Weight Loss: ತೂಕ ಕಳೆದುಕೊಳ್ಳಲು ನಿಮ್ಮ ಡಯಟ್ ಪ್ಲಾನ್ ನಲ್ಲಿ ಫೈಬರ್ ಸಮೃದ್ಧ ಈ ಪದಾರ್ಥ ಸೇರಿಸಲು ಮರೆಯಬೇಡಿ

ಆರೋಗ್ಯಕರ ರೀತಿಯಲ್ಲಿ ತೂಕ ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ವ್ಯಾಯಾಮದ ಜೊತೆಗೆ ಕಡಿಮೆ ಕ್ಯಾಲೋರಿ ಪದಾರ್ಥಗಳ ಸೇವನೆ ಮಾಡುವುದು. ನೀವು ತೂಕ ಇಳಿಸುವ ಡಯಟ್ ಪ್ಲಾನ್ ನಲ್ಲಿ ನಿಮ್ಮ ಸ್ನಾಯುವಿನ ಬೆಳವಣಿಗೆ ಉತ್ತೇಜಿಸುವ ಎಲ್ಲಾ ಪದಾರ್ಥಗಳನ್ನು ಸೇವನೆ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತೂಕ ಹೆಚ್ಚಿಸುವುದು (Weight Gain) ಎಷ್ಟು ಸುಲಭವೋ, ತೂಕ ಇಳಿಸುವುದು (Weight Loss) ಅಷ್ಟೇ ಕಷ್ಟದ ಕೆಲಸ (Work). ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಜನರು (People) ತೂಕ ಇಳಿಸೋಕೆ ಏನೆಲ್ಲಾ ಕಸರತ್ತು ಮಾಡ್ತಾರೆ. ತೂಕ ನಷ್ಟಕ್ಕೆ ಜಿಮ್‌ಗೆ ಹೋಗಿ ಬೆವರಿಳಿಸುವುದು, ವ್ಯಾಯಾಮ ಮಾಡುವುದು ಮತ್ತು ಕ್ಯಾಲೊರಿ ಕಡಿಮೆ ಮಾಡುವುದು ತುಂಬಾ ಮುಖ್ಯ. ಆದರೂ ಅವರು ತೂಕ ಇಳಿಸಲು ಸಾಧ್ಯವಾಗದೇ ಒದ್ದಾಡುತ್ತಾರೆ. ತೂಕ ಇಳಿಸಲು ಎಷ್ಟು ವರ್ಕೌಟ್ ಬೇಕೋ, ಅಷ್ಟೇ ಆಹಾರವೂ ಬೇಕು ಎಂಬುದು ತಜ್ಞರ ಅಭಿಪ್ರಾಯ. ಆರೋಗ್ಯಕರ ರೀತಿಯಲ್ಲಿ ತೂಕ ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ವ್ಯಾಯಾಮದ ಜೊತೆಗೆ ಕಡಿಮೆ ಕ್ಯಾಲೋರಿ ಪದಾರ್ಥಗಳ ಸೇವನೆ ಮಾಡುವುದು.

    ನೀವು ತೂಕ ಇಳಿಸುವ ಡಯಟ್ ಪ್ಲಾನ್ ನಲ್ಲಿ ನಿಮ್ಮ ಸ್ನಾಯುವಿನ ಬೆಳವಣಿಗೆ ಉತ್ತೇಜಿಸುವ ಎಲ್ಲಾ ಪದಾರ್ಥಗಳನ್ನು ಸೇವನೆ ಮಾಡಬೇಕು. ಇದಕ್ಕೆ ಪ್ರೋಟೀನ್ ಅತ್ಯುತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ತೂಕ ಇಳಿಸಲು ಪ್ರೋಟೀನ್ ಬಹಳ ಮುಖ್ಯ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ. ಮತ್ತು ತೂಕ ಕಡಿಮೆ ಮಾಡುತ್ತದೆ.

    ಹಾಗಾದ್ರೆ ತೂಕ ಇಳಿಸುವ ಜೊತೆಗೆ ಒಟ್ಟಾರೆ ಆರೋಗ್ಯ ವೃದ್ಧಿಸುವ ಪ್ರೋಟೀನ್‌ನ ಮುಖ್ಯ ಮೂಲಗಳು ಯಾವುವು ಹಾಗೂ ಉತ್ತಮ ವ್ಯಕ್ತಿತ್ವ ಪಡೆಯಲು ಮತ್ತು ತೂಕ ಇಳಿಸಲು ಪ್ರೋಟೀನ್ ಅನ್ನು ಆಹಾರದಲ್ಲಿ ಹೇಗೆ ಸೇರಿಸಬೇಕು ಎಂಬುದನ್ನು ಇಲ್ಲಿ ನೋಡೋಣ.

    ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!

    ಈ ಬಗ್ಗೆ ಡಿಟಾಕ್ಸ್‌ಪ್ರಿಯ ಸಂಸ್ಥಾಪಕಿ ಮತ್ತು ಸಮಗ್ರ ಪೌಷ್ಟಿಕ ತಜ್ಞೆ ಪ್ರಿಯಾಂಶಿ ಭಟ್ನಾಗರ್ ಹೆಚ್ಚಿನ ಪ್ರೊಟೀನ್ ಖಾದ್ಯಗಳ ಬಗ್ಗೆ ಹೇಳಿದ್ದಾರೆ ನೋಡೋಣ.

    ಫ್ರೈ ತರಕಾರಿ

    ಇದು ವಿವಿಧ ಪೌಷ್ಟಿಕಾಂಶದ ತರಕಾರಿಗಳ ಮಿಶ್ರಣ. ಇದು ನಿಮಗೆ ಪ್ರೋಟೀನ್ ಜೊತೆಗೆ ವಿವಿಧ ಪೋಷಕಾಂಶಗಳನ್ನು ನೀಡುತ್ತದೆ. ಈ ಕಡಿಮೆ-ಕ್ಯಾಲೋರಿ ಇಂಡೋ-ಚೈನೀಸ್ ಖಾದ್ಯ, ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಇದನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು, ಮಸಾಲೆಗಳನ್ನು ಸೇರಿಸಿ. ಚೀಸ್ ಸೇರಿಸಲು ಮರೆಯಬೇಡಿ.

    ಹುರಿದ ಎಲೆಕೋಸು

    ಹೂಕೋಸು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಕಡಿಮೆ ಕೊಬ್ಬಿನಂಶ ಹೊಂದಿದೆ. ತೂಕ ಇಳಿಸುವವರಿಗೆ ಉತ್ತಮ ತರಕಾರಿ ಇದು. ನೀವು ಅದನ್ನು ಹೆಚ್ಚು ಎಣ್ಣೆ ಮತ್ತು ಮಸಾಲೆಗಳಲ್ಲಿ ಮಾಡಬಾರದು. ಅಲ್ಲದೆ ಅದರಲ್ಲಿ ಆಲೂಗಡ್ಡೆ ಹಾಕುವುದನ್ನು ತಪ್ಪಿಸಿ.

    ಬೇಯಿಸಿದ ಮೊಟ್ಟೆ

    ಮೊಟ್ಟೆಗಳು ರುಚಿಯ ಜೊತೆಗೆ ಹೆಚ್ಚಿನ ಪ್ರೋಟೀನ್‌ನ ಅತ್ಯುತ್ತಮ ಮತ್ತು ಅಗ್ಗದ ಮೂಲ. ನೀವು ತೂಕ ಇಳಿಸಲು ನೀವು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಸೇರಿಸಿ ತಿನ್ನಿರಿ. ಇದನ್ನು ಮಾಡಲು ನಿಮಗೆ ಬೇಕಿರುವುದು ಕರಿಮೆಣಸು, ಹಾಲು, ಮೊಟ್ಟೆ ಮತ್ತು ಬೆಣ್ಣೆ. ಹೆಚ್ಚು ಪೌಷ್ಟಿಕಾಂಶ ಮಾಡಲು ನೀವು ಹೆಚ್ಚಿನ ತರಕಾರಿ ಸೇರಿಸಿ.

    ಬೇಯಿಸಿದ ಚಿಕನ್ ಸ್ಕೇವರ್ಸ್

    ಈ ಮುಘಲೈ ರೆಸಿಪಿಯು ಹೆಚ್ಚಿನ ಪ್ರೊಟೀನ್ ಮತ್ತು ಕಡಿಮೆ ಕ್ಯಾಲೋರಿ ಹೊಂದಿದೆ. ಅದನ್ನು ತಯಾರಿಸಲು ಎಣ್ಣೆ ಬಳಸಬೇಡಿ. ಕೇವಲ ಬೇಕಿಂಗ್ ಕೆಲಸ ಮಾಡುತ್ತದೆ. ಇದು ನಿಮ್ಮ ಕಡುಬಯಕೆ ಪೂರೈಸುವುದು ಮಾತ್ರವಲ್ಲದೆ ನಿಮ್ಮ ತೂಕ ನಿಯಂತ್ರಿಸುತ್ತದೆ.

    ಮೊಳಕೆ ಚಾಟ್

    ಮತ್ತೊಂದು ತ್ವರಿತ ಮತ್ತು ಸುಲಭ ಪಾಕವಿಧಾನ ಸ್ಪ್ರೌಟ್ಸ್ ಚಾಟ್. ನೀವು ಇದನ್ನು ರಾಜ್ಮಾ, ಮೂಂಗ್ ದಾಲ್ ಮತ್ತು ಕಾಳು ಬೆರೆಸಿ ತಯಾರಿಸಬಹುದು. ಅದರಲ್ಲಿ ಈರುಳ್ಳಿ, ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಜೊತೆ ನಿಂಬೆ ರಸ ಮಿಶ್ರಣ ಮಾಡಿ.

    ಇದನ್ನೂ ಓದಿ: ಕೂದಲು ಸಮಸ್ಯೆ ಹೆಚ್ಚಿದ್ರೆ ಇದು ಅಧಿಕ ಕೊಲೆಸ್ಟ್ರಾಲ್ ಸಂಕೇತವಾಗಿರಬಹುದು!

    ಕ್ವಿನೋವಾ ಸಲಾಡ್

    ಕ್ವಿನೋವಾ, ಸ್ವಲ್ಪ ರಾಗಿ, ಕಿಡ್ನಿ ಬೀನ್ಸ್ ಮತ್ತು ಕೆಲವು ತರಕಾರಿ ಬೆರೆಸಿ ಸಲಾಡ್ ಮಾಡಿ. ಈ ಮಿಶ್ರಣವು ಪ್ರೋಟೀನ್ ಮತ್ತು ಫೈಬರ್‌ ನೀಡುತ್ತದೆ. ತೂಕ ಇಳಿಸಲು ಇದು ನಿಮಗೆ ಉತ್ತಮ ಆಯ್ಕೆ ಆಗಿದೆ.
    Published by:renukadariyannavar
    First published: