• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆ ಮತ್ತು ನಿಯಂತ್ರಣ: ದೇಹ ಡಿಟಾಕ್ಸ್ ಮಾಡಲು ಮೊನೋ ಡಯಟ್ ಹೇಗೆ ಸಹಕಾರಿ?

Weight Loss: ತೂಕ ಇಳಿಕೆ ಮತ್ತು ನಿಯಂತ್ರಣ: ದೇಹ ಡಿಟಾಕ್ಸ್ ಮಾಡಲು ಮೊನೋ ಡಯಟ್ ಹೇಗೆ ಸಹಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರುಚಿಕರ ಲಡ್ಡೂ ರುಚಿಕರ ಗ್ರೇವಿ ಸೇವನೆ ದೇಹ ಮತ್ತು ಫಿಟ್ನೆಸ್ ನತ್ತ ಮತ್ತೆ ಮರಳುವುದನ್ನು ತುಸು ಕಷ್ಟವಾಗಿಸುತ್ತದೆ. ಎಲ್ಲಾ ರುಚಿಕರ ಆಹಾರ ಪದಾರ್ಥ ತಿನ್ನುತ್ತಲೇ ಇರಬೇಕು ಅನ್ನಿಸುತ್ತದೆ. ಈ ವೇಳೆ ಇದು ಆರೋಗ್ಯದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿ.

ಮುಂದೆ ಓದಿ ...
  • Share this:

    ಹಬ್ಬದ ವೇಳೆ ವೇಟ್ ಲಾಸ್ ಡಯಟ್ (Weight Loss Diet) ಫಾಲೋ ಮಾಡಲು ಸಾಧ್ಯ ಆಗಿರಲ್ಲ. ಹೀಗಾಗಿ ನೀವು ಹಬ್ಬ (Festival) ಮುಗಿದ ನಂತರ ಮೊದಲು ಮಾಡಬೇಕಾದ ಕೆಲಸವೆಂದರೆ ದೇಹವನ್ನು ಡಿಟಾಕ್ಸ್ (Body Detox) ಮಾಡುವುದು. ಹಬ್ಬ ಹರಿದಿನಗಳಲ್ಲಿ ವಿವಿಧ ಬಗೆಯ ಖಾದ್ಯ ಸೇವಿಸಿದ ನಂತರ ಆರೋಗ್ಯದ (Health) ಕಡೆ ವಿಶೇಷ ಗಮನ ಹರಿಸುವುದು ಮುಖ್ಯ. ರುಚಿಕರ ಲಡ್ಡೂ, ರುಚಿಕರ ಗ್ರೇವಿ ಸೇವನೆ ದೇಹ ಮತ್ತು ಫಿಟ್ನೆಸ್ ನತ್ತ ಮತ್ತೆ ಮರಳುವುದನ್ನು ತುಸು ಕಷ್ಟವಾಗಿಸುತ್ತದೆ. ಎಲ್ಲಾ ರುಚಿಕರ ಆಹಾರ ಪದಾರ್ಥ ತಿನ್ನುತ್ತಲೇ ಇರಬೇಕು ಅನ್ನಿಸುತ್ತದೆ. ಈ ವೇಳೆ ಇದು ಆರೋಗ್ಯದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.


    ಅಂತಹ ವೇಳೆ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿ. ಇದಕ್ಕೆ ಮೊನೊ ಡಯಟ್ ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸಬಹುದು.


    ಮೊನೊ ಡಯಟ್ ಎಂದರೇನು?


    ಮೊನೊ ಡಯಟ್ ದಿನವಿಡೀ ಎಲ್ಲಾ ವೇಳೆ ಒಂದು ರೀತಿಯ ಆಹಾರ ಪದ್ಧತಿ. ದೈನಂದಿನ ದಿನಚರಿಯ ಭಾಗವಾಗಿ ಸುಲಭವಾಗಿ ಮಾಡಬಹುದು. ಏಕೆಂದರೆ ಇದರಲ್ಲಿ ನೀವು ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ.


    ಇದನ್ನೂ ಓದಿ: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?


    ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರ ಡಿಂಪಲ್ ಜಂಗ್ದಾ ಪ್ರಕಾರ, ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಮೊನೊ ಡಯಟ್‌ ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯ ಶೇರ್ ಮಾಡಿದ್ದಾರೆ. ದೇಹವನ್ನು ಡಿಟಾಕ್ಸ್ ಮಾಡಲು ಮೊನೊ ಡಯಟ್ ಬೆಸ್ಟ್ ಎಂದಿದ್ದಾರೆ.


    ಮೊನೊ ಡಯಟಿಂಗ್‌ ಅಗತ್ಯತೆ ಏನಿದೆ?


    ವಿವಿಧ ಆಹಾರ ಪದಾರ್ಥಗಳಿಂದ ತಯಾರಿಸಿದ ಭಕ್ಷ್ಯ ಸೇವಿಸುವುದು ಬಹಳ ಮು. ಇದು ಜೀರ್ಣಕಾರಿ ಆರೋಗ್ಯಕ್ಕೆ ಸಹ ಪ್ರಯೋಜನಕಾರಿ. ಮೇದೋಜ್ಜೀರಕ ಗ್ರಂಥಿ, ಯಕೃತ್ತು, ಪಿತ್ತಕೋಶ, ಹೊಟ್ಟೆ ಮತ್ತು ಕರುಳುಗಳಿಗೆ ವಿಶ್ರಾಂತಿ ನೀಡುವುದು ಸಹ ಮುಖ್ಯ.


    ಮೊನೊ ಡಯಟ್ ಫಾಲೋ ಮಾಡುವುದು ಕೆಲವು ದಿನ ನೀವು ಸರಳ ಆಹಾರ ಮಾತ್ರ ತಿನ್ನಬೇಕು. ಈ ಸಮಯದಲ್ಲಿ ಜೀರ್ಣಾಂಗ ವ್ಯವಸ್ಥೆ ಆಹಾರ ಕಡಿಮೆ ಸಮಯದಲ್ಲಿ ಹೆಚ್ಚು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುತ್ತದೆ. ಅಲ್ಲದೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಸಿಗುತ್ತದೆ.


    ಯಕೃತ್ತು ದೇಹದಲ್ಲಿನ ಅತ್ಯಂತ ಪರಿಣಾಮಕಾರಿ ನಿರ್ವಿಶೀಕರಣ ಮಾಡುವ ಅಂಗವಾಗಿದೆ. ಮತ್ತು ಇದು ನಮ್ಮ ದೇಹದಲ್ಲಿ ಶೋಧನೆಯ ಪ್ರಮುಖ ಭಾಗವಾಗಿದೆ. ಇದು ವಿಷವನ್ನು ದೇಹದ ತ್ಯಾಜ್ಯ ಉತ್ಪನ್ನಗಳಾಗಿ ಪರಿವರ್ತಿಸುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ದೇಹಕ್ಕೆ ಪ್ರಮುಖ ಪ್ರೋಟೀನ್‌ ಮತ್ತು ಪೋಷಕಾಂಶಗಳು ಒದಗಿಸುತ್ತದೆ.


    ಮೋನೋ ಡಯಟಿಂಗ್ ಮಾಡುವುದು ಹೇಗೆ?


    ಮೊನೊ ಡಯಟ್‌ ನಲ್ಲಿ ಸರಳ ಆಹಾರ ಸೇವಿಸುವುದು ಸೂಕ್ತ. ಅಗತ್ಯ ಪೋಷಕಾಂಶಗಳ ಕೊರತೆ ನಿವಾರಿಸುವ ಪದಾರ್ಥ ಸೇವಿಸಿ. ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ದಿನವಿಡೀ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕರವಲ್ಲ. ಇದು ನಿಮ್ಮ ದೇಹದ ಅಗತ್ಯ ಪೌಷ್ಟಿಕಾಂಶದ ಅಗತ್ಯತೆ ಪೂರೈಸಲು ಸಾಧ್ಯವಾಗುವುದಿಲ್ಲ.


    ಪೋಷಕಾಂಶಗಳ ಕೊರತೆ ಸ್ನಾಯುಗಳು ಮತ್ತು ದೇಹದ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಮೋನು ಡಯಟ್ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.


    ಕಾರ್ಬೋಹೈಡ್ರೇಟ್‌, ಪ್ರೋಟೀನ್ ಮತ್ತು ಫೈಬರ್‌ ಆರೋಗ್ಯಕರ ಸಮತೋಲನದ ಮೂಲವಾಗಿರುವ ಸರಳ ಸಸ್ಯಾಹಾರಿ ಆಹಾರ. ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಮಾಡಬಹುದು.


    ನೀವು ನಿಮ್ಮ ಡಯಟ್ ಪ್ಲಾನ್ ನಲ್ಲಿ ಖಿಚಡಿ ಸೇರಿಸುವುದು ಉತ್ತಮ ಮಾರ್ಗ ಆಗಿದೆ. ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಲು ಮೂಂಗ್ ಖಿಚಡಿ ಸಹಾಯ ಮಾಡುತ್ತದೆ. ಪೋಷಕಾಂಶಗಳಿಂದ ಸಮೃದ್ಧ ಈ ಕಿಚಡಿ ನಿಮ್ಮ ದೇಹವನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸಲು ಸಹಕಾರಿ ಆಗಿದೆ.


    ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


    ನಿಮ್ಮ ಕೂದಲು ಮತ್ತು ಮುಖದ ಆರೋಗ್ಯಕ್ಕೆ ಖಿಚಡಿ ಸೇವನೆ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ತೂಕ ನಿಯಂತ್ರಣ ಮತ್ತು ಆರೋಗ್ಯಕ್ಕೆ ಸಹಕಾರಿ.

    Published by:renukadariyannavar
    First published: