ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಅರಿವು (Health And Fitness Awareness) ಹೆಚ್ಚಿದೆ. ಜನರು (People) ಸ್ಥೂಲಕಾಯ ಮತ್ತು ತೂಕ ನಿಯಂತ್ರಣಕ್ಕೆ ಸಾಕಷ್ಟು ಕಸರತ್ತು ಮಾಡುತ್ತಿರುವುದನ್ನು ನೀವು ದೈನಂದಿನ ಜೀವನದಲ್ಲಿ ಕಾಣಬಹುದು. ವೇಟ್ ಲಾಸ್ (Weight Loss), ತೂಕ ನಿಯಂತ್ರಣ ಇದೆಲ್ಲವೂ ಒಂದು, ಎರಡು ದಿನದ್ದಲ್ಲ. ನೀವು ನಿರಂತರವಾಗಿ ಮಾಡಬೇಕಾದದ್ದು. ಹೀಗಿರುವಾಗ ಫಿಟ್ ಆಗಿರಲು ಕೆಲವರು ಡಯಟ್ ಮಾಡ್ತಾರೆ. ಇನ್ನು ಕೆಲವರು ವ್ಯಾಯಾಮ ಮಾಡುತ್ತಾರೆ. ಇನ್ನು ಕೆಲವರು ವಾಕಿಂಗ್, ಯೋಗ, ಜಿಮ್ ಹೀಗೆ ಹಲವು ಮಾರ್ಗಗಳ ಮೂಲಕ ತಮ್ಮ ತೂಕ ಕಳೆದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಸ್ಥೂಲಕಾಯದಿಂದ ವ್ಯಕ್ತಿತ್ವ ಮಂದವಾಗುತ್ತದೆ.
ಫಿಟ್ನೆಸ್ ತುಂಬಾ ಮುಖ್ಯ
ಫಿಟ್ ಆಗಿದ್ದರೆ ಹೆಚ್ಚು ಆಕರ್ಷಕ. ಫಿಟ್ ಮತ್ತು ಆರೋಗ್ಯಕರ ದೇಹ ಸದೃಢ ಜೀವನಕ್ಕೆ ಬೇಕೇ ಬೇಕು. ಇದು ನಿಮ್ಮನ್ನು ರೋಗಗಳಿಂದ ದೂರವಿಡುತ್ತದೆ. ಸರಿಯಾದ ಆಹಾರ ಸೇವನೆಯು ಆರೋಗ್ಯದ ಜೊತೆಗೆ ನಿಮ್ಮ ಆಹಾರದ ಕಡುಬಯಕೆಗಳನ್ನು ಸಹ ನಿಯಂತ್ರಿಸಲು ಸಹಕಾರಿ. ತೂಕ ನಷ್ಟದ ಸಮಯದಲ್ಲಿ ಆಗಾಗ್ಗೆ ಉಂಟಾಗುವ ಹಸಿವನ್ನು ತಡೆಯಲು ದೀರ್ಘಕಾಲ ಹೊಟ್ಟೆ ತುಂಬಿಸಿಡುವ ಪದಾರ್ಥ ಸೇವನೆ ಮುಖ್ಯ.
ಫಿಟ್ನೆಸ್ ಪ್ರಯಾಣದಲ್ಲಿ ಹಸಿವನ್ನು ನಿಯಂತ್ರಿಸುವ ಬದಲು ಆರೋಗ್ಯಕರ ಜ್ಯೂಸ್, ಹಣ್ಣು, ತರಕಾರಿ ಸಲಾಡ್, ಬೀಜಗಳನ್ನು ಸೇವನೆ ಮಾಡಿ. ಇದು ಫಿಟ್ನೆಸ್ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಬಹುದು. ಇಲ್ಲಿ ನಾವು ತೂಕ ನಷ್ಟದ ಜರ್ನಿಯಲ್ಲಿ ಹಸಿವನ್ನು ನಿಯಂತ್ರಿಸಲು ಯಾವ ಆಹಾರ ಸೇವನೆ ಸಹಕಾರಿ ಎಂಬುದನ್ನು ನೋಡೋಣ.
ಆಗಾಗ್ಗೆ ಉಂಟಾಗುವ ಹಸಿವು ನಿಯಂತ್ರಿಸುವ ಆಹಾರಗಳು
ಓಟ್ಸ್
ಓಟ್ಸ್ ಸೇವನೆಯಿಂದ ದೀರ್ಘಕಾಲ ಹಸಿವು ತಡೆಯಬಹುದು. ಹಾಗಾಗಿ ಇದನ್ನು ಅತ್ಯುತ್ತಮ ತೂಕ ನಷ್ಟದ ಆಹಾರವೆಂದು ಕರೆಯಲಾಗುತ್ತದೆ. ಇದು ತೃಪ್ತಿ ನೀಡುತ್ತದೆ. ಹೊಟ್ಟೆಯನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಓಟ್ಸ್ ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದೆ. ಇತರೆ ಧಾನ್ಯಗಳಿಗಿಂತ ಹೆಚ್ಚು ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿದೆ. ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ.
ಬಾದಾಮಿ
ಪ್ರತಿದಿನ ಬೆಳಿಗ್ಗೆ ನೆನೆಸಿದ ಬಾದಾಮಿ ಸೇವಿಸಿ. ಇದು ಪರಿಪೂರ್ಣ ಪೂರ್ವ ತಾಲೀಮು ಊಟ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸಿರಿಸುತ್ತದೆ. ಬಾದಾಮಿ ಸೇವನೆಯಿಂದ ದೇಹವು ಸಾಕಷ್ಟು ಪ್ರೋಟೀನ್ ಮತ್ತು ಮೊನೊಸಾಚುರೇಟೆಡ್ ಕೊಬ್ಬನ್ನು ಪಡೆಯುತ್ತದೆ.
ಇದು ಹೃದಯದ ಆರೋಗ್ಯಕ್ಕೆ ಅಗತ್ಯ. ಬಾದಾಮಿಯು ವಿಟಮಿನ್-ಇನಲ್ಲಿ ಸಮೃದ್ಧ. ಪ್ರಬಲವಾದ ಉತ್ಕರ್ಷಣ ನಿರೋಧಕ ಆಗಿದೆ. ಬಾದಾಮಿ ಸೇವನೆಯು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸಿಹಿಗೆಣಸು
ಪೌಷ್ಟಿಕತಜ್ಞರ ಪ್ರಕಾರ, ಸಿಹಿ ಗೆಣಸು ವಿಟಮಿನ್ ಎ ಮತ್ತು ವಿಟಮಿನ್ ಸಿ ಜೊತೆಗೆ ವಿಶೇಷ ರೀತಿಯ ಪಿಷ್ಟ ಹೊಂದಿದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ. ಹೀಗಾಗಿ ಇದು ದೀರ್ಘಕಾಲ ಹೊಟ್ಟೆ ತುಂಬಿರಿಸುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಕಾಫಿ
ಕಾಫಿ ಸೇವನೆಯು ದೀರ್ಘಕಾಲ ಹಸಿವನ್ನು ನಿಯಂತ್ರಿಸುತ್ತದೆ. ಆಹಾರ ತಜ್ಞರು ಸಹ ಆಹಾರದಲ್ಲಿ ಕಾಫಿ ಸೇರಿಸಲು ಶಿಫಾರಸು ಮಾಡುತ್ತಾರೆ. ಕಾಫಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಇಲ್ಲ. ಗ್ಲೈಸೆಮಿಕ್ ಸೂಚ್ಯಂಕವು ಶೂನ್ಯ. ಕೆಫೀನ್ ಹಸಿವನ್ನು ನಿಯಂತ್ರಿಸುತ್ತದೆ. ದಿನಕ್ಕೆ 3 ರಿಂದ 4 ಕಪ್ ಕಾಫಿ ಪ್ರಯೋಜನಕಾರಿ.
ಇದನ್ನೂ ಓದಿ: ಈ ಸ್ಪೆಷಲ್ ಟೀ ಕುಡಿದ್ರೆ ಒಂದು ತಿಂಗಳಿನಲ್ಲಿಯೇ ಸಣ್ಣ ಆಗ್ತೀರಾ; ನೆನಪಿನ ಶಕ್ತಿಯೂ ಹೆಚ್ಚಾಗುತ್ತೆ
ತರಕಾರಿ ಸೂಪ್
ತರಕಾರಿ ಸೂಪ್ ಸೇವನೆಯು ಜೀವಸತ್ವಗಳು ಮತ್ತು ಖನಿಜ ದೇಹಕ್ಕೆ ನೀಡುತ್ತದೆ. ಇದು ಕ್ಯಾಲೋರಿಗಳು ಮತ್ತು ಕೊಬ್ಬು ಕಡಿಮೆ ಹೊಂದಿದೆ. ತೂಕ ನಷ್ಟಕ್ಕೆ ಸಹಕಾರಿ. ಇದರಲ್ಲಿನ ಫೈಬರ್ ದೀರ್ಘಕಾಲ ಹಸಿವನ್ನು ಕಟ್ಟಿ ಹಾಕುತ್ತದೆ. ಊಟದ ಮೊದಲು ಒಂದು ಕಪ್ ಸೂಪ್ ಸೇವಿಸಿದರೆ ಲಾಭಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ