• Home
 • »
 • News
 • »
 • lifestyle
 • »
 • Weight Loss: ಮಹಿಳೆಯರಿಗೆ ಮಧ್ಯಂತರ ಉಪವಾಸ ಒಳ್ಳೆಯದೇ? ಏನಂತಾರೆ ವೈದ್ಯರು

Weight Loss: ಮಹಿಳೆಯರಿಗೆ ಮಧ್ಯಂತರ ಉಪವಾಸ ಒಳ್ಳೆಯದೇ? ಏನಂತಾರೆ ವೈದ್ಯರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಹಳಷ್ಟು ಜನರು ಈ ಮಧ್ಯಂತರ ಉಪವಾಸದಿಂದ ತುಂಬಾನೇ ಪ್ರಯೋಜನ ಪಡೆದಿದ್ದಾರೆ. ಎಂದರೆ ಅನೇಕರು ಇದನ್ನು ಫಾಲೋ ಮಾಡಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ಉಪವಾಸದ ಅತಿದೊಡ್ಡ ಪ್ರಯೋಜನವೆಂದರೆ ಇದು ನೀವು ತಿನ್ನಬಹುದಾದ ಸಮಯದ ಮಿತಿಯನ್ನು ಕಡಿಮೆ ಮಾಡುತ್ತದೆ.

 • Share this:

ನೀವು ಹಿಂದಿ ಕಾಮಿಡಿಯನ್ ಭಾರತಿ ಸಿಂಗ್ (Barti Singh) ಅವರನ್ನು ಒಂದಲ್ಲ ಒಂದು ಕಾಮಿಡಿ ಶೋ ನಲ್ಲಿ ನೋಡಿಯೇ ಇರುತ್ತೀರಿ. ಆಕೆ ದಪ್ಪಗಿರುವ ಬಗ್ಗೆ ಅನೇಕ ಬಾರಿ ಬಾಡಿ ಶೇಮಿಂಗ್ (Body Shaming) ಜೋಕ್ ಗಳಿಗೆ ಒಳಗಾಗಿದ್ದು, ಆಕೆ ಯಾವಾಗಲೂ ಅದರ ವಿರುದ್ಧ ವಾದಿಸುತ್ತಿದ್ದರು. ಭಾರತಿ ತನ್ನ ಗರ್ಭಧಾರಣೆಯನ್ನು (Pregnancy) ಘೋಷಿಸುವ ಮೊದಲು 15 ಕಿಲೋ ತೂಕವನ್ನು ಕಳೆದುಕೊಳ್ಳುವ ಮೂಲಕ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದರು.. ಸೆಪ್ಟೆಂಬರ್ 2021 ರಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ (Interview) ಭಾರತಿ ಅವರು 91 ರಿಂದ 76 ಕೆಜಿಗೆ ಇಳಿದಿದ್ದಾರೆ ಎಂದು ಬಹಿರಂಗಪಡಿಸಿದರು. 


15 ಕೆಜಿ ತೂಕ ಇಳಿಸಿಕೊಂಡ ಭಾರತಿ
"ನಾನು ತುಂಬಾ ತೂಕವನ್ನು ಕಳೆದುಕೊಂಡಿರುವುದು ನನಗೆ ಆಶ್ಚರ್ಯವನ್ನು ತಂದಿದೆ, ಆದರೆ ನಾನು ಅಷ್ಟೇ ಸಂತೋಷವಾಗಿದ್ದೇನೆ. ಏಕೆಂದರೆ ನಾನು ಆರೋಗ್ಯಕರ ಮತ್ತು ಫಿಟ್ ಆಗಿದ್ದೇನೆ. ಈಗ ನನಗೆ ಉಬ್ಬಸ ಬರುವುದಿಲ್ಲ ಮತ್ತು ದೇಹ ತುಂಬಾನೇ ಹಗುರ ಅನ್ನಿಸುತ್ತಿದೆ” ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದರು.


ಇದೆಲ್ಲಾ ಹೇಗೆ ಸಾಧ್ಯವಾಯಿತು ಅಂತ ಭಾರತಿಯನ್ನ ಕೇಳಿದರೆ, ಆಕೆ ಹೇಳುವುದು ಒಂದೇ ಒಂದು ಅದು ‘ಮಧ್ಯಂತರ ಉಪವಾಸ’ ಅಂತ. ಹೌದು.. ಭಾರತಿ ಕೆಲವು ದಿನಗಳ ಕಾಲ ಈ ಮಧ್ಯಂತರ ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಂತೆ ಅಂತ ಖುದ್ದು ಅವರೇ ಹೇಳಿಕೊಳ್ಳುತ್ತಾರೆ.


ಏನಿದು ಮಧ್ಯಂತರ ಉಪವಾಸ?
ಮಧ್ಯಂತರ ಉಪವಾಸ ಎಂದರೆ ಸಂಜೆ 7 ಗಂಟೆಯಿಂದ ಹಿಡಿದು ಮರುದಿನ ಮಧ್ಯಾಹ್ನ 12 ಗಂಟೆಯವರೆಗೆ ಏನನ್ನೂ ತಿನ್ನುವುದಿಲ್ಲ ಅಂತ ಅರ್ಥ ಬರುತ್ತದೆ. ಮಧ್ಯಂತರ ಉಪವಾಸವು ಕಳೆದ ಕೆಲವು ವರ್ಷಗಳಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ವಾಸ್ತವವಾಗಿ ಇದನ್ನು ಅನುಸರಿಸುವ ಜನರು ಇದನ್ನು ಆಹಾರಕ್ರಮ ಎಂದು ಕರೆಯಲು ದ್ವೇಷಿಸುತ್ತಾರೆ, ಅವರು ಅದನ್ನು ಜೀವನಶೈಲಿ ಎಂದು ಕರೆಯುತ್ತಾರೆ.


ಇದನ್ನೂ ಓದಿ: Pregnant Women: ಗರ್ಭಿಣಿಯರು ಕ್ಯಾರೆಟ್ ತಿಂದ್ರೆ ಮಗು ನಗುತ್ತಂತೆ, ಸಂಶೋಧನೆಯಲ್ಲಿ ಬಹಿರಂಗ


ಮಧ್ಯಂತರ ಉಪವಾಸವು ಮೂಲಭೂತವಾಗಿ ನಿಮ್ಮ ದಿನವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ ಎಂದು ಹೇಳಬಹುದು. ಅತ್ಯಂತ ಸಾಮಾನ್ಯವಾದ ಮಧ್ಯಂತರ ಪಥ್ಯವೆಂದರೆ ಇದು 16 ಗಂಟೆಗಳ ಉಪವಾಸವನ್ನು ಒಳಗೊಂಡಿರುತ್ತದೆ. ನಂತರ ಉಳಿದಂತಹ 8 ಗಂಟೆಯಲ್ಲಿ ನೀವು ನಿಮ್ಮ ಆಹಾರಕ್ರಮವನ್ನು ಹೇಗೆ ಅನುಸರಿಸಬೇಕು ಎಂಬುದನ್ನು ನೀವು ಪ್ಲ್ಯಾನ್ ಮಾಡಿಕೊಳ್ಳಬಹುದು.


ಮಧ್ಯಂತರ ಉಪವಾಸ ಮಾಡಿ ತುಂಬಾನೇ ಪ್ರಯೋಜನ ಪಡೆದ ಜನರು
ಬಹಳಷ್ಟು ಜನರು ಈ ಮಧ್ಯಂತರ ಉಪವಾಸದಿಂದ ತುಂಬಾನೇ ಪ್ರಯೋಜನ ಪಡೆದಿದ್ದಾರೆ. ಎಂದರೆ ಅನೇಕರು ಇದನ್ನು ಫಾಲೋ ಮಾಡಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ಉಪವಾಸದ ಅತಿದೊಡ್ಡ ಪ್ರಯೋಜನವೆಂದರೆ ಇದು ನೀವು ತಿನ್ನಬಹುದಾದ ಸಮಯದ ಮಿತಿಯನ್ನು ಕಡಿಮೆ ಮಾಡುತ್ತದೆ.


ಇತರ ರೀತಿಯ ಮಧ್ಯಂತರ ಉಪವಾಸವೂ ಇದೆ. ಜನರು 5 ದಿನಗಳವರೆಗೆ ತಿನ್ನುತ್ತಾರೆ ಮತ್ತು 2 ದಿನಗಳವರೆಗೆ ಉಪವಾಸ ಮಾಡುತ್ತಾರೆ, ಅಥವಾ 24 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ ಮತ್ತು ಮರುದಿನ ತಿನ್ನುತ್ತಾರೆ. ಹೆಚ್ಚಿನ ಜನರು ಮುಂಚಿತವಾಗಿ ಊಟ ಮಾಡುತ್ತಾರೆ ಮತ್ತು ನಂತರ ತಮ್ಮ ಉಪಾಹಾರವನ್ನು ಬಿಟ್ಟು ಬಿಡುತ್ತಾರೆ. ಇದು 16 ಗಂಟೆಗಳ ಉಪವಾಸದ ಚಕ್ರವನ್ನು ಅನುಸರಿಸಲು ಸುಲಭವಾಗಿದೆ.


ಆದರೆ ಮಧ್ಯಂತರ ಉಪವಾಸವು ಎಲ್ಲರಿಗೂ ಒಳ್ಳೆಯದೇ ಎಂಬ ಪ್ರಶ್ನೆ ಮಾತ್ರ ಅನೇಕರ ತಲೆಯಲ್ಲಿ ಓಡಾಡುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ಪೌಷ್ಟಿಕತಜ್ಞರು ಇದು ಮಹಿಳೆಯರಿಗೆ ಉತ್ತಮವಲ್ಲ ಎಂದು ಹೇಳುತ್ತಾರೆ. ಏಕೆ ಅಂತ ನಿಮಗೆ ಅರ್ಥವಾಗಬೇಕು ಎಂದರೆ ಮುಂದೆ ಓದಿ.


ಮಹಿಳೆಯರಿಗೆ ಮಧ್ಯಂತರ ಉಪವಾಸ ಸೂಕ್ತವಲ್ಲ ಅಂತಾರೆ ವೈದ್ಯರು


 • ಮಧ್ಯಂತರ ಉಪವಾಸವು ಪುರುಷರು ಮತ್ತು ಮಹಿಳೆಯರ ಮೇಲೆ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಕೆಲವು ಸಂಶೋಧಕರು ದೀರ್ಘವಾಗಿ ಏನು ತಿನ್ನದೇ ಇರುವುದರಿಂದ ಮಹಿಳೆಯರ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಇದು ಸುಧಾರಿಸುವ ಬದಲು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಕಂಡುಕೊಂಡಿದ್ದಾರೆ. ಆದ್ದರಿಂದ ನೀವು ಸತತವಾಗಿ 3 ರಿಂದ 4 ದಿನಗಳವರೆಗೆ ನಿರಂತರವಾಗಿ ಮಧ್ಯಂತರ ಉಪವಾಸ ಮಾಡುವ ಬದಲಿಗೆ ಅದನ್ನು ಭಾಗಗಳಾಗಿ ಮಾಡಿಕೊಂಡು ಮಾಡುವುದು ಒಳ್ಳೆಯದು.

 • ಮಹಿಳೆಯರಲ್ಲಿ ವಿಸ್ತೃತ ಉಪವಾಸ ಮತ್ತು ಕ್ಯಾಲೋರಿಗಳನ್ನು ನಿರ್ಬಂಧಿಸುವುದು ಹೈಪೋಥಾಲಮಸ್ ಮೇಲೆ ಪರಿಣಾಮ ಬೀರುತ್ತದೆ ಎಂದು ಮತ್ತೊಂದು ಅಧ್ಯಯನವು ಬಹಿರಂಗಪಡಿಸಿದೆ, ಇದು ಎಲ್ಎಚ್ ಮತ್ತು ಎಫ್ಎಸ್ಎಚ್ ಅನ್ನು ನಿಯಂತ್ರಿಸುವ ಹಾರ್ಮೋನುಗಳ ಬಿಡುಗಡೆಗೆ ಅಡ್ಡಿಪಡಿಸುತ್ತದೆ. ಇದು ಅನಿಯಮಿತ ಋತುಚಕ್ರಕ್ಕೂ ಸಹ ಕಾರಣವಾಗಬಹುದು ಮತ್ತು ಇದು ದೀರ್ಘಕಾಲದಲ್ಲಿ ಮಹಿಳೆಯ ಬಂಜೆತನಕ್ಕೂ ಸಹ ಕಾರಣವಾಗಬಹುದು.


ಇದನ್ನೂ ಓದಿ: Weight Loss Tips: ತೂಕ ಇಳಿಸುವ ಅವಸರದಲ್ಲಿ ಈ ತಪ್ಪು ಮಾಡಬೇಡಿ

 • ಇದು ಮಹಿಳೆಯರಲ್ಲಿ ಕಾರ್ಟಿಸೋಲ್ ಅನ್ನು ಹೆಚ್ಚಿಸಬಹುದು, ಇದು ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಅದರ ವಿರುದ್ಧ ಹೋರಾಡಲು ದೇಹವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಕಡಿಮೆ ಅವಧಿಗೆ ಐಎಫ್ ಅನ್ನು ಪ್ರಯತ್ನಿಸಿ ಮತ್ತು ಮಲಗುವ ಮೊದಲು ಮೂಳೆ ಸಾರು ಅಥವಾ ಮೊಸರಿನಂತಹ ಸೂಪರ್ ಪೌಷ್ಠಿಕ ಆಹಾರವನ್ನು ಸೇವಿಸಿರಿ.

 • 18 ಗಂಟೆಗಳ ಉಪವಾಸವನ್ನು ಅನುಸರಿಸುವವರು ಅಗತ್ಯ ಪೋಷಕಾಂಶಗಳಿಂದ ವಂಚಿತರಾಗಬಹುದು. ಅವರು ತೂಕ ಇಳಿಸಿಕೊಳ್ಳಬಹುದು, ಆದರೆ ಅವರು ತಮ್ಮ ಊಟವು ಕ್ಯಾಲೋರಿ ಮತ್ತು ಪೋಷಕಾಂಶ ಭರಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.


ಸೆಲೆಬ್ರಿಟಿಗಳು ಇದನ್ನೇ ಫಾಲೋ ಮಾಡ್ತಾರೆ
ಮಧ್ಯಂತರ ಉಪವಾಸದಿಂದ ತೂಕ ಕಳೆದುಕೊಂಡವರಲ್ಲಿ ಇತ್ತೀಚಿನ ಉದಾಹರಣೆ ಎಂದರೆ ಅವರು ಭಾರತಿ ಸಿಂಗ್. ಮಲೈಕಾ ಅರೋರಾ, ಅಲಿಯಾ ಭಟ್, ಜಾಕ್ವೆಲಿನ್ ಫರ್ನಾಂಡಿಸ್ ಅವರು ನಿಯಮಿತವಾಗಿ ಇದನ್ನು ಅನುಸರಿಸುವ ಇತರ ಕೆಲವು ತಾರೆಯರು.

Published by:Ashwini Prabhu
First published: