• Home
  • »
  • News
  • »
  • lifestyle
  • »
  • World Vegan Day: ತೂಕ ನಷ್ಟ, ಬಲಿಷ್ಠ ಮೂಳೆಗಳು ಸೇರಿದಂತೆ ಯಾವೆಲ್ಲಾಆರೋಗ್ಯ ಪ್ರಯೋಜನ ನೀಡುತ್ತೆ ಗೊತ್ತಾ ಈ ತರಕಾರಿ!

World Vegan Day: ತೂಕ ನಷ್ಟ, ಬಲಿಷ್ಠ ಮೂಳೆಗಳು ಸೇರಿದಂತೆ ಯಾವೆಲ್ಲಾಆರೋಗ್ಯ ಪ್ರಯೋಜನ ನೀಡುತ್ತೆ ಗೊತ್ತಾ ಈ ತರಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾಲಕ್ ಪೌಷ್ಟಿಕ ಸಸ್ಯಾಹಾರಿ ತರಕಾರಿ. ಪಾಲಕ್ ಪದಾರ್ಥದಲ್ಲಿ ಲೆಕ್ಕವಿಲ್ಲದಷ್ಟು ಪೋಷಕಾಂಶಗಳಿವೆ. ಈ ಪೋಷಕಾಂಶಗಳು ಆರೋಗ್ಯದ ನಿಧಿ. ರಕ್ತನಾಳಗಳಿಗೆ ಪಾಲಕ್ ಅದ್ಭುತ ಶಕ್ತಿ ನೀಡುತ್ತದೆ. ಪಾಲಕ್ ನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದು ವೇಗವಾಗಿ ತೂಕ ಕಳೆದುಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

    ಇಂದು ನವೆಂಬರ್ 1 (November One) . ಇಂದಿನ ದಿನವನ್ನು (Day) ವಿಶ್ವದಾದ್ಯಂತ ಸಸ್ಯಾಹಾರಿ ದಿನವನ್ನಾಗಿ (World Vegan Day) ಆಚರಣೆ ಮಾಡಲಾಗುತ್ತದೆ. ಹೌದು ಪ್ರತೀ ವರ್ಷ ನವೆಂಬರ್ ಒಂದು ಸಸ್ಯಾಹಾರಿಗಳಿಗೆ (Vegetarians) ವಿಶೇಷ ದಿನವಾಗಿದೆ. ಹೀಗಾಗಿ ವಿಶ್ವ ಸಸ್ಯಾಹಾರಿ ದಿನ ಆರೋಗ್ಯ  (Health) ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಇದರಿಂದ ಶುದ್ಧ ಸಸ್ಯಾಹಾರದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಬಹುದು. ಮಾಂಸಾಹಾರಿ ಆಹಾರಕ್ಕಿಂತ ಸಸ್ಯಾಹಾರಿ ಆಹಾರಗಳು ಕಡಿಮೆ ಪೌಷ್ಟಿಕಾಂಶ ಹೊಂದಿವೆ ಎಂಬುದು ಹಲವರ ನಂಬಿಕೆ. ಆದರೆ ಇದು ಜನರಲ್ಲಿರುವ ತಪ್ಪು ಕಲ್ಪನೆ. ಸಸ್ಯಾಹಾರಿ ಆಹಾರಗಳು ಹಲವು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅಂತಹ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಯೋಣ.


    ತೂಕ ನಷ್ಟ ಮತ್ತು ಬಲಿಷ್ಠ ಮೂಳೆಗಳಿಗೆ ಪಾಲಕ್ ತರಕಾರಿ


    ಪಾಲಕ್ ಅತ್ಯಂತ ಪೌಷ್ಟಿಕ ಸಸ್ಯಾಹಾರಿ ತರಕಾರಿ ಆಗಿದೆ. ಪಾಲಕ್ ಪದಾರ್ಥದಲ್ಲಿ ಲೆಕ್ಕವಿಲ್ಲದಷ್ಟು ಪೋಷಕಾಂಶಗಳಿವೆ. ಈ ಪೋಷಕಾಂಶಗಳು ಆರೋಗ್ಯದ ನಿಧಿ. ರಕ್ತನಾಳಗಳಿಗೆ ಪಾಲಕ್ ಅದ್ಭುತ ಶಕ್ತಿ ನೀಡುತ್ತದೆ.


    ಪಾಲಕ್ ನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದು ವೇಗವಾಗಿ ತೂಕ ಕಳೆದುಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಉತ್ತಮ ಸಸ್ಯಾಹಾರಿ ಆಹಾರ ಪದಾರ್ಥ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಪಾಲಕ್ ದಲ್ಲಿ ಯಾವೆಲ್ಲಾ ಪೋಷಕಾಂಶಗಳಿವೆ?


    ನೀರು


    ಚಳಿಗಾಲದಲ್ಲಿ ಪಾಲಕ್ ಪನೀರ್ ಮತ್ತು ಪಾಲಕ್ ಸಾಗ್ ತುಂಬಾ ರುಚಿ ನೀಡುತ್ತದೆ. ಆದರೆ ಚಳಿಗಾಲದಲ್ಲಿ ಪಾಲಕ್ ಸೊಪ್ಪಿನ ಪದಾರ್ಥಗಳ ಸೇವನೆ ನೀರಿನ ಕೊರತೆ ನೀಗಿಸುತ್ತದೆ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಒಣ ತ್ವಚೆ, ತಲೆಹೊಟ್ಟು, ಆಯಾಸದಂತ ಸಮಸ್ಯೆ ಬರಲ್ಲ. ಪಾಲಕ್ ಹೆಚ್ಚಿನ ನೀರು ಹೊಂದಿದೆ. 91 ರಷ್ಟು ಪ್ರತಿಶತ ನೀರು ಪಾಲಕ್ ನಲ್ಲಿದೆ.


    ಪ್ರೋಟೀನ್


    ಪಾಲಕ್ ತರಕಾರಿ ಪ್ರೋಟೀನ್ ಹೊಂದಿದೆ. ಸುಮಾರು 100 ಗ್ರಾಂ ಪಾಲಕ್ ಎಲೆಗಳ ಸೇವನೆ ಮಾಡಿದಾಗ 2.9 ಗ್ರಾಂ ಪ್ರೋಟೀನ್ ಸಿಗುತ್ತದೆ. ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.


    ಫೈಬರ್


    ನೀವು ಸ್ಲಿಮ್ ಮತ್ತು ಫಿಟ್ ಆಗಲು ಬಯಸಿದರೆ ಪಾಲಕ್ ತಿನ್ನಲು ಪ್ರಾರಂಭಿಸಿ. ಇದು ಕರಗದ ಫೈಬರ್ ನಲ್ಲಿ ಸಮೃದ್ಧವಾಗಿದೆ. ಪಾಲಕ್ ಜೀರ್ಣಕ್ರಿಯೆ ಮತ್ತು ಚಯಾಪಚಯ ಸುಧಾರಿಸುತ್ತದೆ. ಇದು ಕೊಬ್ಬನ್ನು ವೇಗವಾಗಿ ಸುಡುತ್ತದೆ. ಪಾಲಕ್ ಮಲಬದ್ಧತೆ ಗುಣಪಡಿಸಲು ಸಹ ಸಹಾಯ ಮಾಡುತ್ತದೆ.


    ಕ್ಯಾಲ್ಸಿಯಂ


    ಮಕ್ಕಳಿಗೆ ಪಾಲಕ್ ಸೊಪ್ಪಿನ ಸೇವನೆ ಮೂಳೆಗಳ ಬೆಳವಣಿಗೆ ಮತ್ತು ಶಕ್ತಿ ನೀಡುತ್ತದೆ. 100 ಗ್ರಾಂ ಪಾಲಕ್ ಎಲೆಗಳಲ್ಲಿ ಸುಮಾರು 99 ಮಿಗ್ರಾಂ ಕ್ಯಾಲ್ಸಿಯಂ ಇದೆ. ನರಮಂಡಲ, ಹೃದಯ ಮತ್ತು ಸ್ನಾಯುಗಳಿಗೆ ಕ್ಯಾಲ್ಸಿಯಂ ಸಹ ಮುಖ್ಯವಾಗಿದೆ.


    ಕಬ್ಬಿಣ


    ರಕ್ತಹೀನತೆ ಕಡಿಮೆ ಮಾಡಲು ಪಾಲಕ್ ಸೇವನೆ ಸಹಕಾರಿ. 100 ಗ್ರಾಂ ಪಾಲಕ್ ಸೊಪ್ಪಿನೊಳಗೆ 2.9ಮಿಗ್ರಾಂ ಕಬ್ಬಿಣಾಂಶವಿದೆ. ಕಬ್ಬಿಣವು ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಅಂಗಾಂಶಗಳಿಗೆ ಆಮ್ಲಜನಕ ನೀಡುತ್ತದೆ.


    ವಿಟಮಿನ್ ಸಿ


    ಪಾಲಕ್ ಸೊಪ್ಪು ವಿಟಮಿನ್ ಸಿ ಹೊಂದಿದೆ. 100 ಗ್ರಾಂ ಪಾಲಕದಲ್ಲಿ ಸುಮಾರು 28.1 ಮಿಗ್ರಾಂ ವಿಟಮಿನ್-ಸಿ ಇದೆ. ಚರ್ಮವನ್ನು ಯೌವನವಾಗಿರಿಸುತ್ತದೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ರೋಗಗಳಿಂದ ಕಾಪಾಡುತ್ತದೆ.


    ವಿಟಮಿನ್ ಎ


    ದುರ್ಬಲ ದೃಷ್ಟಿ ಸರಿಪಡಿಸಲು ಆಹಾರದಲ್ಲಿ ಪಾಲಕ ಸೇರಿಸಿ. ಈ ಸೊಪ್ಪಿನಲ್ಲಿ ಕ್ಯಾರೊಟಿನಾಯ್ಡ್‌ಗಳು ಹೇರಳವಾಗಿವೆ. ಇದು ದೇಹಕ್ಕೆ ಹೋಗಿ ವಿಟಮಿನ್ ಎ ಆಗುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ನೀವು ಪಾಲಕ್ ತಿಂದರೆ ಏನಾಗುತ್ತದೆ?


    ಪಾಲಕ್ ಸೊಪ್ಪು ಅಸಂಖ್ಯಾತ ಪೋಷಕಾಂಶಗಳಿಂದ ಕೂಡಿದೆ. ವಿಟಮಿನ್ ಕೆ 1, ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಪೊಟ್ಯಾಸಿಯಮ್,ಲುಟೀನ್, ನೈಟ್ರೇಟ್ ಇತ್ಯಾದಿ ಅನೇಕ ಆರೋಗ್ಯಕರ ಪೋಷಕಾಂಶವನ್ನು ದೇಹಕ್ಕೆ ಒದಗಿಸುತ್ತದೆ. ಮಧುಮೇಹ, ಉಬ್ಬರ, ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಸಹಕಾರಿ ಆಗಿದೆ.

    Published by:renukadariyannavar
    First published: