HOME » NEWS » Lifestyle » WEIGHT LOSS MISTAKES THAT CAN SLOW DOWN YOUR PROGRESS STG KVD

Weight Loss: ಸಣ್ಣಗೆ ಆಗಬೇಕು ಎಂದರೆ ಈ 7 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

ತಪ್ಪು ಮಾಹಿತಿ, ಅವಾಸ್ತವಿಕ ಗುರಿಗಳು ಮತ್ತು ತಪ್ಪು ವಿಧಾನಗಳಿಂದಾಗಿ ಬಹಳಷ್ಟು ಜನ ತೂಕ ಇಳಿಸಲಾಗದೆ ಒದ್ದಾಡುತ್ತಾರೆ. ತಮ್ಮ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುವಾಗ ಜನ ಈ ತಪ್ಪುಗಳನ್ನು ಮಾಡಬಾರದು.

Trending Desk
Updated:June 8, 2021, 8:53 PM IST
Weight Loss: ಸಣ್ಣಗೆ ಆಗಬೇಕು ಎಂದರೆ ಈ 7 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!
ಪ್ರಾತಿನಿಧಿಕ ಚಿತ್ರ
  • Share this:
ಬೇಕಾದನ್ನು ತಿನ್ನುವುದು ಎಷ್ಟು ಸುಲಭವೋ, ಅದರಿಂದ ಹೆಚ್ಚಾದ ದೇಹದ ತೂಕವನ್ನು ಇಳಿಸುವು ಅಷ್ಟೇ ಕಷ್ಟ. ದಪ್ಪಗಿದ್ದವರು ಸಣ್ಣಗಾಗೋದು ಅಷ್ಟೊಂದು ಸುಲಭದ ಕೆಲಸವಲ್ಲ. ನೀವು ಸರಿಯಾದ ವಿಧಾನವನ್ನು ಪಾಲಿಸದೇ ಇದ್ದಾಗ ಅದು ಇನ್ನೂ ಕಠಿಣವಾಗಬಹುದು. ತಪ್ಪು ಮಾಹಿತಿ, ಅವಾಸ್ತವಿಕ ಗುರಿಗಳು ಮತ್ತು ತಪ್ಪು ವಿಧಾನಗಳಿಂದಾಗಿ ಬಹಳಷ್ಟು ಜನ ತೂಕ ಇಳಿಸಲಾಗದೆ ಒದ್ದಾಡುತ್ತಾರೆ. ತಮ್ಮ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ. ಈ ತಪ್ಪುಗಳನ್ನು ನೀವು ಮಾಡದಿದ್ದರೆ ಸುಲಭವಾಗಿ ದೇಹ ತೂಕವನ್ನು ಇಳಿಸಬಹುದು. ಆರೋಗ್ಯಕರ ದೇಹ, ಜೀವನ ನಿಮ್ಮದಾಗುತ್ತದೆ.

1. ಫುಡ್​​​​​ ಪ್ಲಾನಿಂಗ್​ ಇಲ್ಲದಿರುವುದು

ನೀವು ಊಟವನ್ನು ಸರಿಯಾಗಿ ಪ್ಲಾನ್ ಮಾಡದಿದ್ದಾಗ , ನೀವು ಹೆಚ್ಚಾಗಿ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಸೇವಿಸುತ್ತೀರಿ ಮತ್ತು ತಿಂಡಿಗಳನ್ನು ತಿನ್ನುತ್ತೀರಿ. ಸರಿಯಾಗಿ ಫುಲ್​​ ಪ್ಲ್ಯಾನ್​​​ ಮಾಡುವುದರಿಂದ ಅದು ನಿಮ್ಮನ್ನು ಫ್ಯಾಟ್​​​​ ಫುಡ್​​​ ಸೇವನೆಯನ್ನು ತಡೆಯುತ್ತದೆ. ಜೊತೆಗೆ ನಿಮ್ಮ ಸಮಯ ಹಾಗೂ ಹಣವನ್ನು ಉಳಿಸುತ್ತದೆ. ಇದು ತೂಕ ಕಡಿಮೆ ಮಾಡಲು ಮತ್ತು ನಿರ್ದಿಷ್ಟ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾವಾಗ, ಏನನ್ನು ತಿನ್ನಬೇಕು ಎಂದು ಮೊದಲೇ ನಿರ್ಧರಿಸಿ ಬರೆದಿಟ್ಟುಕೊಳ್ಳಿ. ನಿಮ್ಮ ಡಯಟ್​ ಪ್ಲಾನ್​ ಬದ್ಧರಾಗಿದ್ದು, ಬೇರೆ ಏನನ್ನು ಸೇವಿಸಬೇಡಿ.

2. ಆಹಾರ ಸೇವನೆಯ ಬಗ್ಗೆ ಗಮನ ಇಲ್ಲದಿರುವುದು

ನೀವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ತಿಳಿಯದೇ ಇರುವುದರಿಂದ ಸಾಕಷ್ಟು ತೂಕ ಹೆಚ್ಚಾಗಬಹುದು. ಉಪಾಹಾರ ಮತ್ತು ಭೋಜನದ ನಡುವೆ ತಿಂಡಿಗಳನ್ನು ಸೇವನೆ ಮಾಡುವುದರಿಂದ ಪ್ರತಿದಿನ ಸಾಕಷ್ಟು ಕ್ಯಾಲೋರಿಗಳು ಹೆಚ್ಚಬಹುದು. ಆಹಾರ ಪ್ಲಾನಿಂಗ್​ ತೂಕ ನಷ್ಟ ಮಾಡುವುದು ಸುಲಭವಾಗುತ್ತದೆ . ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮತ್ತು ಪ್ಲಾನ್ ಇಟ್ಟುಕೊಳ್ಳುವುದು ನಿಮಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಎಷ್ಟು ನೀರು ಕುಡಿಯುತ್ತಿದ್ದೀರಿ ಎಂದು ತಿಳಿಯಲು ಕೂಡ ಸಹಾಯ ಮಾಡುತ್ತದೆ.

3. ಆಹಾರ ಸೇವನೆ ಪ್ರಮಾಣದ ಮಿತಿ ಇರದೇ ಇರುವುದು

ಆಹಾರ ಸೇವನೆ ಪ್ರಮಾಣದ ಮಿತಿಯನ್ನು ಮೊದಲೇ ಯೋಜಿಸುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಬಹಳ ಉಪಯೋಗಕರ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕ್ಯಾಲೋರಿ ಸೇವನೆಯು ತುಂಬಾ ಕಡಿಮೆಯಾದಾಗ, ಸೀಮಿತ ಶಕ್ತಿಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ನಿಮ್ಮ ಚಯಾಪಚಯವು ನಿಧಾನಗೊಳ್ಳುತ್ತದೆ .ಇದನ್ನೂ ಓದಿ: Alia Bhat ಹೇಳುವ 5 ಫಿಟ್ನೆಸ್ ಸೂತ್ರಗಳು ನಿಮ್ಮ ಬದುಕು ಬದಲಿಸುತ್ತವೆ!

4.ಕಾರ್ಡಿಯೋ ವ್ಯಾಯಾಮ​​ ಮಾತ್ರ ಮಾಡುವುದು

ನಿಮ್ಮ ವ್ಯಾಯಾಮದಲ್ಲಿ ಸ್ಟ್ರೆನ್ತ್ನಿಂಗ್​ ತರಬೇತಿಯನ್ನು ನಿರ್ಲಕ್ಷಿಸುವ ತಪ್ಪನ್ನು ನೀವು ಮಾಡಿದರೆ, ಅದು ಸ್ನಾಯುವಿನ ಶಕ್ತಿಯನ್ನು ಕಡಿಮೆ ಮಾಡಬಹುದು. ಈ ತರಬೇತಿಯು ನಿಮ್ಮ ಹೃದಯದ ಪ್ರಯತ್ನಗಳನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದೇಹಶಕ್ತಿಯನ್ನು ಸುಧಾರಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

5. ಸರಿಯಾಗಿ ನಿದ್ರೆ ಮಾಡದೇ ಇರುವುದು

ಬಿಡುವಿಲ್ಲದ ಕೆಲಸ ಮಾಡುವವರಿಗೆ ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡುವುದು ಕಷ್ಟಕರ, ಇದರಿಂದಾಗಿ ಚಯಾಪಚಯ ಕ್ರಿಯೆಯನ್ನು ನಿಧಾನಗೊಳ್ಳುತ್ತದೆ. ಕನಿಷ್ಠ 6-8 ಗಂಟೆಗಳ ನಿರಂತರ ನಿದ್ರೆ ಮಾಡುವುದು ತುಂಬಾ ಒಳ್ಳೆಯದು. ನೀವು ಸಾಕಷ್ಟು ನಿದ್ರೆ ಮಾಡಿದರೆ, ನಿಮ್ಮ ದೇಹವು ದಿನದ ಒತ್ತಡ ಮತ್ತು ಆಶಾಭಂಗದಿಂದ ಚೇತರಿಸಿಕೊಳ್ಳುತ್ತದೆ. ಸಾಕಷ್ಟು ಪ್ರಮಾಣದ ನಿದ್ರೆ ಮಾಡದಿರುವುದರಿಂದ ಅಧಿಕ ತೂಕ ಅಥವಾ ಬೊಜ್ಜು ಹೊಂದುವ ಅಪಾಯವನ್ನುಂಟುಮಾಡುತ್ತದೆ, ಏಕೆಂದರೆ ಕಡಿಮೆ ನಿದ್ರೆ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ.

6. ಅವಾಸ್ತವಿಕ ಗುರಿಗಳನ್ನು ಇಟ್ಟುಕೊಳ್ಳುವುದು

ನೈಜ ಮತ್ತು ದೀರ್ಘಕಾಲೀನ ಗುರಿಗಳನ್ನು ಇಟ್ಟುಕೊಳ್ಳುವುದು ಬಹಳ ಅವಶ್ಯಕ. ಸಾಧ್ಯವಾದಷ್ಟು ಬೇಗ ನೀವು ಬಹಳ ತೂಕವನ್ನು ಕಳೆದುಕೊಳ್ಳಲು ಬಯಸುತ್ತೀರಿ ಎಂಬುದು ಅರ್ಥವಾಗುವಂತಹದ್ದಾಗಿದೆ, ಆದರೆ ಯಥಾರ್ಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹ ಅವಶ್ಯಕ. ತೂಕ ಕಡಿಮೆ ಮಾಡುವುದು ನಿಧಾನ ಮತ್ತು ಕ್ರಮೇಣ ಪ್ರಕ್ರಿಯೆ ಎಂದು ನಾವು ಅರ್ಥಮಾಡಿಕೊಳ್ಳಬೇಕು.

7. “ಆರೋಗ್ಯಕರ ಎಂದು ಹೆಸರಿಗೆ ಮಾತ್ರ ಇರುವ ಆಹಾರ ಸೇವನೆ

ಬಹಳಷ್ಟು ಕಂಪನಿಗಳು ತಮ್ಮ ವಸ್ತುಗಳನ್ನು ಆರೋಗ್ಯಕರವೆಂದು ಪ್ರಚಾರ ಮಾಡುತ್ತವೆ, ಅವುಗಳು ನೀವು ಅಂದುಕೊಂಡ ಹಾಗೆ ಆರೋಗ್ಯಕರವಾಗಿರುವುದಿಲ್ಲ. ಆರೋಗ್ಯಕರ ಉತ್ಪನ್ನಗಳೆಂದು ಹೆಚ್ಚಾಗಿ ಪ್ರಚಾರಗೊಳ್ಳುವ ಚಾಕೊಲೇಟ್ ಮತ್ತು ಜ್ಯೂಸ್‌ಗಳಂತಹ ಉತ್ಪನ್ನಗಳು ಕೊಬ್ಬು ಮತ್ತು ಹೆಚ್ಚುವರಿ ಸೇರಿಸಿದ ಸಕ್ಕರೆಯಂತಹ ಅನಾರೋಗ್ಯಕರ ಪದಾರ್ಥಗಳನ್ನು ಹೊಂದಿರುತ್ತದೆ , ಇದು ಕೊಬ್ಬನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತದೆ . ಪ್ಯಾಕೇಜಿನ ಹಿಂಭಾಗದಲ್ಲಿರುವ ಪದಾರ್ಥಗಳ ಪಟ್ಟಿ ಮತ್ತು ಪೌಷ್ಠಿಕಾಂಶದ ಲೇಬಲ್ ಅನ್ನು ಯಾವಾಗಲೂ ಪರಿಶೀಲಿಸಿ.
Published by: Kavya V
First published: June 8, 2021, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories