ತೂಕ ಇಳಿಕೆಗೆ (Weight Loss) ನೀವು ಹಲವು ಕ್ರಮಗಳನ್ನು ಫಾಲೋ ಮಾಡುತ್ತಿರಬಹುದು. ಆದರೆ ಅದರ ಜೊತೆಗೆ ಇಂದಿನಿಂದಲೇ ಇನ್ನೊಂದು ಮುಖ್ಯವಾದ ಕ್ರಮವನ್ನು ನಿಯಮಿತವಾಗಿ ಫಾಲೋ ಮಾಡಿ. ಇದು ನಿಮ್ಮ ತೂಕ ಇಳಿಕೆಯನ್ನು ಸುಲಭವಾಗಿಸುತ್ತದೆ. ನೀವು ತೂಕ ನಷ್ಟದ ಸಮಯದಲ್ಲಿ ಕ್ಯಾಲೋರಿ ಸೇವನೆ ಮತ್ತು ಆಹಾರ ಕ್ರಮದ (Food Diet) ಬಗ್ಗೆ ಹೆಚ್ಚು ಕಾಳಜಿ (Care) ವಹಿಸಬೇಕಾಗುತ್ತದೆ. ಅದರ ಜೊತೆಗೆ ಮುಖ್ಯವಾಗಿ ಬೆಳಗಿನ ತಿಂಡಿ (Morning Breakfast) ವಿಚಾರದಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಿ. ಇದು ನಿಮ್ಮ ತೂಕ ನಷ್ಟ ಪ್ರಯಾಣವನ್ನು ಹೆಚ್ಚು ಉತ್ಸಾಹ ಮತ್ತು ಸುಲಭವಾಗಿಸಲು ಸಹಕಾರಿ. ಇಂದಿನಿಂದ ನಿಮ್ಮ ಬ್ರೇಕ್ ಫಾಸ್ಟ್ ಹೇಗಿರಬೇಕು ಎಂಬುದರ ಬಗ್ಗೆ ಗಮನಹರಿಸಿ.
ತೂಕ ನಷ್ಟದಲ್ಲಿ ಬೆಳಗಿನ ತಿಂಡಿಯತ್ತ ಸೂಕ್ತ ಕಾಳಜಿ ವಹಿಸಿ
ತೂಕ ನಷ್ಟದ ಸಮಯದಲ್ಲಿ ನೀವು ಏನು ತಿನ್ನಬೇಕು? ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಯಾಕಂದ್ರೆ ನೀವು ದಿನವೂ ಜಂಕ್ ಫುಡ್, ಕರಿದ ಆಹಾರ ಸೇವನೆ ಮಾಡಿದರೆ ನಿಮ್ಮ ತೂಕ ಇಳಿಕೆ ಆಗಲ್ಲ. ಇದು ನಿಮಗೆ ಯಾವುದೇ ಫಲಿತಾಂಶ ನೀಡಲ್ಲ.
ಅಲ್ಲದೇ ಅನಾರೋಗ್ಯಕರ ಆಹಾರ ಸೇವನೆ ನಿಮ್ಮ ಆರೋಗ್ಯ ಹದಗೆಡಲು ಮತ್ತು ಹೊಟ್ಟೆಯ ಅಸ್ವಸ್ಥತೆ, ಗ್ಯಾಸ್ಟ್ರಿಕ್, ಆಸಿಡಿಟಿ, ಯಕೃತ್ತಿನ ತೊಂದರೆ, ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ವಿಷ ಬೆಳವಣಿಗೆಯಾಗಲು ಕಾರಣವಾಗುತ್ತದೆ.
ಹಾಗಾಗಿ ತೂಕ ನಷ್ಟದಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡಿ. ತೂಕವನ್ನು ಕಳೆದುಕೊಳ್ಳಲು ಮತ್ತು ಆರೋಗ್ಯವಾಗಿರಲು ದಿನದ ಪ್ರಾರಂಭದ ಬೆಳಗಿನ ಉಪಾಹಾರದಲ್ಲಿ ಯಾವೆಲ್ಲಾ ಪದಾರ್ಥ ಸೇವನೆ ಮಾಡಿದರೆ ವೇಟ್ ಲಾಸ್ ಗೆ ಪರಿಣಾಮಕಾರಿ ಎಂಬುದನ್ನು ಇಲ್ಲಿ ನೋಡೋಣ.
ಬೆಳಗಿನ ಉಪಾಹಾರ ಇಡೀ ದಿನ ಕೆಲಸ ಮಾಡಲು ಶಕ್ತಿ ನೀಡುತ್ತದೆ. ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ. ತೂಕ ಕಳೆದುಕೊಳ್ಳಲು ಇದು ತುಂಬಾ ಮುಖ್ಯ. ಪೋಷಕಾಂಶ ಸಮೃದ್ಧ ಪದಾರ್ಥ ದೇಹಕ್ಕೆ ಉತ್ತಮ ಆಯ್ಕೆ ಆಗಿದೆ.
ಪೌಷ್ಟಿಕತಜ್ಞೆ ಕರಿಷ್ಮಾ ಷಾ ಪ್ರಕಾರ, ನೀವು ಎದ್ದ ಅರ್ಧ ಗಂಟೆಯೊಳಗೆ ಉಪಹಾರ ಸೇವಿಸಬೇಕು. ದೀರ್ಘಕಾಲ ಉಪಹಾರ ಸೇವಿಸದೇ ಹೋದರೆ ಅದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಅಂತಾರೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ತಿಂಡಿ ತಿನ್ನಬೇಕು.
ತೂಕ ಇಳಿಸುವಾಗ ಬೆಳಗಿನ ತಿಂಡಿಯಲ್ಲಿ ಯಾವ ಆಹಾರ ಸೇವಿಸಬೇಕು?
ಬೀಜಗಳು
ಬೆಳಿಗ್ಗೆ ಎದ್ದ ತಕ್ಷಣ ಒಂದು ಹಿಡಿ ಬೀಜ ಸೇವಿಸಿ. ಡ್ರೈಫ್ರೂಟ್ಸ್, ಗೋಡಂಬಿ, ಬಾದಾಮಿ, ವಾಲ್ನಟ್ಸ್, ಪಿಸ್ತಾ ಯಾವುದೇ ಬೀಜ ಸೇವನೆ ಮಾಡಬಹುದು. ಬೀಜಗಳು ಬಯೋಆಕ್ಟಿವ್ ಮ್ಯಾಕ್ರೋನ್ಯೂಟ್ರಿಯಂಟ್ ಉತ್ತಮ ಮೂಲ. ಇದು ಚಯಾಪಚಯ ಮತ್ತು ಹೃದಯರಕ್ತನಾಳ ಸಮಸ್ಯೆ ನಿವಾರಿಸುತ್ತದೆ. ಬೀಜಗಳು ಪ್ರೋಟೀನ್ನ ಉತ್ತಮ ಮೂಲ.
ಹಣ್ಣುಗಳು
ಕಾಲೋಚಿತ ಹಣ್ಣು ಸೇವನೆ ಮಾಡಿ. ಸೇಬು, ಬಾಳೆಹಣ್ಣು, ಅನಾನಸ್, ಚಿಕ್ಕು ಇತ್ಯಾದಿ. ಹಣ್ಣುಗಳ ಸೇವನೆಯು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಹೃದಯ ಸಮಸ್ಯೆ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ಅಪಾಯ ತಡೆಯುತ್ತದೆ. ಕಣ್ಣು ಮತ್ತು ಜೀರ್ಣಕಾರಿ ಸಮಸ್ಯೆಗಳ ಅಪಾಯ ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದು ಹಸಿವನ್ನು ದೂರವಿರಿಸುತ್ತದೆ. ಸೇಬು, ಪೇರಳೆ, ಮತ್ತು ಹಸಿರು ಎಲೆಗಳ ತರಕಾರಿ ತೂಕ ನಷ್ಟಕ್ಕೆ ಸಹಕಾರಿ.
ಅವಲಕ್ಕಿ
ತಜ್ಞೆ ಕರಿಷ್ಮಾ ಷಾ ಪ್ರಕಾರ, ಲಘು ಉಪಹಾರ ಮಾಡದೇ ಹೋದ್ರೆ ಉಪಹಾರದಲ್ಲಿ ಅವಲಕ್ಕಿ ಅಂದ್ರೆ ಪೋಹಾ ಸೇರಿಸಿ. ಇದರಲ್ಲಿ ತರಕಾರಿ, ಬೀಜ ಸೇರಿಸಬಹುದು. ಕಡಿಮೆ ಎಣ್ಣೆಯಲ್ಲಿ ಪೋಹಾ ತಯಾರಿಸಿ. ಪೋಹಾ ಪೌಷ್ಟಿಕ ಆಹಾರ. ಅವಲಕ್ಕಿ ಕ್ಯಾಲೋರಿಗಳಲ್ಲಿ ಬಹಳ ಕಡಿಮೆಯಿದೆ. ಇದು ತೂಕ ಕಡಿಮೆ ಮಾಡಲು ಸಹಕಾರಿ.
ಚಿಲ್ಲಾ ಸೇವಿಸಿ
ಉತ್ತಮ ಉಪಹಾರಕ್ಕಾಗಿ ಚಿಲ್ಲಾ ಸೇವಿಸಿ. ಲೆಂಟಿಲ್, ಬೇಸನ್, ರವೆ, ಓಟ್ಸ್ ಚಿಲ್ಲಾ ಸೇವಿಸಿ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣಿನ ಸ್ಮೂಥಿ, ಹೀಗಿದೆ ಹೀಗೆ ತಯಾರಿಸಿ
ಓಟ್ಸ್
ಓಟ್ಸ್ ಸಮತೋಲಿತ ಪೌಷ್ಟಿಕಾಂಶ ಆಹಾರ. ಓಟ್ಸ್ ಕಾರ್ಬೋಹೈಡ್ರೇಟ್ ಮತ್ತು ಫೈಬರ್ನ ಉತ್ತಮ ಮೂಲ. ಪ್ರೋಟೀನ್ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ