Weight Loss: ಊಟ ಬಿಟ್ಟು ತೂಕ ಇಳಿಸುವಾಗ ಈ ಅಂಶಗಳನ್ನು ಮರೆಯಲೇಬೇಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ತೂಕ ಇಳಿಕೆ ಮಾಎಲು ಪ್ರಯತ್ನಿಸುತ್ತಾರೆ. ಕ್ಯಾಲೋರಿ ಸೇವನೆಯಿಂದ ವ್ಯಾಯಾಮದವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಅಭಿಪ್ರಾಯ ಮತ್ತು ಸಲಹೆ ನೀಡುತ್ತಾರೆ. ಆದರೆ ಎಲ್ಲವನ್ನೂ ಟ್ರೈ ಮಾಡಿದರೆ ಇದು ಫಲಿತಾಂಶವು ಕೆಲವೊಮ್ಮೆ ಅಪಾಯಕಾರಿಯಾಗಬಹುದು.

ಮುಂದೆ ಓದಿ ...
  • Share this:

ಜನರು ತೂಕ ಇಳಿಕೆಗೆ (Weight Loss) ಸಾಕಷ್ಟು ಸರ್ಕಸ್ ಮಾಡ್ತಾರೆ. ಅನೇಕ ಪ್ರಯತ್ನಗಳನ್ನು ಮಾಡಿದ ನಂತರವೂ ಕೆಲವರ ತೂಕ ನಷ್ಟವಾಗದೇ, ನಿರ್ಧಾರವನ್ನೇ ಕೈ ಬಿಡುತ್ತಾರೆ. ವೇಟ್ ಲಾಸ್​ಗಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಕಸರತ್ತು ಮಾಡ್ತಾರೆ. ಕೆಲವರು ಜಿಮ್‌ಗೆ ಹೋಗ್ತಾರೆ, ಕೆಲವರು ಏರೋಬಿಕ್ಸ್ ಮಾಡ್ತಾರೆ, ಕೆಲವರು ಡಯಟ್ (Diet) ಫಾಲೋ ಮಾಡ್ತಾರೆ. ಕೆಲವರು ಯೋಗ (Yoga) ವ್ಯಾಯಾಮ (Exercise), ವಾಕಿಂಗ್ ಮಾಡ್ತಾರೆ. ಹೀಗೆ ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ತೂಕ ಇಳಿಕೆಗೆ ಪ್ರಯತ್ನಿಸುತ್ತಾರೆ. ಕ್ಯಾಲೋರಿ ಸೇವನೆಯಿಂದ ವ್ಯಾಯಾಮದವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಅಭಿಪ್ರಾಯ ಮತ್ತು ಸಲಹೆ ನೀಡುತ್ತಾರೆ. ಆದರೆ ಎಲ್ಲವನ್ನೂ ಟ್ರೈ ಮಾಡಿದರೆ ಇದು ಫಲಿತಾಂಶವು ಕೆಲವೊಮ್ಮೆ ಅಪಾಯಕಾರಿಯಾಗಬಹುದು.


ತೂಕ ನಷ್ಟದಲ್ಲಿ ಈ ತಪ್ಪುಗಳ ಬಗ್ಗೆ ಎಚ್ಚರಿಕೆ ವಹಿಸಿ!


ತೂಕ ನಷ್ಟದ ವಿಚಾರ ಬಂದಾಗ ಪೌಷ್ಟಿಕತಜ್ಞರ ಸಲಹೆ ಮೊದಲು ಪಡೆಯಿರಿ.  ತೂಕ ನಷ್ಟವನ್ನು ಸರಿಯಾದ ರೀತಿಯಲ್ಲಿ ಮಾಡಲು ಸಹಾಯ ಮಾಡುತ್ತದೆ. ಇದು ತೂಕವನ್ನು ಕಡಿಮೆ ಮಾಡುವಾಗ ಮಾಡುವ ತಪ್ಪುಗಳನ್ನು ಕಡಿಮೆ ಮಾಡುತ್ತದೆ.


ಡಾ.ಅದಿತಿ ಶರ್ಮಾ ಅವರು ತೂಕ ನಷ್ಟದ ಹಿನ್ನೆಲೆ ಅನೇಕರು ಆಹಾರ ಸೇವನೆ ಸ್ಕಿಪ್ ಮಾಡ್ತಾರೆ. ಇದು ತಪ್ಪು. ಖಾಲಿ ಹೊಟ್ಟೆಯಲ್ಲಿ ಉಳಿಯುವುದು ದೊಡ್ಡ ತಪ್ಪು.  ಹೀಗೆ ಒಮ್ಮೆಲೆ ಹೆಚ್ಚು ಆಹಾರ ಸೇವಿಸುವುದು ಮತ್ತಷ್ಟು ತೂಕ ಹೆಚ್ಚಲು ಕಾರಣವಾಗುತ್ತದೆ.




ಹೀಗೆ ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸುವುದು ಹೆಚ್ಚಿನ ಕ್ಯಾಲೋರಿ ಸೇವನೆಗೆ ಪ್ರಚೋದಿಸುತ್ತದೆ. ಬೇಕರಿ ಉತ್ಪನ್ನಗಳು, ಕುಕೀಸ್ ಗಳು, ಕೇಕ್‌ಗಳು, ಮಫಿನ್‌ಗಳು ಮತ್ತು ಐಸ್‌ ಕ್ರೀಮ್‌ ಖರೀದಿಸುವುದು ಮತ್ತು ತಿನ್ನುವುದನ್ನು ಸಾಧ್ಯವಾದಷ್ಟು ತಪ್ಪಿಸಿ.


ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿ ಸೇರಿಸಿ


ತೂಕ ನಷ್ಟದ ವೇಳೆ ಆಹಾರದಲ್ಲಿ ಕೊಬ್ಬು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ. ಇದು ತೂಕ ಇಳಿಕೆಗೆ ಸಹಕಾರಿ. ತೂಕ ನಿಯಂತ್ರಣಕ್ಕಾಗಿ ಕಡಿಮೆ ಕೊಬ್ಬು ಅಥವಾ ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ತಿನ್ನಿ. ಒಂದೇ ರೀತಿಯ ಆಹಾರವು ಪ್ರತಿಯೊಬ್ಬ ವ್ಯಕ್ತಿಗೆ ಸರಿಯಲ್ಲ. ಚಯಾಪಚಯ ಪ್ರವೃತ್ತಿ ಮತ್ತು ಆನುವಂಶಿಕ ಪ್ರವೃತ್ತಿಯು ಆಹಾರ ಮತ್ತು ಆರೋಗ್ಯಕ್ಕೆ ಕಾರಣವಾಗಿವೆ.


ದೈಹಿಕ ಚಟುವಟಿಕೆಗೆ ಸಮಯ ನೀಡಿ


ಸ್ಥೂಲಕಾಯ ಕಡಿಮೆ ಮಾಡಲು ದೈನಂದಿನ ವ್ಯಾಯಾಮ ಮಾಡಿ. ಜಿಮ್‌ಗೆ ಹೋಗಲು ಬಯಸದಿದ್ದರೆ ನಿಯಮಿತವಾಗಿ ವಾಕಿಂಗ್ ಮಾಡಿ.  ನಡಿಗೆ, ಜಾಗಿಂಗ್, ಓಟ, ಸೈಕ್ಲಿಂಗ್ ಮತ್ತು ಈಜುವುದು ದೈನಂದಿನ ದಿನಚರಿಯ ಭಾಗವಾಗಿ ಮಾಡಿ.


ಇದು ಒತ್ತಡವನ್ನು ನಿವಾರಿಸುತ್ತದೆ. ತೂಕ ನಷ್ಟ ಪ್ರಯಾಣ ಸುಲಭವಾಗುತ್ತದೆ. ವಾಕಿಂಗ್ ಮಾಡಿದರೆ ಜೀವಕೋಶಗಳಿಗೆ ಆಮ್ಲಜನಕ ಸಿಗುತ್ತದೆ. ಚಯಾಪಚಯವು ವೇಗವಾಗುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಸಾಂದರ್ಭಿಕ ಚಿತ್ರ


ಆಹಾರ ಸೇವಿಸದೇ ಇರುವ ತಪ್ಪು ಮಾಡದಿರಿ


ಆಹಾರ ಸೇವನೆ ತಪ್ಪಿಸಬೇಡಿ. ಬದಲಾಗಿ ಏನು ಮತ್ತು ಯಾವಾಗ ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿ ವಹಿಸಿ. ಆಹಾರದಲ್ಲಿ ಸೂಕ್ಷ್ಮ ಪೋಷಕಾಂಶ ಸೇರಿಸಿ. ಊಟವು ಸತು, ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಒಳಗೊಂಡಿರಬೇಕು. ಕ್ಯಾಲೋರಿ ಸೇವನೆಯ ಬಗ್ಗೆ ಕಾಳಜಿಯಿರಲಿ. ಜಗಿದು ಆಹಾರ ತಿನ್ನಿ.


ಒಮೆಗಾ 3 ಕೊಬ್ಬಿನಾಮ್ಲಗಳು ಸೇವಿಸಿ


ಒಮೆಗಾ 3 ಕೊಬ್ಬಿನಾಮ್ಲಗಳು ಉತ್ತಮ ಕೊಬ್ಬುಗಳನ್ನು ನಿಮ್ಮ ಊಟದ ಭಾಗವಾಗಿ ಮಾಡಿ. ದೈನಂದಿನ ಆಹಾರದಲ್ಲಿ, ಮೀನು, ಬೀಜ ಮತ್ತು ಕುಂಬಳಕಾಯಿ, ಲಿನ್ಸೆಡ್ ಸೇರಿದಂತೆ ಇತರ ರೀತಿಯ ಬೀಜಗಳನ್ನು ಸೇವಿಸಿ. ಸೀಮಿತ ಪ್ರಮಾಣದಲ್ಲಿ ವಿವಿಧ ತೈಲ ಬಳಸಿ.


ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರ ತೂಕ ಎಷ್ಟಿರಬೇಕು? ಅವರ ಜೀವನಶೈಲಿ ಹೇಗಿರಬೇಕು?


ಸಾಕಷ್ಟು ನೀರು ಕುಡಿಯಿರಿ

top videos


    ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ನೀರಿನ ಸೇವನೆ ಹೆಚ್ಚಿಸಿ. ನಿತ್ಯವೂ 9 ಲೋಟ ನೀರು ಕುಡಿಯಿರಿ. ತಿನ್ನುವಾಗ ನೀರು ಕುಡಿಯುವುದನ್ನು ತಪ್ಪಿಸಿ. ತಿನ್ನುವ 30 ನಿಮಿಷಗಳ ಮೊದಲು ನೀರನ್ನು ಕುಡಿಯಿರಿ.

    First published: