Weight Loss: ತೂಕ ಇಳಿಕೆಗಾಗಿ ಡಯಟ್ ಮಾಡ್ತಿದ್ದೀರಾ? ಹಾಗಾದ್ರೆ ನಿಮ್ಮ ಬೆಳಗಿನ ತಿಂಡಿ ಮೆನು ಹೀಗಿರಲಿ

ನೀವು ಸೇವಿಸುವ ಎಲ್ಲಾ ಆಹಾರ ಸಮತೋಲಿತ (well-balanced diet)ವಾಗಿರಬೇಕು. ಡಯಟ್ ಜೊತೆ ವರ್ಕೌಟ್ (Workout) ಮಾಡುತ್ತಿದ್ದರೆ ಉತ್ತಮ ಆಹಾರವನ್ನು ಸೇವಿಸುವುದು ಕೂಡ ಅಷ್ಟೇ ಮುಖ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೂಕ ಇಳಿಸಿಕೊಳ್ಳಲು (Weight Loss) ಪ್ರಯತ್ನಿಸುತ್ತಿರುವವರಿಗೆ ಆಹಾರದ (Food) ಯೋಜನೆಯೇ ಒಂದು ದೊಡ್ಡ ಸವಾಲು. ಅದರಲ್ಲೂ ಕಾರ್ಬ್ಸ್ ಇರುವ ಆಹಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದು ಸಹಜ. ಫೈಬರ್, ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸಿ, ಕಾರ್ಬ್ಸ್ ಆಹಾರದಿಂದ ದೂರವಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ. ನೀವು ಸೇವಿಸುವ ಎಲ್ಲಾ ಆಹಾರ ಸಮತೋಲಿತ (well-balanced diet)ವಾಗಿರಬೇಕು. ಡಯಟ್ ಜೊತೆ ವರ್ಕೌಟ್ (Workout) ಮಾಡುತ್ತಿದ್ದರೆ ಉತ್ತಮ ಆಹಾರವನ್ನು ಸೇವಿಸುವುದು ಕೂಡ ಅಷ್ಟೇ ಮುಖ್ಯ. ಸಣ್ಣ ಆಗಲು ಬಯಸುವವರು ಸ್ಥಿರವಾಗಿ, ನಿಮ್ಮ ದಿನಚರಿ(lifestyle)ಯನ್ನು ಬದಲಾಯಿಸಿಕೊಳ್ಳುತ್ತಾ ಮತ್ತು ಆರೋಗ್ಯಕರ ಆಹಾರ(Healthy Food)ದತ್ತ ತೊಡಗಿಸಿಕೊಳ್ಳಲು ಪ್ರಾರಂಭಿಸಬೇಕು.

ಡಯಟ್ ಮಾಡುವಾಗ ಬೆಳಗ್ಗಿನ ತಿಂಡಿ ಏನು ತಿನ್ನುವುದು..? ರುಚಿಕರ ಮತ್ತು ಆರೋಗ್ಯವಾಗಿರುವಂತದ್ದು ಏನ್ ಮಾಡೋದು ಅಂತಾ ಪ್ರಶ್ನೆ ಇರುತ್ತದೆ. ಹಾಗಾದರೆ ಕಡಿಮೆ ಕಾರ್ಬ್ ಹೊಂದಿರುವ ಯಾವ ಉಪಾಹಾರ ರೆಸಿಪಿ ಕೆಲಸ ಮಾಡುತ್ತದೆ ಮತ್ತು ಏನು ಮಾಡುವುದು ಸುಲಭ ಎಂಬುವುದಕ್ಕೆ ಇಲ್ಲಿದೆ ಉತ್ತರ.

ಈ ಪಾಕವಿಧಾನಗಳು ನಾವು ಪ್ರತಿದಿನ ಸೇವಿಸುವ ಸಾಮಾನ್ಯ ಆಹಾರಗಳಾಗಿವೆ. ಆದರೂ, ಇವು ನಿಮ್ಮ ತೂಕ ನಷ್ಟ ಪ್ರಯಾಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೇ ನಿಮ್ಮ ಸಮಯವನ್ನೂ ಸಹ ಉಳಿಸುವಂತಹ ಪಾಕವಿಧಾನಗಳಾಗಿವೆ. ಕೇವಲ 20 ನಿಮಿಷದಲ್ಲಿ ನೀವು ಈ ಆರೋಗ್ಯಕರ, ರುಚಿಕರ ತಿಂಡಿಯನ್ನು ಫಟಾಫಟ್ ಆಗಿ ಮಾಡಿಕೊಳ್ಳಬಹುದು.

ಇದನ್ನೂ ಓದಿ:  Mouth Ulcers: ಬಾಯಿಯಲ್ಲಿ ಹುಣ್ಣು ಆಗಿದೆಯಾ? ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಮದ್ದುಗಳು ಇಲ್ಲಿವೆ

ಸಣ್ಣ ಆಗಲು ಸಹಾಯಕಾರಿ ಈ 5 ಕಡಿಮೆ ಕಾರ್ಬ್ಸ್ ಬ್ರೇಕ್‌ಫಾಸ್ಟ್ ರೆಸಿಫಿಗಳು

1)ಪಾಲಕ್ ಆಮ್ಲೆಟ್
ಈ ಆಮ್ಲೆಟ್ ಪಾಕವಿಧಾನವು ಪಾಲಕ ಮತ್ತು ಮೊಟ್ಟೆಯ ಪೋಷಣೆಯೊಂದಿಗೆ ತುಂಬಿದೆ, ಜೊತೆಗೆ ಮೊಝ್ಝಾರೆಲ್ಲಾದ ಚೀಸ್ ಆಮ್ಲೆಟ್‌ನ ರುಚಿಯನ್ನು ಹೆಚ್ಚಿಸುತ್ತದೆ, ಈ ಪಾಲಕ್, ಚೀಸ್ ಆಮ್ಲೆಟ್ ಸುಲಭ ಮತ್ತು ತ್ವರಿತ ಉಪಾಹಾರದ ಐಟಂ ಆಗಿದ್ದು ಅದು ನಿಮ್ಮ ಕಡಿಮೆ-ಕಾರ್ಬ್ ಆಹಾರಕ್ಕೆ ಅದ್ಭುತವಾದ ಸೇರ್ಪಡೆಯಾಗಿದೆ. ಪಾಲಕ್ ಹಸಿರು ಸೊಪ್ಪು ಮತ್ತು ಪ್ರೋಟೀನ್ ಹೊಂದಿರುವ ಮೊಟ್ಟೆ ತೂಕ ಇಳಿಕೆಗೆ ಸಹಕಾರಿಯಾಗಿವೆ.

2)ಕೀಟೋ ಉಪ್ಮಾ
ಶಾಖಾಹಾರಿ ಉಪ್ಮಾದ ಅದ್ಭುತವಾದ ಪಾಕವಿಧಾನ ತಯಾರಿಸುವುದಕ್ಕಿಂತ ಸರಳವಾದದ್ದು ಯಾವುದೂ ಇಲ್ಲ. ಈ ಉಪ್ಮಾವನ್ನು ಹೂಕೋಸು ಮತ್ತು ತರಕಾರಿಗಳು ಹಾಗೂ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ನೀವು ಇಷ್ಟಪಡುವ ಫ್ಲೇವರ್ ನೊಂದಿಗೆ ನೀವು ತಯಾರಿಸಿಕೊಂಡು ಸೇವಿಸಬಹುದು. ತರಕಾರಿಗಳಿಂದ ಮಾಡಿದ ಈ ಉಪ್ಪಿಟ್ಟು ನಿಮಗೆ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ.

3)ಆ್ಯಪಲ್ ಮತ್ತು ಚಿಯಾ ಸೀಡ್ ಸ್ಮೂಥಿ
ಡಯಟ್ ಮಾಡುತ್ತಿರುವವರಿಗೆ ಸ್ಮೂಥಿ ಒಂದೊಳ್ಳೆ ಉಪಹಾರದ ಆಯ್ಕೆ ಮತ್ತು ಈ ಅದ್ಭುತವಾದ, ಆರೋಗ್ಯಕರ ಸ್ಮೂಥಿ ಸುಮಾರು ಐದು ನಿಮಿಷಗಳಲ್ಲಿ ಕೇವಲ ಮೂರು ಮೂಲ ಪದಾರ್ಥಗಳೊಂದಿಗೆ ತಯಾರಾಗುತ್ತದೆ. ಆ್ಯಪಲ್ ಚಿಯಾ ಸೀಡ್ಸ್ ಸ್ಮೂಥಿಯು ಚಿಯಾ ಬೀಜಗಳು, ಸೋಯಾ ಹಾಲು ಅಥವಾ ಕಡಿಮೆ ಕೊಬ್ಬಿನ ಹಾಲು ಮತ್ತು ಸೇಬಿನ ಪ್ರಯೋಜನಗಳನ್ನು ಹೊಂದಿದೆ. ಇದು ಫೈಬರ್ ನಲ್ಲಿ ಪ್ರಬಲವಾಗಿದೆ ಮತ್ತು ಚಯಾಪಚಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4) ತೇಪ್ಲಾ
ಸಾಂಪ್ರದಾಯಿಕ ಗುಜರಾತಿ ಥೇಪ್ಲಾವನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಕೀಟೋ ಥೆಪ್ಲಾವನ್ನು ಅಗಸೆಬೀಜದ ಹಿಟ್ಟು ಮತ್ತು ಒಣಗಿದ ಮೇಥಿ ನೀರಿನಿಂದ ತಯಾರಿಸಲಾಗುತ್ತದೆ. ಈ ಕಡಿಮೆ ಕಾರ್ಬ್ ಕೀಟೋ ಥೆಪ್ಲಾ ತ್ವರಿತವಾಗಿ ಮಾಡಬಹುದಾಗಿದೆ ಮತ್ತು ರುಚಿಯು ಚೆನ್ನಾಗಿರುತ್ತದೆ.

5) ಕೀಟೋ ಪೋಹಾ
ಚಪ್ಪಟೆಯಾದ ಕೀಟೋ ಪೋಹಾವು ಅಕ್ಕಿಗಿಂತ ತುರಿದ ಹೂಕೋಸು ಹೂಗಳನ್ನು ಹೊಂದಿರುತ್ತದೆ. ಆರೋಗ್ಯಕರ ಮತ್ತು ರುಚಿಕರವಾಗಿಸಲು ನೀವು ಈ ಭಕ್ಷ್ಯದಲ್ಲಿ ಆಲೂಗಡ್ಡೆಯ ಬದಲಿಗೆ ಹೂಕೋಸು ಕಾಂಡವನ್ನು ಬಳಸಬಹುದು. ನಿಮ್ಮ ಆಯ್ಕೆಯ ತರಕಾರಿಗಳಲ್ಲಿ ಮಿಶ್ರಣ ಮಾಡಿ ಮತ್ತು ಯಾವುದೇ ಸಮಯದಲ್ಲಿ ರುಚಿಕರವಾದ ಉಪಹಾರವನ್ನು ಸೇವಿಸಬಹುದು.

ಇದನ್ನೂ ಓದಿ:  Foxtail Millet: ನಿಮ್ಮ ಹೃದಯ ರಕ್ಷಣೆಗೆ ಈ ಸಿರಿಧಾನ್ಯ; ನವಣೆಯ ಮೂರು ಸರಳ ಪಾಕ ವಿಧಾನಗಳು ಇಲ್ಲಿವೆ

ಹಾಗಾದರೆ, ಇನ್ನೇಕೆ ತಡ, ಬೆಳಗ್ಗಿನ ಉಪಹಾರ ತಯಾರಿಸಲು ಕೆಲವು ಸಲಹೆಗಳು ಸಿಕ್ಕಿತ್ತಲ್ಲವೇ. ನಿಮ್ಮ ಡಯಟ್‌ನಲ್ಲಿ ಈ ಕಡಿಮೆ ಕಾರ್ಬ್ ಉಪಾಹಾರ ಪಾಕವಿಧಾನಗಳನ್ನು ಸೇರಿಸಿ ಪ್ರಯತ್ನಿಸಿ ಮತ್ತು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ.
Published by:Mahmadrafik K
First published: