Weight Loss: ಗೋಧಿ ಹಿಟ್ಟಿನ ಚಪಾತಿಗೆ ಪರ್ಯಾಯವಾಗಿ ಈ ಆರೋಗ್ಯಕರ ಖಾದ್ಯಗಳನ್ನು ಸವಿಯಿರಿ..!

ನಮ್ಮ ಮನೆಗಳಲ್ಲಿ ಈ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿಗಳನ್ನು ಹೆಚ್ಚಾಗಿಯೇ ಸೇವಿಸುತ್ತೇವೆ ಎಂದು ಹೇಳಬಹುದು. ಚಪಾತಿ ಪ್ರಧಾನವಾಗಿರುವುದರಿಂದ, ಇದನ್ನು ಬೇರೆ ಪರ್ಯಾಯ ಪದಾರ್ಥಗಳೊಂದಿಗೆ ಬದಲಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ, ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿಗಳನ್ನು ಬದಲಾಯಿಸುವುದು ನಿಮಗೆ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಸಹಾಯಕವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅತಿಯಾದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗ ಯಾವ ಆಹಾರ ಸೇವಿಸಬೇಕು, ಯಾವ ಆಹಾರ ಸೇವಿಸಬಾರದು ಎಂಬ ಅನೇಕ ಗೊಂದಲಗಳು ನಿಮ್ಮಲ್ಲಿರುವುದು ಸಹಜ.ನೀವು ಸೇವಿಸುವ ಆಹಾರ ಮತ್ತು ಅದಕ್ಕೆ ಅನುಗುಣವಾಗಿ ನೀವು ವ್ಯಾಯಾಮದ ಮೂಲಕ ಎಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತವೆ. ಆಹಾರ ಕಡಿತಗೊಳಿಸುವುದು ಉತ್ತಮ ಆಯ್ಕೆಯಲ್ಲವಾದರೂ, ನೀವು ತೆಗೆದುಕೊಳ್ಳುವ ಆಹಾರಕ್ಕೆ ಯಾವ ಆಹಾರ ಪದಾರ್ಥ ಪರ್ಯಾಯ ಮತ್ತು ಆರೋಗ್ಯಕರ ಎಂಬುದನ್ನು ಅರಿತುಕೊಂಡು ಅವುಗಳನ್ನು ಸೇವಿಸುವುದು ಉತ್ತಮ.

ನಮ್ಮ ಮನೆಗಳಲ್ಲಿ ಈ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿಗಳನ್ನು ಹೆಚ್ಚಾಗಿಯೇ ಸೇವಿಸುತ್ತೇವೆ ಎಂದು ಹೇಳಬಹುದು. ಚಪಾತಿ ಪ್ರಧಾನವಾಗಿರುವುದರಿಂದ, ಇದನ್ನು ಬೇರೆ ಪರ್ಯಾಯ ಪದಾರ್ಥಗಳೊಂದಿಗೆ ಬದಲಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ, ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿಗಳನ್ನು ಬದಲಾಯಿಸುವುದು ನಿಮಗೆ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಸಹಾಯಕವಾಗಬಹುದು.

North Karnataka Dish: Masala jowar roti now a hot favourite in north Karnataka
ಜೋಳದ ರೊಟ್ಟಿ


ತೂಕ ಇಳಿಸಲು ಗೋಧಿ ಚಪಾತಿಗೆ 6 ಆರೋಗ್ಯಕರ ಪರ್ಯಾಯಗಳು ಇಲ್ಲಿವೆ

ಓಟ್ಸ್ ಚಪಾತಿ: ಈ ಗ್ಲುಟೆನ್ ಮುಕ್ತ ಧಾನ್ಯವು ಹಲವಾರು ವಿಟಮಿನ್‌, ನಾರುಗಳು, ಉತ್ಕರ್ಷಣ ನಿರೋಧಕ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸುತ್ತದೆ. ಓಟ್ಸ್ ಚಪಾತಿ ತಯಾರಿಸಲು, ಒಂದು ಕಪ್ ಓಟ್ಸ್ ತೆಗೆದುಕೊಳ್ಳಿ ಮತ್ತು ಅದನ್ನು ಹಿಟ್ಟಿನ ಹಾಗೆ ಮಾಡಿಕೊಂಡು ನೀರಿನೊಂದಿಗೆ ಮಿಶ್ರಣ ಮಾಡಿ ಮತ್ತು ಓಟ್ಸ್ ಹಿಟ್ಟು ಸಿದ್ಧವಾದಾಗ, ನೀವು ಚಪಾತಿಗಳ ತರಹ ಇದನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Weight Loss: ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!

ರಾಗಿ ರೊಟ್ಟಿ:  ರಾಗಿಯಲ್ಲಿ ಪ್ರೋಟೀನ್ ಅಧಿಕವಾಗಿರುತ್ತವೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು, ನಿಮ್ಮ ಚರ್ಮ ಮತ್ತು ಕೂದಲನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಒಂದು ಲೋಟ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ನೀವು ಈ ರಾಗಿ ಹಿಟ್ಟಿನಿಂದ ರೊಟ್ಟಿಗಳನ್ನು ಮಾಡಿಕೊಂಡು ಸೇವಿಸಬಹುದು.

ಬಾರ್ಲಿ ಚಪಾತಿ: ಬಾರ್ಲಿಯು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸಿ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಮಾಡಿಕೊಳ್ಳಲು ನೀವು ಬಾರ್ಲಿ ಹಿಟ್ಟು ಮತ್ತು ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ಹಿಟ್ಟು ಸಿದ್ಧವಾದ ಮೇಲೆ ನೀವು ಚಪಾತಿಯ ರೀತಿಯಲ್ಲಿ ಮಾಡಿಕೊಂಡು ಸೇವಿಸಬಹುದು.

ಇದನ್ನೂ ಓದಿ: Weight Loss Journey: ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್​ ಆಗಿದೆ ಎಂದಿದ್ದ Rani Mukerji

ಕಪ್ಪು ಕಡಲೆ ಹಿಟ್ಟಿನ ಚಪಾತಿ: ಕಪ್ಪು ಕಡಲೆ ಭಾರತೀಯ ಕುಟುಂಬಗಳ ಆಹಾರ ಪದಾರ್ಥಗಳಲ್ಲಿ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಬಹುದು. ಒಂದು ಲೋಟ ಕಪ್ಪು ಕಡಲೆಯನ್ನು ಚೆನ್ನಾಗಿ ಅರೆದುಕೊಂಡು ಹಿಟ್ಟು ಮಾಡಿಕೊಂಡು ಅದಕ್ಕೆ ನೀರು, ಹಾಲು ಅಥವಾ ಮೊಸರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ನಂತರ ಚಪಾತಿಯ ಆಕಾರದಲ್ಲಿ ಮಾಡಿಕೊಂಡು ಸೇವಿಸಿ.

ಜೋಳದ ರೊಟ್ಟಿ: ಈ ರೊಟ್ಟಿ ಮಾಡಲು ಮೊದಲಿಗೆ ಜೋಳವನ್ನು ಚೆನ್ನಾಗಿ ಬೀಸಿ ಹಿಟ್ಟು ಮಾಡಿಕೊಳ್ಳಿ. ಜೋಳದ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇರಿಸಿ ಹಿಟ್ಟನ್ನು ಮೆತ್ತಗೆ ಮಾಡಿಕೊಳ್ಳಿ. ನಂತರ ಅದನ್ನು ಕೈಗಳಿಂದ ತಟ್ಟಿ ದುಂಡಗೆ ಮಾಡಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿ. ಜೋಳವು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಬಾದಾಮಿ ಹಿಟ್ಟು: ಈ ಬಾದಾಮಿ ಹಿಟ್ಟಿನಿಂದ ಚಪಾತಿ ತಯಾರಿಸಲು ನೀವು ಒಂದು ಲೋಟದಷ್ಟು ಬಾದಾಮಿ ಹಿಟ್ಟು, ಒಂದು ಚಿಟಿಕೆ ಉಪ್ಪು ತೆಗೆದುಕೊಂಡು ಹಿಟ್ಟನ್ನು ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಚಪಾತಿಯನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಬಾದಾಮಿಯಲ್ಲಿ ಪೊಟ್ಯಾಷಿಯಮ್, ವಿಟಮಿನ್, ಮೆಗ್ನೀಷಿಯಮ್ ಮತ್ತು ಇತರ ಪೋಷಕಾಂಶಗಳು ಇರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ನಿಮಗೆ ಸಹಾಯ ಮಾಡಬಹುದಲ್ಲದೇ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
Published by:Anitha E
First published: