Weight Loss Diet: ತೂಕ ಇಳಿಸೋಕೆ ಅನಾನಸ್ ಡಯಟ್ ಮಾಡ್ಬೇಕಂತೆ, ಏನಿದು ಅಂತೀರಾ? ಇಲ್ಲಿದೆ ನೋಡಿ

ಅನಾನಸ್ ಡಯಟ್ ನಲ್ಲಿ ಕೇವಲ 5 ದಿನದಲ್ಲಿ 5 ಕೆಜಿ ತೂಕ ಇಳಿಸುವ ಗ್ಯಾರಂಟಿ ನೀಡುತ್ತದೆ. ಈ ಡಯಟ್ ಬಗ್ಗೆ ಓದಿರುವ ನೀವು ಅದನ್ನು ಫಾಲೋ ಮಾಡಲು ಯೋಜನೆ ಹಾಕಿಕೊಂಡಿರಬಹುದು. ಆದರೆ ನೀವು ಅನಾನಸ್ ಡಯಟ್ ಪ್ರಾರಂಭಿಸುವ ಮೊದಲು ಪೌಷ್ಟಿಕ ತಜ್ಞರ ಅಭಿಪ್ರಾಯ ಮತ್ತು ಸಲಹೆ ಪಡೆಯುವುದು ತುಂಬಾ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತೂಕ ಹೆಚ್ಚಾಗುವುದು (Weight Gain) ದೈಹಿಕವಾಗಿ (Physical) ಗೋಚರವಾಗುವುದಕ್ಕಿಂತ ಆರೋಗ್ಯದ (Health) ಮೇಲೆ ಅದರ ಅಡ್ಡ ಪರಿಣಾಮಗಳು (Side Effects) ಸಾಕಷ್ಟು ಕೆಟ್ಟದಾಗಿದೆ. ಸ್ಥೂಲಕಾಯ ಇದು ಇತ್ತೀಚಿನ ದಿನಗಳಲ್ಲಿ ಬೃಹತ್ ಕಾಯಿಲೆ ಸ್ವರೂಪ ಪಡೆದಿದ್ದು, ಅನೇಕ ರೋಗಗಳನ್ನು ಹುಟ್ಟು ಹಾಕುತ್ತದೆ. ಅದು ಎಂದಿಗೂ ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಅದು ನಿಧಾನವಾಗಿ ವಿಷದಂತೆ ನಿಮ್ಮ ದೇಹವನ್ನು ಆವರಿಸುತ್ತಾ ಹೋಗುತ್ತದೆ. ನಿಮ್ಮ ಆಹಾರ ಕ್ರಮ, ಕುಳಿತುಕೊಳ್ಳುವ ದಿನಚರಿ, ಅತಿಯಾದ ಮದ್ಯಪಾನ ಸೇರಿದಂತೆ ಹಲವು ಸಂಗತಿಗಳು ಸ್ಥೂಲಕಾಯಕ್ಕೆ ಕಾರಣ ಆಗಿವೆ. ಸ್ಥೂಲಕಾಯ ಅನೇಕ ರೀತಿಯ ವೈದ್ಯಕೀಯ ಪರಿಸ್ಥಿತಿಯಲ್ಲಿ ಒಬೆಸಿಟಿ ಲಕ್ಷಣಗಳೂ ಸಹ ಸೇರ್ಪಡೆ ಆಗಿವೆ.

    ಸ್ಥೂಲಕಾಯ ನಷ್ಟದ ಡಯಟ್ ಪ್ಲಾನ್

    ಆದರೆ ಸ್ಥೂಲಕಾಯವನ್ನು ನಿಯಂತ್ರಿಸಬಹುದು. ನೀವು ತೂಕ ಇಳಿಸುವ ವಿಧಾನಗಳ ಬಗ್ಗೆ ತಿಳಿಯಲು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತೀರಿ. ನೀವು ಕೆಲವು ದಿನಗಳಲ್ಲಿ ಹೆಚ್ಚುವರಿ ಕೊಬ್ಬು ಕರಗಿಸುವ ಲೇಖನ, ಜಾಹೀರಾತು ಮತ್ತು ಆಹಾರ ಕ್ರಮ ಸಲಹೆ ಫಾಲೋ ಕೂಡ ಮಾಡಬಹುದು. ಇಂತಹ ಒಂದು ಡಯಟ್ ಪ್ಲಾನ್ ನಲ್ಲಿ ಅನಾನಸ್ ಡಯಟ್ ಕೂಡ ಒಂದು.

    ಅನಾನಸ್ ಡಯಟ್

    ಅನಾನಸ್ ಡಯಟ್ ನಲ್ಲಿ ಕೇವಲ 5 ದಿನದಲ್ಲಿ 5 ಕೆಜಿ ತೂಕ ಇಳಿಸುವುದು ಗ್ಯಾರಂಟಿ. ಈ ಡಯಟ್ ಬಗ್ಗೆ ಓದಿರುವ ನೀವು ಅದನ್ನು ಫಾಲೋ ಮಾಡಲು ಯೋಜನೆ ಹಾಕಿಕೊಂಡಿರಬಹುದು. ಆದರೆ ನೀವು ಅನಾನಸ್ ಡಯಟ್ ಪ್ರಾರಂಭಿಸುವ ಮೊದಲು, ಪೌಷ್ಟಿಕ ತಜ್ಞರ ಅಭಿಪ್ರಾಯ ಮತ್ತು ಸಲಹೆ ಪಡೆಯುವುದು ತುಂಬಾ ಮುಖ್ಯ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ಪೌಷ್ಟಿಕ ತಜ್ಞ ಲೊವ್ನೀತ್ ಬಾತ್ರಾ, ಇತ್ತೀಚೆಗೆ ತನ್ನ ಇನ್ಸ್ಟಾ ಖಾತೆಯಲ್ಲಿ ಅನಾನಸ್ ಆಹಾರದ ಕುರಿತು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅನಾನಸ್ ಡಯಟ್ ನ ಬ್ರೈಟ್ ಸೈಡ್ ಹೊರತಾಗಿ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಅನಾನಸ್ ಆಹಾರ ಡಯಟ್ ಪದ್ಧತಿ ಅನುಸರಿಸುವುದು ಅಪಾಯಕಾರಿ ಮತ್ತು ಗಂಭೀರ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.

    ಅನಾನಸ್ ಡಯಟ್ ಎಂದರೇನು?

    ಅನಾನಸ್ ಆಹಾರವು ತೂಕ ಇಳಿಕೆಗೆ ಸುಲಭ ಮಾರ್ಗಗಳಲ್ಲಿ ಒಂದು. ಈ ಆಹಾರವನ್ನು 1970 ರಲ್ಲಿ ಡ್ಯಾನಿಶ್ ಮನಶ್ಶಾಸ್ತ್ರಜ್ಞ ಸ್ಟಾನ್ ಹೆಗ್ಲರ್ ರಚಿಸಿದ್ದರು. ನೀವು 5 ದಿನಗಳವರೆಗೆ ಇತರ ಆರೋಗ್ಯಕರ ಆಹಾರಗಳೊಂದಿಗೆ 2 ಕೆಜಿ ಅನಾನಸ್ ಸೇವನೆ ಮಾಡಬೇಕು. ಇದು ತೂಕವನ್ನು ತ್ವರಿತವಾಗಿ ಇಳಿಸಲು ಸಹಾಯ ಮಾಡುತ್ತದೆ. ದೇಹದಿಂದ ವಿಷ ಹೊರ ಹಾಕಲು ಸಹಾಯ ಮಾಡುತ್ತದೆ. ಇದು 5 ದಿನಗಳಲ್ಲಿ 5 ಕೆಜಿ ತೂಕ ಇಳಿಸುತ್ತದೆ ಎಂದು ಹೇಳಲಾಗಿದೆ.

    ಅನಾನಸ್ ಆಹಾರ ಡಯಟ್ ಹೊಟ್ಟೆ ಕಾಯಿಲೆ ಉಂಟು ಮಾಡುತ್ತದೆ

    ನೀವು ಅನಾನಸ್ ಆಹಾರ ಡಯಟ್ ಪದ್ಧತಿ ಫಾಲೋ ಮಾಡಿದರೆ ಅನಾನಸ್ ತುಂಬಾ ಆಮ್ಲೀಯವಾಗಿದೆ. ಇದು ನಿಮಗೆ ತುಂಬಾ ಹಸಿವು, ಕಿರಿಕಿರಿ ಮತ್ತು ದಣಿವು ಉಂಟು ಮಾಡುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳಿದ್ದಾರೆ. ಇದು ನಿಮ್ಮ ಹೊಟ್ಟೆಯ ಕಾಯಿಲೆಯನ್ನು ಕೆರಳಿಸುತ್ತದೆ. ಅನಾನಸ್ ನ್ನು ದಿನವಿಡೀ ಸೇವಿಸಿದರೆ ವಾಕರಿಕೆ ಅಥವಾ ಅತಿಸಾರ ಉಂಟಾಗುತ್ತದೆ.

    ದೌರ್ಬಲ್ಯ, ನಿದ್ರಾಹೀನತೆ

    ಅನಾನಸ್ ಆಹಾರದಿಂದ ತಲೆ ತಿರುಗುವಿಕೆ, ಮೂರ್ಛೆ, ತಲೆನೋವು, ನಿದ್ರಾಹೀನತೆ, ದೌರ್ಬಲ್ಯ ಮತ್ತು ಅತಿಯಾದ ಹಸಿವು ಮುಂತಾದ ಅಡ್ಡ ಪರಿಣಾಮ ಉಂಟಾಗುತ್ತದೆ. ಅನಾನಸ್ ಪ್ರತಿ ಕಪ್‌ನಲ್ಲಿ ಒಂದು ಗ್ರಾಂಗಿಂತ ಕಡಿಮೆ ಪ್ರೋಟೀನ್ ಮತ್ತು ಕೊಬ್ಬು ಹೊಂದಿದೆ. ಹಾಗಾಗಿ ಅನೇಕ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯಿಂದ ಇದು ಪೋಷಕಾಂಶಗಳ ಕೊರತೆ ಉಂಟು ಮಾಡುತ್ತದೆ.

    ಚರ್ಮದ ಸೋಂಕು

    ಹೊಟ್ಟೆ ನೋವು ಮತ್ತು ಪೋಷಕಾಂಶಗಳ ಕೊರತೆ ಜೊತೆಗೆ ಚರ್ಮದ ಸೋಂಕು ಉಂಟಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬ್ರೋಮೆಲಿನ್ ಹೊಂದಿದೆ. ಇದು ಚರ್ಮದ ದದ್ದು, ವಾಂತಿ, ಅತಿಸಾರ ಮತ್ತು ಅವಧಿ ಭಾರೀ ರಕ್ತಸ್ರಾವ ಉಂಟು ಮಾಡುತ್ತದೆ.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ತೂಕ ಇಳಿಸುವ ಆಹಾರ ಹೇಗಿರಬೇಕು?

    ತೂಕ ಇಳಿಕೆಗೆ ನಿರ್ಬಂಧಿತ ಆಹಾರ ಅನುಸರಿಸುವ ಅಗತ್ಯವಿಲ್ಲ ಎಂಬುದು ಪೌಷ್ಟಿಕತಜ್ಞ ಲವ್ನೀತ್ ಬಾತ್ರಾ ಮಾತು. ಸಕ್ಕರೆ ಮುಕ್ತ ಪಾನೀಯ ಮತ್ತು ಆಹಾರ ಸೇವನೆ ಮಾಡುವುದು ತೂಕ ಇಳಿಕೆಗೆ ಸಹಕಾರಿ. ಅಲ್ಟ್ರಾ-ಪ್ರೊಸೆಸ್ಡ್ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರ ಸೇವಿಸಬೇಡಿ.
    Published by:renukadariyannavar
    First published: