೂಕ ಇಳಿಸುವ ಆತುರ ಬೇಡ

  ರುಜುತಾ ದಿವೇಕರ್ ಅವರು ಕಡಿಮೆ ಸಮಯದಲ್ಲಿ ಬೊಜ್ಜನ್ನು ತ್ವರಿತವಾಗಿ ಕಡಿಮೆ ಮಾಡುವ ಕಲ್ಪನೆಯು ಒಳ್ಳೆಯದಲ್ಲ ಎಂದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ನಿಮ್ಮ ದೇಹದ ತೂಕದ ಸುಮಾರು 10% ನಷ್ಟು ನಷ್ಟ ಆರೋಗ್ಯಕರ ಮತ್ತು ಸಮರ್ಥನೀಯ ತೂಕ ನಷ್ಟವೆಂದು ಪರಿಗಣಿಸಬಹುದು. ತೂಕ ಇಳಿಸುವ ಭರದಲ್ಲಿ ದೇಹ-ಹಾನಿಕಾರಕ ಆಯ್ಕೆ ಮಾಡಬೇಡಿ.

  ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ

  ವ್ಯಾಯಾಮ ಮತ್ತು ಆಹಾರ

  ತೂಕ ನಷ್ಟಕ್ಕೆ ವ್ಯಾಯಾಮ ಮಾಡುವುದು ಅಲ್ಲ. ನಿಮ್ಮ ಸಂಪೂರ್ಣ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಟ್ರೆಂಡ್‌ ವೇಟ್ ಲಾಸ್ ಸಲಹೆಗಳನ್ನು ಕುರುಡಾಗಿ ಅನುಸರಿಸಬೇಡಿ.
  Published by:renukadariyannavar
  First published: