Exercise : 60ರ ಇಳಿ ವಯಸ್ಸಿನಲ್ಲೂ ಮಾಡಬಹುದು ಈ 4 ವ್ಯಾಯಾಮ

Best Exercises for Seniors :40ರಿಂದ 50 ವರ್ಷ ವಯಸ್ಸಿನವರಿಗೆ ಹೋಲಿಕೆ ಮಾಡಿಕೊಂಡರೆ 60 ವರ್ಷ ಮೇಲ್ಪಟ್ಟವರಿಗೆ ವ್ಯಾಯಾಮ ಮಾಡುವುದು ಕೊಂಚ ಕಠಿಣ.. 60 ವರ್ಷ ಮೇಲ್ಪಟ್ಟವರಲ್ಲಿ ಮೂಳೆಗಳು ದುರ್ಬಲವಾಗಿದ್ದು, ಚಯಾಪಚಯ ಕ್ರಿಯೆ ಕಡಿಮೆ ಇರುತ್ತದೆ.

ವ್ಯಾಯಾಮ

ವ್ಯಾಯಾಮ

 • Share this:
  60 ಎನ್ನುವ ವಯಸ್ಸು(60 years)  ಪ್ರತಿಯೊಬ್ಬರ ಜೀವನದಲ್ಲೂ ಒಂದು ಮಹತ್ವದ ಘಟ್ಟ. ಹುಟ್ಟಿನಿಂದ (Birth) ಹಲವು ಜವಾಬ್ದಾರಿಗಳನ್ನು(Responsibilities) ನಿಭಾಯಿಸಿಕೊಂಡು ಬಂದಿದ್ದ ಮನುಷ್ಯ ನೆಮ್ಮದಿಯಿಂದ ಇರುವ ಕಾಲ.. ತಲೆಯ ಮೇಲೆ ಕಪ್ಪು ಕೂದಲುಗಳು ಹೋಗಿ ಬೆಳ್ಳಿ ಕೂದಲು ಹೊಳೆಯುವ ಕಾಲ.. ಇಂತಹ ಸಮಯದಲ್ಲಿ ನೆಮ್ಮದಿಯಿಂದ ಇರಬೇಕಾದ ಹಿರಿಯ ಜೀವಿಗಳಿಗೆ ಹಲವಾರು ಆರೋಗ್ಯ ಸಮಸ್ಯೆಗಳು,(Health problems) ದೈಹಿಕವಾಗಿ(physical) ಮಾನಸಿಕವಾಗಿ(Mentally) ಭಾದಿಸುತ್ತದೆ.. ಹೀಗಾಗಿ ಎಷ್ಟೋ ಜನ ಯಾಕಪ್ಪಾ ದೇವ್ರೇ ಈ ಆಯಸ್ಸು ಕೊಟ್ಟೆ ಬೇಗ ಕರೆದುಕೊಳ್ಳಬಾರದೇ ಎಂದು ಸಾಕಷ್ಟು ಹಿರಿಯರು ದೇವರನ್ನು ನಿತ್ಯ ಬೇಡುತ್ತಾರೆ.

  ದೇಹದ ಪ್ರತಿಯೊಂದು ಅಂಗಾಂಗವ್ಯವಸ್ಥೆಯೂ ದುರ್ಬಲವಾಗುತ್ತದೆ. ಜೀರ್ಣಾಂಗಗಳು ದುರ್ಬಲಗೊಂಡು ಆಹಾರ ಜೀರ್ಣವಾಗುವುದು ಕಷ್ಟ. ಅಪೌಷ್ಟಿಕತೆ ಉಂಟಾಗುತ್ತದೆ. ಮಲಬದ್ದತೆ ಬರುತ್ತದೆ. ಹೃದಯ-ರಕ್ತ ಚಲನಾವ್ಯವಸ್ಥೆಯಲ್ಲಿ ಕೊರತೆ, ಹೃದಯಾಘಾತ, ಲಕ್ವಾ ಹೊಡೆಯಬಹುದು. ಉಸಿರಾಟದ ವ್ಯವಸ್ಥೆ ಶಿಥಿಲವಾಗಿ ಉಸಿರಾಟ ಏರುಪೇರಾಗುತ್ತದೆ. ಮೂಳೆ-ಕೀಲು-ಚಾಲನೆ ಕಷ್ಟವಾಗುತ್ತದೆ. ಮಿದುಳಿನ ನರಮಂಡಲ ಬಲಹೀನವಾಗಿ ಮರೆವು, ಬುದ್ಧಿಶಕ್ತಿ ಕುಗ್ಗುತ್ತದೆ, ಸಮತೋಲನವಿಲ್ಲದೆ ಬಿದ್ದು ಮೂಳೆ-ಮುರಿಯಬಹುದು. ಪಾರ್ಕಿನ್ಸನ್ ಕಾಯಿಲೆ. ಆಲ್‌ಝೈಮರ್‌‌ಕಾಯಿಲೆ ಬರಬಹುದು. ಹೀಗಾಗಿ 60ರ ಹರೆಯದಲ್ಲಿ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇದಕ್ಕಾಗಿ ಯಾವ ವ್ಯಾಯಾಮಗಳನ್ನು ಮಾಡಿದರೆ ಸೂಕ್ತ ಎನ್ನುವ ಮಾಹಿತಿ ಇಲ್ಲಿದೆ..

  60 ಹರೆಯದವರು ಮಾಡಬಹುದು ವ್ಯಾಯಾಮ

  40ರಿಂದ 50 ವರ್ಷ ವಯಸ್ಸಿನವರಿಗೆ ಹೋಲಿಕೆ ಮಾಡಿಕೊಂಡರೆ 60 ವರ್ಷ ಮೇಲ್ಪಟ್ಟವರಿಗೆ ವ್ಯಾಯಾಮ ಮಾಡುವುದು ಕೊಂಚ ಕಠಿಣ.. 60 ವರ್ಷ ಮೇಲ್ಪಟ್ಟವರಲ್ಲಿ ಮೂಳೆಗಳು ದುರ್ಬಲವಾಗಿದ್ದು, ಚಯಾಪಚಯ ಕ್ರಿಯೆ ಕಡಿಮೆ ಇರುತ್ತದೆ.ಹೆಚ್ಚು ಒತ್ತಡ ಹಾಕುವುದು ಇವರ ಮೂಳೆಗಳ ಮೇಲೆ ಪ್ರಭಾವ ಬೀರುತ್ತದೆ.. ಹೀಗಾಗಿ 60ರ ವಯಸ್ಸಿನಲ್ಲಿ ತೂಕ ಇಳಿಸಿಕೊಳ್ಳುವುದು ಆರೋಗ್ಯ ಕಾಪಾಡಿಕೊಂಡಸ್ಟೇ ಮುಖ್ಯ.. ಹೀಗಾಗಿ ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ವಯಸ್ಸು 60 ಆದ್ರೂ ಆರೋಗ್ಯವನ್ನು ಪ್ರಯೋಜನಕಾರಿಯಾಗಿ ಇಟ್ಟುಕೊಳ್ಳಬಹುದು..

  1)ಯೋಗ

  ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಅತಿ ಸುಲಭವಾಗಿ ಮಾಡುವ ವ್ಯಾಯಾಮ ಅಂದ್ರೆ ಯೋಗ.. ಯೋಗ ಬೇರೆಲ್ಲಾ ವ್ಯಾಯಾಮಗಳಿಗೆ ಅಂತ ಅತಿ ಸುಲಭವಾಗಿ ಮಾಡಲು ಸಾಧ್ಯವಿರುವುದರಿಂದ  60 ವರ್ಷ ಮೇಲ್ಪಟ್ಟವರು ತಮ್ಮ ಶಕ್ತಿಗನುಸಾರವಾಗಿ ಕೆಲವೊಂದಷ್ಟು ಯೋಗಗಳನ್ನು ಮಾಡಿದ್ರೆ ಆರೋಗ್ಯದಿಂದ ಇರಲು ಸಾಧ್ಯ.. ಅಲ್ಲದೇ ವಯಸ್ಸಾದವರು ಯೋಗ ಮಾಡುವುದರಿಂದ ರಾತ್ರಿಯ ವೇಳೆಯಲ್ಲಿ ಚೆನ್ನಾಗಿ ನಿದ್ರೆ ಬರಲಿದೆ.. ಅವರ ಜೀರ್ಣಕ್ರಿಯೆ ಹೆಚ್ಚಳವಾಗಲಿದೆ..ಕೀಲುಗಳ ನೋವು ಕಡಿಮೆ ಆಗಲಿದೆ..ಎಲ್ಲದಕ್ಕಿಂತ ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರು ಯೋಗ ಮಾಡುವುದರಿಂದ ಅವರ ಮನಸ್ಸು ಶಾಂತಿಯಿಂದ ಕೂಡಿರಲಿದೆ.

  ಇದನ್ನೂ ಓದಿ :ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

  2)ವಾಕಿಂಗ್

  60 ವರ್ಷ ಮೇಲ್ಪಟ್ಟ ಬಳಿಕ ಓಡುವುದು ಅಷ್ಟೊಂದು ಸುಲಭದ ಮಾತಲ್ಲ..ಹೀಗಾಗಿ 60 ವರ್ಷ ಮೇಲ್ಪಟ್ಟವರು ಪ್ರತಿನಿತ್ಯ ಮೂವತ್ತು ನಿಮಿಷಗಳಕಾಲ ನಡೆಯುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.. ಪ್ರತಿನಿತ್ಯ ನಡೆಯುವುದರಿಂದ ಯೋಗ್ಯ ಪ್ರಮಾಣದ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಸಕ್ರಿಯವಾಗಿರಿಸುತ್ತದೆ. ಇದು ನಿಮ್ಮ ಜಂಟಿ ಚಲನಶೀಲತೆಯನ್ನು ಹೆಚ್ಚಿಸಬಹುದಾಗಿದೆ.

  3) ಪೈಲೇಟ್ಸ್ಗಳು

  ಮ್ಯಾಟ್ ಪೈಲೇಟ್ಸ್ 60 ವರ್ಷ ಮೇಲ್ಪಟ್ಟವರು ಮಾಡಲು ಇರುವ ಉತ್ತಮ ವ್ಯಾಯಾಮಗಳಲ್ಲಿ ಒಂದು.
  ಪೈಲೇಟ್ಸ್ ವ್ಯಾಯಾಮ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯು ಕೆಳ ಬೆನ್ನು ಸೊಂಟ ಮತ್ತು ಪೃಷ್ಠದ ಭಾಗ ಹೆಚ್ಚು ಬಲಿಷ್ಠವಾಗಲಿದೆ..ಸಮತೋಲನ, ನಿಯಂತ್ರಣ, ಶಕ್ತಿ ಹಾಗೂ ಉಸಿರಾಟದ ಶಕ್ತಿಯನ್ನು ಸರಾಗವಾಗಿ ಪೈಲೇಟ್ಸ್ ಗಳನ್ನ ಮಾಡುವ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳಬಹುದು..

  ಇದನ್ನೂ ಓದಿ :ದಿನಕ್ಕೆ ಹತ್ತು ನಿಮಿಷ ವಾಕಿಂಗ್ ಮಾಡಿದ್ರೆ ಪ್ರಯೋಜನಗಳು ಹಲವಾರು

  4) ಬಾಡಿ ವೇಯ್ಟ್‌ ಎಕ್ಸಸೈಜ್

  ಸಾಮಾನ್ಯವಾಗಿ ವಯಸ್ಸಾದವರು ಹೆವಿ ವೇಯ್ಟ್‌ ವ್ಯಾಯಾಮ ಮಾಡುವುದು ಕಷ್ಟಕರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ, ವಯಸ್ಸಾದವರು ಬಾಡಿ ವೇಯ್ಟ್‌ ಎಕ್ಸಸೈಜ್ ಮಾಡಿದ್ರೆ ಅದು ಉತ್ತಮವಾಗಿರಲಿ ಇದೆ... ಸ್ಕ್ವಾಟ್‌ಗಳು, ಲುಂಜ್‌ಗಳು ಮತ್ತು ಕ್ರಂಚ್‌ಗಳು ಎತ್ತುವ ವ್ಯಾಯಾಮಗಳನ್ನು ಮಾಡುವುದಕ್ಕಿಂತ ಬಾಡಿ ವೇಯ್ಟ್‌ ಎಕ್ಸಸೈಜ್ ವಯಸ್ಸಾದವರಲ್ಲಿ ಬಹುಬೇಗ ಪರಿಣಾಮಕಾರಿಯಾಗಲಿದೆ.. ಅಲ್ಲದೆ ಬಾಡಿ ವೇಯ್ಟ್‌ ಎಕ್ಸಸೈಜ್ ಮಾಡುವುದರಿಂದ ಮೂಳೆ ಮತ್ತು ಕೀಲು ನೋವು ಸಮಸ್ಯೆಗಳಿಂದ ಬಳಲುತ್ತಿರುವವರು ಪರಿಣಾಮಕಾರಿಯಾಗಿ ಚೇತರಿಸಿಕೊಳ್ಳಲಿದ್ದಾರೆ..
  Published by:ranjumbkgowda1 ranjumbkgowda1
  First published: