• Home
  • »
  • News
  • »
  • lifestyle
  • »
  • Wight Loss Tips: ದೇಹದ ತೂಕ ಕಡಿಮೆಯಾಗಬೇಕಾ..? ಹಾಗಾದ್ರೆ ಮಧ್ಯಂತರ ಉಪವಾಸ ಮಾಡಿ..!

Wight Loss Tips: ದೇಹದ ತೂಕ ಕಡಿಮೆಯಾಗಬೇಕಾ..? ಹಾಗಾದ್ರೆ ಮಧ್ಯಂತರ ಉಪವಾಸ ಮಾಡಿ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಎಂದರೆ ಏನು ಇಲ್ಲಿದೆ ಸಂಪೂರ್ಣ ಮಾಹಿತಿ

  • Share this:

ದೇಹ ತೂಕ (Wight loss) ಇಳಿಕೆಗಾಗಿ ಜನರು ಉಪವಾಸ, ಕಡಿಮೆ ತಿನ್ನುವುದು, ವ್ಯಾಯಾಮ ಹೀಗೆ ನಾನಾ ಕಸರತ್ತು ಮಾಡುತ್ತಾರೆ. ಇದರ ಜೊತೆ ಕೀಟೋ ಡಯೆಟ್, ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್ (Intermittent Fasting), ಟ್ಪಾಲಿಯೋ ಡಯೆಟ್, ವೇಗನ್ ಡಯೆಟ್, ಕಡಿಮೆ ಕಾರ್ಬ್ ಡಯೆಟ್, ದುಕಾನ್ ಡಯೆಟ್, ಅಲ್ಟ್ರಾ ಲೋ ಫ್ಯಾಟ್ ಡಯೆಟ್, ಅಟ್ಕಿನ್ಸ್ ಡಯೆಟ್ ಹೀಗೆ ನಾನಾ ಡಯೆಟ್‍ (Diet) ಗಳನ್ನು ಫಾಲೋ ಮಾಡ್ತಾರೆ. ದೇಹ ತೂಕ ಕಡಿಮೆ ಮಾಡಿಕೊಳ್ತಾರೆ. ಆದರೆ ಇಲ್ಲೊಬ್ಬರು ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಮಾಡಿ ತೂಕ ಇಳಿಸಿಕೊಂಡಿರುವ ಬಗ್ಗೆ ವಿವರಿಸಿದ್ದಾರೆ.


ಗುಜರಾತ್ ಮೂಲದ ಡೇನಿಯಲ್ ಪಟೇಲ್ ಬರೋಬ್ಬರಿ 18 ಕಿಲೋ ಇಳಿಸಿಕೊಂಡಿದ್ದಾರೆ. ಅವರು ಈ ಡಯೆಟ್ ಅನುಸರಿಸುವ ಮೊದಲು 24 ವರ್ಷದ ಡೇನಿಯಲ್ 88 ಕೆಜಿ ಇದ್ದರು. 10 ತಿಂಗಳಲ್ಲಿ 18 ಕೆಜಿ ಕಡಿಮೆ ಮಾಡಿಕೊಂಡಿದ್ದಾರೆ. ಮೊದಲು ಈ ತೂಕದಿಂದ ನಾನು ಅವಮಾನಗಳನ್ನು ಎದುರಿಸಿದೆ, ಟ್ರೋಲ್ ಆಗೋಕೆ ಶುರುವಾದೆ. ನಂತರ ನಾನು ಜಿಮ್‍ಗೆ ಹೋಗದೆ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್ ಮಾಡಲು ಶುರುಮಾಡಿದೆ ಎನ್ನುತ್ತಾರೆ.


ಡಯೆಟ್
ಉಪಾಹಾರ: ನಾನು 12:12 ಮಾದರಿ ಅನುಸರಿಸಲು ಶುರುಮಾಡಿದ್ದರಿಂದ ಬೆಳಗಿನ ಉಪಹಾರ ಸೇವಿಸುತ್ತಿರಲಿಲ್ಲ. ಬೇಕೆಂದರೆ ನೀರು ಮಾತ್ರ ಕುಡಿಯುತ್ತಿದ್ದೆ.


ಊಟ:ನನ್ನ ಮೊದಲ ಊಟ ಬೆಳಗ್ಗೆ 11 ಗಂಟೆಗೆ ಮತ್ತು ಇದನ್ನು ಸಾಮಾನ್ಯವಾಗಿ ಸಣ್ಣ ಊಟಗಳಾಗಿ ವಿಭಜಿಸಲಾಗುತ್ತದೆ. ಮೊದಲು, ನಾನು ಸಕ್ಕರೆ ಇಲ್ಲದ ಒಂದು ಕಪ್ ಹಾಲನ್ನು ಸೇವಿಸುತ್ತಿದ್ದೆ ಮತ್ತು ಸ್ವಲ್ಪ ಸಮಯದ ನಂತರ, ಎರಡು ಚಪಾತಿಗಳನ್ನು ಸಬ್ಜಿ ಮತ್ತು ರಾಯತದೊಂದಿಗೆ ತಿನ್ನುತ್ತಿದ್ದೆ.


ವರ್ಕೌಟ್, ಫಿಟ್ನೆಸ್ ರಹಸ್ಯ
ನನಗೆ ಜಿಮ್ ಸರಿಹೊಂದುವುದಿಲ್ಲ ಎಂದು ತಿಳಿದು ಮನೆಯಲ್ಲಿಯೇ ಕಾರ್ಡಿಯೋ ವರ್ಕೌಟ್ ಮಾಡಲು ಶುರುಮಾಡಿದೆ ಮತ್ತು ಆಹಾರದಲ್ಲಿನ ನಿಯಂತ್ರಣ ನನ್ನಲ್ಲಿನ ಈ ದೊಡ್ಡ ಬದಲಾವಣೆಗೆ ಕಾರಣವಾಯಿತು. ಪರಿಶ್ರಮ ಮತ್ತು ತ್ಯಾಗ ಇವು ನಿಮ್ಮ ಗುರಿ ತಲುಪುವಂತೆ ಮಾಡುತ್ತದೆ ಎಂದು ಹೇಳುತ್ತಾರೆ ಡೇನಿಯಲ್.


ನಮಗೆ ನಾವೇ ಸ್ಫೂರ್ತಿ
ನಾನು ನನ್ನ ಬಗ್ಗೆ ಮಾತ್ರ ಚಿಂತಿಸುತಿದ್ದೆ. ಬೇರೆಯವರು ಮಾಡುವ ಕಮೆಂಟ್‍ಗಳಿಗೆ ನಾನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದು ನನ್ನ ಸ್ವಯಂ ಸ್ಫೂರ್ತಿಗೊಳಿಸಿತು. ಸ್ವಲ್ಪ ತೂಕ ಇಂಚು ಕಡಿಮೆಯಾದರೂ ನಾನೇ ಸ್ಫೂರ್ತಿಗೊಳ್ಳುತ್ತಿದ್ದೆ.


ಇದನ್ನು ಓದಿ: Amazon Prime Subscription ದರ ಹೆಚ್ಚಳ; ಮಾಸಿಕ ಸೇರಿದಂತೆ ವಾರ್ಷಿಕ ಪ್ಲಾನ್​ ಬೆಲೆ ಇಂತಿದೆ

ಅಧಿಕ ತೂಕದ ಅತ್ಯಂತ ಕಷ್ಟಕರ ಅಂಶ ಯಾವುದು..?
ಅತ್ಯಂತ ಕಷ್ಟಕರವಾದ ಭಾಗವೆಂದರೆ ನನ್ನ ನಿಜವಾದ ವಯಸ್ಸಿಗಿಂತ ನಾನು ವಯಸ್ಸಾದಂತೆ ಕಾಣುತ್ತಿದ್ದೇನೆಂಬ ಸತ್ಯ ಒಪ್ಪಿಕೊಳ್ಳುವುದು, ಮತ್ತು ಆ ಕಾರಣಕ್ಕಾಗಿ, ನಾನು ಆಗಾಗ್ಗೆ ಹಿಂಸೆಗೆ ಒಳಗಾಗುತ್ತಿದ್ದೆ. ನಾನು ಕಾಣುವ ರೀತಿಯ ಬಗ್ಗೆ ನನಗೆ ತುಂಬಾ ಆತ್ಮವಿಶ್ವಾಸವಿಲ್ಲದ ಕಾರಣ, ಕುಟುಂಬ ಸಮಾರಂಭಗಳು ಮತ್ತು ಸಾಮಾಜಿಕ ಕೂಟಗಳಿಗೆ ಹಾಜರಾಗುವುದು ತುಂಬಾ ಕಷ್ಟಕರವಾಗಿತ್ತು.


ಇದನ್ನು ಓದಿ: ಮೊಬೈಲ್​ ಪದೇ ಪದೇ ಹ್ಯಾಂಗ್​ ಆಗುತ್ತಿದ್ಯಾ; ಈ 3 ಸೆಟ್ಟಿಂಗ್ಸ್​ ಬದಲಾಯಿಸಿ ಮಾಡಿ ಸಾಕು

10 ವರ್ಷಗಳ ಕೆಳಗೆ ನೀವು ಯಾವ ಆಕಾರ ಪಡೆದಿದ್ದೀರಿ?
ನಾನು ಉತ್ತಮ ಮೈಕಟ್ಟು ಹೊಂದಿದ್ದೇನೆ ಮತ್ತು ಸದಾಕಾಲ ಫಿಟ್ ಆಗಿರಲು ಬಯಸುತ್ತೇನೆ. 70 ಕಿಲೋ ನನ್ನ ತೂಕ. ನೀವು ಮಾಡಿದ ಬದಲಾವಣೆಗಳೇನು? ನನ್ನ ಆಹಾರ ಮತ್ತು ನಾನು ಹೇಗೆ ತರಬೇತಿ ನೀಡುತ್ತೇನೆ ಎಂಬುದರ ಬಗ್ಗೆ ನಾನು ತುಂಬಾ ಕಟ್ಟುನಿಟ್ಟಾಗಿರುತ್ತೇನೆ. ನಾನು ತಂಪು ಪಾನೀಯಗಳನ್ನು ಬಿಟ್ಟಿದ್ದೇನೆ. ಮಧ್ಯಂತರ ಉಪವಾಸ ಅನುಸರಿಸುತ್ತೇನೆ ಮತ್ತು ಸಾಂದರ್ಭಿಕವಾಗಿ ಸಕ್ಕರೆ ಮತ್ತು ಜಂಕ್ ಫುಡ್ ಮಾತ್ರ ಸೇವಿಸುತ್ತೇನೆ.


ತೂಕ ನಷ್ಟದಿಂದ ಕಲಿತ ಪಾಠಗಳು:
ಈ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ನಾನು ಕಲಿತಿದ್ದೇನೆ. ತೂಕ ಕಳೆದುಕೊಳ್ಳುವುದು ಮತ್ತು ಫಿಟ್ಟರ್ ಆಗುವುದು ಶಕ್ತಿಯುತ ಮತ್ತು ಜೀವನದ ಕಡೆಗೆ ಹೆಚ್ಚು ಆತ್ಮವಿಶ್ವಾಸ ನೀಡುತ್ತದೆ. ನಿಮ್ಮ ಜೀವನಶೈಲಿಗೆ ಆದ್ಯತೆ ನೀಡಿ ಮತ್ತು ಎಲ್ಲವೂ ಮಿತವಾಗಿರಲಿ. ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸಿ.


First published: