Weight Loss: ವೇಗವಾಗಿ ತೂಕ ಇಳಿಸುವ ಭರದಲ್ಲಿ ಅಪಾಯವನ್ನು ಅಪ್ಪಿಕೊಳ್ಳದಿರಿ, ಡಯಟ್​ ಪ್ಲಾನ್​ ಹೀಗಿರಲಿ

ತ್ವರಿತ ತೂಕ ನಷ್ಟ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ತಜ್ಞರು. ಬೊಜ್ಜು ನಿಮ್ಮ ದೇಹಕ್ಕೆ ಆರೋಗ್ಯಕರ ಸೂಚನೆಯಲ್ಲ. ನೀವು ಸರಿಯಾದ ತೂಕ ಕಾಪಾಡಲು ಪ್ರಯತ್ನಿಸಬೇಕು. ಹಾಗಾಗಿ ಕ್ರಮೇಣ ತೂಕ ಕಳೆದುಕೊಳ್ಳುವುದು ಸೂಕ್ತ. ಇದು ನಿಮ್ಮನ್ನು ದೀರ್ಘಕಾಲ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿಯೊಬ್ಬರೂ ಫಿಟ್ ಮತ್ತು ಸ್ಲಿಮ್ (Fit And Slim) ಆಗಿ ಕಾಣಲು ಇಷ್ಟ ಪಡುತ್ತಾರೆ. ಇದಕ್ಕಾಗಿ ಜಿಮ್ (Jim) ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿ ಕಟ್ಟುನಿಟ್ಟಿನ ಡಯಟ್ ಪ್ಲಾನ್ (Diet Plan) ಕೂಡ ಮಾಡ್ತಾರೆ. ಅದೇ ವೇಳೆ ಸಾಧ್ಯವಾದಷ್ಟು ಬೇಗ ತೂಕ ಇಳಿಸಲು (Weight Loss) ಹಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಜನರೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ಸಮಯದಲ್ಲಿ ತ್ವರಿತವಾಗಿ ತೂಕ ಇಳಿಸಲು ಅನೇಕ ಡಯಟ್ ಯೋಜನೆಗಳಿವೆ. ಹೀಗಿದ್ದರೂ ತೂಕ ಇಳಿಸುವುದು ಸುಲಭವಿಲ್ಲ. ತೂಕ ಇಳಿಸಲು ಸಾಕಷ್ಟು ಪರಿಶ್ರಮ, ಶ್ರದ್ಧೆ ಬೇಕಾಗುತ್ತದೆ. ತೂಕ ನಷ್ಟವು ತಮಾಷೆಯ ಸಂಗತಿಯಲ್ಲ. ತೂಕವನ್ನು ಕಳೆದುಕೊಳ್ಳಲು ಪ್ರೇರಣೆ, ತಾಳ್ಮೆ ಮತ್ತು ಸಮಯ ಬೇಕು.

  ತೂಕ ನಷ್ಟಕ್ಕೆ ಡಯಟ್ ಪ್ಲಾನ್

  ಹಾಗಾಗಿ ಹೆಚ್ಚಿನ ಜನರು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುವ ಡಯಟ್‌ ಪ್ಲಾನ್ ಫಾಲೋ ಮಾಡಲು ನೋಡುತ್ತಾರೆ. ಆದರೆ ಅಂತಹ ಆಹಾರ ಸೇವನೆಯಿಂದ ಕಡಿಮೆಯಾಗುವ ತೂಕವು ಆಹಾರ ನಿಲ್ಲಿಸಿದ ನಂತರವೂ ವೇಗವಾಗಿ ಹೆಚ್ಚುತ್ತದೆ.

  ಒಂದು ತಿಂಗಳಲ್ಲಿ ಎಷ್ಟು ತೂಕ ಇಳಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಲ್ಲ. ಇದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

  ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?  

  ತ್ವರಿತ ತೂಕ ನಷ್ಟ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ತಜ್ಞರು. ಬೊಜ್ಜು ನಿಮ್ಮ ದೇಹಕ್ಕೆ ಆರೋಗ್ಯಕರ ಸೂಚನೆಯಲ್ಲ. ನೀವು ಸರಿಯಾದ ತೂಕ ಕಾಪಾಡಲು ಪ್ರಯತ್ನಿಸಬೇಕು. ಹಾಗಾಗಿ ಕ್ರಮೇಣ ತೂಕ ಕಳೆದುಕೊಳ್ಳುವುದು ಸೂಕ್ತ. ಇದು ನಿಮ್ಮನ್ನು ದೀರ್ಘಕಾಲ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

  ಒಂದು ತಿಂಗಳಲ್ಲಿ ಎಷ್ಟು ತೂಕ ಇಳಿಸಬೇಕು?

  ಒಂದು ವಾರದಲ್ಲಿ 0.5 ಕೆಜಿ ಕಳೆದುಕೊಳ್ಳುವುದು ಸರಿ. ಅಂದರೆ ಒಂದು ತಿಂಗಳಲ್ಲಿ 2 ಕೆಜಿ ತೂಕ ಇಳಿಕೆ ಉತ್ತಮ. ಆಹಾರದಲ್ಲಿ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವುದು ಸುಲಭವಾಗಿ ತೂಕ ಕಡಿಮೆ ಮಾಡುತ್ತದೆ.

  ಒಂದು ತಿಂಗಳಲ್ಲಿ 1.5 ರಿಂದ 2.5 ಕೆ.ಜಿ ತೂಕ ಇಳಿಕೆ ಸರಿ. ಇದಕ್ಕಿಂತ ಹೆಚ್ಚಿನ ತೂಕ ಇಳಿಕೆ ಮೂತ್ರಪಿಂಡ ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಒತ್ತಡ ಬೀಳುತ್ತದೆ.

  ತೂಕ ನಷ್ಟಕ್ಕೆ ಪ್ರೋಟೀನ್ ಸೇವನೆ ಎಷ್ಟು ಸರಿ?

  ಸಾಮಾನ್ಯವಾಗಿ ಜನರು ತೂಕ ನಷ್ಟಕ್ಕೆ ಪ್ರೋಟೀನ್ ಸೇವನೆ ಮಾಡ್ತಾರೆ. ಇದು ಮೂತ್ರಪಿಂಡದ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ನೀವು ಹೆಚ್ಚು ತೂಕ ಇಳಿಸಿಕೊಂಡರೆ ಅಂದ್ರೆ ಒಂದು ತಿಂಗಳಲ್ಲಿ ನೀವು 5 ಕೆಜಿ ಅಥವಾ ಅದಕ್ಕಿಂತ ಹೆಚ್ಚು ತೂಕ ನಷ್ಟ ಮಾಡಿಕೊಂಡರೆ ನಂತರ ದೌರ್ಬಲ್ಯ, ಆಲಸ್ಯ, ಆಯಾಸ ಸಮಸ್ಯೆ ಎದುರಿಸುತ್ತೀರಿ.

  ಕೆಲವೊಮ್ಮೆ ಯಾವುದೇ ಆಹಾರವಿಲ್ಲದೆ ತ್ವರಿತ ತೂಕ ನಷ್ಟ ಗಂಭೀರ ಅನಾರೋಗ್ಯದ ಸಂಕೇತ ಆಗಿದೆ. ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸುವುದು ಎಂದರೆ ನೀವು ಚೈತನ್ಯ ಅನುಭವಿಸಬೇಕು ಮತ್ತು ಆಂತರಿಕವಾಗಿ ಆರೋಗ್ಯಕರ ಆಗಿರಬೇಕು.

  ಊಟಕ್ಕೆ ಮೊದಲು ಹೆಚ್ಚು ನೀರು ಕುಡಿಯಿರಿ

  ನೀರು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಚಯಾಪಚಯ ಸುಮಾರು 24 ರಿಂದ 30 ಪ್ರತಿಶತದಷ್ಟು ಹೆಚ್ಚಿಸುತ್ತದೆ. ಊಟಕ್ಕೆ ಒಂದೂವರೆ ಗಂಟೆ ಮೊದಲು ನೀರು ಕುಡಿದರೆ ಸ್ವಲ್ಪ ಕ್ಯಾಲೊರಿ ಬರ್ನ್ ಆಗುತ್ತದೆ. ಅಧ್ಯಯನದ ಪ್ರಕಾರ ಇದು 44 ಪ್ರತಿಶತ ಹೆಚ್ಚು ತೂಕ ಇಳಿಸಬೇಕು.

  ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

  ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವಿಸಿ

  ನೀವು ಮೊಟ್ಟೆ ಸೇವಿಸಿದರೆ, ತೂಕ ನಷ್ಟ ಸೇರಿದಂತೆ ನೀವು ಅದರಿಂದ ಅನೇಕ ಪ್ರಯೋಜನ ಪಡೆಯುತ್ತೀರಿ. ನೀವು ಧಾನ್ಯಗಳಿಂದ ಮಾಡಿದ ಉಪಹಾರ ಮೊಟ್ಟೆ ಸೇವಿಸಿ. ಅದು ಮುಂದಿನ 36 ಗಂಟೆಗಳ ಕಾಲ ಹಸಿವು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಕೊಬ್ಬು ಕೂಡ ಕಡಿಮೆ ಆಗುತ್ತದೆ.
  Published by:renukadariyannavar
  First published: