• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಸಲು ಪ್ರಯತ್ನಿಸುತ್ತಿದ್ರೆ ರಾತ್ರಿ ಈ ಕೆಲಸಗಳನ್ನು ಮಾಡೋದನ್ನ ಮರೆಯಬೇಡಿ

Weight Loss: ತೂಕ ಇಳಿಸಲು ಪ್ರಯತ್ನಿಸುತ್ತಿದ್ರೆ ರಾತ್ರಿ ಈ ಕೆಲಸಗಳನ್ನು ಮಾಡೋದನ್ನ ಮರೆಯಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ನಷ್ಟಕ್ಕೆ ದಿನದ ದಿನಚರಿ ಮಾತ್ರವಲ್ಲದೇ ರಾತ್ರಿ ದಿನಚರಿಯೂ ಮುಖ್ಯ ಆಗಿದೆ. ನಿಮ್ಮ ರಾತ್ರಿಯ ದಿನಚರಿಯಲ್ಲಿ ನೀವು ಏನು ಮಾಡಬೇಕು ಎಂಬ ಬಗ್ಗೆ ಕಾಳಜಿ ವಹಿಸುವುದು ಸಹ ಬಹಳ ಮುಖ್ಯ. ಈಗ ನೀವು ರಾತ್ರಿ ತೂಕ ಹೇಗೆ ಕಳೆದುಕೊಳ್ಳಬೇಕು ತೂಕ ನಷ್ಟಕ್ಕೆ ನೀವು ಸರಿಯಾದ ರಾತ್ರಿಯ ದಿನಚರಿ ಫಾಲೋ ಮಾಡಿದರೆ ತೂಕ ನಷ್ಟದ ಪ್ರಕ್ರಿಯೆ ವೇಗವಾಗುತ್ತದೆ.

ಮುಂದೆ ಓದಿ ...
  • Share this:

    ತೂಕ ನಷ್ಟ (Weight Loss) ಸುಲಭದ ವಿಚಾರ ಅಲ್ಲ. ವಿಶೇಷವಾಗಿ (Special) ಕೋವಿಡ್ 19 ನಂತರ ಇದು ಒಂದು ಕಡೆ ಜನರನ್ನು (People) ಆರೋಗ್ಯದ (Health) ಬಗ್ಗೆ ಜಾಗೃತಿ (Awareness) ಮೂಡಿಸುತ್ತಿದೆ. ಮತ್ತೊಂದೆಡೆ ನಮ್ಮೆಲ್ಲರ ದೈನಂದಿನ ದಿನಚರಿ ಮೊದಲಿನಂತೆ ಆಗಿದೆ. ಕೋವಿಡ್ ನಮ್ಮೆಲ್ಲರ ಜೀವನಶೈಲಿಯಲ್ಲಿ (Lifestyle) ದೊಡ್ಡ ಬದಲಾವಣೆ ತಂದಿದೆ. ಅಂತಹ ವೇಳೆ ತೂಕ ಇಳಿಸಲು ಪ್ರಯತ್ನಿಸುತ್ತಿರುವ ನಾವು ಎಲ್ಲದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಸರಿಯಾದ ಆಹಾರ ಸೇವನೆ, ಕ್ಯಾಲೋರಿ ಬಗ್ಗೆ ಕಾಳಜಿ ವಹಿಸುವುದು, ವ್ಯಾಯಾಮ ಮಾಡುವುದು ಇತ್ಯಾದಿ ಆರೋಗ್ಯ ಚೆನ್ನಾಗಿಡಲು ಸಹಕಾರಿ ಆಗಿದೆ. ಆದರೆ ಅದು ಮಾತ್ರ ಸಾಕಾಗಲ್ಲ.


    ತೂಕ ಇಳಿಕೆಗೆ ರಾತ್ರಿ ದಿನಚರಿ ಹೀಗಿರಲಿ


    ಯಾಕಂದ್ರೆ ತೂಕ ನಷ್ಟಕ್ಕೆ ದಿನದ ದಿನಚರಿ ಮಾತ್ರವಲ್ಲದೇ, ರಾತ್ರಿ ದಿನಚರಿಯೂ ಮುಖ್ಯ ಆಗಿದೆ. ನಿಮ್ಮ ರಾತ್ರಿಯ ದಿನಚರಿಯಲ್ಲಿ ನೀವು ಏನು ಮಾಡಬೇಕು ಎಂಬ ಬಗ್ಗೆ ಕಾಳಜಿ ವಹಿಸುವುದು ಸಹ ಬಹಳ ಮುಖ್ಯ.


    ಈಗ ನೀವು ರಾತ್ರಿ ತೂಕ ಹೇಗೆ ಕಳೆದುಕೊಳ್ಳಬೇಕು? ತೂಕ ನಷ್ಟಕ್ಕೆ ನೀವು ಸರಿಯಾದ ರಾತ್ರಿಯ ದಿನಚರಿ ಫಾಲೋ ಮಾಡಿದರೆ ತೂಕ ನಷ್ಟದ ಪ್ರಕ್ರಿಯೆ ವೇಗ ಆಗಿಸುತ್ತದೆ. ಸುಲಭವಾಗಿ ಮತ್ತು ತ್ವರಿತವಾಗಿ ತೂಕ ಕಳೆದುಕೊಳ್ಳಲು ಮಲಗುವ ಮುನ್ನ ನೀವು ಏನು ಮಾಡಬೇಕು ಎಂಬುದನ್ನು ನಾವು ನೋಡೋಣ.


    ಇದನ್ನೂ ಓದಿ: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು


    ತೂಕ ನಷ್ಟಕ್ಕೆ ನಿಮ್ಮ ರಾತ್ರಿಯ ದಿನಚರಿ ಹೇಗಿರಬೇಕು?


    ಲಘು ಆಹಾರ ಸೇವಿಸಿ


    ತೂಕ ಇಳಿಕೆಗೆ ನಿಮ್ಮ ರಾತ್ರಿಯ ಭೋಜನ ಹಗುರ ಆಗಿರಬೇಕು. ಇಲ್ಲದಿದ್ದರೆ ಅದು ನಿಮ್ಮ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಅಷ್ಟೇ ಅಲ್ಲದೇ ಇದು ತೂಕ ಹೆಚ್ಚಳಕ್ಕೂ ಸಹಕಾರಿ ಆಗಿದೆ. ಹಾಗಾಗಿ ರಾತ್ರಿಯ ಊಟ ಆದಷ್ಟು ಹಗುರವಾಗಿರಲಿ. ನ್ಯೂಟ್ರಿಷನ್ ಕೌನ್ಸಿಲರ್ ಅನುಪಮಾ ಮೆನನ್ ಅವರ ಪ್ರಕಾರ,


    ರಾತ್ರಿಯ ಊಟಕ್ಕೆ ಸೂಪ್ ಮತ್ತು ಸಲಾಡ್ ಸೇವಿಸುವುದು ಉತ್ತಮ. ಇದರಲ್ಲಿ ನೀವು 5 ರಿಂದ 10 ಗ್ರಾಂ ತಾಜಾ ಕಚ್ಚಾ, ಹುರಿದ ತರಕಾರಿ, ಬೀಜ, ಕಂದು ಅಕ್ಕಿ ಅಥವಾ ಅಮರಂಥ್‌ ಧಾನ್ಯ ಸೇರಿಸಬಹುದು. ಇದು ನಿಮ್ಮ ಹೊಟ್ಟೆ ಹಗುರವಾಗಿಸುತ್ತದೆ. ಮತ್ತು ತೂಕವು ತ್ವರಿತವಾಗಿ ಕಡಿಮೆ ಮಾಡುತ್ತದೆ.


    ತಿನ್ನುವ ಮತ್ತು ಮಲಗುವ ನಡುವಿನ ಅಂತರ


    ತೂಕ ಇಳಿಕೆಗೆ ರಾತ್ರಿ ದಿನಚರಿಯಲ್ಲಿ ತಿನ್ನುವ ಮತ್ತು ಮಲಗುವ ಸಮಯದ ನಡುವೆ ಕನಿಷ್ಠ 3 ರಿಂದ 4 ಗಂಟೆಗಳ ಅಂತರ ಹೊಂದಿರುವುದು ಮುಖ್ಯ. ಅದು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸಬಹುದು. ಆಹಾರವು ಜೀರ್ಣವಾಗಲು ಸಾಕಷ್ಟು ಸಮಯ ಬೇಕು. ಹಾಗಾಗಿ ಸರಿಯಾದ ಅಂತರ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದನ್ನು ಮಾಡದಿದ್ದರೆ ಹಲವು ರೋಗಗಳು ಸುತ್ತುವರೆದಿದೆ.


    ಸ್ನಾನ ಮಾಡುವುದು


    ಹೆಲ್ತ್ ಜರ್ನಲ್ ಪ್ರಕಾರ, ತೂಕ ಇಳಿಕೆಗೆ ರಾತ್ರಿ ದಿನಚರಿಯಲ್ಲಿ ಮಲಗುವ ಮುನ್ನ ತ್ವರಿತವಾಗಿ ಸ್ನಾನ ಮಾಡುವುದು ನಿಮ್ಮ ನಿದ್ರೆಗೆ ಉತ್ತಮ. ಮತ್ತು ಉತ್ತಮ ರಾತ್ರಿ ನಿದ್ರೆಯು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಈ ರಾತ್ರಿ ಸ್ನಾನ ದೀರ್ಘ ದಿನದ ಕೆಲಸದ ನಂತರ ನಿಮಗೆ ಉಲ್ಲಾಸ ನೀಡುತ್ತದೆ.


    ಇದು ಕೆಲವು ಆರೋಗ್ಯ ಪ್ರಯೋಜನ ಸಹ ಹೊಂದಿದೆ. ಶವರ್ ತೆಗೆದುಕೊಳ್ಳುವುದು ನಿಮ್ಮ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ. ಇದು ನಿಮಗೆ ವಿಶ್ರಾಂತಿ ಪಡೆಯಲು ಸಹಕಾರಿ. ಇದು ಚೆನ್ನಾಗಿ ನಿದ್ರೆ ಮಾಡಲು ಸಹ ಸಹಕಾರಿ.


    ಲೇಟ್ ನೈಟ್ ತಿನ್ನುವುದನ್ನು ತಪ್ಪಿಸಿ


    ಸಿರ್ಕಾಡಿಯನ್ ರಿದಮ್ ನಿದ್ರೆ ಮತ್ತು ಚಯಾಪಚಯ ಕ್ರಿಯೆಯ ನಡುವಿನ ಪ್ರಮುಖ ಕೊಂಡಿ. ಇದನ್ನು ಅಧ್ಯಯನಗಳು ಸೂಚಿಸಿವೆ. ಚಯಾಪಚಯವು ಬೆಳಿಗ್ಗೆ ಹೆಚ್ಚಾಗಿರುತ್ತದೆ ಮತ್ತು ರಾತ್ರಿಯಲ್ಲಿ ಕಡಿಮೆ ಇರುತ್ತದೆ. ಹಾಗಾಗಿ ತಡರಾತ್ರಿ ತಿನ್ನುವುದು ತೂಕ ಹೆಚ್ಚಿಸುತ್ತದೆ. ಇದು ಬೊಜ್ಜುಗೆ ಕಾರಣ.


    ತಡರಾತ್ರಿ ತಿನ್ನುವುದು ಆಸಿಡ್ ರಿಫ್ಲಕ್ಸ್‌ ಗೆ ಕಾರಣವಾಗುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ ಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


    ಇದನ್ನೂ ಓದಿ: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ


    ರಾತ್ರಿ ಮದ್ಯಪಾನ ಮಾಡಬೇಡಿ


    ರಾತ್ರಿ ಧೂಮಪಾನ ಮತ್ತು ಮದ್ಯಪಾನ ಮಾಡುವುದು ತೂಕ ನಷ್ಟ ಪ್ರಕ್ರಿಯೆ ನಿಲ್ಲಿಸುವ ಅಪಾಯ ಉಂಟು ಮಾಡುತ್ತದೆ.

    Published by:renukadariyannavar
    First published: