• Home
 • »
 • News
 • »
 • lifestyle
 • »
 • Weight Loss: ತೂಕ ನಷ್ಟ ಮತ್ತು ಸೊಂಟದ ಗಾತ್ರ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ ಪದಾರ್ಥ ಸೇರಿಸಿ!

Weight Loss: ತೂಕ ನಷ್ಟ ಮತ್ತು ಸೊಂಟದ ಗಾತ್ರ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ ಪದಾರ್ಥ ಸೇರಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೊಂಟವನ್ನು ಸ್ಲಿಮ್ ಮಾಡಲು ನೀವು ತೂಕ ನಷ್ಟ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಿ. ಪ್ರತಿ ವಾರ ಈ ಆಹಾರಗಳ ಸೇವನೆ ಮಾಡಲು ಮರೆಯದಿರಿ. ತೂಕ ನಷ್ಟಕ್ಕೆ ಹಲವು ರೀತಿಯ ವಿಧಾನಗಳನ್ನು ಫಾಲೋ ಮಾಡಬಹುದು. ಆದರೆ ತೂಕ ನಷ್ಟದ ವಿಚಾರದಲ್ಲಿ ಆಹಾರ ತುಂಬಾ ಮುಖ್ಯ ಆಗುತ್ತದೆ.

 • Share this:

  ತೂಕ ಇಳಿಸುವುದು (Weight Loss) ತುಂಬಾ ಕಷ್ಟದ ಕೆಲಸ (Work). ಅದರಲ್ಲೂ ಸೊಂಟದ ತೂಕ ಇಳಿಸುವುದು (Belly Fat Loss) ತುಂಬಾ ಕಷ್ಟಕರ. ಸುಂದರ ಸೊಂಟ, ತೆಳ್ಳಗಿನ ಸೊಂಟ ನಿಮ್ಮನ್ನು ಮತ್ತಷ್ಟು ಸುಂದರ (Beautiful) ಆಗಿಸುತ್ತದೆ. ತೆಳ್ಳಗಿನ ಸೊಂಟವು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮನ್ನು ಇದು ರೋಗಗಳಿಂದ (Disease) ದೂರ ಇಡುತ್ತದೆ. ಆದರೆ ಹೆಚ್ಚಿನ ಜನರು ತೂಕ ನಷ್ಟ ಮಾಡಲು ಸಾಧ್ಯ ಆಗಲ್ಲ. ಹಾಗಾಗಿ ಸೊಂಟದ ಗಾತ್ರವೂ ಹಾಗೆಯೇ ಇರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಸೊಂಟದ ಗಾತ್ರ ಕಡಿಮೆ ಆಗುವುದಿಲ್ಲ. ಹೀಗಾಗಿ  ಸೊಂಟದ ಗಾತ್ರವು ಇಳಿಯುವ ಮಾತೇ ಇರಲ್ಲ. ಅದಾಗ್ಯೂ ತೂಕ ಕಡಿಮೆ ಆಗದಿರಲು ಹಲವು ಕಾರಣಗಳು ಇವೆ.


  ತೂಕ ನಷ್ಟಕ್ಕೆ ಆಹಾರ ಪದ್ಧತಿ


  ನೀವು ತೂಕ ನಷ್ಟಕ್ಕೆ ಹಲವು ರೀತಿಯ ವಿಧಾನಗಳನ್ನು ಫಾಲೋ ಮಾಡಬಹುದು. ಆದರೆ ತೂಕ ನಷ್ಟದ ವಿಚಾರದಲ್ಲಿ ಆಹಾರ ತುಂಬಾ ಮುಖ್ಯ ಆಗುತ್ತದೆ. ಆಹಾರದಲ್ಲಿ ನೀವು ಯಾವ ಪದಾರ್ಥಗಳನ್ನು ಸೇರಿಸುತ್ತೀರಿ? ಇಲ್ಲವೋ ಎಂದು ಮೊದಲು ಯೋಚನೆ ಮಾಡಿ. ಅದರ ಬಗ್ಗೆ ತುಂಬಾ ಜಾಗ್ರತೆ ವಹಿಸಿ.


  ಸೊಂಟವನ್ನು ಸ್ಲಿಮ್ ಮಾಡಲು ನೀವು ತೂಕ ನಷ್ಟ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಿ. ಪ್ರತಿ ವಾರ ಈ ಆಹಾರಗಳ ಸೇವನೆ ಮಾಡಲು ಮರೆಯದಿರಿ. ಫೈಬರ್, ಪ್ರೋಟೀನ್ ಮುಂತಾದ ಎಲ್ಲಾ ಪೋಷಕಾಂಶ ಅವು ಒಳಗೊಂಡಿವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


  ಚಿಯಾ ಬೀಜಗಳು


  ಚಿಯಾ ಬೀಜಗಳು ತೂಕ ನಷ್ಟ ಸ್ನೇಹಿ ಆಹಾರ ಆಗಿವೆ. ಫೈಬರ್ ಅನ್ನು ಪದಾರ್ಥಗಳು ಹೊಂದಿರಬೇಕು. ಪ್ರತಿದಿನ ಕೇವಲ 2 ಟೀಚಮಚ ಚಿಯಾ ಬೀಜಗಳನ್ನು ಸೇವಿಸುವ ಮೂಲಕ ದೈನಂದಿನ ಅಗತ್ಯವಿರುವ ಫೈಬರ್‌ ನ 40 ಪ್ರತಿಶತ ಕಂಡು ಹಿಡಿಯಬಹುದು.


  ಚಿಯಾ ಬೀಜಗಳನ್ನು ನೆನೆಸಿಟ್ಟು ತಿಂದರೆ ಅದು ಹೊಟ್ಟೆ ತುಂಬಿ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಚಿಯಾ ಬೀಜಗಳನ್ನು ತಿನ್ನುವ ಮೂಲಕ ಕ್ಯಾಲೊರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ಮೊಟ್ಟೆ


  ಮೊಟ್ಟೆ ಒಂದು ಸೂಪರ್‌ ಫುಡ್ ಆಗಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಕಾರಿ ಆಗಿದೆ. ಇದು ಪೋಷಕಾಂಶಗಳಿಂದ ಸಮೃದ್ಧ ಪದಾರ್ಥ ಆಗಿದೆ. ಮೊಟ್ಟೆಗಳಲ್ಲಿ ಕೋಲೀನ್ ಮತ್ತು ವಿಟಮಿನ್ ಡಿ ಪೋಷಕಾಂಶಗಳು ಇವೆ.


  ಇದು ಆಹಾರದಿಂದ ಪಡೆಯುವುದು ಕಷ್ಟ. ಮೊಟ್ಟೆಗಳಲ್ಲಿ ಪ್ರೋಟೀನ್ ಕೂಡ ಇದೆ. ಹಾಗಾಗಿ ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ತೂಕವನ್ನು ಸುಲಭವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ವಾಲ್ನಟ್


  ಕ್ಯಾಲೊರಿ ಹೆಚ್ಚಿಸದೆ ಶಕ್ತಿ ಪಡೆಯಲು ವಾಲ್ನಟ್ಗ ತಿನ್ನಬೇಕು. ವಾಲ್ನಟ್ಸ್ ಸೇವನೆ ಮಾಡುವುದು ಮೆದುಳು ಹಸಿವನ್ನು ನಿಯಂತ್ರಿಸಲು ಪ್ರಾರಂಭಿಸುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ತಿಂಡಿಗಳ ಸೇವನೆ ಹೊರತು ಪಡಿಸಿ ನೀವು ಇದನ್ನು ಪಾಕ ವಿಧಾನಕ್ಕೆ ಸೇರಿಸುವ ಮೂಲಕ ತಿನ್ನುವುದು ಸಹ ಫಲಿತಾಂಶ ನೀಡುತ್ತದೆ.


  ಮೀನು


  ಮೊಟ್ಟೆಯ ಹೊರತಾಗಿ, ಮೀನು ಕೂಡ ತೂಕ ನಷ್ಟಕ್ಕೆ ಉತ್ತಮ ಆಹಾರ ಆಗಿದೆ. ಇದರ ಸೇವನೆ ಸೊಂಟವನ್ನು ತೆಳ್ಳಗೆ ಮಾಡಲು ಸಹಾಯ ಮಾಡುತ್ತದೆ. ಯಾಕಂದ್ರೆ ಇದರಲ್ಲಿ ದೊಡ್ಡ ಪ್ರಮಾಣದ ಪ್ರೊಟೀನ್ ಕೂಡ ಇದೆ.


  ಪ್ರೋಟೀನ್ ಸೇವನೆ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದು ನಿಮ್ಮನ್ನು ಅನಾರೋಗ್ಯಕರ ಆಹಾರ ಸೇವನೆಯ ಕಡುಬಯಕೆ ಕಡಿಮೆ ಮಾಡುತ್ತದೆ. ಮತ್ತು ಪ್ರೋಟೀನ್ ನಿಧಾನವಾಗಿ ದೇಹಕ್ಕೆ ಶಕ್ತಿ ನೀಡುತ್ತದೆ.


  ಮೊಸರು


  ಬೆಳಗಿನ ಉಪಾಹಾರದಲ್ಲಿ ಮೊಸರು ತಿನ್ನುವ ಮೂಲಕ ಪ್ರೋಟೀನ್ ಉಪಹಾರದೇಹಕ್ಕೆ ಸಿಗುತ್ತದೆ. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸೇವನೆ ಹೊಟ್ಟೆ ಹೆಚ್ಚಿನ ಸಮಯ ತುಂಬಿರಲು ಸಹಕಾರಿ. ಇದು ತೂಕ ನಿಯಂತ್ರಣದಲ್ಲಿ ಇಡುತ್ತದೆ. ಮೊಸರು ರುಚಿಕರ ಆಹಾರ. ಇದು ಕರುಳಿನ ಆರೋಗ್ಯಕ್ಕೂ ಒಳ್ಳೆಯದು.


  ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


  ಪಾಪ್ ಕಾರ್ನ್


  ಪಾಪ್ ಕಾರ್ನ್ ನಲ್ಲಿ ಫೈಬರ್ ಹೇರಳವಾಗಿದೆ. ಇದಕ್ಕಾಗಿ ಹುರಿದ ಪಾಪ್ ಕಾರ್ನ್ ತಿನ್ನಿ, ಬೆಣ್ಣೆಯಲ್ಲಿ ಮಾಡಿದ ಪಾಪ್ ಕಾರ್ನ್ ಅಲ್ಲ.

  Published by:renukadariyannavar
  First published: