Weight Loss: ತೂಕ ಇಳಿಸೋಕೆ ಮೊದಲು ಮೆದುಳನ್ನು ರೆಡಿ ಮಾಡಿ, ವಿಜ್ಞಾನಿಗಳು ಹೇಳಿದ್ದಾರೆ ಹೊಸಾ ಟ್ರಿಕ್!

Weight Loss Tips: ಏನೇ ಸರ್ಕಸ್ ಮಾಡಿದ್ರೂ ಡಯೆಟ್ ಮಾತ್ರ ಸರಿಯಾಗ್ತಿಲ್ಲ ಎಂದು ಕಂಪ್ಲೇಂಟ್ ಮಾಡೋರು ಜಾಸ್ತಿ. ಇದಕ್ಕೆಲ್ಲಾ ಮೂಲ ಇರೋದು ಮೆದುಳಲ್ಲಿ. ನಮ್ಮ ನಿರ್ಧಾರ ಗಟ್ಟಿಯಾಗಿದ್ರೆ ಮಾತ್ರ ಎಲ್ಲವೂ ಸಾಧ್ಯ. ಹಾಗಾಗಿ ತೂಕ ಇಳಿಸೋಕೆ ಮೊದಲು ಮೆದುಳಿಗೆ ತರಬೇತಿ ಕೊಡಿ ಅಂತಾರೆ ವಿಜ್ಞಾನಿಗಳು. ಹೇಗೆ ಮಾಡೋದು ಅನ್ನೋದನ್ನೂ ಸರಳವಾಗಿ ಹೇಳಿಕೊಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ತೂಕ ಇಳಿಸುವುದು (Weight Loss) ಪ್ರತಿಯೊಬ್ಬರಿಗೂ ದೊಡ್ಡ ತಲೆನೋವು. ಏನೆಲ್ಲ ಪ್ರಯತ್ನ ಮಾಡಿದರೂ ಸಹ ಸಾಧ್ಯವಾಗುವುದಿಲ್ಲ. ಅಲ್ಲದೇ ಕೆಲವೊಮ್ಮೆ ತೂಕ ಇಳಿಸುವ ನಿರ್ಧಾರವನ್ನು ತೆಗದುಕೊಂಡಿರುತ್ತೇವೆ. ಆದರೆ ಅದನ್ನು ಪಾಲಿಸುವಲ್ಲಿ ವಿಫವಾಗಿರುತ್ತೇವೆ. ಹಾಗಾದ್ರೆ ತೂಕ ಇಳಿಸುವ ಆಹಾರಕ್ರಮಕ್ಕೆ (Diet) ಅಂಟಿಕೊಳ್ಳಲು ಹಲವಾರು ಬಾರಿ ನಿರ್ಧರಿಸಿ ನೀವು ವಿಫಲರಾಗಿದ್ದೀರಾ? ನಾವು ಡಯೆಟ್ ಮಾಡುವಾಗ ಚೀಟ್ ಡೇ ಅಂತಾ ಮಾಡುತ್ತೇವೆ. ಆದರೆ ಆ ದಿನಗಳು ನಮ್ಮನ್ನು ಸೋಲಿಸುವಂತೆ ಮಾಡುತ್ತದೆ ಮತ್ತು ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ನಂತರ, ನಾವು ಸಂಪೂರ್ಣವಾಗಿ ಫಾಸ್ಟ್ ಫುಡ್ಗಳನ್ನು ಅವಲಂಭಿಸುತ್ತೇವೆ. ಅಲ್ಲದೇ ನಮ್ಮನ್ನ ವ್ಯಾಯಾಮಗಳಿಂದ ದೂರವಿರುವಂತೆ ಮಾಡುತ್ತದೆ. ಒಂದರ್ಥದಲ್ಲಿ ಸೋಮಾರಿಗಳಾಗುತ್ತೇವೆ. ಈ ನಡುವಳಿಕೆಯ ಮಾದರಿಯನ್ನು ಕಪ್ಪು-ಬಿಳುಪು ಮನಸ್ಥಿತಿ ಅಥವಾ ಎಲ್ಲಾ ಅಥವಾ ಯಾವುದೂ ಇಲ್ಲ ಎಂಬ ಮನಸ್ಥಿತಿಯನ್ನು ಕರೆಯಬಹುದು ಎಂದು ಪೌಷ್ಟಿಕ ತಜ್ಞೆ ಪೂಜಾ ಮಖಿಜಾ ಹೇಳುತ್ತಾರೆ.

  ಇದು ಎಲ್ಲರಲ್ಲೂ ಸಾಮಾನ್ಯ. ನಾವು ಯಾವುದನ್ನೇ ಮಾಡಿದರೂ ಅದನ್ನ ಸಂಪೂರ್ಣವಾಗಿ ಮಾಡಿ ಎಲ್ಲ ಅದನ್ನು ಸಂಪೂರ್ಣವಾಗಿ ಬಿಟ್ಟು ಬಿಡಿ ಎಂದು ಮನಸ್ಸು ಹೇಳುತ್ತದೆ. ದಿನದಿಂದ ದಿನಕ್ಕೆ ಯಾರೂ ಸಂಪೂರ್ಣವಾಗಿ ಆರೋಗ್ಯವಂತರಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.ಅಲ್ಲದೇ ಈ ಕುರಿತು ತಮ್ಮ ಇನ್ಸ್ಟಾಗಾಂ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪೌಷ್ಟಿಕ ತಜ್ಞೆಯ ಈ ವೀಡಿಯೋ ನಿಮ್ಮ ಮನಸ್ಸು ಹೇಗೆ ತೂಕವನ್ನು ಕಳೆದುಕೊಳ್ಳದಂತೆ ಮತ್ತು ವ್ಯಾಯಾಮವನ್ನು ಮಾಡದಂತೆ ತಡೆಯುತ್ತದೆ ಎಂಬುದರ ಮೇಲೆ ಕೇಂದ್ರೀಕೃತವಾಗಿದೆ.

  ಇದನ್ನೂ ಓದಿ: Health Tips: ಮುಟ್ಟಿನ ಸಂದರ್ಭದ ಹೊಟ್ಟೆ ನೋವು ನಿವಾರಿಸೋಕೆ ಸರಳ ಉಪಾಯಗಳು ಇಲ್ಲಿವೆ

  ನೀವು ಆಕಸ್ಮಿಕವಾಗಿ ಒಂದು ಟೀ ಕಪ್ ಅನ್ನು ಒಡೆಯಬಹುದು, ಆದರೆ ಒಂದು ಕಪ್ ಒಡೆದ ಕಾರಣ ನೀವು ಟೀ ಕಪ್ಗಳ ಸೆಟ್ನ್ನೇ ಒಡೆದುಹಾಕುವುದಿಲ್ಲ ಎಂದು ಬರೆದಿರುವ ಅವರು, ಇದನ್ನು ಚೀಟ್ ಡೇ ಗೆ ಹೋಲಿಸಿದ್ದಾರೆ. ಹಾಗೆಯೇ ಒಂದು ದಿನ ಚೀಟ್ ಡೇ ಮಾಡಬಹುದು ಹಾಗಂತ ನಮ್ಮ ಡಯೆಟ್ ನಿಲ್ಲಿಸುವುದು ಸರಿಯಲ್ಲ. ಪ್ರತಿಬಾರಿ ನಮ್ಮ ಮನಸ್ಸಿಗೆ ಅನುಕೂಲವಾಗುವಂತೆ ಯೋಚಿಸಬಾರದು. ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ. ಹಾಗೆಯೇ ನಮ್ಮ ನಿರ್ಧಾರ ದೃಢವಾಗಿಟ್ಟುಕೊಳ್ಳಲು ಕೆಲ ಸಲಹೆಯನ್ನು ಸಹ ಅವರು ನೀಡಿದ್ದಾರೆ.

  ಆರೋಗ್ಯ ಮತ್ತು ಆಹಾರದ ಬಗ್ಗೆ ಈ ಕಪ್ಪು-ಬಿಳುಪು ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ನಾವು ದೃಢ ನಿಶ್ಚಯ ಮಾಡಬೇಕು. ಮೊದಲು ಮನಸ್ಸಿಗೆ ಇಷ್ಟ ಬಂದಾಗ ತಿನ್ನುವುದನ್ನು ಬಿಡಬೇಕು. ಎಷ್ಟೇ ತಿನ್ನಬೇಕು ಅಂತ ಅನಿಸಿದರೂ ಸಹ ತಿನ್ನಬಾರದು. ನಿಮ್ಮನ್ನ ತಡೆದುಕೊಳ್ಳಲು ಸಾಧ್ಯವಿಲ್ಲ ಅನಿಸಿದಾಗ ಆ ಆಹಾರದಿಂದ ದೂರವಿರಬೇಕು. ನಮ್ಮ ದೇಹದ ತೂಕ ಹೆಚ್ಚು ಮಾಡುವ ಆಹಾರಗಳಿಂದ ನಾವು ದೂರವಿದ್ದರೇ ಮಾತ್ರ ತೂಕ ಇಳಿಸಲು ಸಾಧ್ಯ.

  ನಿಮ್ಮ ಮನಸ್ಥಿತಿ ಬದಲಾಗುತ್ತಿದೆ ಅಂತ ನಿಮಗೆ ಅನಿಸುತ್ತಿದ್ದಾಗ ಅದನ್ನು ಗಮನಿಸಿ ಬರೆಯಿರಿ. ನಿಮ್ಮ ಮನಸ್ಸಿನ ದುಗುಡಗನ್ನು ಭಾವನೆಗಳನ್ನು ಬರೆದಾಗ ಹಗುರವಾದ ಭಾವ ಮೂಡುತ್ತದೆ. ಹಾಗೂ ಅದನ್ನೇ ಓದಿದಾಗ ತಪ್ಪಿನ ಅರಿವು ಆಗುತ್ತದೆ. ಯಾವಾಗ ನಿಮಗೆ ಡಯೆಟ್ನಿಂದ ದೂರವಾಗುತ್ತಿದ್ದೀವಿ ಎಂದು ತಿಳಿಯುತ್ತದೆಯೋ ಆಗ ಈ ಕೆಲಸ ಮಾಡುವುದು ನಮ್ಮನ್ನ ಗುರಿಯಿಂದ ತಪ್ಪಿ ಹೋಗದಂತೆ ಕಾಪಾಡುತ್ತದೆ.

  ಅಲ್ಲದೇ ನಿಮಗೆ ನಾವು ಕಪ್ಪು ಬಿಳುಪು ಮನಸ್ಥಿತಿಯಲ್ಲಿದ್ಧೇವೆ ಎಂದು ಅನಿಸಿದರೆ ನಿಮಗೆ ಎಂದು ಸಮಯವನ್ನ ಮೀಸಲಿಡಿ . ಒಳ್ಳೆಯ ಮಸಾಜ್ ಮಾಡಿಕೊಳ್ಳಿ ಅಥವಾ ನಿಮಗೆ ಇಷ್ಟವಾಗುವ ಒಳ್ಳೆಯ ವಸ್ತುವನ್ನು ಖರೀದಿ ಮಾಡಿ. ಮಗುವಿನಂತೆ ನಿಮ್ಮ ಆರೈಕೆ ಮಾಡಿಕೊಳ್ಳಿ. ಹಾಗೆಯೇ ನೀವು ಇದನ್ನು ಡಯೆಟ್ ಎಂದು ಪರಿಗಣಿಸಬೇಡಿ. ಇದೊಂದು ಕೇವಲ ಒಂದು ಆಹಾರ ಕ್ರಮ ಮುಂದಿನ ದಿನಗಳಲ್ಲಿ ಎಲ್ಲವನ್ನು ಸೇರಿಸಿಕೊಳ್ಳಬಹುದು ಎಂದು ಮನವರಿಕೆ ಮಾಡಿಕೊಳ್ಳಿ ಮತ್ತು ಆಗಾಗ ಅದನ್ನು ನೆನಪಿಸಿಕೊಳ್ಳಿ.

  (ಸಂಧ್ಯಾ ಎಂ)
  Published by:Soumya KN
  First published: