• Home
  • »
  • News
  • »
  • lifestyle
  • »
  • Fasting And Weight Loss: ತೂಕ ಇಳಿಕೆಗೆ ಡಯಟ್ ಪ್ಲಾನ್​ನಲ್ಲಿ ಈ ಆಹಾರಗಳನ್ನು ಸೇರಿಸಿ!

Fasting And Weight Loss: ತೂಕ ಇಳಿಕೆಗೆ ಡಯಟ್ ಪ್ಲಾನ್​ನಲ್ಲಿ ಈ ಆಹಾರಗಳನ್ನು ಸೇರಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಧ್ಯಾತ್ಮಿಕ ವಿಷಯದ ಹೊರತಾಗಿಯೂ ಉಪವಾಸ ಮಾಡುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಧಿಕ ಕೊಲೆಸ್ಟ್ರಾಲ್ ನಂತಹ ಕಾಯಿಲೆಗಳನ್ನು ತಡೆಯಲು ಉಪವಾಸ ಪ್ರಯೋಜನಕಾರಿ ಆಗಿದೆ. ಇದು ತೂಕ ನಷ್ಟಕ್ಕೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ.

  • Share this:

    ದೇಶದಲ್ಲಿ (Country) ನವರಾತ್ರಿ (Navaratri) ಸಂಭ್ರಮ ಮನೆ ಮಾಡಿದೆ. ನವರಾತ್ರಿಯಲ್ಲಿ ಜನರು (People) ಉಪವಾಸ (Fasting), ವ್ರತಾಚರಣೆ ಮಾಡುತ್ತಾರೆ. ಈ ದಿನಗಳಲ್ಲಿ ನೀವು ತೂಕ ಇಳಿಕೆಯ (Weight Loss) ಪ್ರಯಾಣದಲ್ಲಿದ್ದರೆ, ಅಥವಾ ತೂಕ ನಿಯಂತ್ರಿಸಲು ಡಯಟ್ ಪ್ಲಾನ್ (Diet Plan) ಹಾಕಿಕೊಂಡಿದ್ದರೆ, ಅದನ್ನು ಹಬ್ಬದಲ್ಲಿಯೂ ಸರಿಯಾಗಿ ಫಾಲೋ ಮಾಡುವುದು ಮುಖ್ಯವಾಗುತ್ತದೆ. ಅದರಲ್ಲೂ ಹಬ್ಬದಲ್ಲಿ ಸಿಹಿ ಪದಾರ್ಥಗಳನ್ನು ಮಾಡುವುದು ಮತ್ತು ತಿನ್ನುವುದು ಹೆಚ್ಚು. ಇನ್ನು ಉಪವಾಸವು ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಿದ್ದು, ನವಮಿಯಂದು ಮುಕ್ತಾಯಗೊಳ್ಳುತ್ತದೆ. ನವರಾತ್ರಿಯಲ್ಲಿ ಹೆಚ್ಚಿನ ಜನರು ಉಪವಾಸ ಮಾಡುತ್ತಾರೆ. ದಾಂಡಿಯಾ, ಗರ್ಭಾ ನೃತ್ಯ ಮಾಡುತ್ತಾರೆ. ಮುಖ್ಯ ಚಟುವಟಿಕೆಗಳನ್ನು ಮಾಡುತ್ತಾರೆ.


    ಉಪವಾಸ ಮತ್ತು ತೂಕ ಇಳಿಕೆ


    ಆರೋಗ್ಯ ವರ್ಗದ ಪೌಷ್ಟಿಕಾಂಶ ಸಲಹೆಗಾರರಾದ ಡಾ. ಮೇಘನಾ ಪಾಸಿ ಅವರ ಪ್ರಕಾರ, ಆಧ್ಯಾತ್ಮಿಕ ವಿಷಯದ ಹೊರತಾಗಿಯೂ ಉಪವಾಸ ಮಾಡುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ತಡೆಯಲು ಉಪವಾಸ ಪ್ರಯೋಜನಕಾರಿ ಆಗಿದೆ. ಇದು ತೂಕ ನಷ್ಟಕ್ಕೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.


    ಇದನ್ನೂ ಓದಿ: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ


    ತೂಕ ಇಳಿಕೆ ಬೆಂಬಲಿಸುವ ಬೆಳಗಿನ ಉಪಾಹಾರ ಮತ್ತು ಸಂಜೆ ತಿಂಡಿ


    ಯಾವುದೇ ರೀತಿಯ ಆಹಾರ ಕ್ರಮ ಅಥವಾ ತೂಕ ನಷ್ಟ ಯೋಜನೆ ಫಾಲೋ ಮಾಡುತ್ತಿದ್ದರೆ ನೀವು ಈ ಆಹಾರ ಯೋಜನೆ ಫಾಲೋ ಮಾಡಬಹುದು. ಇದು ನಿಮ್ಮನ್ನು ಮೊದಲು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.


    ಹಾಗಾದರೆ ಕೆಲವು ಆರೋಗ್ಯಕರ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಆಯ್ಕೆಯ ಬಗ್ಗೆ ಇಲ್ಲಿ ತಿಳಿಯೋಣ. ನವರಾತ್ರಿಯ ಸಮಯದಲ್ಲಿ ತೂಕ ಇಳಿಕೆಯನ್ನು ಬೆಂಬಲಿಸುವ ಬೆಳಗಿನ ಉಪಾಹಾರ ಅಥವಾ ಸಂಜೆಯ ತಿಂಡಿಗಳಿಗೆ ಕೆಲವು ಆರೋಗ್ಯಕರ ಆಯ್ಕೆಗಳು ಹೀಗಿವೆ.


    ಬೀಜಗಳು ಮತ್ತು ಚಿಯಾ ಪುಡಿಂಗ್


    ನೀವು ಚಿಯಾ ಬೀಜಗಳನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಿಗ್ಗೆ ಚಿಯಾ ಬೀಜಗಳನ್ನು ಸೇವನೆ ಮಾಡಬಹುದು. ನೀವು ಇದಕ್ಕೆ ಸೌಮ್ಯವಾದ ಜೇನುತುಪ್ಪ ಮತ್ತು ನಿಮ್ಮಿಷ್ಟದ ವಿವಿಧ ಬೀಜಗಳನ್ನು ಕೂಡ ಸೇರಿಸಬಹುದು.


    ಚಿಯಾ ಬೀಜಗಳು ದೇಹವನ್ನು ಸಾಕಷ್ಟು ಹೈಡ್ರೀಕರಿಸುತ್ತದೆ. ಮತ್ತು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಜೊತೆಗೆ ಬೀಜಗಳು ನಿಮಗೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸುತ್ತದೆ.


    ಆಲೂಗಡ್ಡೆ ಮತ್ತು ತುಪ್ಪ


    ಬೇಯಿಸಿದ ಆಲೂಗಡ್ಡೆಯನ್ನು ದೇಸಿ ತುಪ್ಪದಲ್ಲಿ ಸ್ವಲ್ಪ ಜೀರಿಗೆಯೊಂದಿಗೆ ಹುರಿದು ತಿನ್ನಬಹುದು. ಅಲ್ಲದೆ ನೀವು ಒಣ ಹಣ್ಣುಗಳು ಮತ್ತು ತುಪ್ಪವನ್ನು ಸೇವಿಸಬಹುದು. ಈ ಉಪಹಾರವು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಪರಿಪೂರ್ಣ ಸಂಯೋಜನೆಯಾಗಿದೆ. ಇದು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿ ಇರಿಸುತ್ತದೆ.


    ಬಕ್‌ವೀಟ್ ಹಿಟ್ಟಿನ ಚಿಲ್ಲಾ


    ಬಕ್‌ವೀಟ್ ಹಿಟ್ಟಿನಿಂದ ಚಿಲ್ಲಾ ತಯಾರಿಸಿ ನೀವು ಅದನ್ನು ಮೊಸರಿನೊಂದಿಗೆ ತಿನ್ನಬಹುದು. ಚಿಲ್ಲಾ ಆಹಾರ ಭಾರವಾಗಿರುವುದಿಲ್ಲ ಮತ್ತು ಇದು ಆರೋಗ್ಯಕರ ಆಯ್ಕೆ ಆಗಿದೆ. ಮೊಸರು ಬೆಳಿಗ್ಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.


    ಬಾಳೆಹಣ್ಣು ಮತ್ತು ಕಡಲೆಕಾಯಿ ಸ್ಮೂಥಿ


    ಸ್ಮೂಥಿಗಳು ಉತ್ತಮವಾಗಿವೆ. ಇದು ನಿಮಗೆ ಸರಿಯಾದ ಶಕ್ತಿ ನೀಡುತ್ತದೆ. ಇದರಲ್ಲಿರುವ ಕಡಲೆಕಾಯಿ ಮತ್ತು ಬಾಳೆಹಣ್ಣುಗಳು ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲ. ಯಾವುದೇ ಹಣ್ಣಿನೊಂದಿಗೆ ನಿಮ್ಮ ಸ್ವಂತ ಸ್ಮೂಥಿ ಮಾಡಬಹುದು. ಇದನ್ನು ಮೊಸರಿನೊಂದಿಗೆ ಅಥವಾ ತೆಂಗಿನ ಹಾಲಿನೊಂದಿಗೆ ತಯಾರಿಸಬಹುದು. ಇದು ತೂಕ ಇಳಿಕೆಗೆ ಸಹಕಾರಿ.


    ಸಾಬುದಾನ ಖಿಚಡಿ ಮತ್ತು ಮೊಸರು


    ಸಾಬುದಾನ ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಊಟಕ್ಕೆ ಬಳಸಬಹುದು. ಸಾಬುದಾನ ಖಿಚಡಿ ಮಾಡಬಹುದು. ಸ್ವಲ್ಪ ಆಲೂಗಡ್ಡೆ ಮತ್ತು ಬೇಳೆ ಕಾಳು ಸೇರಿಸಿ ಮತ್ತು ಇದು ಸೌತೆಕಾಯಿ ರೈಟಾ ಅಥವಾ ಸಾದಾ ಮೊಸರಿನೊಂದಿಗೆ ಸವಿಯಿರಿ. ಇದು ತೂಕ ಇಳಿಕೆ ಮತ್ತು ಹೆಲ್ದೀಯಾಗಿರಿಸುತ್ತದೆ.


    ಕ್ವಿನೋವಾ ಪೊಲೆಂಟಾ ಮತ್ತು ಸಲಾಡ್


    ಊಟಕ್ಕೆ ಖಿಚಡಿ ಸರಿಯಾದ ಶಕ್ತಿ ನೀಡುತ್ತದೆ. ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದು ಉತ್ತಮ ಪ್ರಮಾಣದ ಫೈಬರ್ ಹೊಂದಿದೆ. ಜೀರಿಗೆ ಮತ್ತು ಟೊಮೆಟೊ ಸಲಾಡ್ ಸೇವಿಸಿ.


    ಇದನ್ನೂ ಓದಿ: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!


    ಆಲೂ ಸಬ್ಜಿ ಮತ್ತು ರಾಜಗಿರಾ ರೋಟಿ


    ಆಲೂಗೆಡ್ಡೆ, ತರಕಾರಿ, ರೊಟ್ಟಿ ಸೇವಿಸಿ. ಇದು ನಿಮ್ಮ ಡಯಟ್ ಪ್ಲಾನ್ ಗೆ ಸಹಕಾರಿ. ಆಲೂಗೆಡ್ಡೆ ಕರಿ, ರಾಜಗಿರಾ ರೊಟ್ಟಿ ಪ್ರೋಟೀನ್ ಹೊಂದಿದೆ. ಆಲೂಗಡ್ಡೆ ಸರಿಯಾದ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹೊಂದಿದೆ.

    Published by:renukadariyannavar
    First published: